ಮೆಗ್ಗಾನ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಶಾಕ್

Mc-Gann-Hospital-Shimoga

SHIVAMOGGA LIVE NEWS | 24 JUNE 2024 SHIMOGA :  ಮೆಗ್ಗಾನ್‌ ಆಸ್ಪತ್ರೆಯ ತುರ್ತು ನಿಗಾ ಘಟಕದ ಬಳಿ ನಿಲ್ಲಿಸಿದ್ದ ಬೈಕ್‌ (Bike) ಕಳ್ಳತನವಾಗಿದೆ. ಸೂಳೆಬೈಲಿನ ಗುಲ್ಜರ್‌ ಅಹಮದ್‌ ಎಂಬುವವರು ಮೆಗ್ಗಾನ್‌ ಆಸ್ಪತ್ರೆಗೆ ಹೋಗಿದ್ದರು. ತುರ್ತು ನಿಗಾ ಘಟಕದ ಬಳಿ ಹೀರೋ ಪ್ಯಾಷನ್‌ ಪ್ರೋ ಬೈಕ್‌ ನಿಲ್ಲಿಸಿ ಒಳ ಹೋಗಿದ್ದರು. ರಾತ್ರಿ 11.15ಕ್ಕೆ ಆಸ್ಪತ್ರೆಯಿಂದ ಹೊರಗೆ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದಾಗ ಬೈಕ್‌ ಸಿಗಲಿಲ್ಲ. ಈ ಹಿನ್ನೆಲೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಬೈಪಾಸ್‌ನಿಂದ ಬೈಕ್‌ನಲ್ಲಿ ಬಂದು ವಿಳಾಸ ಕೇಳಿದರು, ಏಕಾಏಕಿ ದಾಳಿ ಮಾಡಿ ಮೊಬೈಲ್ ಕಸಿದು ಪರಾರಿಯಾದರು

Crime-News-General-Image

SHIVAMOGGA LIVE NEWS | 24 JUNE 2024 SHIMOGA : ಕೇಬಲ್‌ ವಯರ್‌ ಅಳವಡಿಸುತ್ತಿದ್ದ ಟೆಕ್ನಿಷಿಯನ್‌ (technician) ಮೇಲೆ ಅಪರಿಚಿತರು ದಾಳಿ ಮಾಡಿ, ಗಾಯಗೊಳಿಸಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಇದೇ ವೇಳೆ ಮತ್ತೊಬ್ಬ ವ್ಯಕ್ತಿಯಿಂದ ನಗದು ಕಸಿದುಕೊಂಡು ಹೋಗಿದ್ದಾರೆ. ಶಿವಮೊಗ್ಗದ ಟೆಂಪೊ ಸ್ಟಾಂಡ್‌ ಬಳಿ ರಾತ್ರಿ 1.30ರ ಹೊತ್ತಿಗೆ ಕೇಬಲ್‌ ವೈಯರ್‌ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಟೆಕ್ನಿಷಿಯನ್‌ ಮಾರ್ಕ್‌ ಎಂಬಾತ ಕೆಲಸ ಮಾಡುತ್ತಿದ್ದ ವೇಳೆ ಬೈಪಾಸ್‌ ರಸ್ತೆಯಿಂದ ಒಂದೇ ಬೈಕ್‌ನಲ್ಲಿ ಬಂದ ಮೂವರು ವಿಳಾಸ ಕೇಳಿದ್ದರು. … Read more

ಕಾರು ಡಿಕ್ಕಿಯಾಗಿ ಮುರಿದು ಬಿದ್ದ ವಿದ್ಯುತ್‌ ಕಂಬ, CCTVಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

Car-Mishap-at-gartikere-in-Hosanagara-taluk

SHIVAMOGGA LIVE NEWS | 24 JUNE 2024 HOSANAGARA : ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ (Pole) ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೆ ಸಾವು ನೋವು ಸಂಭವಿಸಿಲ್ಲ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಸನಗರ ತಾಲೂಕು ಗರ್ತಿಕೆರೆಯಲ್ಲಿ ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಕೋಣಂದೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಸಂಪೂರ್ಣವಾಗಿ ರಸ್ತೆಯ ಬಲ ಬದಿಗೆ ಹೋಗಿದೆ. ಚಾಲಕ ಕಾರನ್ನು ನಿಯಂತ್ರಿಸಲು ವಿಫಲವಾದಾಗ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. … Read more

ಯುವತಿಗೆ ವಂಚನೆ, ಹಸೆಮಣೆ ಏರಲು ಸಜ್ಜಾಗಿದ್ದ ಸಾಗರ ಬಿಜೆಪಿ ಮುಖಂಡ ಅರೆಸ್ಟ್‌

BJP-Leader-Arun-Kugwe-arrested-by-Police

SHIVAMOGGA LIVE NEWS | 24 JUNE 2024 SAGARA : ಪೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿ 23 ವರ್ಷದ ಯುವತಿಗೆ ವಂಚಿಸಿರುವ ಆರೋಪದ ಹಿನ್ನೆಲೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಗ್ವೆಯನ್ನು ಸಾಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ನೀಡಿದ್ದಳು. ಇನ್ಸ್‌ಪೆಕ್ಟರ್‌ ಭರತ್‌ ಕುಮಾರ್‌ ನೇತೃತ್ವದ ತಂಡ ಸಾಗರಕ್ಕೆ ತೆರಳಿ ಮನೆಯಲ್ಲಿದ್ದ ಅರುಣ್‌ ಕುಗ್ವೆಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತ … Read more

ಬೈಕ್‌ಗೆ ಕಾರು ಡಿಕ್ಕಿ, ಸಾಗರದ ಎಲ್‌.ಬಿ ಕಾಲೇಜು ವಿದ್ಯಾರ್ಥಿನಿ ಸಾವು

LB-College-Student-anusha-Succumbed-in-a-mishap.

SHIVAMOGGA LIVE NEWS | 24 JUNE 2024 SAGARA : ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ (Bike) ತೆರಳುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಸಾಗರ ತಾಲೂಕು ಕುಗ್ವೆ ಬಳಿ ಘಟನೆ ಸಂಭವಿಸಿದೆ. ಕುಂದಾಪುರದ ಅನುಷಾ(20) ಮೃತ ವಿದ್ಯಾರ್ಥಿನಿ. ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ಓದುತ್ತಿದ್ದಳು. ಬೈಕ್‌ನಲ್ಲಿ ಸ್ನೇಹಿತೆ ಜತೆಗೆ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಅದೇ ಮಾರ್ಗದಲ್ಲಿ ಜೋಗದ ಕಡೆಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅನುಷಾಳನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ … Read more

ಶಿವಮೊಗ್ಗದಲ್ಲಿ ನಂದಿನಿ ಹಾಲಿನ ವಾಹನಕ್ಕೆ 25 ಸಾವಿರ ದಂಡ, ಕಾರಣವೇನು?

Traffic-police-in-Shimoga-city.

SHIVAMOGGA LIVE NEWS | 24 JUNE 2024 SHIMOGA : ಅಪ್ರಾಪ್ತನ ಕೈಗೆ ವಾಹನ ಚಾಲನೆಗೆ ಅವಕಾಶ ನೀಡಿ ನಿಯಮ ಉಲ್ಲಂಘಿಸಿದ ನಂದಿನಿ ಹಾಲಿನ ವಾಹನದ ಮಾಲೀಕನಿಗೆ ನ್ಯಾಯಾಲಯ ದಂಡ (Fine) ವಿಧಿಸಿದೆ. ನಗರದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಚಾಲಕನೊಬ್ಬ ಸಮವಸ್ತ್ರ ಧರಿಸದೆ ವಾಹನ ಚಲಾಯಿಸುತ್ತಿದ್ದ. ಸಂಚಾರ ಠಾಣೆ ಎಎಸ್‌ಐ ಮೋಹನ್‌ ಮತ್ತು ಸಿಬ್ಬಂದಿ ಕಿರಣ್‌ ಅವರು ವಾಹನವನ್ನು ತಡೆದು ಪರಿಶೀಲಿಸಿದಾಗ ನಂಬರ್‌ ಪ್ಲೇಟ್‌ ಸಹ ದೋಷದಿಂದ ಕೂಡಿತ್ತು. ವಾಹನ ಚಾಲಕ ಅಪ್ರಾಪ್ತ ಎಂದು ಪೊಲೀಸರಿಗೆ … Read more

ಶಿವಮೊಗ್ಗ ಬೈಪಾಸ್‌ ರಸ್ತೆಯಲ್ಲಿ ಭೀಕರ ಅಪಘಾತ, ಬಸ್ಸಿನಡಿ ಸಿಲುಕಿ ನಜ್ಜುಗುಜ್ಜಾದ ಯುವಕ

KSRTC-Bangalore-Shimoga-Rajahamsa-mishap-at-bypass-road.

SHIVAMOGGA LIVE NEWS | 23 JUNE 2024 SHIMOGA : ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ ಮತ್ತು ಬೈಕ್‌ ಮಧ್ಯೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಬೈಪಾಸ್‌ (Bypass) ರಸ್ತೆಯ ಊರುಗಡೂರು ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಶ್ರೀರಾಮಪುರದ ಸಂತೋಷ್‌ (23) ಮೃತ ದುರ್ದೈವಿ. ಬೆಳಗಿನ ಜಾವ ಹೊಟೇಲ್‌ ಕೆಲಸಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಶಿವಮೊಗ್ಗ ಬೈಪಾಸ್‌ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಅಪಘಾತಕ್ಕೀಡಾದ ರಾಜಹಂಸ ಬಸ್‌ ರಾಜಹಂಸ ಬಸ್‌ ಬೆಂಗಳೂರಿನಿಂದ ಬರುತ್ತಿತ್ತು. ಬೈಪಾಸ್‌ ರಸ್ತೆ ಮೂಲಕ … Read more

ಯಡೂರು ಸಮೀಪ ಅಬ್ಬಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು, ಯುವಕ ನೀರುಪಾಲು

Abbi Falls

SHIVAMOGGA LIVE NEWS | 23 JUNE 2024 HOSANAGARA : ಅಬ್ಬಿ ಫಾಲ್ಸ್‌ನಲ್ಲಿ (Abbi Falls) ಕಾಲು ಜಾರಿ ಬಿದ್ದು ಯುವಕ ನೀರುಪಾಲಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೊಸನಗರ ತಾಲೂಕು ಯಡೂರು ಸಮೀಪದ ಅಬ್ಬಿ ಫಾಲ್ಸ್‌ನಲ್ಲಿ ಬಳ್ಳಾರಿ ಮೂಲದ ವಿನೋದ್‌ (26) ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವಿನೋದ್‌ ತನ್ನ ಸ್ನೇಹಿತರೊಂದಿಗೆ ಅಬ್ಬಿ ಫಾಲ್ಸ್‌ಗೆ ಪ್ರವಾಸಕ್ಕೆ ಬಂದಿದ್ದರು. ಕೊಡಚಾದ್ರಿ ಪ್ರವಾಸ ಮುಗಿಸಿದ್ದ ತಂಡ ಅಬ್ಬಿ ಫಾಲ್ಸ್‌ಗೆ ಆಗಮಿಸಿದ್ದಾಗ … Read more

ಹಾರನಹಳ್ಳಿಯಲ್ಲಿ ಟಾಟಾ ಏಸ್‌ ಡಿಕ್ಕಿಯಾಗಿ ಬೈಕ್‌ ಸವಾರ ಸಾವು, ಹೇಗಾಯ್ತು ಅಪಘಾತ?

ACCIDENT-NEWS-GENERAL-IMAGE.

SHIVAMOGGA LIVE NEWS | 23 JUNE 2024 KUMSI : ಬೈಕ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದು ಸವಾರ (Rider) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾರನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ. ಮೈಸವಳ್ಳಿಯ ಸತೀಶ್ (25) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಮಗು ಭರಣಿ (7) ಕಾಲಿಗೆ ಪೆಟ್ಟಾಗಿದೆ. ಸತೀಶ್ ಅವರು ಸಂಬಂಧಿಯೊಬ್ಬರ ಮಗುವನ್ನು ಹಾರನಹಳ್ಳಿಗೆ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮತ್ತೆ ಮೈಸವಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟಾಟಾ ಏಸ್ ಡಿಕ್ಕಿ … Read more

ಮಾತಿಗೆ ಮಾತು ಬೆಳೆದು ತಂದೆಯ ಹೊಟ್ಟೆಗೆ ಇರಿದು ಕೊಂದ ಅಪ್ರಾಪ್ತ

Incident-at-Arabilachi-village-in-Bhadravathi

SHIVAMOGGA LIVE NEWS | 22 JUNE 2024 HOLEHONNURU : ಮಾತಿಗೆ ಮಾತು (Altercation) ಬೆಳೆದು ಅಪ್ರಾಪ್ತನೊಬ್ಬ ತನ್ನ ತಂದೆಗೆ ಇರಿದು ಕೊಲೆ ಮಾಡಿದ್ದಾನೆ. ಹೊಳೆಹೊನ್ನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಘಟನೆ ಸಂಭವಿಸಿದೆ. 53 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಹರಿತ ಆಯುಧದಿಂದ ವ್ಯಕ್ತಿಯ ಹೊಟ್ಟೆಗೆ ಇರಿಯಲಾಗಿದೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್‌ ಲಕ್ಷ್ಮಿಪತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. (ಅಪ್ರಾಪ್ತನ ಪ್ರಕರಣವಾಗಿರುವ ಹಿನ್ನೆಲೆ, ಆತನ … Read more