ಭದ್ರಾ ಡ್ಯಾಮ್‌, ನಾಲೆಯ ಗೇಟ್‌ ಬಂದ್‌ ಮಾಡುವಾಗ ಕ್ರೇನ್‌ನ ಕೇಬಲ್‌ ಕಟ್

Bhadra-dam-General-Image

SHIVAMOGGA LIVE NEWS | 2 DECEMBER 2024 ಭದ್ರಾವತಿ : ಭದ್ರಾ ಜಲಾಶಯದ (Bhadra Dam) ಬಲದಂಡೆ ಕಾಲುವೆಗೆ ಗೇಟ್‌ ಅಳವಡಿಸುವ ಕ್ರೇನ್‌ನ ಕೇಬಲ್‌ ತುಂಡಾಗಿದ್ದರಿಂದ ನಾಲೆಗೆ ಒಂದು ದಿನ ಹೆಚ್ಚುವರಿಯಾಗಿ ನೀರು ಹರಿದಿದೆ. ಭಾನುವಾರ ಬೇರೊಂದು ಕ್ರೇನ್‌ ತರಿಸಿ ನಾಲೆಯ ಗೇಟ್‌ ಬಂದ್‌ ಮಾಡಲಾಗಿದೆ. ನ.29ರಂದು ಭದ್ರಾ ಜಲಾಶಯದ ಬಲದಂಡೆ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರ (ಕಾಡಾ) ತಿಳಿಸಿತ್ತು. ಅಂದು ಗೇಟ್‌ ಬಂದ್‌ ಮಾಡುವಾಗ ಬೃಹತ್‌ ಕ್ರೇನ್‌ನ … Read more

ಭದ್ರಾವತಿಯಲ್ಲಿ ಸಿಲಿಂಡರ್‌ ಸ್ಪೋಟ, ದಂಪತಿಗೆ ಗಂಭೀರ ಗಾಯ

Cylinder-incident-at-bhadravathi

SHIVAMOGGA LIVE NEWS | 30 NOVEMBER 2024 ಭದ್ರಾವತಿ: ಹಳೆನಗರದ ಶ್ರೀಕಾಳಿಕಾಂಬ ರಸ್ತೆಯ ಮನೆಯೊಂದರಲ್ಲಿ ಶುಕ್ರವಾರ ಸಂಜೆ ಗ್ಯಾಸ್ ಸಿಲಿಂಡ‌ರ್ (Cylinder) ಸ್ಫೋಟಗೊಂಡು ದಂಪತಿ ತೀವ್ರ ಗಾಯಗೊಂಡಿದ್ದಾರೆ. ಹೊಸಮನೆ ಮುಖ್ಯರಸ್ತೆಯ ಗೋಬಿ ಮಂಚೂರಿ ಅಂಗಡಿ ಮಾಲೀಕ ಕೇಶವ ಅವರು ಮನೆಯಲ್ಲಿ ಘಟನೆ ಸಂಭವಿಸಿದೆ. ಅಂಗಡಿಗೆ ಸಾಮಗ್ರಿ ತೆಗೆದುಕೊಂಡು ಹೋಗುವ ಮುನ್ನ ಮನೆಯ ಬಚ್ಚಲಿನಲ್ಲಿದ್ದ ಸಿಲಿಂಡರ್‌ನ್ನು ಆನ್‌ ಮಾಡಿದಾಗ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಗಾಯಗೊಂಡ ಕೇಶವ ಮತ್ತು ಅವರ ಪತ್ನಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ … Read more

ಮಾಟ, ಮಂತ್ರ, ಈ ಬಾಕ್ಸ್‌ ತೆಗೆದರೆ ಸತ್ತೇ ಹೋಗ್ತೀರ, ನಂಬಿದ ಕುಟುಂಬಕ್ಕೆ ಕಾದಿತ್ತು ಆಘಾತ

Police-Jeep-at-Shimoga-General-Image

BHADRAVATHI NEWS, 22 NOVEMBER 2024 : ಮಾಟ (Black Magic), ಮಂತ್ರ, ಶಾಸ್ತ್ರ ಎಂದು ನಂಬಿಸಿ ಭದ್ರಾವತಿಯ ಎರಡು ಕಡೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಶ್ರೀನಿವಾಸ್‌ ಎಂಬಾತ ಭದ್ರಾವತಿಯ ಇಬ್ಬರು ಪ್ರತ್ಯೇಕ ವ್ಯಕ್ತಿಗಳಿಗೆ (ಹೆಸರು ಗೌಪ್ಯ) ನಾನಾ ಕಾರಣ ತಿಳಿಸಿ, ಪೂಜೆ ಮಾಡುವುದಾಗಿ ನಂಬಿಸಿ ವಂಚಿಸಿದ್ದಾನೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. » ಪ್ರಕರಣ 1 ಕೃಷಿಕರೊಬ್ಬರ (ಹೆಸರು ಗೌಪ್ಯ) ಮಗನಿಗೆ ಸರಿಯಾಗಿ ಮಾತು ಬರುವುದಿಲ್ಲ. … Read more

ಕುವೆಂಪು ವಿವಿಯಲ್ಲಿ ನೌಕರರ ಪ್ರತಿಭಟನೆ, ಬೇಡಿಕೆ ಈಡೇರಿಕೆಗೆ ಪಟ್ಟು

Kuvempu-university-employees-protest-at-Shankaraghatta

EDUCATION NEWS, 20 NOVEMBER 2024 : ಅಧ್ಯಾಪಕೇತರ ನೌಕರರ ಬಡ್ತಿ ಮತ್ತು ಸೇವಾ ಸೌಲಭ್ಯಕ್ಕೆ ಆಗ್ರಹಿಸಿ ಕುವೆಂಪು ವಿಶ್ವವಿದ್ಯಾಲಯ (University) ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಶಂಕರಘಟ್ಟದಲ್ಲಿ ವಿವಿ ಅಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಬಡ್ತಿ ಮತ್ತು ಸೇವಾ ಸೌಲಭ್ಯ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧ್ಯಾಪಕೇತರ ನೌಕರರು ಭರವಸೆಗಳನ್ನು ಮಾತ್ರ ನೀಡಲಾಗುತ್ತಿದೆ. ಈಚೆಗೆ ಕುವೆಂಪು ವಿವಿ ಕುಲಪತಿ ಅವರನ್ನು ಭೇಟಿಯಾಗಿ ಸರ್ಕಾರದ ನಿಯಮ ಮತ್ತು ಆದೇಶಗಳನ್ನು ತೋರಿಸಲಾಗಿತ್ತು. ಆದರೆ ಇದಕ್ಕೆ ಕುಲಪತಿ … Read more

ತುಂಗಾ ನದಿ, ಹಸು ಮೈ ತೊಳೆಯಲು ಹೋದ ವ್ಯಕ್ತಿ ನಾಪತ್ತೆ

-Bhadrapura-tunga-river-emergency-rescue-team.

BHADRAVATHI NEWS, 18 NOVEMBER 2024 : ತುಂಗಭದ್ರಾ ನದಿಯಲ್ಲಿ (River) ಹಸುಗಳ ಮೈ ತೊಳೆಯಲು ಹೋಗಿದ್ದ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ. ಭದ್ರಾವತಿ ತಾಲೂಕು ಭದ್ರಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅಶ್ರಫ್‌ (42) ಎಂಬುವವರು ಹಸುಗಳ ಮೈ ತೊಳೆಯಲು ನದಿ ಬಳಿ ತೆರಳಿದ್ದರು. ಕಾಣೆಯಾದ ವಿಚಾರ ತಿಳಿದು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ 15ಕ್ಕೂ ಹೆಚ್ಚು ಬಸ್‌ಗಳ ಮೇಲೆ ದಾಳಿ

ಮಾಚೇನಹಳ್ಳಿಯಲ್ಲಿ ಕೆಲಸ ಮುಗಿಸಿ ಹೊರ ಬಂದ ಉದ್ಯೋಗಿಗೆ ಕಾದಿತ್ತು ಶಾಕ್

bike theft reference image

BHADRAVATHI NEWS, 18 NOVEMBER 2024 : ಮಾಚೇನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಉದ್ಯೋಗಿಯೊಬ್ಬರ ಬೈಕ್‌ (Bike) ಕಳ್ಳತನವಾಗಿದೆ. ಕಾರ್ಖನೆಯೊಂದರ ಮುಂದೆ ನಿಲ್ಲಿಸಿದ್ದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭದ್ರಾವತಿಯ ಮಂಜು ನಾಯ್ಕ್‌ ಮಾಚೇನಹಳ್ಳಿಯ ಕೈಗಾರಿಕೆ ಪ್ರದೇಶದ ಕೈಗಾರಿಕೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಕಾರ್ಖಾನೆಯಿಂದ ಹೊರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಬಳಕ ಮಂಜು ನಾಯ್ಕ್‌ ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ … Read more

ಭದ್ರಾವತಿಯ ವ್ಯಕ್ತಿಗೆ 20 ವರ್ಷ ಜೈಲು, 1.12 ಲಕ್ಷ ರೂ. ದಂಡ

Shivamogga-Court-Balaraja-Urs-Road

SHIMOGA NEWS, 9 NOVEMBER 2024 : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷ ಜೈಲು (Jail) ಶಿಕ್ಷೆ ಹಾಗೂ 1.12 ಲಕ್ಷ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮೋಹನ್‌ ಜೆ.ಎಸ್‌. ಅವರು ಆದೇಶ ನೀಡಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 1 ಲಕ್ಷ ರೂ. ಮತ್ತು ಸರ್ಕಾರದಿಂದ 5 ಲಕ್ಷ ರೂ.ವನ್ನು ನೊಂದ ಬಾಲಕಿಗೆ ನೀಡಲು … Read more

ಭದ್ರಾವತಿಯಲ್ಲಿ ಕರಡಿ ದಾಳಿ, ವ್ಯಕ್ತಿಗೆ ಗಂಭೀರ ಗಾಯ

bear-file-photo.

BHADRAVATHI NEWS, 9 NOVEMBER 2024 : ಭದ್ರಾವತಿ ತಾಲೂಕಿನ ಅಂತರಗಂಗೆ ಕೆ.ಎಚ್.ನಗರದ ನಿವಾಸಿ ದೇವೇಂದ್ರಪ್ಪ ಎಂಬುವವರ ಮೇಲೆ ಶುಕ್ರವಾರ ಕರಡಿ (Bear) ದಾಳಿ ನಡೆಸಿದೆ. ತೀವ್ರ ಗಾಯಗೊಂಡ ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೇವೇಂದ್ರಪ್ಪ ಟೈಲರ್ ವೃತ್ತಿ ಮಾಡುತ್ತಿದ್ದು, ಶುಕ್ರವಾರ ಬಿಸಿಲುಮನೆ ಗ್ರಾಮದಲ್ಲಿರುವ ನಿವೇಶನ ನೋಡಿಕೊಂಡು ಮನೆಗೆ ಹಿಂದಿರುಗುವ ವೇಳೆ ದಾರಿಯಲ್ಲಿ ಎದುರಾದ ಕರಡಿ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಂಡು ಬಂದ ದೇವೇಂದ್ರಪ್ಪ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ … Read more

ರಾತ್ರೋರಾತ್ರಿ ಅಡಿಕೆ ಲಾರಿ ಅಡ್ಡಗಟ್ಟಿ ಹಣಕ್ಕೆ ಬೇಡಿಕೆ, ಇಬ್ಬರು ಅರೆಸ್ಟ್‌

Arrest News Graphics

HOLEHONNURU NEWS, 4 NOVEMBER 2024 : ಪತ್ರಕರ್ತರ ಸೋಗಿನಲ್ಲಿ ಅಡಿಕೆ ತುಂಬಿದ ಲಾರಿ (TRUCK) ಅಡ್ಡಗಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ನವೀನ್ ಹಾಗೂ ಸತೀಶ್ ಬಂಧಿತರು. ಶುಕ್ರವಾರ ರಾತ್ರಿ ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ ಅಡಕೆ ತುಂಬಿದ ಲಾರಿ ಅಡ್ಡಗಟ್ಟಿದ ನಾಲ್ವರು, ತಾವು ಪತ್ರಕರ್ತರು ಎಂದು ಹೇಳಿಕೊಂಡು ಲಾರಿ ಚಾಲಕನ ಬಳಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡುವಂತೆ ಒಂದು ತಾಸಿಗೂ ಹೆಚ್ಚು ಸಮಯ … Read more

ಭದ್ರಾವತಿಯಲ್ಲಿ ಏನೇನಾಯ್ತು? ಇಲ್ಲಿದೆ 3 ಫಟಾಫಟ್‌ ನ್ಯೂಸ್‌

BHADRAVATHI-FATAFAT-LAYOUT.webp

BHADRAVATHI NEWS, 30 OCTOBER 2024 : ತಾಲೂಕಿನ ಫಟಾಫಟ್‌ ಸುದ್ದಿಗಳು ಇಲ್ಲಿವೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆ, ತಾಪಮಾನ ತುಸು ಹೆಚ್ಚಳ, ಅಲ್ಲಲ್ಲಿ ತುಂತುರು ಮಳೆ ಸಂಭವ ಇದನ್ನೂ ಓದಿ » ವೈರಲ್‌ ಆದ ದೆವ್ವ, ವಾರ್ನಿಂಗ್‌ ನೀಡಿದ ಶಿವಮೊಗ್ಗ ಪೊಲೀಸ್‌