ಕಲ್ಲಿಹಾಳ್‌ನಲ್ಲಿ ವಿಜಯೇಂದ್ರ ವಿರುದ್ಧ ಮರಾಠ ಸಮಾಜದ ಪ್ರತಿಭಟನೆ, ಕ್ಷಮೆಗೆ ಆಗ್ರಹ

Marata-Samaja-Protest-in-Kallihal-against-vijayendra

SHIVAMOGGA LIVE NEWS | 24 APRIL 2024 HOLEHONNURU : ಸಚಿವ ಸಂತೋಷ್‌ ಲಾಡ್‌ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಲ್ಲಿಹಾಳ್‌ ಸರ್ಕಲ್‌ನಲ್ಲಿ ಮರಾಠ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂತೋಷ್‌ ಲಾಡ್‌ ಅವರ ಕುರಿತು ವಿಜಯೇಂದ್ರ ಹೇಳಿಕೆ ಸಮಾಜಕ್ಕೆ ಮಾಡಿರುವ ಅಪಮಾನ. ಅದ್ದರಿಂದ ಕೂಡಲೆ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮರಾಠ ಸಮಾಜದ ಕಾರ್ಯದರ್ಶಿ ದೇವೇಂದ್ರ ರಾವ್‌ ಅವತಾಡೆ, ಯಶ್ವಂತ ರಾವ್‌ ಘೋರ್ಪಡೆ, ರುದ್ರೋಜಿರಾವ್‌ ಜಾಧವ್‌, … Read more

‌ಭದ್ರಾ ನಾಲೆಯಲ್ಲಿ ಮುಳುಗಿ ಕುಂದಾಪುರ ಮೂಲದ ಇಬ್ಬರು ಬಾಲಕರು ಸಾವು

Anaveri-Bhadra-Canal-search-by-local-swimmers-and-experts

SHIVAMOGGA LIVE NEWS | 24 APRIL 2024 HOLEHONNURU : ಭದ್ರಾ ನಾಲೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಗುಡುಮಗಟ್ಟೆಯಲ್ಲಿ ಘಟನೆ ಸಂಭವಿಸಿದೆ. ಆನವೇರಿಯ ಉಮೇಶ್‌ ಶೆಟ್ಟಿ ಅವರ ಮಗ ರಜತ್‌ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್‌ ಶೆಟ್ಟಿ ಅವರ ಮಗ ರೋಹನ್‌ (15) ಮೃತ ದುರ್ದೈವಿಗಳು. ಆಟವಾಡಲು ಹೋಗಿ ನೀರುಪಾಲದ ಮಕ್ಕಳು ರಜತ್‌ ಮತ್ತು ರೋಹನ್‌ ನೀರಿನಲ್ಲಿ ಆಟವಾಡಲು ಭದ್ರಾ ನಾಲೆ ಬಳಿ ಹೋಗಿದ್ದರು. ಈ ವೇಳೆ ಆಯಾತಪ್ಪಿ … Read more

ಭದ್ರಾವತಿಯಲ್ಲಿ ಪೊಲೀಸ್‌ ರೇಡ್‌, ಮಹಿಳೆ ಅರೆಸ್ಟ್‌, ಲಕ್ಷ ಲಕ್ಷದ ಮಾದಕ ವಸ್ತು ಸೀಜ್‌

Bhadravathi-Lady-arrest-in-NDPS-Case

SHIVAMOGGA LIVE NEWS | 23 APRIL 2024 BHADRAVATHI : ಸತ್ಯ ಸಾಯಿ ನಗರದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಆತನಿಂದ 4.50 ಲಕ್ಷ ರೂ. ಮೌಲ್ಯದ 7.590 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಸತ್ಯ ಸಾಯಿ ನಗರದ ಹುಸೇನ್‌ ಬಿ (35) ಎಂಬಾಕೆಯನ್ನು ಬಂಧಿಸಲಾಗಿದೆ. ಗಾಂಜಾ ಸಾಗಣೆ ಮಾಡುತ್ತಿರುವ ಮಾಹಿತಿ ಹಿನ್ನೆಲೆ ಹೊಸಮನೆ ಠಾಣೆ ಪೊಲೀಸರು ದಾಳಿ ನಡೆಸಿದರು. ಭದ್ರಾವತಿ ಡಿವೈಎಸ್‌ಪಿ ನಾಗರಾಜ್, ಇನ್ಸ್‌ಪೆಕ್ಟರ್ … Read more

ಭದ್ರಾವತಿಯ ಎರಡು ದೇಗುಲಗಳಲ್ಲಿ ದೇವರ ಆಭರಣ, ಕಾಣಿಕೆ ಹಣ ಕಳ್ಳತನ, ಎಲ್ಲೆಲ್ಲಿ ನಡೆಯಿತು ಘಟನೆ?

Bhadravathi-Rural-Police-Station

SHIVAMOGGA LIVE NEWS | 23 APRIL 2024 BHADRAVATHI : ದೇವಸ್ಥಾನದ ಮುಂಬಾಗಿಲಿನ ಬೀಗ ಒಡೆದು, ಹುಂಡಿ ಹಣ, ದೇವರ ಆಭರಣ ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಬದನೇಹಾಳ್‌ ಗ್ರಾಮದ ಹುಚ್ಚಮ್ಮ ದೇವಸ್ಥಾನ ಮತ್ತು ಬಂಡಿಗುಡ್ಡದ ಮಾರಿಯಮ್ಮ ದೇಗುಲಗಳಲ್ಲಿ ಘಟನೆ ಸಂಭವಿಸಿದೆ. ನಿತ್ಯ ಪೂಜೆಗೆ ಬೆಳಗ್ಗೆ ಅರ್ಚಕ ಕುಮಾರ್‌ ದೇಗುಲಕ್ಕೆ ಬಂದಾಗ ಕಳ್ಳತನ ಗೊತ್ತಾಗಿದೆ. ಎರಡು ದೇಗುಲಗಳಲ್ಲಿ ಸುಮಾರು 20 ಸಾವಿರ ರೂ. ಕಾಣಿಕೆ ಹಣ, ದೇವರ ಅಭರಣಗಳು ಸೇರಿ ಒಟ್ಟು 83,200 ರೂ. ಮೌಲ್ಯದ … Read more

ಚಾನಲ್‌ನಲ್ಲಿ ಬಟ್ಟೆ ಒಗೆದು ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?

Crime-News-General-Image

SHIVAMOGGA LIVE NEWS | 20 APRIL 2024 HOLEHONNURU : ಮನೆಯಲ್ಲಿದ್ದ ಬೀರು ಒಡೆದು ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಅರಬಿಳಚಿ ಗ್ರಾಮದ ಮಣಿಮೇಘಲ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಮಣಿಮೇಘಲ ಕೆಲಸಕ್ಕೆ ತೆರಳಿದ್ದರು. ಅವರ ತಾಯಿ ಬಟ್ಟೆ ಒಗೆಯಲು ಸಮೀಪದ ಚಾನಲ್‌ಗೆ ತೆರಳಿದ್ದರು. ಈ ಸಂದರ್ಭ ಮನೆಯ ಬಾಗಿಲು ತೆರೆದು ಒಳ ನುಗ್ಗಿರುವ ಕಳ್ಳರು ಬೀರು ಒಡೆದು 20 ಸಾವಿರ ರೂ. ನಗದು, ಚಿನ್ನದ ತಾಳಿ, ಉಂಗುರ, … Read more

ಮೈದೊಳಲಿನಲ್ಲಿ ವಿಜೃಂಭಣೆಯ ಆಂಜನೇಯ ಸ್ವಾಮಿ ರಥೋತ್ಸವ

Mydolalu-Anjaney-temple-rathotsava

SHIVAMOGGA LIVE NEWS | 19 APRIL 2024 HOLEHONNURU : ಶ್ರೀರಾಮ ನವಮಿ ಪ್ರಯುಕ್ತ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ರಥದಲ್ಲಿ ಆಂಜನೇಯ ಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು ಪೂಜೆ ಸಲ್ಲಿಸಿ, ರಥ ಎಳೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ದಿಗಾಗಿ ಕೆಲವರು ರಥದ ಕಳಸಕ್ಕೆ ಬಾಳೆಹಣ್ಣು ತೂರಿದರು. ವಿವಿಧ ಕಲಾ ತಂಡಗಳು,  ನೃತ್ಯ ಮೇಳಗಳು ರಾಜ ಬೀದಿ ಉತ್ಸವಕ್ಕೆ ಮೆರಗು ನೀಡಿದವು. ದೊಡ್ಡ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಮಂಗಳವಾರ … Read more

ಹೊಳೆಹೊನ್ನೂರು ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ತೀರ್ಥಹಳ್ಳಿ ಯುವಕ ಸೇರಿ ಇಬ್ಬರು ಸಾವು

ACCIDENT-NEWS-GENERAL-IMAGE.

SHIVAMOGGA LIVE NEWS | 19 APRIL 2024 HOLEHONNURU : ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಯುವಕರಿಬ್ಬರು ಸ್ಥಳದಲ್ಲೆ ಸಾವನಪ್ಪಿದ್ದಾರೆ. ತೀರ್ಥಹಳ್ಳಿಯ ಹೆಚ್.ಆರ್ ಧನುಷ್ (24) ಮತ್ತು ಆತನ ಸ್ನೇಹಿತ ಮೃತಪಟ್ಟಿದ್ದಾರೆ. ಆತನ ಹೆಸರು ತಿಳಿದುಬಂದಿಲ್ಲ. ಆಗರದಹಳ್ಳಿ ಕ್ರಾಸ್‍ನಲ್ಲಿ ಗುರುವಾರ ಘಟನೆ ಸಂಭವಿಸಿದೆ. ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಅಪಘಾತ ಸಂಭವಿಸಿದೆ. ಮುಂಬದಿ ತೆರಳುತ್ತಿದ್ದ ಬೈಕ್‌ ಏಕಾಏಕಿ ತಿರುವು ಪಡೆದಿದ್ದರಿಂದ ಹಿಂಬದಿಯ ಬೈಕ್‌ ಸವಾರರು … Read more

ಭದ್ರಾವತಿ ಸಿಟಿಯ ವಿವಿಧೆಡೆ ಇಡೀ ದಿನ ಕರೆಂಟ್‌ ಇರಲ್ಲ, ಯಾವಾಗ? ಎಲ್ಲೆಲ್ಲಿ ವ್ಯತ್ಯಯವಾಗಲಿದೆ?

power cut mescom ELECTRICITY

SHIVAMOGGA LIVE NEWS | 18 APRIL 2024 BHADRAVATHI : ಭೂತನಗುಡಿಯಲ್ಲಿ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಲಾಗುತ್ತಿದೆ. ಆದ್ದರಿಂದ ಏ.20ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಭೂತನಗುಡಿ, ಮಾಧವಾಚಾರ್ ಸರ್ಕಲ್, ನಗರಸಭೆ, ಓ.ಎಸ್.ಎಂ.ರಸ್ತೆ, ಮಾಧವ ನಗರ, ಗಾಂಧಿನಗರ, ಗಾಂಧಿ ಸರ್ಕಲ್ ಸುತ್ತಮುತ್ತ, ಕೋಡಿಹಳ್ಳಿ, ಗೌರಾಪುರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಮೊಳಗಿತು ಜೈ ಶ್ರೀರಾಮ್‌ ಘೋಷಣೆ, ಎಲ್ಲೆಲ್ಲಿ ಹೇಗಿತ್ತು ರಾಮನವಮಿ ಪೂಜೆ?

ಭದ್ರಾವತಿ ಅಂಡರ್‌ ಪಾಸ್‌ನಲ್ಲಿ ಮುಂದುವರೆದ ರಿಪೇರಿ, ವಾಹನಗಳಿಗೆ ಒನ್‌ ವೇ ಸಂಚಾರ

repair-work-of-railway-under-pass-in-bhadravathi

SHIVAMOGGA LIVE NEWS | 18 APRIL 2024 BHADRAVATHI : ಲಾರಿ ಡಿಕ್ಕಿಯಾಗಿ ರೈಲ್ವೆ ಸೇತುವೆಗೆ ಹಾನಿಯಾಗಿದ್ದು, ರಿಪೇರಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆ ಭದ್ರಾವತಿ ಅಂಡರ್‌ಪಾಸ್‌ನಲ್ಲಿ ಒಂದು ಕಡೆ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಕಳೆದ ರಾತ್ರಿ ಲಾರಿ ಡಿಕ್ಕಿಯಾಗಿ ಅಂಡರ್‌ ಪಾಸ್‌ ಮುಂದಿದ್ದ ಹ್ಯಾಂಗರ್‌ ಮುರಿದಿದೆ. ರೈಲ್ವೆ ಮೇಲ್ಸೇತುವೆಗೂ ಹಾನಿಯಾಗಿತ್ತು. ಇದರಿಂದ ಹಳಿಗಳು ಏರುಪೇರಾಗಿತ್ತು. ರೈಲ್ವೆ ಇಲಾಖೆ ಸಿಬ್ಬಂದಿ ತುರ್ತು ರಿಪೇರಿ ಕಾರ್ಯ ನಡೆಸಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಈಗ ಮತ್ತಷ್ಟು … Read more

ಲಾರಿ ಡಿಕ್ಕಿ, ಭದ್ರಾವತಿಯಲ್ಲಿ ರೈಲ್ವೆ ಹಳಿ ಏರುಪೇರು, ಜನಶತಾಬ್ದಿ ಸೇರಿ 2 ರೈಲು ಎರಡು ಗಂಟೆ ವಿಳಂಬ

Truck-hits-railway-over-bridge-at-Bhadravathi.

SHIVAMOGGA LIVE NEWS | 18 APRIL 2024 RAILWAY NEWS : ಭದ್ರಾವತಿ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಲಾರಿ ಅಪಘಾತ ಸಂಭವಿಸಿ ಹಳಿಗಳು ಏರುಪೇರಾಗಿತ್ತು. ಹಾಗಾಗಿ ಎರಡು ರೈಲುಗಳು ಸುಮಾರು ಎರಡು ಗಂಟೆ ತಡವಾಗಿ ಸಂಚಾರ ಆರಂಭಸಿವೆ. ಅಪಘಾತ ಸಂಭವಿಸಿದ್ದು ಹೇಗೆ? ಭದ್ರಾವತಿ ಪಟ್ಟಣದ ರೈಲ್ವೆ ಅಂಡರ್‌ಪಾಸ್‌ ಮುಂದೆ ನಿಗದಿಗಿಂತಲೂ ಎತ್ತರದ ವಾಹನಗಳು ಸಂಚರಿಸದಂತೆ ತಡೆಯಲು ಕಬ್ಬಿಣದ ಬ್ಯಾರಿಕೇಡ್‌ ಹಾಕಲಾಗಿದೆ. ಕಳೆದ ರಾತ್ರಿ ಈ ಬ್ಯಾರಿಕೇಡ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಬ್ಯಾರಿಕೇಡ್‌ ಮುರಿದು ರೈಲ್ವೆ ಹಳಿಗೆ … Read more