ಭದ್ರಾವತಿ ಆಹಾರ ಇಲಾಖೆ ಗೋದಾಮಿನ ಗೋಡೆಗೆ ಭಿತ್ತಿ ಪತ್ರ ಅಂಟಿಸಿ, ಪ್ರತಿಭಟನೆ

Shashikumar-Gowda-protest-in-Bhadravathi-godown

SHIVAMOGGA LIVE NEWS | 12 FEBRUARY 2024 BHADRAVATHI : 83 ಚೀಲ ಪಡಿತರ ಅಕ್ಕಿ ನಾಪತ್ತೆ ಮತ್ತು ನ್ಯಾಯಬಲೆ ಅಂಗಡಿಗಳಲ್ಲಿನ ಅವ್ಯವಹಾರದ ಸಮಗ್ರ ತನಿಖೆಗೆ ಆಗ್ರಹಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಭದ್ರಾವತಿಯ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕ ಕಚೇರಿ ಮುಂಭಾಗ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್‌ ಗೌಡ ಪ್ರತಿಭಟನೆ ನಡೆಸಿದರು. ಆಹಾರ ಇಲಾಖೆ ಪಡಿತರ ಗೋದಾಮಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಗೋಡೆ ಮೇಲೆ ಭಿತ್ತಿ ಪತ್ರಗಳನ್ನು ಅಂಟಿಸಿ … Read more

ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ ಮರಳಿದಾಗ ಮನೆ ಬಾಗಿಲು ತೆಗೆದಿತ್ತು, ಕೊಠಡಿಯಲ್ಲಿ ಲೈಟ್‌ ಉರಿಯುತ್ತಿತ್ತು, ಕೇಸ್‌ ದಾಖಲು

House-Theft-in-Shimoga.

SHIVAMOGGA LIVE NEWS | 12 FEBRUARY 2024 BHADRAVATHI : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದು ಕೊಠಡಿಯ ಬೀರುವಿನಲ್ಲಿದ್ದ 20 ಸಾವಿರ ರೂ. ನಗದು ಸೇರಿದಂತೆ 1.49 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಜೇಡಿಕಟ್ಟೆ ಹೊಸೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಂಜುನಾಥ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅಜ್ಜಿ ತೀರಿಕೊಂಡಿದ್ದರಿಂದ ಮಂಜುನಾಥ್‌ ಅವರು ಕುಟುಂಬ ಸಹಿತ ಚಿಕ್ಕಮಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ … Read more

ರಸ್ತೆಗೆ ಸಿಲಿಂಡರ್‌ ತಂದಿಟ್ಟು ಸ್ಪೋಟಿಸುವ ಬೆದರಿಕೆ, ಕುಡುಕನ ಕಿರಿಕ್‌ಗೆ ಜನ ಹೈರಾಣು, ವಿಡಿಯೋ ವೈರಲ್

Youth-carries-lpg-cylinder-in-bhadravathi-hosamane

SHIVAMOGGA LIVE NEWS | 12 FEBRUARY 2024 BHADRAVATHI : ಪಾನಮತ್ತನಾಗಿದ್ದ ಯುವಕನೊಬ್ಬ ಭರ್ತಿಯಾಗಿದ್ದ ಅಡುಗೆ ಅನಿಲ ಸಿಲಿಂಡರ್‌ ಅನ್ನು ನಡು ರಸ್ತೆಗೆ ತಂದು ಎತ್ತಿ ಬಿಸಾಡಿ ಆತಂಕ ಸೃಷ್ಟಿಸಿದ್ದಾನೆ. ಕುಡಿದ ಮತ್ತಿನಲ್ಲಿ ಆತ ಸಿಲಿಂಡರ್‌ ಸ್ಪೋಟಿಸಬಹುದು ಎಂದು ಸ್ಥಳೀಯರು ಆತಂಕಕ್ಕೀಡಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕುಡುಕನ ರಂಪಾಟದ ವಿಡಿಯೋಗಳು ಈಗ ವೈರಲ್‌ ಆಗಿದೆ. ಇದನ್ನೂ ಓದಿ – VISL ಕಾರ್ಖಾನೆ ವಿಚಾರ, ದೆಹಲಿಗೆ ನಿಯೋಗ, 2 ಪ್ರಮುಖ ಬೇಡಿಕೆ ಈಡೇರಿಕೆಗೆ ಉಕ್ಕು ಪ್ರಾಧಿಕಾರಕ್ಕೆ ಒತ್ತಾಯ ಭದ್ರಾವತಿ … Read more

VISL ಕಾರ್ಖಾನೆ ವಿಚಾರ, ದೆಹಲಿಗೆ ನಿಯೋಗ, 2 ಪ್ರಮುಖ ಬೇಡಿಕೆ ಈಡೇರಿಕೆಗೆ ಉಕ್ಕು ಪ್ರಾಧಿಕಾರಕ್ಕೆ ಒತ್ತಾಯ

110823 VISL Factory Bhadravathi

SHIVAMOGGA LIVE NEWS | 12 FEBRUARY 2024 BHADRAVATHI : ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚಲು ಆದೇಶಿಸಿರುವ ಉಕ್ಕು ಪ್ರಾಧಿಕಾರ ತನ್ನ ನಿಲುವು ಬದಲಿಸಬೇಕು. ಕಾರ್ಖಾನೆಯನ್ನು ಉಳಿಸಬೇಕು ಎಂದು ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕ ಕಲ್ಯಾಣ ಕೇಂದ್ರವು ದಿಲ್ಲಿಗೆ ನಿಯೋಗ ತೆರಳಿ ಉಕ್ಕು ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ. ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೇಂದು ಪ್ರಕಾಶ್‌ ಅವರನ್ನು ಭೇಟಿಯಾದ ನಿಯೋಗ ಮನವಿ ಸಲ್ಲಿಸಿದೆ. ನಿಯೋಗದ ಮನವಿ ಏನು? ಬೇಡಿಕೆ 1 ಈ ಹಿಂದೆ ಕಾರ್ಖಾನೆಗೆ ಆಗಮಿಸಿ ವೀಕ್ಷಿಸಿದ್ದ ಕೇಂದ್ರ … Read more

MSIL ಮದ್ಯದ ಅಂಗಡಿ ಬಾಗಿಲು ಬೆಳಗ್ಗೆ 6ಕ್ಕೆ ತೆರೆದಿತ್ತು, ಬಳಿ ಹೋದ ಗ್ರಾಮಸ್ಥರಿಗೆ ಆಘಾತ ಕಾದಿತ್ತು

Money-and-liquor-theft-at-Bhadravathi-MSIL-Shop

SHIVAMOGGA LIVE NEWS | 9 FEBRUARY 2024  BHADRAVATHI : MSIL ಮದ್ಯದ ಅಂಡಿಯ ಬಾಗಿಲು ಮುರಿದು ವ್ಯಾಪಾರದ ಹಣ ಮತ್ತು ಆರ್‌ ಟಿನ್‌ ಬಿಯರ್‌ ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಅಂತರಗಂಗೆ ರಸ್ತೆಯ ಯರೇಹಳ್ಳಿ ಭೋವಿ ಕಾಲೋನಿಯ ಮಳಿಗೆಯಲ್ಲಿ ಘಟನೆ ಸಂಭವಿಸಿದೆ.   ಮದ್ಯದ ಅಂಗಡಿಯ ಬಾಗಿಲನ್ನು ಆಯುಧದಿಂದ ಮೀಟಲಾಗಿದೆ. ಅಂಗಡಿಯ ಒಳಗೆ ವ್ಯಾಪಾರದ ಹಣ 44,860 ರೂ. ಮತ್ತು 630 ರೂ. ಮೌಲ್ಯದ ಆರು ಟಿನ್‌ ಬಿಯರ್‌ ಕಳ್ಳತನ ಮಾಡಲಾಗಿದೆ. ಮರುದಿನ ಬೆಳಗ್ಗೆ 6 … Read more

ತಿಂಗಳುಗಟ್ಟಲೆ ಸಂಬಳ ಇಲ್ಲ, ಕುವೆಂಪು ವಿವಿಯಲ್ಲಿ ಹೊರಗುತ್ತಿಗೆ ನೌಕರರ ಮುಷ್ಕರ ಆರಂಭ

Kuvempu-University-Contract-workers-protest-in-shankaraghatta.

SHIVAMOGGA LIVE NEWS | 9 FEBRUARY 2024 SHANKARAGHATTA : ಮೂರು ತಿಂಗಳಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಹೊರಗುತ್ತಿಗೆ ನೌಕರರು ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ನೆವಂಬರ್‌ ತಿಂಗಳಿಂದ ನೌಕರರಿಗೆ ವೇತನ ಬಾಕಿ ಇದೆ. ಕುವೆಂಪು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಏಜೆನ್ಸಿ ಮೂಲಕ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಈ ನೌಕರರಿಗೆ ತಡವಾಗಿ ವೇತನ ಪಾವತಿಸಲಾಗುತ್ತಿದೆ. ಈ ಹಿನ್ನೆಲೆ ಕಳೆದ ತಿಂಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರು ಮುಂದಾಗಿದ್ದರು. ಆಗ … Read more

ಅಡಿಕೆ ಲೋಡ್‌ ಲಾರಿ ವಶಕ್ಕೆ, ಬೆನ್ನಟ್ಟಿ ಹಿಡಿದ ಕಸ್ಟಮ್ಸ್‌ ಅಧಿಕಾರಿಗಳ ಪಡೆ

Areca-truck-seized-in-Holehonnuru.

SHIVAMOGGA LIVE NEWS | 9 FEBRUARY 2024 HOLEHONNURU : ತೆರಿಗೆ ವಂಚಿಸಿ ಹೊರ ರಾಜ್ಯಕ್ಕೆ ಅಡಿಕೆ ಸಾಗಣೆ ಮಾಡುತ್ತಿದ್ದ ಲಾರಿಯನ್ನು ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೈಸೂರು ಮೂಲದ ತೆರಿಗೆ ಅಧಿಕಾರಿಗಳ ತಂಡ ರಾಶಿ ಅಡಿಕೆ ಲೋಡ್ ಇದ್ದ ಲಾರಿಯನ್ನು ಹೊಳೆಹೊನ್ನೂರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮೈಸೂರಿನ ಕಸ್ಟಮ್ಸ್‌ ಅಧಿಕಾರಿಗಳು ರಾಶಿ ಅಡಿಕೆ ತುಂಬಿದ್ದ ಲಾರಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಹಾಸನ ಜಿಲ್ಲೆಯ ವ್ಯಾಪಾರಿಯೊಬ್ಬರು ತೆರಿಗೆ ವಂಚಿಸಿ ಅಡಿಕೆಯನ್ನು ಹೊರ ರಾಜ್ಯಕ್ಕೆ … Read more

ಫೈನಾನ್ಸ್‌ ಸಂಸ್ಥೆ ಆಡಿಟ್‌ ವೇಳೆ ಲಕ್ಷ ಲಕ್ಷ ಹಣದ ವ್ಯತ್ಯಾಸ ಪತ್ತೆ, ಪರಿಶೀಲಿಸಿದ ಮ್ಯಾನೇಜರ್‌ಗೆ ಕಾದಿತ್ತು ಶಾಕ್‌, ದೂರು ದಾಖಲು

Bhadravathi-Old-Town-Police-Station

SHIVAMOGGA LIVE NEWS | 7 FEBRUARY 2024 BHADRAVATHI : ಗ್ರಾಹಕರಿಂದ ಸಂಗ್ರಹಿಸಿದ್ದ ಸಾಲದ ಕಂತಿನ ಹಣವನ್ನು ಫೈನಾನ್ಸ್‌ ಸಂಸ್ಥೆಗೆ ಪಾವತಿಸದೆ, ಸಿಬ್ಬಂದಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಆರೋಪದ ಹಿನ್ನೆಲೆ ನಾಲ್ವರು ಸಿಬ್ಬಂದಿ ವಿರುದ್ಧ ಫೈನಾನ್ಸ್‌ ಸಂಸ್ಥೆಯ (ಹೆಸರು ಗೌಪ್ಯ) ಬ್ರ್ಯಾಂಚ್ ಮ್ಯಾನೇಜರ್‌ ದೂರು ನೀಡಿದ್ದಾರೆ. ಭದ್ರಾವತಿಯಲ್ಲಿರುವ ಫೈನಾನ್ಸ್‌ ಸಂ‍ಸ್ಥೆಯೊಂದು ನೂರುಕ್ಕೂ ಹೆಚ್ಚು ಮಹಿಳಾ ಸಂಘಗಳಿಗೆ ಸಾಲ ನೀಡಿತ್ತು. ಗ್ರಾಹಕರಿಂದ ಸಾಲದ ಕಂತು ಸಂಗ್ರಹಿಸಿ ಫೈನಾನ್ಸ್‌ ಸಂಸ್ಥೆಗೆ ಕಟ್ಟಲು ಸಿಬ್ಬಂದಿ ನೇಮಿಸಿಕೊಳ್ಳಲಾಗಿತ್ತು. ಇವರು 22 … Read more

ಭದ್ರಾವತಿಯಲ್ಲಿ ಫಳಫಳ ಹೊಳೆಯಿತು ಹಿತ್ತಾಳೆ ಲೋಟ, ನಂಬಿ ಚಿನ್ನದ ತಾಳಿ ಕೊಟ್ಟ ಮಹಿಳೆಗೆ ಕಾದಿತ್ತು ದೊಡ್ಡ ಆಘಾತ

Bhadravathi-Rural-Police-Station

SHIVAMOGGA LIVE NEWS | 6 FEBRUARY 2024 BHADRAVATHI : ಹಿತ್ತಾಳೆ, ಬೆಳ್ಳಿ, ಬಂಗಾರದ ವಸ್ತುಗಳಿಗೆ ಪಾಲಿಶ್‌ ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಭದ್ರಾವತಿಯ ಭಂಡಾರಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಫಳಫಳ ಹೊಳೆಯಿತು ಹಿತ್ತಾಳೆ ಲೋಟ ಜಯಮ್ಮ ಎಂಬುವವರ ಮನೆ ಬಳಿ ಬಂದ ಇಬ್ಬರು ಅಪರಿಚಿತರು ಹಿತ್ತಾಳೆ, ಬೆಳ್ಳಿ, ಚಿನ್ನದ ವಸ್ತುಗಳಿಗೆ ಪಾಲಿಶ್‌ ಮಾಡಿಕೊಡುವುದಾಗಿ ತಿಳಿಸಿದ್ದರು. ನಂಬಿದ ಜಯಮ್ಮ ಮೊದಲು ಹಿತ್ತಾಳೆ ಲೋಟ ನೀಡಿದ್ದು, ಇಬ್ಬರು ಅಪರಿಚಿತರು ಲೋಟ ಹೊಳೆಯುವಂತೆ ಮಾಡಿಕೊಟ್ಟರು. ವಿಶ್ವಾಸ … Read more

ಕುರಿ ಗೂಟ ತಂದಿಟ್ಟ ಜಗಳ, ಪೊಲೀಸ್ ಠಾಣೆ ಎದುರು ಜಮಾಯಿಸಿದ ಜನ, ಏನಿದು ಪ್ರಕರಣ?

Hosa-Jambaraghatta-villagers-protest-in-front-of-Holehonnuru-station

SHIVAMOGGA LIVE NEWS | 5 FEBRUARY 2024 HOLEHONNURU : ಮುಸ್ಲಿಂ ಖಬರಸ್ಥಾನ್‌ ಜಾಗದಲ್ಲಿದ್ದ ಅಕೇಶಿಯ ಮರ ಕಡಿದ ವಿಚಾರವಾಗಿ ಎರಡು ಕೋಮಿನ ಯುವಕರ ಮಧ್ಯೆ ಗಲಾಟೆಯಾಗಿದೆ. ಘಟನೆ ವೇಳೆ ಮಹಿಳೆ ಮೇಲೆ ಹಲ್ಲೆಯಾಗಿದೆ ಎಂದು ಮಹಿಳೆಯರು ಠಾಣೆ ಎದುರು ಧರಣಿ ನಡೆಸಿದರು. ಕುರಿ ಗೂಟದಿಂದ ಜಗಳ ಭದ್ರಾವತಿ ತಾಲೂಕು ಹೊಸ ಜಂಬರಘಟ್ಟೆಯ ಖಬರಸ್ಥಾನ್‌ (ಸ್ಮಶಾನ) ಜಾಗದಲ್ಲಿದ್ದ ಅಕೇಶಿಯ ಮರವನ್ನು ಕಡಿದು ರವಿ ಎಂಬಾತ ಕುರಿ ಗೂಟ ಸಿದ್ಧಪಡಿಸಿದ್ದ. ಇದನ್ನು ಗಮನಿಸಿದ ಅನ್ಯ ಕೋಮಿನ ಕೆಲವರು … Read more