ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ, KSRTC ಬಸ್ ತಡೆದು ಆಕ್ರೋಶ

271223 Students Protest for bus at kaimara near holehonnuru

SHIVAMOGGA LIVE NEWS | 27 DECEMBER 2023 HOLEHONNURU : ಕೆಎಸ್‌ಆರ್‌ಟಿಸಿ ಬಸ್ಸುಗಳು ನಿಲುಗಡೆ ನೀಡದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಸರ್ಕಾರಿ ಬಸ್ಸುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಹೊಳೆಹೊನ್ನೂರು ಸಮೀಪ ಕೈಮರ ಸರ್ಕಲ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಮಾರ್ಗದಲ್ಲಿ ಹಾದು ಹೋಗುವ ಬಸ್ಸುಗಳು ವಿದ್ಯಾರ್ಥಿಗಳನ್ನು ಕಂಡರೆ ನಿಲುಗಡೆ ನೀಡುತ್ತಿಲ್ಲ. ಹಾಗಾಗಿ ನಿತ್ಯ ಶಾಲೆ, ಕಾಲೇಜಿಗೆ ತಡವಾಗಿ ತೆರಳುವಂತಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ … Read more

ಭದ್ರಾ ಮೇಲ್ದಂಡೆ ಕಾಲುವೆಗೆ ಡಿ.29ರಿಂದ ನೀರು, ಸಾರ್ವಜನಿಕರಿಗೆ ಎಚ್ಚರಿಕೆ

Bhadra-Dam-General-Images

SHIVAMOGGA LIVE NEWS | 26 DECEMBER 2023 SHIMOGA : ಭದ್ರಾ ಮೇಲ್ದಂಡೆ ಕಾಲುವೆಗೆ ಡಿ.29ರಿಂದ ನೀರು ಹರಿಸಲಾಗುತ್ತದೆ. ಈ ಹಿನ್ನೆಲೆ ಕಾಲುವೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎಚ್ಚರ ವಹಿಸುವಂತೆ ವಿಶ್ವೇಶ್ವರಯ್ಯ ಜಲ ನಿಗಮದ ಸೂಪರಿಂಟೆಂಡೆಂಟ್‌ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯು ಭದ್ರಾ ಜಲಾಶಯದಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ ಅಜ್ಜಂಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾದು ಹೋಗಿದೆ. ಸರ್ಕಾರದ ನಿರ್ದೇಶನದಂತೆ  ಡಿ.29 ರಂದು … Read more

ರಸ್ತೆ ಅಪಘಾತ, ಶಾಸಕ ಸಂಗಮೇಶ್ವರ್‌ ಆಪ್ತ ಸಹಾಯಕ ಸಾವು

Bhadravathi-MLA-PA-succumbed-in-an-accident

SHIVAMOGGA LIVE NEWS | 26 DECEMBER 2023 BHADRAVATHI : ರಸ್ತೆ ಅಪಘಾತದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಆಪ್ತ ಸಹಾಯಕ ಈಶ್ವರ್‌ (47) ಸಾವನಪ್ಪಿದ್ದಾರೆ. ಭದ್ರಾವತಿ ತಾಲೂಕು ಚನ್ನಗಿರಿ ರಸ್ತೆಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಕೂಡ್ಲಿಗೆರೆಯಿಂದ ಈಶ್ವರ್‌ ಭದ್ರಾವತಿಗೆ ತಮ್ಮ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಲಾರಿ ಡಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡಿದ್ದರು ಎಂದು ತಿಳಿದು ಬಂದಿದೆ. ಕೂಡಲೆ ಅವರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. … Read more

ಭದ್ರಾವತಿಯಲ್ಲಿ ವೀರಾಂಜನೇಯ ಸ್ವಾಮಿ ಅದ್ಧೂರಿ ರಥೋತ್ಸವ, ಹೇಗಿತ್ತು ಉತ್ಸವ?

Hutta-Colony-Anjaneya-Swami-rathotsava.

SHIVAMOGGA LIVE NEWS | 25 DECEMBER 2023 BHADRAVATHI : ಹುತ್ತಾ ಕಾಲೋನಿಯ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಭದ್ರಾವತಿ ಸೇರಿದಂತೆ ವಿವಿಧೆಡೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಉಪಾದ್ಯಾಯ ಮತ್ತು ಸಂಗಡಿಗ ಪೂಜಾ ಅರ್ಚಕರು ಧಾರ್ಮಿಕ ವಿಧಿಗಳನ್ನು ಪೂರೈಸಿ ಉತ್ಸವ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಿ ಆರತಿ ಬೆಳಗಿದರು. ನೆರೆದಿದ್ದ ಭಕ್ತರು ಘೋಷಣೆ ಮೊಳಗಿಸಿದರು. ಬಳಿಕ ಭಕ್ತರು ತೇರನ್ನು ಎಳೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸಮೀಪದ ಸರ್‌ಎಂವಿ … Read more

ಗೃಹಿಣಿಗೆ ಲಕ್ಷ ಲಕ್ಷ ರೂ. ಪಂಗನಾಮ, ಮುಂದಿನ ಟಾರ್ಗೆಟ್‌ ನೀವೂ ಆಗಬಹುದು? ಏನಿದು ಕೇಸ್?

crime name image

SHIVAMOGGA LIVE NEWS | 20 DECEMBER 2023 SHIMOGA : ಪಾರ್ಟ್‌ ಟೈಮ್‌ ಜಾಬ್‌ ಹೆಸರಲ್ಲಿ ಗೃಹಣಿಯೊಬ್ಬರಿಗೆ 4.67 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ತಾಲೂಕಿನ ಗೃಹಿಣಿಯೊಬ್ಬರು ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ವರ್ಕ್‌ ಫ್ರಂ ಹೋಮ್‌ ಜಾಹೀರಾತು ಗಮನಿಸಿದ್ದರು. ಅಪ್ಲೈ ಎಂದು ಕ್ಲಿಕ್‌ ಮಾಡಿದ್ದು, ಕೂಡಲೆ ಮೆಸೇಜ್‌ ಬಂದಿದೆ. ಗೃಹಿಣಿಯನ್ನು ಟೆಲಿಗ್ರಾಂ ಆ್ಯಪ್‌ನ ಗ್ರೂಪ್‌ಗೆ ಸೇರಿಸಿಕೊಂಡು ಬ್ಯಾಂಕ್‌ ವಿವರ ಪಡೆಯಲಾಗಿತ್ತು. ಟೆಲಿಗ್ರಾಂನಲ್ಲಿ 20 ವಿಡಿಯೋ ಲಿಂಕ್‌ಗಳನ್ನು ಕಳುಹಿಸಿ ಲೈನ್‌ ಮಾಡಿ ಸ್ಕ್ರೀನ್‌ ಶಾಟ್‌ ಕಳುಹಿಸುವಂತೆ ಮಹಿಳೆಗೆ ಸೂಚಿಸಲಾಗಿತ್ತು. … Read more

ಕೊಲೆ ಯತ್ನ ಕೇಸ್‌ ವಿರುದ್ಧ ಪೊಲೀಸ್‌ ಠಾಣೆ ಮುಂದೆ ಬಿಜೆಪಿ, ಜೆಡಿಎಸ್‌ ಪಕ್ಷದಿಂದ ಹೋರಾಟ, ಏನಿದು ಪ್ರಕರಣ?

bjp-jds-workers-protest-in-front-of-bhadaravathi-hosamane-police-station

SHIVAMOGGA LIVE NEWS | 20 DECEMBER 2023 BHADRAVATHI : ಡೈರಿ ಚುನಾವಣೆ ವೇಳೆ ವಿನಾಕಾರಣ ಇಬ್ಬರು ಮುಖಂಡರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧದ ಪ್ರಕರಣವನ್ನು ತಕ್ಷಣವೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನಗರದ ಹೊಸಮನೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಕೊಲೆ ಯತ್ನ ಪ್ರಕರಣ ದಾಖಲು ತಾಲ್ಲೂಕಿನ ಕಾಚಗೊಂಡನಹಳ್ಳಿ ಗ್ರಾಮದ ಡೈರಿ ಚುನಾವಣೆ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಡಿ.ಚಂದ್ರಶೇಖರ್ ಮತ್ತು ಡಿ.ಆನಂದ ಅವರು … Read more

ರಸ್ತೆಗೆ ಪುನಿತ್ ರಾಜ್‌ಕುಮಾರ್‌ ಹೆಸರು, ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸೂಚನೆ

Bhadravathi-Nagarasabhe-File-Image-New

SHIVAMOGGA LIVE NEWS | 18 DECEMBER 2023 BHADRAVATHI : ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ ನಟ ಪುನೀತ್‌ ರಾಜಕುಮಾರ್‌ ಹೆಸರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ನಾಮಕರಣ ಮಾಡುವ ಬಗ್ಗೆ ತಮ್ಮ ಸಲಹೆ ಸೂಚನೆ ಅಥವಾ ಆಕ್ಷೇಪಣೆ ಇದ್ದಲ್ಲಿ ತಿಳಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಗರಸಭಾ ವ್ಯಾಪ್ತಿಯ ವಾರ್ಡ್ ನಂ.6ರ KSRTC ಬಸ್ ಡಿಪೋ ವೃತ್ತದ ಬಳಿಯಿಂದ ರಂಗಪ್ಪ ವೃತ್ತದವರೆಗಿನ ರಸ್ತೆಗೆ ‘ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ನ.25ರಂದು ನಡೆದ ಕೌನ್ಸಿಲ್ ಸಾಮಾನ್ಯ … Read more

ಭದ್ರಾವತಿಯಲ್ಲಿ ಯಮ, ಚಿತ್ರಗುಪ್ತ | ಶಿವಮೊಗ್ಗ, ಆನಂದಪುರ, ಭದ್ರಾವತಿಯಲ್ಲಿ ಪೊಲೀಸರಿಂದ ಏರಿಯಾ ಡಾಮಿನೇಷನ್‌

Yama-Chitragupta-steet-play-organized-by-police.

SHIVAMOGGA LIVE NEWS | 11 DECEMBER 2023 ಬೈಕ್‌ಗೆ ಕಾರು ಡಿಕ್ಕಿ, ರೈತನಿಗೆ ಗಾಯ SHIMOGA : ಡೈರಿಗೆ ಹಾಲು ಹಾಕಲು ಬೈಕ್‌ನಲ್ಲಿ ತೆರಳುತ್ತಿದ್ದ ರೈತನಿಗೆ ಕಾರು ಹೊಡದಿದೆ. ಗಾಯಗೊಂಡಿರುವ ರೈತ ಚೋಡನಾಳ್‌ನ ಸೋಮಶೇಖರ್‌ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಪ್ಪೂರಿನಲ್ಲಿರುವ ಹಾಲಿನ ಡೈರಿಗೆ ಹಾಕು ಹಾಕಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಘಟನೆ ಸಂಭವಿಸಿದೆ. ಸಾಗರ ಕಡೆಯಿಂದ ಬಂದ ಕಾರು ಸೋಮಶೇಖರ್‌ ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಸೋಮಶೇಖರ್‌ ಅವರ … Read more

ಕುವೆಂಪು ವಿಶ್ವವಿದ್ಯಾಲಯ ಬಂದ್‌ ಮಾಡುವ ಎಚ್ಚರಿಕೆ, ಕುಲಪತಿಗೆ 2 ಬೇಡಿಕೆ ಸಲ್ಲಿಕೆ, ಏನೇನು?

081223 NSUI Memorandum to Kuvempu University VC

SHIVAMOGGA LIVE NEWS | 8 DECEMBER 2023 SHANKARAGATTA : ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ಕುವೆಂಪು ವಿಶ್ವವಿದ್ಯಾಲಯ ಬಂದ್‌ ಮಾಡಿ ಪ್ರತಿಭಟನೆ ನಡೆಸುವುದಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‌ (ಎನ್‌ಎಸ್‌ಯುಐ) ಎಚ್ಚರಿಸಿದೆ. ಈ ಸಂಬಂಧ ಕುವೆಂಪು ವಿವಿ ಕಲುಪತಿಗೆ ಮನವಿ ಸಲ್ಲಿಸಿದೆ. ಎರಡು ಪ್ರಮುಖ ಬೇಡಿಕೆಗಳು ಬೇಡಿಕೆ 1 : ಉಳಿಕೆ ಸೀಟು ಹಂಚಿಕೆ ಮಾಡಿ ಪ್ರಸಕ್ತ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶ ಮುಕ್ತಾಯವಾಗಿದೆ. ವಿವಿಧ ಕೋರ್ಸುಗಳಿಗೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಂಗವಿಕಲ … Read more

ಮಾಚೇನಹಳ್ಳಿಯಲ್ಲಿ ಕಂಪನಿ ಮೇಲೆ ಅಧಿಕಾರಿಗಳಿಂದ ದಾಳಿ, ಕಾರಣವೇನು?

MACHENAHALLI-BDVT-NEWS-1.jpg

SHIVAMOGGA LIVE NEWS | 8 DECEMBER 2023 BHADRAVATHI : ಅನುಮತಿ ಇಲ್ಲದೆ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮತ್ತು ಉತ್ಪಾದನೆ ಆರೋಪದ ಹಿನ್ನೆಲೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಗ್ರೋ ಕೆಮಿಕಲ್ಸ್‌ ಕಂಪನಿಯೊಂದರ ಮೇಲೆ ದಾಳಿ (Raid) ನಡೆಸಲಾಗಿದೆ. 1.31 ಕೋಟಿ ರೂ. ಮೊತ್ತದ ರಸಗೊಬ್ಬರ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮತ್ತು ಉತ್ಪಾದನೆ ಮಾಡಿದ ಮಾಹಿತಿ ಆಧಾರದಲ್ಲಿ ಜಾಗೃತ ಕೋಶದ ಅಪರ ಕೃಷಿ ನಿರ್ದೇಶಕರು, ಮೈಸೂರು ಜಾಗೃತ ಕೋಶದ ಜಂಟಿ ನಿರ್ದೇಶಕರು ಮತ್ತು ಶಿವಮೊಗ್ಗ … Read more