ಭದ್ರಾವತಿಯ ವಿವಿಧೆಡೆ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ, ಮಾಲೀಕರಿಗೆ ದಂಡ

Raid-on-Shops-at-Bhadravathi.

BHADRAVATHI | ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಂಡ (FINE) ವಿಧಿಸಿದ್ದಾರೆ. ಭದ್ರಾವತಿ ಪಟ್ಟಣದ ಹೊಸಮನೆ ಮತ್ತು ಅಶ್ವಥನಗರದ ವಿವಿಧ ಮಳಿಗೆಗಳ ಮೇಲೆ ದಾಲಿ ಮಾಡಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್ ಪ್ರೆಸ್ ರೈಲು ಕಾಡು ಕೋಣಕ್ಕೆ ಡಿಕ್ಕಿ ತಂಬಾಕು ಉತ್ಪನ್ನ ಮಾರಾಟ ಸಂಬಂಧ ನಿಯಮ … Read more

ಭದ್ರಾವತಿಯಲ್ಲಿ ಯಾರೂ ಇಲ್ಲದಾಗ ಮನೆಗೆ ನುಗ್ಗಿದರು, ಮೂರು ಹಂಡೆ ಕದ್ದೊಯ್ದರು

Bhadravathi News Graphics

BHADRAVATHI | ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿಟಕಿ ತೆಗೆದು ಒಳ ನುಗ್ಗಿರುವ ಕಳ್ಳರು ಹಂಡೆಗಳು, ಲ್ಯಾಪ್ ಟಾಪ್ ಬ್ಯಾಗ್ (LAPTOP BAG) ಮತ್ತು ವೈಫೈ ಸ್ಪೀಕರ್ ಕದ್ದೊಯ್ದಿದ್ದಾರೆ. ಭದ್ರಾವತಿ ನ್ಯೂ ಟೌನ್ ನಲ್ಲಿರುವ ಗೋಪಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಗೋಪಿ ಅವರು ತಮ್ಮ ಊರು ಆಂಧ್ರಕ್ಕೆ ತೆರಳಿದ್ದರು. ಅಲ್ಲಿಂದ ಭದ್ರಾವತಿಯ ಮನೆಗೆ ಹಿಂತಿರುಗಿದಾಗ ಹಿಂಬದಿಯ ಕಿಟಕಿ ತೆಗೆದಿರುವುದನ್ನು ಗಮನಿಸಿದ್ದರು. ಮನೆಯ ಬಾಗಿಲು ತೆಗೆದು ನೋಡಿದಾಗ ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿದ್ದವು. ಎಲ್ಲೆಡೆ ಪರಿಶೀಲಿಸಿದಾಗ ದೇವರ ಮನೆಯಲ್ಲಿದ್ದ ಮೂರು ಹಂಡೆಗಳು … Read more

ಸಾಲ ಕೊಡುವುದಿಲ್ಲ ಅಂದಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ

crime name image

BHADRAVATHI | ಸಾಲ ಕೊಡುವುದಿಲ್ಲ ಅಂತಾ ಹೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ (KNIEF ATTACK) ನಡೆಸಲು ಮುಂದಾಗಿದ್ದಾನೆ. ವ್ಯಕ್ತಿ ಚಾಕು ಬೀಸಿದಾಗ ಅಂಗಡಿ ಮಾಲೀಕ ತಪ್ಪಿಸಿಕೊಂಡಿದ್ದಾನೆ. ಆದರೂ ಕುತ್ತಿಗೆ ಬಳಿ ಚಾಕು ತಾಗಿ ಗಾಯವಾಗಿದೆ. ಭದ್ರಾವತಿ ತಾಲೂಕು ಕೋಮಾರನಹಳ್ಳಿಯಲ್ಲಿ ವಿಷ್ಣು ನಾಯ್ಕ್ ಎಂಬವವರು ಅಂಗಡಿ ನಡೆಸುತ್ತಿದ್ದಾರೆ. ಅ.7ರಂದು ಸಂಜೆ ಚೇತನ್ ಎಂಬಾತ ಅಂಗಡಿ ಬಳಿ ಬಂದು ಸಿಗರೇಟ್ ಸಾಲವಾಗಿ ಕೊಡುವಂತೆ ಕೇಳಿದ್ದಾನೆ. ವಿಷ್ಣು ನಾಯ್ಕ್ ಸಾಲ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಆಗ ಚೇತನ್ ತನ್ನ … Read more

ಭದ್ರಾವತಿಯಲ್ಲಿ ಭದ್ರಾ ನದಿಯಲ್ಲಿ ಯುವಕನ ಮೃತದೇಹ, ಕೊಲೆ ಶಂಕೆ

crime name image

BHADRAVATHI | ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ ಯುವಕನ ಮೃತದೇಹ (YOUTH DEAD) ಇವತ್ತು ಭದ್ರಾ ನದಿಯಲ್ಲಿ ಪತ್ತೆಯಾಗಿದೆ. ಯುವಕನ್ನು ಕೊಲೆ ಮಾಡಲಾಗಿದೆ ಎಂದು ಆತನ ಕುಟುಂಬದವರು, ಸ್ನೇಹಿತರು ಆರೋಪಿಸಿದ್ದಾರೆ. ಭದ್ರಾವತಿ ಅನ್ವರ್ ಕಾಲೋನಿಯ ಜಮೀರ್ (22) ಮೃತ ದುರ್ದೈವಿ. ಮೂರು ದಿನದ ಹಿಂದೆ ಜಮೀರ್ ನಾಪತ್ತೆಯಾಗಿದ್ದ. ಈ ಕುರಿತು ಆತನ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಜಮೀರ್, ಮೂರು ದಿನದ ಹಿಂದೆ ಕೆಲಸಕ್ಕೆಂದು ತೆರಳಿದ್ದ. ಆದರೆ ಆತ ಮನೆಗೆ ಮರಳಿರಲಿಲ್ಲ. ಮೊಬೈಲ್ … Read more

ಮನೆಗೆ ಹೊರಟಿದ್ದವನ ಪಾಲಿಗೆ ಜವರಾಯನಂತೆ ಬಂದ ಕ್ಯಾಂಟರ್, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಬೈಕ್ ಸವಾರ

Bhadravathi Name Graphics

BHADRAVATHI | ಕ್ಯಾಂಟರ್ (CANTER) ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಶಿವಮೊಗ್ಗದ ಮಂಡೇನಕೊಪ್ಪದ ಚಂದುನಾಯ್ಕ (35) ಗಾಯಗೊಂಡಿದ್ದಾರೆ. ಶಿವಮೊಗ್ಗ – ತರೀಕರೆ ರಸ್ತೆಯ ಹೆಚ್.ಕೆ.ಜಂಕ್ಷನ್ ಬಳಿ ಘಟನೆ ಸಂಭವಿಸಿದೆ. ಭದ್ರಾವತಿ ಗೋಣಿ ಬೀಡು ಗ್ರಾಮದಲ್ಲಿ ಪರಿಚಿತರ ಮನೆಗೆ ಚಂದುನಾಯ್ಕ ಭೇಟಿ ನೀಡಿದ್ದರು. ಸೆ. 30ರ ಸಂಜೆ 7.30ರ ಹೊತ್ತಿಗೆ ಶಿವಮೊಗ್ಗದ ಮಂಡೇನಕೊಪ್ಪದಲ್ಲಿರುವ ಮನೆಗೆ ತೆರಳುತ್ತಿದ್ದರು. ಹೆಚ್.ಕೆ.ಜಂಕ್ಷನ್ ಬಳಿ ಕ್ಯಾಂಟರ್ (CANTER) ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಚಾಲಕ … Read more

ಬೈಕ್ ನಿಲ್ಲಿಸಿಕೊಂಡು ಗೋಮಾಂಸ ಮಾರಾಟ ಮಾಡುತ್ತಿದ್ದವನ ಮೇಲೆ ಪೊಲೀಸ್ ದಾಳಿ

crime name image

BHADRAVATHI | ಬೈಕ್ ನಿಲ್ಲಿಸಿಕೊಂಡು ಗೋಮಾಂಸ (beef) ಮಾರಾಟ ಮಾಡುತ್ತಿದ್ದವನ ಮೇಲೆ ಪೊಲೀಸ್ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಚನ್ನಗಿರಿ ನಿವಾಸಿ ಮೊಹಮ್ಮದ್ ಸಲೀಂ (25) ಬಂಧಿತ. ಈತ ಅಡುಗೆ ಕೆಲಸ ಮಾಡಿಕೊಂಡಿದ್ದ. ಭದ್ರಾವತಿಯ ಬಸಲೀಕಟ್ಟೆ ಗ್ರಾಮದ ಸಣ್ಣ ಚಾನಲ್ ಬಳಿ ಬೈಕ್ ನಲ್ಲಿ ಗೋಮಾಂಸ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿ ರಂಗಸ್ವಾಮಿ ದಾಳಿ ನಡೆಸಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಬೈಕಿಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ … Read more

ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಬೈಕಿಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ ಸರ್ಕಾರಿ ಬಸ್

Bhadravathi News Graphics

BHADRAVATHI | ಆಸ್ಪತ್ರೆಗೆ ದಾಖಲಾಗಿದ್ದ ತಂದೆಯನ್ನು ನೋಡಲು ತೆರಳುತ್ತಿದ್ದ (BY PASS) ಯುವಕನ ಬೈಕಿಗೆ ಎದುರಿನಿಂದ ಬಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿಯ ನ್ಯೂ ಟೌನ್ ವಾಸಿ ಚಂದನ್ (21) ಗಾಯಗೊಂಡಿದ್ದಾನೆ. ಭದ್ರಾವತಿ ಬೈಪಾಸ್ (BY PASS) ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ ಸಿದ್ದಾಪುರ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಹೇಗಾಯ್ತು ಅಪಘಾತ? (BY PASS) ಚಂದನ್ ಅವರ ತಂದೆಯನ್ನು ಶಿವಮೊಗ್ಗದ ಎನ್.ಹೆಚ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ನೋಡಿಕೊಂಡು ಬರಲು … Read more

ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಗುಂಡಿಗಳ ಜೊತೆಗೆ ಈಗ ಜೆಲ್ಲಿ ಕಾಟ, ಕಾರು ಅಪಘಾತ

small-stones-on-Shimoga-Bhadravathi-Highway

SHIMOGA | ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲಿ ಗುಂಡಿಗಳ ಕಾಟದಿಂದ ಹೈರಾಣಾಗಿದ್ದ ವಾಹನ ಸವಾರರಿಗೆ ಈಗ ಜೆಲ್ಲಿ ಕಲ್ಲುಗಳಿಂದ (SMALL STONE) ಸಂಕಷ್ಟ ಶುರುವಾಗಿದೆ. ರಸ್ತೆ ತುಂಬೆಲ್ಲ ಜೆಲ್ಲೆ ಹರಡಿಕೊಂಡಿದ್ದು, ಚಾಲಕ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದಿದೆ. ನಿದಿಗೆ ಕೆರೆ ಸಮೀಪ ತಿರುವಿನಲ್ಲಿ ಇವತ್ತು ಕಾರು ಪಲ್ಟಿ ಹೊಡೆದಿದೆ. ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ‘ಶಿವಮೊಗ್ಗ – ಭದ್ರಾವತಿ ಹೆದ್ದಾರಿ ಪರಿಸ್ಥಿತಿ 40 ಪರ್ಸೆಂಟ್ ಕಮಿಷನ್ ವ್ಯವಹಾರಕ್ಕೆ … Read more

ಹೆಡೆ ಎತ್ತಿದ್ದ ನಾಗರ ಹಾವಿಗೆ ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ಉರಗ ರಕ್ಷಕ

Nagarahavu-bites-snake-catcher-in-Bhadravathi

BHADRAVATHI | ನಾಗರ ಹಾವಿಗೆ ಮುತ್ತು ಕೊಡಲು ಹೋಗಿ ವ್ಯಕ್ತಿಯೊಬ್ಬರು ಅದರಿಂದ ಕಚ್ಚಿಸಿಕೊಂಡಿದ್ದಾರೆ (SNAKE BITE). ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್ ಆತ ಪ್ರಣಪಾಯದಿಂದ ಪಾರಾಗಿದ್ದಾರೆ. ಭದ್ರಾವತಿಯ ಅಲೆಕ್ಸ್ ಎಂಬುವವರ ತುಟಿಗೆ ನಾಗರ ಹಾವು ಕಚ್ಚಿದೆ. ಬೊಮ್ಮನಕಟ್ಟೆಯ ಮದುವೆ ಮನೆಯೊಂದರಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದವು. ಸ್ಥಳೀಯರು ಅಲೆಕ್ಸ್ ಮತ್ತು ರೋನಿ ಎಂಬುವವರನ್ನು ಕರೆಯಿಸಿ ಹಾವು ಹಿಡಿಸಿದ್ದಾರೆ. ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡರು (SNAKE BITE) ಅಲೆಕ್ಸ್ ಮತ್ತು ರೋನಿ ಅವರು ಹಾವುಗಳನ್ನು … Read more

ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸರ ದಾಳಿ, ಐವರ ಬಂಧನ, ಕಾರಣ ಬಿಚ್ಚಿಟ್ಟ ಗೃಹ ಸಚಿವರು

Police-Raid-on-PFI-Workers-at-Bhadravathi

SHIMOGA | ರಾಜ್ಯಾದ್ಯಂತ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಕಾರ್ಯಕರ್ತರ ಮೇಲೆ ಪೊಲೀಸರು ದಾಳಿ (RAID ON PFI) ನಡೆಸಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪೊಲೀಸರು ದಾಳಿ ಮಾಡಿ, ಐವರನ್ನು ವಶಕ್ಕೆ ಬಂಧಿಸಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ‘ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭದ್ರಾವತಿಯಲ್ಲಿ ಮೂವರು ಮತ್ತು ಶಿವಮೊಗ್ಗದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಆಯಾ ತಾಲೂಕು ದಂಡಾಧಿಕಾರಿ ಅವರ ಮುಂದೆ ಹಾಜರುಪಡಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಬಂಧನಕ್ಕೆ ಅವರು … Read more