ಭದ್ರಾವತಿ ಉಪ ವಿಭಾಗಕ್ಕೆ ನೂತನ ಎಎಸ್ಪಿ

Bhadravathi News Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 19 ನವೆಂಬರ್ 2021 ಭದ್ರಾವತಿ ಉಪ ವಿಭಾಗಕ್ಕೆ ನೂತನ ಎಎಸ್ಪಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿತೇಂದ್ರಕುಮಾರ್ ಅವರು ಭದ್ರಾವತಿ ಉಪ ವಿಭಾಗದ ನೂತನ ಎಎಸ್’ಪಿಯಾಗಿದ್ದಾರೆ. ಎಎಸ್’ಪಿಯಾಗಿದ್ದ ಸಾಹಿಲ್ ಬಾಗ್ಲಾ ಅವರನ್ನು ಹುಬ್ಬಳ್ಳಿ – ಧಾರವಾಡದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಜಿತೇಂದ್ರ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಜಿತೇಂದ್ರ ಕುಮಾರ್ ಅವರು 2019ರ ಬ್ಯಾಚ್’ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಭದ್ರಾವತಿ ರೈಲ್ವೆ ಸೇತುವೆ ಮುಂದಿರುವ ಡಾ.ಅಂಬೇಡ್ಕರ್ ಪ್ರತಿಮೆ ಬದಲಾವಣೆ ಆಗ್ರಹ

071121 Memorandum to Change Ambedkar Statue BDVT

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ನವೆಂಬರ್ 2021 ಭದ್ರಾವತಿಯಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಯನ್ನು ಬದಲಾಯಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ಈಗಿರುವ ಪ್ರತಿಮೆ ತೆರವು ಮಾಡಿ, ಹೊಸ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಡಿಎಸ್ಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಸಂಬಂಧ ಶಾಸಕ ಬಿ.ಕೆ.ಸಂಗಮೇಶ್ವರ ಅವರಿಗೆ ಮನವಿ ಸಲ್ಲಿಸಿದ ಡಿಎಸ್ಎಸ್ ಕಾರ್ಯಕರ್ತರು, ಅತಿ ಶೀಘ್ರದಲ್ಲಿ ಹೊಸ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಬದಲಾವಣೆ ಯಾಕೆ? ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 2007ರಲ್ಲಿ ರೈಲ್ವೆ ಸೇತುವೆ ಮುಂದೆ … Read more

ಭದ್ರಾವತಿಯಲ್ಲಿ ದರೋಡೆ ಮಾಡಿದ್ದವರು ಶಿವಮೊಗ್ಗದಲ್ಲಿ ಅರೆಸ್ಟ್, ಕೆಲವೇ ಗಂಟೆಯಲ್ಲಿ ನಾಲ್ಕು ಠಾಣೆಯಲ್ಲಿ ಏಳು ಕೇಸ್

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ನವೆಂಬರ್ 2021 ಬೆಳಗಿನ ಜಾವ ಭದ್ರಾವತಿಯಲ್ಲಿ ಮೂರು ಕಡೆ ದರೋಡೆ ಮಾಡಿದ್ದ ದುಷ್ಕರ್ಮಿಗಳನ್ನು ಶಿವಮೊಗ್ಗದಲ್ಲಿ ಅರೆಸ್ಟ್ ಮಾಡಲಾಗಿದೆ. ಅದೇ ದಿನ ಬೆಳಗ್ಗೆ ಈ ದುಷ್ಕರ್ಮಿಗಳು ಶಿವಮೊಗ್ಗದಲ್ಲೂ ದರೋಡೆ ಮಾಡಿದ್ದರು. ಇವರ ವಿರುದ್ಧ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಳು ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಆಯನೂರು ಗೇಟ್’ನ ಗಗನ್ (19), ಬೊಮ್ಮನಕಟ್ಟೆಯ ಎಫ್ ಬ್ಲಾಕ್ ನಿವಾಸಿ ವಿಶಾಲ್ (19), ಬೊಮ್ಮನಕಟ್ಟೆಯ ಬಿ ಬ್ಲಾಕ್ ನಿವಾಸಿ ಪ್ರೀತಿಮ್ (19) ಬಂಧಿತರು. … Read more

ಭದ್ರಾವತಿಯ ಒಂದೇ ಠಾಣೆ ವ್ಯಾಪ್ತಿಯಲ್ಲಿ ಅರ್ಧ ಗಂಟೆಯೊಳಗೆ ಮೂರು ಕಡೆ ದರೋಡೆ

Bhadravathi Name Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 6 ನವೆಂಬರ್ 2021 ಬೆಳಗಿನ ಜಾವ ಬೈಕ್’ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿ ಮೂರು ಕಡೆ ದರೋಡೆ ಮಾಡಿದ್ದಾರೆ. ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರ್ಧ ಗಂಟೆಯೊಳಗೆ ಮೂವರನ್ನು ಬೆದರಿಸಿ ಹಣ, ಮೊಬೈಲ್, ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆ 1 : ಬಸ್ ಇಳಿದವರ ಮೇಲೆ ದಾಳಿ ಬೆಂಗಳೂರಿನಿಂದ ಸರ್ಕಾರಿ ಬಸ್ಸಿನಲ್ಲಿ ಆಗಮಿಸಿದ ಪರಶುರಾಮ ಎಂಬುವವರು ಬೆಳಗ್ಗೆ 4 ಗಂಟೆ ಹೊತ್ತಿಗೆ ಭದ್ರಾವತಿ ನಗರಸಭೆ … Read more

ಶಿವಮೊಗ್ಗ ಡೈರಿ ಬಳಿ ಅಪಘಾತ, ಮೃತ ಯುವಕರ ಗುರುತು ಪತ್ತೆ

051121 Shimoga Bhadravathi Road Accident Bike KSRTC

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021 ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರಾದ ಯುವಕರ ಗುರುತು ಪತ್ತೆಯಾಗಿದೆ. ಇಬ್ಬರೂ ಭದ್ರಾವತಿ ತಾಲೂಕು ಜಯಂತಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಾಚೇನಹಳ್ಳಿಯಲ್ಲಿ ಇವತ್ತು ಬೆಳಗ್ಗೆ ಕೆಎಸ್ಆರ್’ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಜಯಂತಿ ಗ್ರಾಮದ ಅಂಥೋಣಿ (34) ಮತ್ತು ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಗ್ರಾಮದ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ … Read more

ಭದ್ರಾವತಿಯಲ್ಲಿ ಪೊಲೀಸ್ ಮುಖ್ಯ ಪೇದೆ ಸಸ್ಪೆಂಡ್, ಶಿವಮೊಗ್ಗ ಎಸ್.ಪಿ ಆದೇಶ, ಕಾರಣವೇನು?

crime name image

ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 3 ನವೆಂಬರ್ 2021 ಗಾಂಜಾ ಹಾವಳಿ ಹೆಚ್ಚಳಕ್ಕೆ ಕೆಲ ಪೊಲೀಸರು ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪಗಳಿಗೆ ಪುಷ್ಠಿ ನೀಡುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದೆ ಆರೋಪದ ಹಿನ್ನೆಲೆ ಸಿಬ್ಬಂದಿಯೊಬ್ಬರನ್ನು ಜಿಲ್ಲಾ ವರಿಷ್ಠಾಧಿಕಾರಿ ಅವರು ಅಮಾನತು ಮಾಡಿದ್ದಾರೆ. ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆ ಮುಖ್ಯಪೇದೆ ಅಶೋಕ್ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಏನಿದು ಪ್ರಕರಣ? ಜೂನ್ 28ರ ರಾತ್ರಿ ಭದ್ರಾವತಿ – ತರೀಕೆರೆ ರೆಸ್ತೆಯಲ್ಲಿ ಓಮ್ನಿ ಕಾರಿನಲ್ಲಿ … Read more

BREAKING NEWS | ಭದ್ರಾವತಿಯಲ್ಲಿ ಟೈರ್’ಗೆ ಬೆಂಕಿ, ಅಂಗಡಿಗಳು ಬಂದ್

291021 Fire at Bhadravathi ahead of Punith Rajkumar Death

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಅಕ್ಟೋಬರ್ 2021 ಪುನಿತ್ ರಾಜ್ ಕುಮಾರ್ ನಿಧನ ಹಿನ್ನೆಲೆ ಭದ್ರಾವತಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದೆ. ಅಂಗಡಿಗಳ ಬಾಗಿಲು ಬಂದ್ ಮಾಡಿ ವರ್ತಕರು ಗೌರವ ಸಲ್ಲಿಸಿದ್ದಾರೆ. ಇನ್ನು ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ರಸ್ತೆಯಲ್ಲಿ ಟೈರ್’ಗೆ ಬೆಂಕಿ ಹಚ್ಚಲಾಗಿದೆ. ಅಂಗಡಿಗಳನ್ನು ಬಂದ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ  | ಗೋಪಿ ಸರ್ಕಲ್’ನಲ್ಲಿ ಪುನಿತ್ ರಾಜ್ ಕುಮಾರ್ ಅಭಿಮಾನಿಗಳಿಂದ ಪುಷ್ಪ ನಮನ ಮತ್ತೊಂದೆಡೆ ಯಾವುದೆ … Read more

ಗೋದಾಮಿನಲ್ಲಿ ರಾತ್ರೋರಾತ್ರಿ ನಾಲ್ಕು ಮೂಟೆ ಅಡಕೆ ನಾಪತ್ತೆ

areca nut

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 26 ಅಕ್ಟೋಬರ್ 2021 ಮನೆ ಮುಂದಿನ ಗೋದಾಮಿನಲ್ಲಿ ಇಟ್ಟಿದ್ದ ನಾಲ್ಕು ಮೂಟೆ ಅಡಕೆಯನ್ನು ರಾತ್ರೋರಾತ್ರಿ ಕಳವು ಮಾಡಲಾಗಿದೆ. ಸಂಸ್ಕರಿಸಿ ಇಟ್ಟಿದ್ದ ಅಡಕೆಯನ್ನು ಖದೀಮರು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ | ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಅಡಕೆ ಸಸಿಗಳನ್ನು ಕತ್ತರಿಸಿದ ದುಷ್ಕರ್ಮಿಗಳು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಗರದಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹರೀಶ್ ಎಂಬುವವರ ಮನೆ ಮುಂದೆ ಗೋದಾಮಿನಲ್ಲಿ ಅಡಕೆಯನ್ನು ಇಡಲಾಗಿತ್ತು. ಮೂಟೆಯಲ್ಲಿ ಅಡಕೆಯನ್ನು ಕಟ್ಟಿ ಇರಿಸಲಾಗಿತ್ತು. ಭಾನುವಾರ ರಾತ್ರಿ ಕಳ್ಳರು ಗೋದಾಮಿನೊಳಗೆ … Read more

ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಅಡಕೆ ಸಸಿಗಳನ್ನು ಕತ್ತರಿಸಿದ ದುಷ್ಕರ್ಮಿಗಳು

241021 Areca Sapplings Cut Down in night

ಶಿವಮೊಗ್ಗ ಲೈವ್.ಕಾಂ |HOLEHONNURU NEWS | 24 ಅಕ್ಟೋಬರ್ 2021 ಜಮೀನಿನಲ್ಲಿ ಬೆಳೆದಿದ್ದ ಸುಮಾರು ಮೂರೂವರೆ ವರ್ಷದ ಅಡಕೆ ಸಸಿಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ಹಾಕಿದ್ದಾರೆ. 39 ಸಸಿಗಳಿಗೆ ಕೊಡಲಿ ಬೀಸಲಾಗಿದೆ. ಭದ್ರಾವತಿ ತಾಲೂಕು ದಾಸರ ಕಲ್ಲಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಅಣ್ಣಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಕೆ ಸಸಿಗಳನ್ನು ಕಡಿಯಲಾಗಿದೆ. ಸಂಜೆ ಅಣ್ಣಪ್ಪ ಅವರ ಚಿಕ್ಕಪ್ಪ ತೋಟದಲ್ಲಿ ದನಗಳನ್ನು ಮೇಯಿಸಿಕೊಂಡು ಬಂದಿದ್ದಾರೆ. ಆಗ ತೋಟದಲ್ಲಿ ಎಲ್ಲಾ ಸಸಿಗಳು ಚನ್ನಾಗಿದ್ದವು. ಬೆಳಗ್ಗೆ ಪಕ್ಕದ ಜಮೀನಿನ ಮಾಲೀಕರು ಅಣ್ಣಪ್ಪ ಅವರ … Read more

ಭದ್ರಾವತಿ ಈದ್ ಮಿಲಾದ್ ಮೆರವಣಿಗೆ, ಎರಡು ಪ್ರತ್ಯೇಕ ಕೇಸ್ ದಾಖಲು, ಕಾರಣವೇನು?

221021 Eid Milad Procession Case Registered

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 22 ಅಕ್ಟೋಬರ್ 2021 ಈದ್ ಮಿಲಾದ್ ಅಂಗವಾಗಿ ಭದ್ರಾವತಿಯಲ್ಲಿ ಆಯೋಜಿಸಿದ್ದ ಮೆರವಣಿಗೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಪ್ರಕರಣ 1 : ಕೋವಿಡ್ ನಿಯಮ ಉಲ್ಲಂಘನೆ ಅನುಮತಿ ಪಡೆಯದೆ ಏಕಾಏಕಿ ಈದ್ ಮಿಲಾದ್ ಮೆರವಣಿಗೆ ನಡೆಸಲಾಗಿದೆ. ಹೊಳೆಹೊನ್ನೂರು ಸರ್ಕಲ್’ನಿಂದ, ಸಿ.ಎನ್.ರಸ್ತೆ, ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್, ತರೀಕೆರೆ ರಸ್ತೆ ಮೂಲಕ ಸಾದತ್ ದರ್ಗಾವರೆಗೂ ಮೆರವಣಿಗೆ ನಡೆಸಲಾಯಿತು. ಕೋವಿಡ್ ನಿಯಮ ಉಲ್ಲಂಘಿಸಿ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಮುರ್ತುಜಾ ಖಾನ್, … Read more