ಮನೆಯ ಹಿಂಬಾಗಿಲ ಬೀಗ ಮುರಿದು ಅರ್ಧ ಗಂಟೆಯೊಳಗೆ ಹಣ, ಚಿನ್ನಾಭರಣ ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | SAGARA NEWS | 21 ಸೆಪ್ಟೆಂಬರ್ 2021 ಮನೆಯ ಹಿಂದಿನ ಬಾಗಿಲಿಗೆ ಹಾಕಿದ್ದ ಬೀಗ ಒಡೆದು, ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ. ಸಾಗರ ತಾಲೂಕು ಗೆಣಸಿನಕುಣಿ ಗ್ರಾಮದ ಮಂಜುನಾಥ ಜೋಗಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಲೆಯಲ್ಲಿ ಘಟನೆ ಸಂಭವಿಸಿದೆ. ಅರ್ಧ ಗಂಟೆಯಲ್ಲಿ ಕಳ್ಳತನ ಮಂಜುನಾಥ ಜೋಗಿ ಅವರ ಮಗ ಶಿವಮೊಗ್ಗದಲ್ಲಿ ಸೈಟ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಗರಕ್ಕೆ ಬಂದ ಮಗನನ್ನು ಕರೆತರಲು ಮಂಜುನಾಥ … Read more

ಬಸ್ ನಿಲ್ದಾಣದ ಬಳಿ ಮಾತಿನ ಚಕಮಕಿ, ಕೈ ಕೈ ಮಿಲಾಯಿಸಿದ ಯುವಕರ ವಿರುದ್ಧ ಕೇಸ್

Talaguppa Graphics

ಶಿವಮೊಗ್ಗ ಲೈವ್.ಕಾಂ | SAGARA NEWS | 21 ಸೆಪ್ಟೆಂಬರ್ 2021 ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ಗುಂಪಿನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕ್ಷುಲಕ ವಿಚಾರಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಯುವಕರು ಕೈ ಕೈ ಮಿಲಾಯಿಸಿದ್ದರು. ಸಾಗರ ತಾಲೂಕು ತಾಳಗುಪ್ಪ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕರು ಪರಾರಿಯಾಗಿದ್ದಾರೆ. ಓಡಿ ಹೋದ ಯುವಕರ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು, ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೌಶಿಕ್ … Read more

ಕಾಯಿ ಸುಲಿಯುತ್ತಿದ್ದ ಯುವಕನತ್ತ ಫೈರಿಂಗ್, ಕಾಲ ಬಳಿ ಬಂದು ಬಿದ್ದವು ಎರಡು ಬುಲೆಟ್, ಹತ್ಯೆಗೆ ನಡೆದಿತ್ತಾ ಸಂಚು?

ಶಿವಮೊಗ್ಗ ಲೈವ್.ಕಾಂ | SAGARA NEWS | 21 ಸೆಪ್ಟೆಂಬರ್ 2021 ಮನೆ ಆವರಣದಲ್ಲಿ ತೆಂಗಿನ ಕಾಯಿ ಸುಲಿಯುತ್ತಿದ್ದ ಯುವಕನನ್ನು ಗುರಿಯಾಗಿಸಿಕೊಂಡು ಏರ್ ಗನ್’ನೊಂದ ಶೂಟ್ ಮಾಡಲಾಗಿದೆ. ಎರಡು ಭಾರಿ ಫೈರಿಂಗ್ ಮಾಡಲಾಗಿದೆ. ಗಣೇಶ ಚತುರ್ಥಿಯ ಹಿಂದಿನ ದಿನ ಘಟನೆ ಸಂಭವಿಸಿದೆ. ಸಾಗರ ತಾಲೂಕು ಸುಳಗೋಡಿನ ಮುಂಬಾಳು ಗ್ರಾಮದ ಗಿರೀಶ್ ಅವರ ಪುತ್ರ ದೀಪಕ್ ಮೇಲೆ ಗುಂಡು ಹಾರಿಸಲಾಗಿದೆ. ಹೇಗಾಯ್ತು ಘಟನೆ? ಗಣೇಶ ಹಬ್ಬದ ಹಿಂದಿನ ದಿನ ಸಂಜೆ ಗಿರೀಶ್ ಅವರು ಗಣೇಶ ಮೂರ್ತಿ ತರಲು ತೆರಳಿದ್ದರು. … Read more

ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಂಜಿನ ಮೆರವಣಿಗೆ

200921 Panjina Meravanige at Thirthahalli by RM Manjunatha Gowda

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 20 ಸೆಪ್ಟೆಂಬರ್ 2021 ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲವು ನೀತಿಗಳ ವಿರುದ್ಧ ತೀರ್ಥಹಳ್ಳಿ ಪಟ್ಟಣದಲ್ಲಿ ಇವತ್ತು ಪಂಜಿನ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಮುಂಭಾಗದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಕೇಂದ್ರ ಸರ್ಕಾರ, ಹಿಂದೂ ದೇಗುಲಗಳನ್ನು ಕೆಡವಿ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವ ರಾಜ್ಯ ಸರ್ಕಾರ … Read more

ಗೃಹ ಸಚಿವರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಫೋಟೊ, ವಿಡಿಯೋ ವೈರಲ್

200921 Araga Jnanendra Grand Son Admitted to Govt Hospital

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 20 ಸೆಪ್ಟೆಂಬರ್ 2021 ಅರೋಗ್ಯ ಸಮಸ್ಯೆ ಹಿನ್ನೆಲೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೊಮ್ಮಗನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಖಾಸಗಿ ಆಸ್ಪತ್ರೆಗೆ ದೌಡಾಯಿಸುವ ರಾಜಕಾರಣಿಗಳ ಮಧ್ಯೆ ಆರಗ ಜ್ಞಾನೇಂದ್ರ ಅವರ ಕುಟುಂಬದ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದೆ. ಆರಗ ಜ್ಞಾನೇಂದ್ರ ಅವರ ಮೊಮ್ಮಗ ಒಂಭತ್ತು ತಿಂಗಳ ಆರ್ಯವರ್ಥನಿಗೆ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿ, … Read more

ಗ್ರಾಮಸ್ಥರಿಂದ ಹಣಗೆರೆ ಕಟ್ಟೆಗೆ ಬರುವ ಭಕ್ತರ ವಾಹನಗಳ ತಪಾಸಣೆ

200921 Villagers checking in Hanagere Katte

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 20 ಸೆಪ್ಟೆಂಬರ್ 2021 ಭಾವೈಕ್ಯತೆಗೆ ಹೆಸರಾಗಿರುವ ಹಣಗೆರೆ ಕಟ್ಟೆ ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತರ ಪ್ರತಿ ವಾಹನವನ್ನು ಸ್ಥಳೀಯರೆ ತಪಾಸಣೆ ಆರಂಭಿಸಿದ್ದಾರೆ. ಕೋಳಿ, ಕುರಿ ಇದ್ದರೆ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ, ಭಕ್ತರನ್ನು ಮಾತ್ರ ದೇಗುಲದೊಳಗೆ ಬಿಡಲಾಗುತ್ತಿದೆ. ಇದರಿಂದ ಸ್ಥಳೀಯರು ಮತ್ತು ಭಕ್ತರ ನಡುವರ ಮಾತಿನ ಚಕಮಕಿ ಶುರುವಾಗಿದೆ. ಹಣಗೆರೆ ಕಟ್ಟೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿ ವಾಹನವನ್ನು ತಡೆದು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಮೊದಲ ದಿನ … Read more

BREAKING NEWS | ಆಗುಂಬೆ ಘಾಟಿಯಲ್ಲಿ ಧಗಧಗನೆ ಹೊತ್ತಿ ಉರಿದ ‘ಸಕೆಂಡ್ ಹ್ಯಾಂಡ್’ ಕಾರು

190921 Car Burn In Agumbe 1st Turn

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 19 ಸೆಪ್ಟೆಂಬರ್ 2021 ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ. ಕಾರ್ಕಳದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಘಟನೆ ಸಂಭವಿಸಿದೆ. ಸಕೆಂಡ್ ಹ್ಯಾಂಡ್ ಕಾರು ಶಿವಮೊಗ್ಗದ ಅರವಿಂದ್ ಎಂಬುವವರು ಕಾರ್ಕಳದಲ್ಲಿ ಈ ಕಾರನ್ನು ಖರೀದಿಸಿದ್ದರು. ಇವತ್ತು ಕಾರನ್ನು ಖರೀದಿಸಿ ಶಿವಮೊಗ್ಗಕ್ಕೆ ತರುತ್ತಿದ್ದರು.ಕಾರಿನಲ್ಲಿ ಅರವಿಂದ್ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದರು. ಬೆಂಕಿ … Read more

ಆಗುಂಬೆ ಸಮೀಪ ಜಮೀನಿಗೆ ಬೇಲಿ ಕಟ್ಟಲು ತೆರಳಿದ್ದ ವ್ಯಕ್ತಿ ಸಾವು, ಕಾಲುವೆಯಲ್ಲಿ ಮೃತದೇಹ ಪತ್ತೆ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 19 ಸೆಪ್ಟೆಂಬರ್ 2021 ಬೇಲಿ ಕಟ್ಟಲು ಜಮೀನಿಗೆ ತೆರಳಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನಾಲೆಯಲ್ಲಿ ಮೃತದೇಹ ಪತ್ತೆಯಾಗಿದೆ. ಆಗುಂಬೆ ಸಮೀಪದ ಕೆಂದಾಳಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಬಳ ಗ್ರಾಮದ ಪ್ರಕಾಶ್ ಮೃತ ವ್ಯಕ್ತಿ. ಬೇಲಿ ಕಟ್ಟಲು ಹೋಗಿದ್ದರು ಸ್ಥಳೀಯರೊಬ್ಬರ ಜಮೀನಿನಲ್ಲಿ ಬೇಲಿ ಕಟ್ಟಲು ಪ್ರಕಾಶ್ ತೆರಳಿದ್ದರು. ತಡರಾತ್ರಿಯಾದರೂ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಈ ಸಂದರ್ಭ ಕಾಲುವೆಯೊಂದರಲ್ಲಿ ಪ್ರಕಾಶ್ ಮೃತದೇಹ ಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಪ್ರಕಾಶ್ … Read more

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ, ಅದ್ಧೂರಿ ಮೆರವಣಿಗೆ, ಹೇಗಿತ್ತು ವೈಭವ?

190921 Bhadaravathi Hindu Mahasabha Ganapathi Procession

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 19 ಸೆಪ್ಟೆಂಬರ್ 2021 ಭದ್ರಾವತಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ಸಾವಿರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ನಡೆಸಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸಂಜೆ 5 ಗಂಟೆಗೆ ಅಲಂಕೃತಗೊಂಡ ವಾಹನದಲ್ಲಿ ಗಣೇಶ ಮೂರ್ತಿ ಮೆರವಣಿಗೆ ನಡೆಸಲಾಯಿತು. ರಂಗಪ್ಪ ಸರ್ಕಲ್’ನಿಂದ ಮಾಧವಾಚಾರ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು. ಬಳಿಕ ತರೀಕೆರೆ ರಸ್ತೆ ಬಳಿ ಭದ್ರಾ … Read more

ಸಕ್ರೆಬೈಲು ಸಮೀಪ ಲಾರಿ, ಕಾರು ಡಿಕ್ಕಿ, ಲಾರಿ ಡ್ರೈವರ್ ವಿರುದ್ಧ ಕೇಸ್

170921 Truck Car Accident Near Sakrebyle

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಸೆಪ್ಟೆಂಬರ್ 2021 ಉಡುಪಿ ಕಡೆಗೆ ತೆರಳುತ್ತಿದ್ದ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ಉಡುಪಿಯ ಲ್ಯಾನ್ಸಿ ಕುನ್ನಾ ಎಂಬುವವರು ಶಿವಮೊಗ್ಗದಿಂದ ತೀರ್ಥಹಳ್ಳಿ ಮೂಲಕ ಕಾರ್ಕಳಕ್ಕೆ ತೆರಳುತ್ತಿದ್ದರು. ಸಕ್ರೆಬೈಲು ಸಮೀಪ ಎದುರಿನಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಲಾರಿ ಚಾಲಕ ಶಬ್ಬೀರ್ ಅಹಮದ್ ಎಂಬುವವರ ವಿರುದ್ಧ ಲ್ಯಾನ್ಸಿ ಕುನ್ನಾ ಅವರು ದೂರು ನೀಡಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ … Read more