ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ವ್ಯಕ್ತಿ ಸಾವು, ರುಂಡ, ಮುಂಡ ಬೇರೆಯಾಗಿ ಹಳಿ ಮೇಲೆ ಬಿದ್ದಿತ್ತು ಮೃತದೇಹ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 15 ಜುಲೈ 2021 ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆಯೋ ಕೊಲೆಯೊ ಅನ್ನವ ಕುರಿತು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಗರ ತಾಲೂಕಿನ ಗುಡ್ಡೆಕೌತಿ ಬಳಿಕ ರೈಲ್ವೆ ಹಳಿ ಮೇಲೆ ಘಟನೆ ಸಂಭವಿಸಿದೆ. ಸುಮಾರು 35 ವರ್ಷದ ವ್ಯಕ್ತಿಯೊಬ್ಬ ರೈಲ್ವೆ ಹಳಿ ಮೇಲೆ ಮೃತಪಟ್ಟಿದ್ದಾನೆ. ಆತನ ರುಂಡ, ಮುಂಡ ಬೇರೆಯಾಗಿದೆ. ಹಳಿ ಮೇಲೆ ಮೃತದೇಹ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. … Read more

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಸ್ಥಳದಲ್ಲೇ ಮಹಿಳೆ ಸಾವು, ಮೂವರಿಗೆ ಗಾಯ

150721 Car Accident Near Ripponpete 1

ಶಿವಮೊಗ್ಗ ಲೈವ್.ಕಾಂ | RIPPONPETE NEWS | 15 ಜುಲೈ 2021 ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಕಾರು, ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಾಯಗೊಂಡಿದ್ದಾರೆ. ರಿಪ್ಪನ್‍ಪೇಟೆ ಸಮೀಪದ ವರನಹೊಂಡದ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಸುಮೊ ಪಲ್ಟಿಯಾಗಿದೆ. ಘಟನೆಯಲ್ಲಿ ನೀಲಮ್ಮ (60) ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‍ಪೇಟೆಗೆ ತೆರಳುತ್ತಿತು. ಈ … Read more

‘ಕಾಗೋಡು ತಿಮ್ಮಪ್ಪ ಮನೆಯಲ್ಲಿ ಏಳು ವೈದ್ಯರಿದಾರೆ, ಆದರೂ ಲಸಿಕೆಗೆ ತಡವಾಗಿ ಬಂದಿದ್ದೇಕೆ?’

MLA-Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಜುಲೈ 2021 ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಎರಡನೆ ಡೋಸ್ ಲಸಿಕೆ ಸಿಗದಿರುವ ಕುರಿತು ಸಾಗರ ಶಾಸಕ ಹರತಾಳು ಹಾಲಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಕಾಗೋಡು ತಿಮ್ಮಪ್ಪ ಅವರಿಗೆ ಲಸಿಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಶಾಸಕ ಹಾಲಪ್ಪ ಹೇಳಿದ್ದೇನು? ನಿನ್ನೆ ನೂರು ಡೋಸ್ ಲಸಿಕೆ ಇತ್ತು. ಆದರೆ ಕಾಗೋಡು ತಿಮ್ಮಪ್ಪ ಅವರು ಕೇಂದ್ರಕ್ಕೆ ಹೋದಾಗ ಲಸಿಕೆ ಖಾಲಿಯಾಗಿದೆ. ಸಾಮಾನ್ಯವಾಗಿ ಅವರು ಫೋನ್ ಮಾಡಿ ಹೋಗುತ್ತಿದ್ದರು. … Read more

ಪೊಲೀಸ್ ಬಲೆಗೆ ಬಿತ್ತು ಅತ್ತೆ, ಅಳಿಯ ಜೋಡಿ, ವಿಚಾರಣೆ ವೇಳೆ ಬಯಲಾಯ್ತು ಹಳೆ ಕೇಸ್, ಹೊಸ ಪ್ಲಾನ್

140721 Soraba Theft Case Two Arrested 1

ಶಿವಮೊಗ್ಗ ಲೈವ್.ಕಾಂ | SORABA NEWS | 14 ಜುಲೈ 2021 ಮನೆಯಲ್ಲಿ ಯಾರು ಇಲ್ಲದ ವೇಳೆ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಗ್ರಾಮದ ಮರಿಯಪ್ಪ ಗೋಪಿನಾಯ್ಕ್ ಹಾಗೂ ಕಮಲಮ್ಮ ನಿಂಗಬಸಪ್ಪ ಬಂಧಿತ ಆರೋಪಿಗಳು. ಇವರಿಂದ 37 ಗ್ರಾಂ ಬಂಗಾರ ಮತ್ತು 200 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ … Read more

ಮಾಜಿ ಸಿಎಂ ಬಂಗಾರಪ್ಪ ಹೆಸರಿಡುವಂತೆ ಆಗ್ರಹ, ಸೊರಬದಲ್ಲಿ ಪ್ರತಿಭಟನೆ

140721 Bangarappa name to named to shimoga airport 1

ಶಿವಮೊಗ್ಗ ಲೈವ್.ಕಾಂ | SORABA NEWS | 14 ಜುಲೈ 2021 ಶಿವಮೊಗ್ಗದ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಹೆಸರು ನಾಮಕಾರಣ ಮಾಡುವಂತೆ ಆಗ್ರಹಿಸಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಸಂಬಂಧ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಶಿವಾನಂದ ರಾಣಿ ಅವರಿಗೆ ಮನವಿ ಸಲ್ಲಿಸಿದರು. ಇದೆ ವೇಳೆ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇ ಇಡಗೋಡು, ಎಸ್.ಬಂಗಾರಪ್ಪ ಅವರು ಶೋಷಿತರು, ಹಿಂದುಳಿದ ವರ್ಗಗಳ ನಾಯಕರಾಗಿದ್ದರು. ಬಗರ್‌ಹುಕುಂ … Read more

ಮಾಜಿ ಸಚಿವರಿಗೂ ತಟ್ಟಿತು ಕರೋನ ವ್ಯಾಕ್ಸಿನ್ ಅಭಾವದ ಬಿಸಿ

111020 Kagodu Thimmappa General Image 1

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಜುಲೈ 2021 ಕರೊನಾ ಲಸಿಕೆ ಇಲ್ಲ ಎಂಬ ಬೋರ್ಡ್ ಸಾರ್ವಜನಿಕರಿಗೆ ದರ್ಶನವಾಗುವುದು ಸಾಮಾನ್ಯ. ಆದರೆ ಮಾಜಿ ಸಚಿವರು ಕೂಡ ವ್ಯಾಕ್ಸಿನ್ ಸಿಗದೆ ಮನೆಗೆ ವಾಪಸಾಗಿದ್ದಾರೆ. ಹೌದು, ಇಂತಹ ಸನ್ನಿವೇಶ ಎದುರಾಗಿದ್ದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ. ಕರೊನಾ ಎರಡನೇ ಡೋಸ್ ಲಸಿಕೆ ತೆಗೆದು ಕೊಳ್ಳಿ ಎಂಬ ಮೊಬೈಲ್ ಸಂದೇಶ ಬಂದಿದ್ದರಿಂದ ಕೋವಿಶೀಲ್ಡ್‍ ಲಸಿಕೆ ಪಡೆಯಲು ಸಾಗರದ ದೇವರಾಜ ಅರಸು ಸಭಾಭವನಕ್ಕೆ ಕಾಗೋಡು ತಿಮ್ಮಪ್ಪ ಆಗಮಿಸಿದ್ದರು. ಆದರೆ … Read more

ಗದ್ದೆ ಕೆಲಸಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆ, ಮೂರು ದಿನದ ಬಳಿಕ ಪೊಲೀಸರು ಕರೆ ಮಾಡಿದಾಗ ಕುಟುಂಬದವರಿಗೆ ಆಘಾತ

HOSANAGARA-TALUK-NEWS-1.jpg

ಶಿವಮೊಗ್ಗ ಲೈವ್.ಕಾಂ | RIPPONPETE NEWS | 14 ಜುಲೈ 2021 ಗದ್ದೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಕುಮದ್ವತಿ ನದಿಯಲ್ಲಿ ಪತ್ತೆಯಾಗಿದೆ. ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಜಿನಗೋಡು ಗ್ರಾಮದ ಕೊಲ್ಲಪ್ಪ (62) ಮೃತರು. ಶನಿವಾರ ಕೊಲ್ಲಪ್ಪ ಅವರು ಗದ್ದೆ ಕೆಲಸಕ್ಕೆ ತೆರಳಿದ್ದರು. ಆದರೆ ಮನೆಗೆ ಹಿಂತಿರುಗಿರಲಿಲ್ಲ. ಹಾಗಾಗಿ ಮನೆಯವರು ಸಂಬಂಧಿಕರು, ಸ್ನೇಹಿತರು, ಊರ ಮನೆಯಲ್ಲಿ ವಿಚಾರಿಸಿದ್ದರು. ಮೂರು ದಿನದ ಬಳಿಕ ಶವ ಪತ್ತೆ … Read more

ಜಮೀನು ವಿಚಾರವಾಗಿ ಹೊಡೆದಾಟ, ಯುವಕನ ತಲೆಗೆ ಗಂಭೀರ ಗಾಯ

140721 JC Hospital Thirthahalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 14 ಜುಲೈ 2021 ಜಮೀನು ವಿವಾದ ಸಂಬಂಧ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದೆ. ಈ ವೇಳೆ ಹಲ್ಲೆ ನಡೆಸಿದ್ದರಿಂದ ಯುವಕನೊಬ್ಬನ ತಲೆಗೆ ಗಂಭೀರ ಗಾಯವಾಗಿದೆ. ತೀರ್ಥಹಳ್ಳಿ ತಾಲೂಕು ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಕೆರೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಜಮೀನು ವಿವಾದ ಸಂಬಂಧ ಪೂರ್ಣೇಶ್ ಮತ್ತು ಪ್ರಭಾಕರ್ ಎಂಬುವವರ ಮಧ್ಯೆ ಗಲಾಟೆಯಾಗಿದೆ. ಪರಸ್ಪರರು ಕೈ ಕೈ ಮಿಲಾಯಿಸಿದ್ದಾರೆ. ದೊಣ್ಣೆಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಪೂರ್ಣೇಶ್ ಅವರ ತಂದೆ ಪುಟ್ಟಪ್ಪ ಮತ್ತು … Read more

SOCIAL MEDIA | ಆಗುಂಬೆ ಪೊಲೀಸ್ ಠಾಣೆ ಫೇಸ್​ಬುಕ್​​ ಪೋಸ್ಟ್​​ಗಳು ಸಿಕ್ಕಾಪಟ್ಟೆ ವೈರಲ್, ಕಾರಣವೇನು?

130721 Agumbe Police Station Facebook Page 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 13 ಜುಲೈ 2021 ಅಪರಾಧಿಗಳನ್ನು ಪತ್ತೆ ಹಚ್ಚುವುದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಷ್ಟೆ ಪೊಲೀಸರ ಕರ್ತವ್ಯವಲ್ಲ. ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುವುದು ಕೂಡ ಇಲಾಖೆ ಜವಾಬ್ದಾರಿಯಾಗಿದೆ. ಇದೆ ಉದ್ದೇಶದಿಂದ ಪೊಲೀಸ್ ಠಾಣೆಯೊಂದರ ಪಿಎಸ್‍ಐ ಒಬ್ಬರು ಆರಂಭಿಸಿದ ಫೇಸ್‍ಬುಕ್‍ ಖಾತೆ, ಈಗ ಠಾಣೆ ವ್ಯಾಪ್ತಿಯಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಆಗುಂಬೆ ಪೊಲೀಸ್ ಠಾಣೆ ಹೆಸರಿನ ಫೇಸ್‍ಬುಕ್‍ ಖಾತೆ ಜನ ಮೆಚ್ಚುಗೆ ಗಳಿಸಿದೆ. ಇಲ್ಲಿ ಪ್ರಕಟವಾಗುತ್ತಿರುವ ಮಾಹಿತಿಗಳು ವೈರಲ್ ಆಗುತ್ತಿವೆ. ಹತ್ತಾರು … Read more

ನೋ ನೆಟ್​​ವರ್ಕ್​, ನೋ ವೋಟಿಂಗ್, ಗ್ರಾಮಸ್ಥರಿಂದ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರದ ವಾರ್ನಿಂಗ್

130721 Kudaruru Village No Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಜುಲೈ 2021 ಶರಾವತಿ ಹಿನ್ನೀರು ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಉಲ್ಬಣಗೊಂಡಿದೆ. ಆಕ್ರೋಶಗೊಂಡಿರುವ ಸ್ಥಳೀಯರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೆ ‘ನೋ ನೆಟ್‍ವರ್ಕ್, ನೋ ವೋಟಿಂಗ್’ ಅಭಿಯಾನ ಶುರುವಾಗಿದೆ. ಭಾರಿ ಬೆಂಬಲವು ವ್ಯಕ್ತವಾಗುತ್ತಿದೆ. ಇದು ಚುನಾವಣೆ ಸಿದ್ಧತೆ, ಟಿಕೆಟ್‍ ಪೈಪೋಟಿಗೆ ಬಿದ್ದಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಹೊಸ ಕ್ಷೇತ್ರಕ್ಕೆ ತಟ್ಟಿದ ಬಿಸಿ ಸಾಗರ ತಾಲೂಕಿನಲ್ಲಿ ಕುದರೂರು ಜಿಲ್ಲಾ ಪಂಚಾಯಿತಿ … Read more