ಹೊಸನಗರದ ವಿವಿಧೆಡೆ ಯುಗಾದಿ ಹಬ್ಬದಂದು ಜೋರು ಮಳೆ

rain in shimoga

ಶಿವಮೊಗ್ಗ ಲೈವ್.ಕಾಂ | HOSANAGARA NEWS | 13 APRIL 2021 ಯುಗಾದಿ ಹಬ್ಬದಂದು ಹೊಸನಗರದಲ್ಲಿ ಜನರಿಗೆ ವರುಣನ ದರ್ಶನವಾಗಿದೆ. ತಾಲೂಕಿನ ವಿವಿಧೆಡೆ ಜೋರು ಮಳೆಯಾಗಿದೆ. ಭಾರಿ ಬಿಸಿಲು, ಧಗೆ, ಶಕೆಯಿಂದ ಹೈರಾಣಾಗಿದ್ದ ಜನರಿಗೆ ಮಳೆ ತುಸು ತಂಪು ನೀಡಿದೆ. ಹೊಸನಗರ ಪಟ್ಟಣ ಸೇರಿದಂತೆ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಾದ ವರದಿಯಾಗಿದೆ. ಮಳೆಯಾಗುತ್ತಿದ್ದಂತೆ ಹಲವು ಕಡೆ ವಿದ್ಯುತ್ ವ್ಯತ್ಯಯವಾಯಿತು. ಸೋಮವಾರ ರಾತ್ರಿ ಗುಡುಗು, ಮಿಂಚು, ಗಾಳಿ ಜೋರಿತ್ತು. ಆದರೆ ಮಳೆಯಾಗಿರಲಿಲ್ಲ. ಹಬ್ಬದ ದಿನ ಮಳೆ ಸುರಿದಿದೆ. ಶಿವಮೊಗ್ಗ … Read more

ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಹೊಳೆಯಲ್ಲಿ ಮುಳುಗಿದ್ದ ಯುವಕ ಸಾವು, ಮೃತದೇಹ ಪತ್ತೆ

130421 Hole Bhairanahalli Youth Drowned in Tunga River 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021 ಹೊಳೆಯಲ್ಲಿ ಸ್ನಾನಕ್ಕೆ ಹೋಗಿ ಕಣ್ಮರೆಯಾಗಿದ್ದ ಯುವಕ ಶವವಾಗಿ ಪತ್ತೆಯಗಿದ್ದಾನೆ. ಯುವಕ ಮುಳುಗಿದ್ದಾನೆ ಎನ್ನಲಾದ ಸ್ಥಳದಿಂದ ಸನಿಹದಲ್ಲೆ ಮೃತದೇಹ ಪತ್ತೆಯಾಗಿದೆ. ಹೊಳೆಭೈರನಹಳ್ಳಿ ಗ್ರಾಮದ ಅರುಣ್ (15) ಮೃತನು. ಸೋಮವಾರ ತನ್ನ ಸ್ನೇಹಿತರೊಂದಿಗೆ ಅರುಣ್ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ಎಂದು ತಿಳಿದು ಬಂದಿದೆ. ಈತ ಈಜಲು ಬಾರದೆ ಹೊಳೆಯಲ್ಲಿ ಮುಳುಗಿರುವ ಶಂಕೆ ಇದೆ. ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಇವತ್ತು ಮಧ್ಯಾಹ್ನ ಮೃತದೇಹ … Read more

ಕಲ್ಲಿನಿಂದ ಮುಖ, ತಲೆಗೆ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ

murder graphical image

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021 ವ್ಯಕ್ತಿಯೊಬ್ಬನ ತಲೆ ಮತ್ತು ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಡಣಾಯಕಪುರ ಗ್ರಾಮದ ನಿವಾಸಿ ಬಸಪ್ಪ (54) ಎಂಬುವವರ ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಕೃತ್ಯ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಯಲ್ಲಿ ಕೃತ್ಯ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿವಮೊಗ್ಗ ಲೈವ್‍ಗೆ … Read more

BREAKING NEWS | ಯುಗಾದಿ ಹಬ್ಬದಂದು ಭದ್ರಾವತಿಯಲ್ಲಿ ಸಾರಿಗೆ ನೌಕರರಿಂದ ಭಿಕ್ಷಾಟನೆ

130421 KSRTC Workers Protest in Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 APRIL 2021 ಆರನೆ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗಾಗಿ ರಾಜ್ಯಾದ್ಯಂತ ಕೆಎಸ್​ಆರ್​ಟಿಸಿ ನೌಕರರು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಭದ್ರಾವತಿಯಲ್ಲಿ ಕೆಎಸ್​ಆರ್​ಟಿಸಿ ನೌಕರರು ಯುಗಾದಿ ಹಬ್ಬದ ದಿನ ಭಿಕ್ಷಾಟನೆ ಮಾಡಿ ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ಡಿಸಿ ಕಚೇರಿ ಮುಂದೆ ಮಹಿಳೆಯರು, ಮಕ್ಕಳಿಂದ ತಟ್ಟೆ, ಲೋಟ ಬಡಿದು ಪ್ರತಿಭಟನೆ ಭದ್ರಾವತಿಯ ಪ್ರಮುಖ ಕಡೆ ಕೆಎಸ್​ಆರ್​ಟಿಸಿ ನೌಕರರು ಯುಗಾದಿ ಹಬ್ಬದ ದಿನ ಭಿಕ್ಷಾಟನೆ ನಡೆಸುತ್ತಿದ್ದಾರೆ. … Read more

BREAKING NEWS | ಶಾಸಕ ಸಂಗಮೇಶ್ವರ್ ಪುತ್ರನಿಗೆ ಜಾಮೀನು ಮಂಜೂರು

Bhadravathi MLA Sangameshwara Son Basavesh Basava 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 APRIL 2021 ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಗಲಾಟೆ ಸಂಬಂಧ ಬಂಧನಕ್ಕೊಳಗಾಗಿದ್ದ ಭದ್ರಾವತಿ ಶಾಸಕ ಸಂಗಮೇಶ್ವರ್ ಪುತ್ರ ಬಸವೇಶ್​ಗೆ ಹೈಕೋರ್ಟ್​​ನಿಂದ ಜಾಮೀನು ಮಂಜೂರಾಗಿದೆ. ಇದನ್ನೂ ಓದಿ – ಭದ್ರಾವತಿ ಶಾಸಕ ಸಂಗಮೇಶ್ವರ್ ಪುತ್ರ ಅರೆಸ್ಟ್ ಮಾರ್ಚ್ 6ರಂದು ಬಸವೇಶ್​ ಬಂಧನವಾಗಿತ್ತು. ಸುಮಾರು 42 ದಿನದ ಬಳಿಕ ಜಾಮೀನು ಮಂಜೂರಾಗಿದೆ. ಗಲಾಟೆ ಸಂಬಂಧ ಶಾಸಕ ಸಂಗಮೇಶ್ವರ್ ಮತ್ತು ಅವರ ಕುಟುಂಬದ ಇತರರಿಗೆ ಮಾರ್ಚ್ 11ರಂದು ಜಾಮೀನು ಮಂಜೂರಾಗಿತ್ತು. ಆದರೆ ನ್ಯಾಯಾಲಯ … Read more

ತೀರ್ಥಹಳ್ಳಿಯ ಕೋಣಂದೂರು ಸಮೀಪ ಡಾ.ರಾಜ್ ಮೊಮ್ಮಗನ ಸಿನಿಮಾ ಶೂಟಿಂಗ್

120421 Vinay Rajakumar Cinema Shooting at Thirthahalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 12 APRIL 2021 ನಟ ವಿನಯ್ ರಾಜಕುಮಾರ್ ಅಭಿನಯದ ಅಂದೊಂದಿತ್ತು ಕಾಲ ಸಿನಿಮಾದ ಚಿತ್ರೀಕರಣವಾಗುತ್ತಿದೆ. ತೀರ್ಥಹಳ್ಳಿ ತಾಲೂಕಿನ ವಿವಿಧಡೆ ಶೂಟಿಂಗ್ ನಡೆಯುತ್ತಿದೆ. ಕೋಣಂದೂರು ಸಮೀಪ ಕೋಟೆಗದ್ದೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ವಿನಯ್​ ರಾಜ್​ ಕುಮಾರ್ ಅವರು ಬಸ್ಸಿನಲ್ಲಿ ಸಂಚರಿಸುವ ಸೀಕ್ವೆನ್ಸ್ ಒಂದನ್ನು ಚಿತ್ರೀಕರಿಸಲಾಗುತ್ತಿದೆ. ತಾಲೂಕಿನ ವಿವಿಧ ಲೊಕೇಷನ್​ಗಳಲ್ಲಿ ಇನ್ನಷ್ಟು ಚಿತ್ರೀಕರಣ ನಡೆಯಲಿದೆ. ಕೀರ್ತಿ ನಿರ್ದೇಶನ ಮಾಡುತ್ತಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ … Read more

ಸಾಗರದಲ್ಲೂ ಸಾರಿಗೆ ನೌಕರರ ಆಕ್ರೋಶ, ತಟ್ಟೆ, ಲೋಟ ಬಡಿಯುತ್ತ ಮೆರವಣಿಗೆ

120421 Sagara KSRTC workers Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 12 APRIL 2021 ಸಾಗರದಲ್ಲೂ ಕೆಎಸ್​ಆರ್​ಟಿಸಿ ನೌಕರರು ತಮ್ಮ ಕುಟುಂಬದೊಂದಿಗೆ ತಟ್ಟೆ, ಲೋಟ ಬಾರಿಸುವ ಚಳವಳಿ ನಡೆಸಿದರು. ಜೋಗ ಬಸ್ ನಿಲ್ದಾಣದಿಂದ ಉಪ ವಿಭಗಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಮಹಿಳೆಯರು, ಮಕ್ಕಳು ಈ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ – ಶಿವಮೊಗ್ಗ ಡಿಸಿ ಕಚೇರಿ ಮುಂದೆ ಮಹಿಳೆಯರು, ಮಕ್ಕಳಿಂದ ತಟ್ಟೆ, ಲೋಟ ಬಡಿದು ಪ್ರತಿಭಟನೆ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಕುಟುಂಬ ಸಮೇತ ಬಂದು  ತಟ್ಟೆ-ಲೋಟ ಬಡಿದು ಸರ್ಕಾರದ ವಿರುದ್ಧ ಅಸಮಾಧಾನ … Read more

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ, 13 ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ, ಪಟ್ಟಿಯಲ್ಲಿ ಹೆಸರಿದ್ದರೂ ಮಹಿಳೆಗೆ ತಪ್ಪಿದ ಟಿಕೆಟ್

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 10 APRIL 2021 ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಬಿಜೆಪಿ 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ 13 ಮಂದಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಯಾವೆಲ್ಲ ವಾರ್ಡ್‍ಗೆ ಯಾರೆಲ್ಲ ಸ್ಪರ್ಧೆ? ವಾರ್ಡ್ 1 – ಸೊಪ್ಪುಗುಡ್ಡೆ ರಾಘವೇಂದ್ರ, ವಾರ್ಡ್ 2 – ಯತಿರಾಜ್ (ನವೀನ್), ವಾರ್ಡ್ 3 – ನವೀನ್ ಕುಮಾರ್, ವಾರ್ಡ್ 4 – ಶ್ರೀನಿವಾಸ್, ವಾರ್ಡ್ 5 – ವಿದ್ಯಾ ನಾರಾಯಣ್‍, ವಾರ್ಡ್ … Read more

ಹೊಸನಗರ ಪೊಲೀಸರ ಭರ್ಜರಿ ಬೇಟೆ, ಗಾಂಜಾಗಾಗಿ ಕಾರು ಶೋಧಿಸುತ್ತಿದ್ದ ಖಾಕಿ ಪಡೆಗೆ ಕಾದಿತ್ತು ಶಾಕ್

Hosanagara Police Station 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 7 APRIL 2021 ಹೊಸನಗರ ಠಾಣೆ ಪೊಲೀಸರು ದೊಡ್ಡ ಬೇಟೆಯಾಡಿದ್ದಾರೆ. ಕಾರಿನಲ್ಲಿದ್ದ ಲಕ್ಷಾಂತರ ಮೌಲ್ಯದ ಗಾಂಜಾ, ನಾಲ್ಕು ಬಂದೂಕು, ಜೀವಂತ ಗುಂಡುಗಳು, ಮೊಬೈಲ್ ಮತ್ತು ನಗದು ವಶಕ್ಕೆ ಪಡೆದಿದ್ದಾರೆ. ಕಳೂರು ನಂದ್ಯಾಲಕೊಪ್ಪ ಗ್ರಾಮದ ಸುನಿಲ್ (45) ಎಂಬುವವರ ಕಾರಿನಲ್ಲಿ ಗಾಂಜಾ ಇರಿಸಿಕೊಂಡಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರಿಗೆ ಲಕ್ಷಾಂತರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಕಾರಿನಲ್ಲಿತ್ತು ಕೆಜಿಗಟ್ಟಲೆ ಗಾಂಜಾ ಸುನಿಲ್‍ನ ಕಾರಿನಲ್ಲಿ … Read more

ಭದ್ರಾವತಿ ನಗರಸಭೆ ಚುನಾವಣೆ, ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 APRIL 2021 ಭದ್ರಾವತಿ ನಗರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 35 ವಾರ್ಡ್‌ಗಳ ಪೈಕಿ 21 ವಾರ್ಡ್‌ಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡಲಾಗಿದೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌ ಅವರು ಪಟ್ಟಿ ಬಿಡುಗಡೆ ಮಾಡಿದರು. ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, 21 ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಾಗಿದೆ. ಉಳಿದ ಅಭ್ಯರ್ಥಿಗಳ ಹೆಸರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ. … Read more