ಭದ್ರಾವತಿ, ಶಿಕಾರಿಪುರದಲ್ಲಿ ನಿಷೇಧಾಜ್ಞೆ, ಯಾವಾಗ? ಕಾರಣವೇನು?

050720 DC Visit Various Places During Curfew 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MARCH 2021 ಭದ್ರಾವತಿ ಮತ್ತು ಶಿಕಾರಿಪುರದ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಾರ್ಚ್‌ 27ರ ಸಂಜೆ 5 ಗಂಟೆಯಿಂದ 29ರ ಸಂಜೆ 5 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. ಶಿಕಾರಿಪುರ ಪುರಸಭೆ, ತಾಲೂಕಿನ ಚುರ್ಚಿಗುಂಡಿ, ತರಲಘಟ್ಟ ಗ್ರಾಮ ಪಂಚಾಯಿತಿಗಳು, ಭದ್ರಾವತಿ ತಾಲೂಕಿನ ಕೋಮಾರನಹಳ್ಳಿ, ವೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ದಿನವೂ … Read more

ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ನೊಟೀಸ್ ಜಾರಿ

Siganduru-Temple-General-Image

ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಕ್ಕೆ ನೊಟೀಸ್‌ ಜಾರಿ ಮಾಡಲಾಗಿದೆ. ಇದನ್ನೂ ಓದಿ  | ಸಿಗಂದೂರು ದೇವಸ್ಥಾನಕ್ಕೆ ಸರ್ಕಾರದ ಸಮಿತಿ, ರದ್ದುಗೊಳಿಸುವಂತೆ ನಿಯೋಗದ ಮನವಿ ದೇವಸ್ಥಾನದ ನಿರ್ವಹಣೆ ಸರಿಯಿಲ್ಲ. ಹಣ ದುರುಪಯೋಗವಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ, ದೇವಸ್ಥಾನವನ್ನು ಘೋಷಿತ ಸಂಸ್ಥೆ ಎಂದು ಘೋಷಿಸುವ ಸಲುವಾಗಿ ಆಕ್ಷೇಪಣೆಗಳು ಇದ್ದರೆ ತಿಳಿಸುವಂತೆ ಈ ಹಿಂದೆ … Read more

ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಫೋನ್ ಮಾಡಿ ಹೊಸ ಕಥೆ ಹೆಣೆದು ಮಹಾ ವಂಚನೆ

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MARCH 2021 ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಶಿಕಾರಿಪುರ ಮೂಲದ ಉದ್ಯಮಿಯೊಬ್ಬರನ್ನು ವಂಚಿಸಿದ್ದಾರೆ. ಇನ್ಷುರನ್ಸ್ ಹಣ ಬಾಕಿ ಇದ್ದು, ಅದನ್ನು ಪಾವತಿಸಿದರೆ ಹೆಚ್ಚು ಮೊತ್ತ ನಿಮ್ಮ ಖಾತೆಗೆ ಬರಲಿದೆ ಎಂದು ನಂಬಿಸಿ ಆ ವಂಚಕ ಒಂದು ಲಕ್ಷ ರೂ. ಪಂಗಾನಾಮ ಹಾಕಿದ್ದಾನೆ. ಏನಿದು ಘಟನೆ? ಹೇಗಾಯ್ತು ವಂಚನೆ? ಶಿಕಾರಿಪುರ ಮೂಲದ ಉದ್ಯಮಿಯೊಬ್ಬರಿಗೆ ಐಸಿಐಸಿಐ ಪ್ರೊಡೆನ್ಷಿಯಲ್ ಇನ್ಷುರೆನ್ಸ್ ಕಂಪನಿ ಹೆಸರಿನಲ್ಲಿ ಈ ಮೇಲ್ ಬಂದಿತ್ತು. … Read more

34 ವರ್ಷದಿಂದ ತಲೆಮರೆಸಿಕೊಂಡಿದ್ದವನು ಹೊಳೆಹೊನ್ನೂರು ಪೊಲೀಸರಿಗೆ ಸಿಕ್ಕಿಬಿದ್ದ, ಯಾವ ಕೇಸ್? ಸಿಕ್ಕವನಾರು?

prison hand cuff image

ಶಿವಮೊಗ್ಗ ಲೈವ್.ಕಾಂ | HOLEHONNURU NEWS | 25  MARCH 2021 34 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ರಾಮಿನಕೊಪ್ಪದ ರೂಪ್ಲಾನಾಯ್ಕ (68) ಬಂಧಿತ. 1987ರಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣವೊಂದರ ಆರೋಪಿಯಾಗಿದ್ದ ರೂಪ್ಲಾನಾಯ್ಕ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ರೂಪ್ಲಾನಾಯ್ಕನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಹೊಳೆಹೊನ್ನೂರು ಠಾಣೆ ಪಿಎಸ್ಐ ಸುರೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲಿಂಗೇಗೌಡ, ಮಲ್ಲಿಕಾರ್ಜುನ, ಪ್ರಕಾಶ್, ದೇವೇಂದ್ರನಾಯ್ಕ ಅವರು ಕಾರ್ಯಾಚರಣೆ ನಡೆಸಿ, ರೂಪ್ಲಾನಾಯ್ಕನನ್ನು ಪತ್ತೆ ಹಚ್ಚಿದ್ದಾರೆ. … Read more

ನರಸೀಪುರದ ನಾಟಿ ಔಷಧ ವಿತರಣೆ ತಾತ್ಕಾಲಿಕ ಮುಂದೂಡಿಕೆ, ಕಾರಣವೇನು? ಮತ್ತೆ ಯಾವಾಗ ಶುರುವಾಗುತ್ತೆ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 24  MARCH 2021 ನರಸೀಪುರದ ನಾಟಿ ಔಷಧ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕರೋನ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ನಾಟಿ ವೈದ್ಯರ ನಾರಾಯಣಮೂರ್ತಿ ಅವರ ಪುತ್ರ ರಾಘವೇಂದ್ರ, ಕರೋನ ಎರಡನೇ ಅಲೆ ಮತ್ತು ಲಾಕ್‌ ಡೌನ್‌ ಕುರಿತು ಚರ್ಚೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಔಷಧ ನೀಡುವುದನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ | ಕ್ಯಾನ್ಸರ್‌ಗೆ ಔಷಧಿ ನೀಡುತ್ತಿದ್ದ ಸಾಗರ ನರಸೀಪುರದ ನಾರಾಯಣಮೂರ್ತಿ … Read more

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಾಗರ ವಕೀಲರು ಗರಂ

240321 Sagara Advocates Protest in Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 24  MARCH 2021 ವಕೀಲರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಸಾಗರದ ಉಪ ವಿಭಾಗಾಧಿಕಾರಿಗೆ ವಕೀಲರು ಮನವಿ ಸಲ್ಲಿಸಿದ್ದಾರೆ. ಮಾರ್ಚ್ 31ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ವಕೀಲರೊಬ್ಬರ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿದ್ದಾರೆ. ಇದರ ವಿರುದ್ಧ ಕ‍ಠಿಣ ಕ್ರೈಗೊಳ್ಳಬೇಕು ಎಂದು ವಕೀಲರು ಆಗ್ರಹಿಸಿದರು. ಏನಿದು ಕೇಸ್? ಏನಂದಿದ್ದರು ಡಿಕೆಶಿ? ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ … Read more

ನಾನು ಬ್ಯಾಂಕ್ ಮ್ಯಾನೇಜರ್ ಮಾತಾಡ್ತಿರೋದು ಅಂತಾ ಹೇಳಿ, ಸಾಗರದ ವ್ಯಕ್ತಿಯ ಖಾತೆಯಿಂದ 1.65 ಲಕ್ಷ ನುಂಗಿದ

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA NEWS | 24  MARCH 2021 ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತನೊಬ್ಬ, ಸಾಗರ ತಾಲೂಕಿನ ವ್ಯಕ್ತಿಯೊಬ್ಬರಿಗೆ 1.65 ಲಕ್ಷ ರೂ. ವಂಚನೆ ಮಾಡಿದ್ದಾನೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ | ಮೌಸ್ ಬುಕ್ ಮಾಡಲು ಹೋಗಿ 65 ಸಾವಿರ ಕಳೆದುಕೊಂಡ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿ ಸಾಗರ ತಾಲೂಕಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತ, ತನ್ನನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ … Read more

ಸಿಗಂದೂರು ಲಾಂಚ್ ಸಿಬ್ಬಂದಿಗಳ ಮೇಲೆ ಹೊಳೆಬಾಗಿಲಲ್ಲಿ ಪ್ರವಾಸಿಗರಿಂದ ಹಲ್ಲೆ

Sigandur-Launch-General-Image

ಶಿವಮೊಗ್ಗ ಲೈವ್.ಕಾಂ | SAGARA NEWS | 24  MARCH 2021 ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರು ಸಿಗಂದೂರು ಲಾಂಚ್ ಸಿಬ್ಬಂದಿಗಳ ಮೇಲೆ ಹೊಳೆಬಾಗಿಲಿನಲ್ಲಿ ಹಲ್ಲೆ ನಡೆಸಿದ್ದಾರೆ. ತುಮರಿ ಗ್ರಾಮ ಪಂಚಾಯಿತಿ ಹಂಗಾಮಿ ನೌಕರರಾದ ರಾಜೇಶ್ ಮತ್ತು ಶ್ರವಣ್ ಕುಮಾರ್‍ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಕಾರಣವೇನು? ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಗೋವಿಂದ ಕೃಷ್ಣ ಮತ್ತು ರಾಜು ಎಂಬುವವರು ಕ್ಷುಲಕ ಕಾರಣಕ್ಕೆ ಗೇಟ್ ಸಿಬ್ಬಂದಿ ಜೊತೆ ಜಗಳವಾಡಿದ್ದಾರೆ. ಬೆಂಗಳೂರಿನಿಂದ ಬಂದಿದ್ದ ತಮ್ಮ ಟಿಟಿ ವಾಹನವನ್ನು ಲಾಂಚ್‍ಗೆ ಬಿಡಲಿಲ್ಲ  ಎಂಬ … Read more

ಶಿವಮೊಗ್ಗ, ಸಾಗರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಟ್ಟೆ ಬ್ಯಾಗ್, ಇನ್ಮುಂದೆ ಎಚ್ಚರ ತಪ್ಪಿದರೆ ದಂಡ ಫಿಕ್ಸ್, ಯಾಕೆ?

Railway Shivamogga Board 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24  MARCH 2021 ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಲು ರೈಲ್ವೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ನಿಲ್ದಾಣದೊಳಗೆ ಮತ್ತು ರೈಲಿನಲ್ಲಿ ಪ್ಲಾಸ್ಟಿಕ್ ಕೊಂಡೊಯ್ಯುವವರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್‍ಗಳನ್ನು ವಿತರಿಸಲಾಗಿದೆ. ಪ್ಲಾಸ್ಟಿಕ್ ಕವರ್ , ಬ್ಯಾನರ್, ಶೀಟ್, ಪ್ಲಾಸ್ಟಿಕ್ ಧ್ವಜ, ಕಪ್, ಪ್ಲೇಟ್, ಸ್ಪೂನ್, ಥರ್ಮಕೋಲ್ ಸೇರಿದಂತೆ ಪ್ಲಾಸ್ಟಿಕ್‍ನಿಂದ ತಯಾರಿಸಿರುವ ವಸ್ತುಗಳನ್ನು ರೈಲು ನಿಲ್ದಾಣದ ಒಳಗೆ ಬಿಡದಿರಲು ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಜಾಗೃತಿ … Read more

ಗ್ರಾಮಸ್ಥರನ್ನು ಕೇಳಲಿಲ್ಲ, ಸಭೆ ನಡೆಸಲಿಲ್ಲ, ಏಕಪಕ್ಷೀಯ ನಿರ್ಧಾರಕ್ಕೆ ಎಮ್ಮೆಹಟ್ಟಿಯಲ್ಲಿ ಆಕ್ರೋಶ

230321 Emmehatti Villagers Protest in Emmehatti 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 MARCH 2021 ಗ್ರಾಮಸ್ಥರೊಂದಿಗೆ ಚರ್ಚೆ ಮಾಡದೆ, ವಾರ್ಡ್‍ವಾರು ಸಭೆ ನಡೆಸದೆ ಗ್ರಾಮಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಆರೋಪಿಸಿ ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಿಮ್ಮೂರ ಸುದ್ದಿಗೆ ನೀವೇ ರಿಪೋರ್ಟರ್, ಶಿವಮೊಗ್ಗ ಜಿಲ್ಲೆಯ ಹಳ್ಳಿ ಹಳ್ಳಿ ಸುದ್ದಿನೂ ಇಲ್ಲಿ ಬರುತ್ತೆ, ಹೇಗದು? ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಯನ್ನು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಗೆ ಸೇರಿಸಲಾಗಿದೆ. ಗ್ರಾಮಸ್ಥರೊಂದಿಗೆ ಚರ್ಚೆ ನಡೆಸದೆ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ … Read more