ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳ, ಹೊರ ಹರಿವು ಕೂಡ ಏರಿಕೆ

Bhadra-Dam-Water-Outflow

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 15 ಅಕ್ಟೋಬರ್ 2020 ಹಿನ್ನೀರು ಭಾಗದಲ್ಲಿ ಮಳೆ ಜೋರಿರುವುದರಿಂದ ಭದ್ರಾ ಜಲಾಶಯದ ಒಳ ಮತ್ತು ಹೊರ ಹರಿವು ಪ್ರಮಾಣ ಹೆಚ್ಚಳವಾಗಿದೆ. ಕ್ರಸ್ಟ್ ಗೇಟ್‍ಗಳ ಮೂಲಕ ಹೊಳೆಗೆ ನೀರು ಹರಿಸಲಾಗುತ್ತಿದೆ. ಭದ್ರಾ ಜಲಾಶಯಕ್ಕೆ ಇವತ್ತು 14,304 ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿದೆ. ಹಾಗಾಗಿ 8,251 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಪೈಕಿ ಬಲ ದಂಡೆ ನಾಲೆಗೆ 300 ಕ್ಯೂಸೆಕ್, ಎಡ ದಂಡೆ ನಾಲೆಗೆ 50 ಕ್ಯೂಸೆಕ್ ಹರಿಸಲಾಗುತ್ತಿದೆ. … Read more

ಭದ್ರಾ ಜಲಾಶಯದಿಂದ ಮತ್ತೊಮ್ಮೆ ನೀರು ಹೊರಕ್ಕೆ, ಎಷ್ಟು ಪ್ರಮಾಣದ ನೀರು ಹರಿಸಲಾಗುತ್ತಿದೆ?

Bhadra-Dam-Water-Outflow

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 14 ಅಕ್ಟೋಬರ್ 2020 ಭದ್ರಾ ಜಲಾಶಯದ ಕ್ರಸ್ಟ್ ಗೇಟ್‍ಗಳಿಂದ ಮತ್ತೊಮ್ಮೆ ನೀರು ಹೊರಬಿಡಲಾಗಿದೆ. ಜಲಾಶಯದಿಂದ ಇವತ್ತು 4300 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಸ್ಟ್ ಗೇಟ್‍ಗಳಿಂದ 3300 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಭದ್ರಾ ಜಲಾಶಯಕ್ಕೆ ಇವತ್ತು 2471 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ನೀರಿ ಮಟ್ಟ185.3 ಅಡಿಯಷ್ಟಿದೆ. FILE PHOTO ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ … Read more

ಸಿಗಂದೂರು ದೇಗುಲ, ರಾಮಪ್ಪ ಕುಟುಂಬದ ವಿರುದ್ಧ ಪಿತೂರಿ, ಮುಜರಾಯಿಗೆ ವಹಿಸದಂತೆ ಒತ್ತಾಯ

141020 Hulthikoppa Shridar Ediga Sanga Over Siganduru Issue 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಅಕ್ಟೋಬರ್ 2020 ಸಿಗಂದೂರು ಶ್ರೀ ಚೌಡೇಶ್ವರಿ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸಬಾರದು ಎಂದು ಜಿಲ್ಲಾ ಆರ್ಯ ಈಡಿಗರ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ. VIDEO REPORT ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಎಲ್ಲ ಧರ್ಮದ ಜನರಿಗೆ ಗೌರವದೊಂದಿಗೆ ಅನೇಕ ಧಾರ್ಮಿಕ, ಸಾಮಾಜಿಕ ಸೇವೆ ಮತ್ತು ಸಹಕಾರ ನೀಡುತ್ತಾ ಬರುತ್ತಿರುವ ದೇವಸ್ಥಾನ ಆಡಳಿತ ಮಂಡಳಿ ಬಗ್ಗೆ ಕೆಲವರು ಇಲ್ಲಸಲ್ಲದ ಅಪಪ್ರಚಾರ ಮಾಡಿ ದೇವಸ್ಥಾನವನ್ನು ಮುಜರಾಯಿ … Read more

ಅಪ್ಪಾಜಿಗೌಡ ಸ್ಮರಣಾರ್ಥ ಸ್ವಂತ ಖರ್ಚಿನಲ್ಲಿ ಬಸ್ ನಿಲ್ದಾಣ ನಿರ್ಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ

131020 Appaji Gowda Bus Stand at Bhadravathi Kudligere 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಅಕ್ಟೋಬರ್ 2020 ಮಾಜಿ ಶಾಸಕ ಅಪ್ಪಾಜಿಗೌಡ ಅವರ ಸ್ಮರಣಾರ್ಥ ಭದ್ರಾವತಿಯ ಕೂಡ್ಲಿಗೆರೆ ಸರ್ಕಲ್‍ನಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್ ಅವರು ತಮ್ಮ ವೈಯಕ್ತಿಕ ಖರ್ಚಿನಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣವನ್ನು, ಇವತ್ತು ಲೋಕಾರ್ಪಣೆ ಮಾಡಲಾಯಿತು. ಅಪ್ಪಾಜಿಗೌಡ ಅವರ ಪತ್ನಿ ಶಾರದಾ ಅಪ್ಪಾಜಿಗೌಡ ಅವರು ಬಸ್ ನಿಲ್ದಾಣಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಅಪ್ಪಾಜಿಗೌಡ ಅವರ ಋಣ ತೀರಿಸಬೇಕು ಅಂತಾ ಈ ಭಾಗದ ಜನರು … Read more

ಶಿವಮೊಗ್ಗ ವಿಮಾನ ನಿಲ್ದಾಣ, ರಿಂಗ್ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿ, ಏರ್ ಪೋರ್ಟ್‍ಗೆ ಸಿಎಂ ಭೇಟಿ ಸಾದ್ಯತೆ

131020 DC Visit Shimoga Airport 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020 ಜಿಲ್ಲಾಧಿಕಾರಿ ಶಿವಕುಮಾರ್ ಅವರು ಇವತ್ತು ಶಿವಮೊಗ್ಗ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಬಳಿ ನಡೆಯುತ್ತಿರುವ ರಿಂಗ್‍ ರಸ್ತೆ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಸೋಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪರಶೀಲನೆ ನಡೆಸಿದ ಜಿಲ್ಲಾಧಿಕಾರಿ ಶಿವಕುಮಾರ್ ಅವರು ಕಾಮಗಾರಿ ಪ್ರಗತಿ ಕುರಿತು ಮಾಹಿತಿ ಪಡೆದರು. ಅಲ್ಲದೆ ಕಾಮಗಾರಿ ಕುರಿತು ಕೆಲವು ಸೂಚನೆ ನೀಡಿದರು. ಸದ್ಯ ಅಪ್ರೋಚ್‍ ರಸ್ತೆ, ರನ್ ವೇ, ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. … Read more

ಬಾಗಿಲು ಒಡೆದು ಮನೆಯೊಳಗೆ ನುಗ್ಗಲು ದರೋಡೆಕೋರರ ಯತ್ನ, ಮಲೆನಾಡ ಒಂಟಿ ಮನೆಗಳಲ್ಲಿ ಹೆಚ್ಚಾಯ್ತು ಆತಂಕ

131020 Megaravalli House theft attempt 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020 ತೀರ್ಥಹಳ್ಳಿ ತಾಲೂಕಿನ ಒಂಟಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು, ಮನೆ ಸದಸ್ಯರ ಹತ್ಯೆಗೆ ಯತ್ನಿಸಿ, ದರೋಡೆ ಪ್ರಯತ್ನ ಮಾಡಿದ್ದಾರೆ. ತಾಲೂಕಿನ ಮೇಗರವಳ್ಳಿ ಗ್ರಾಮದ ಪುರುಷೋತ್ತಮ ಹೆಗ್ಡೆ ಅವರ ಮನೆ ಮೇಲೆ ರಾತ್ರಿ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆರು ಮಂದಿ ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ. ಬಾಗಿಲು ಒಡೆದು ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಕಳ್ಳರು ನುಗ್ಗುವುದನ್ನು ತಡೆಯಲು ಮುಂದಾದ ಪುರುಷೋತ್ತಮ ಹೆಗ್ಡೆ, … Read more

ಸಂಬಳ ಕೊಡಿ, ಇಎಸ್ಐ, ಪಿಎಫ್‍ ತುಂಬಿ, ಭದ್ರಾವತಿಯಲ್ಲಿ ನೌಕರರ ಪ್ರತಿಭಟನೆ

131020 Protest for ESI PF in Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಅಕ್ಟೋಬರ್ 2020 ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ನಿರಾವರಿ ನಿಗಮದ BRLBCಯ ನಾಲ್ಕು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಮತ್ತು ಗುತ್ತಿಗೆ ನೌಕರರು ಮಿಲ್ಟ್ರಿಕ್ಯಾಂಪ್‍ನಲ್ಲಿರುವ ನೀರಾವರಿ ಇಲಾಖೆ ಕಛೇರಿ ಮುಂದೆ ಪ್ರತಿಭಟನೆ ನೆಡೆಸಿದರು. ನಾಲ್ಕು ವಿಭಾಗಗಳಲ್ಲಿ 500 ಮಂದಿ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದಿನ ಗುತ್ತಿಗೆದಾರ ಎರಡು ತಿಂಗಳ ವೇತನ ನೀಡಿರಲಿಲ್ಲ. ಹಾಗಾಗಿ ಹೋರಾಟ ನಡೆಸಿದ ಪರಿಣಾಮ  ಹೊಸ ಗುತ್ತಿಗೆ ನೇಮಕ … Read more

ಸಾಗರದ ಐಗಿನಬೈಲು ಬಳಿ ಸರಣಿ ಅಪಘಾತ, ಆಟೋ ಚಾಲಕನಿಗೆ ಗಂಭೀರ ಗಾಯ

131020 Sagara Iginabailu Auto Accident 1

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಅಕ್ಟೋಬರ್ 2020 ಸಾಗರ ತಾಲೂಕಿನ ಐಗಿನಬೈಲು ಬಳಿ ಸರಣಿ ಅಪಘಾತ ಸಂಭವಿಸಿದ್ದು ಆಟೋ ಚಾಲರೊಬ್ಬರಿಗೆ ಗಂಭೀರ ಗಾಯವಾಗಿದೆ. ಘಟನೆಯಲ್ಲಿ ಎರಡು ಕಾರು, ಒಂದು ಆಟೋಗೆ ಹಾನಿಯಾಗಿದೆ. ಹೇಗಾಯ್ತು ಅಪಘಾತ? ಶಿರಸಿಯಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಆಟೋ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ನಜ್ಜುಗುಜ್ಜಾಗಿದೆ. ಆಟೋದ ಹಿಂಬದಿಯಲ್ಲಿ ಬರುತ್ತಿದ್ದ ಸ್ವಿಫ್ಟ್ ಕಾರಿಗೂ ಡಿಕ್ಕಿಯಾಗಿದೆ. ಆಟೋ ಚಾಲಕನಿಗೆ ಗಂಭೀರ ಗಾಯ … Read more

ಕಸಬಾ ಏತ ನೀರಾವರಿ ಯೋಜನೆಗೆ ಚಾಲನೆ ನೀಡ್ತಾರೆ ಸಿಎಂ ಯಡಿಯೂರಪ್ಪ, ದಿನಾಂಕ ಫಿಕ್ಸ್

131020 BY Raghavendra Krushi darshana shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 13 ಅಕ್ಟೋಬರ್ 2020 ಕಸಬಾ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಕ್ಟೋಬರ್ 19ರಂದು ಚಾಲನೆ ನೀಡಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಶಿಕಾರಿಪುರದಲ್ಲಿ ಕೃಷಿ ಇಲಾಖೆ ಮತ್ತು ಕೃಷಿ ಪ್ರಮಾಣ ಸಂಸ್ಥೆ ಆಯೋಜಿಸಿದ್ದ ಸಾವಯವ ಕೃಷಿ ಮತ್ತು ಪ್ರಮಾಣೀಕರಣ ತರಬೇತಿ ಕಿಸಾನ್ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಈ ಯೋಜನೆಯಿಂದ ಏಳು ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು. ಯಡಿಯೂರಪ್ಪ ಅವರು … Read more

ಮಕ್ಕಳಿಗೆ ಪಾಠ ಮಾಡಲು ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸುವಂತೆ ಒತ್ತಾಯ

131020 Taluk Panchayat Mallikarjuana Hakre School Meeting 1

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಅಕ್ಟೋಬರ್ 2020 ಕರೋನ ಹಿನ್ನೆಲೆಯಲ್ಲಿ ಆನ್‍ಲೈನ್ ಶಿಕ್ಷಣ ನಡೆಯುತ್ತಿದ್ದು, ಶ್ರೀಮಂತ ಮಕ್ಕಳಿಗಷ್ಟೆ ಇದು ಅನುಕೂಲವಾಗುತ್ತಿದೆ. ಬಡ ಮಕ್ಕಳು ಇದರಿಂದ ವಂಚಿತವಾಗುತ್ತಿದ್ದಾರೆ. ಹಾಗಾಗಿ ಸರ್ಕಾರ ಹೊಸ ಟಿವಿ ಚಾನೆಲ್ ಆರಂಭಿಸಿ, ಎಲ್‍ಕೆಜಿಯಿಂದ ಪದವಿವರೆಗೆ ಬೋಧನೆ ಮಾಡಬೇಕು ಎಂದು ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದ್ದಾರೆ. ಸಾಗರ ತಾಲೂಕು ಪಂಚಾಯಿತಿಯಲ್ಲಿ ಪ್ರೌಢಶಾಲೆ ಮುಖ್ಯಶಿಕ್ಷಕರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಜೊತೆಗೆ ಸಭೆಯಲ್ಲಿ … Read more