ಶಿವಮೊಗ್ಗ ತಾಲೂಕಿನ ಹಲವೆಡೆ ಫೆಬ್ರವರಿ 8, 9 ರಂದು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಶಿವಮೊಗ್ಗ: ತಾವರೆಚಟ್ನಹಳ್ಳಿ ವಿದ್ಯುತ್ (power cut) ಸ್ವೀಕರಣ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಫೆಬ್ರವರಿ 8 ಮತ್ತು 9 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕುವೆಂಪು ನಗರದ ಸೂಡ ಸಿ ಮತ್ತು ಡಿ ಬ್ಲಾಕ್, ಶಿವಕುಮಾರಸ್ವಾಮಿ ಲೇಔಟ್ ಮತ್ತು ಇನ್ಫ್ರಾ ಸಿಟಿ ಹಾಗೂ ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, … Read more

ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್‌, ಎಲ್ಲಿ? ಎಷ್ಟು ಬಂದೂಕು ಸಿಕ್ತು?

carpenter-in-Shikaripura-turn-into-an-illegal-gun-manufacturer.

ಶಿಕಾರಿಪುರ: ಪಟ್ಟಣದ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಶಿಕಾರಿಪುರ ಪಟ್ಟಣ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು (carpenter) ಬಂಧಿಸಿ, ಆತನಿಂದ 7 ಸಿಂಗಲ್ ಬ್ಯಾರಲ್ ನಾಡಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾಪುರ ಗ್ರಾಮದ 3ನೇ ಕ್ರಾಸ್ ನಿವಾಸಿ ಲಕ್ಷ್ಮಣಪ್ಪ (67) ಬಂಧಿತ ಆರೋಪಿ. ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಲಕ್ಷ್ಮಣಪ್ಪ, ತನ್ನ ಮನೆಯ ಪಕ್ಕದ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ … Read more

ಸೋಗಾನೆಯಲ್ಲಿ ಧಗಧಗ ಹೊತ್ತಿ ಉರಿದ ತೊಗರಿ, ಹುರುಳಿಯ ಬೊಣವೆ, ಆಗಿದ್ದೇನು?

Sogane-Board-in-Shivamogga-Taluk

ಶಿವಮೊಗ್ಗ: ಜಿಲ್ಲೆಯ ಸೋಗಾನೆ ಗ್ರಾಮದಲ್ಲಿ ರೈತರೊಬ್ಬರು ಬೆಳೆದಿದ್ದ ಬೆಳೆಗಳಿಗೆ (Crops) ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ರಾತ್ರಿ ಯಾರೋ ಕಿಡಿಗೇಡಿಗಳು ಈ ಬಣವೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಸುಮಾರು ₹50,000 ಮೌಲ್ಯದ ಬೆಳೆಗಳು ಸಂಪೂರ್ಣ ಭಸ್ಮವಾಗಿವೆ. ಈ ಹಿಂದೆ ಇದೇ ಜಮೀನಿನಲ್ಲಿ ರೈತರು ಬೆಳೆಸಿದ್ದ ತೆಂಗಿನ ಗಿಡಗಳನ್ನು ಸಹ ಕಿಡಿಗೇಡಿಗಳು ಕಿತ್ತು ಹಾಕಿ ತೊಂದರೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತೆಕಡೂರು ನಿವಾಸಿ ಹಾಲೇಶ್ ನಾಯ್ಕ್ ಎಂಬುವರು … Read more

ಕಾರು, ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ನೆರವಾದ ಶಿವಮೊಗ್ಗ ಜಿಲ್ಲಾಧಿಕಾರಿ, ಆಗಿದ್ದೇನು?

Shimoga-DC-Prabhulinga-Kavalikatti-helps-a-injured-in-Soraba

ಸೊರಬ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ಇಂದು ಸೊರಬ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಈ ನಡುವೆ, ಮಾರ್ಗಮಧ್ಯೆ ಸಂಭವಿಸಿದ ರಸ್ತೆ ಅಪಘಾತದ ಸಂತ್ರಸ್ತರ (victim) ನೆರವಿಗೆ ನಿಲ್ಲುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗಾಯಾಳುಗಳಿಗೆ ನೆರವು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಾಗರದಿಂದ ಸೊರಬಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಇದನ್ನು ಗಮನಿಸಿದ ಕೂಡಲೇ ತಮ್ಮ ವಾಹನವನ್ನು ನಿಲ್ಲಿಸಿದ ಅವರು, ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಅಗತ್ಯ ವ್ಯವಸ್ಥೆ … Read more

ಕರೆಂಟ್‌ ಇದ್ದರು ಅಡಿಕೆ ತೋಟದ ಮೋಟರ್‌ ಆನ್‌ ಆಗಲಿಲ್ಲ, ಪರಿಶೀಲಿಸಿದ ರೈತನಿಗೆ ಕಾದಿತ್ತು ಆಘಾತ

Maluru-Police-Station-in-Thirthahalli-taluk.webp

ತೀರ್ಥಹಳ್ಳಿ: ತಾಲೂಕಿನ ಲಿಂಗಾಪುರ ಗ್ರಾಮದ ರೈತರೊಬ್ಬರ ಅಡಿಕೆ ತೋಟಕ್ಕೆ ನೀರು ಹಾಯಿಸಲು ಅಳವಡಿಸಿದ್ದ ವಿದ್ಯುತ್ ಮೋಟಾರ್‌ನ (Pump) ಕೇಬಲ್ ವೈರ್‌ ಕಳ್ಳತನ ಮಾಡಲಾಗಿದೆ. ಸುಮಾರು 120 ಮೀಟರ್ ಉದ್ದದ ಕೇಬಲ್ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಲಿಂಗಾಪುರ ಗ್ರಾಮದ ಎನ್. ವೆಂಕಟೇಶ್ ಎಂಬುವವರು ತಮ್ಮ 10 ಎಕರೆ ಅಡಿಕೆ ತೋಟಕ್ಕೆ ನೀರು ಹಾಯಿಸಲು ಮುಡುಬ ಸ್ಮಶಾನದ ಬಳಿ ಹೊಳೆಗೆ ಮೋಟಾರ್ ಅಳವಡಿಸಿದ್ದರು. ಮೋಟಾರ್ ಆಫ್ ಮಾಡಿ ಹೋಗಿದ್ದ ಅವರು ಮರುದಿನ ಸಂಜೆ ಮೋಟಾರ್ ಆನ್ ಮಾಡಲು ಹೋದಾಗ … Read more

ಸಿಗಂದೂರಿಗೆ ಹೊಸ ಬಸ್‌, ಸಾಗರಕ್ಕೆ ನಗರ ಸಾರಿಗೆ ಆರಂಭ, ಎಲ್ಲೆಲ್ಲಿ ಸಂಚರಿಸಲಿದೆ ಸಿಟಿ ಬಸ್?

MLA-Beluru-Gopalakrishna-inaugurates-KSRTC-Bus.

ಸಾಗರ: ಸಿಗಂದೂರು (Siganduru) ಸೇತುವೆ ಆದ ನಂತರ ಹಿನ್ನೀರು ಭಾಗದ ಮಹಿಳೆಯರು ನಮ್ಮ ಭಾಗಕ್ಕೆ ಸರ್ಕಾರಿ ಬಸ್ ಬರುತ್ತಿಲ್ಲ. ಇದರಿಂದ ಗ್ಯಾರಂಟಿ ಸೌಲಭ್ಯ ನಮಗೆ ಪಡೆಯಲು ಆಗುತ್ತಿಲ್ಲ ಎಂದು ದೂರಿದ್ದರು. ಇದನ್ನು ಮನಗಂಡು ಸಿಗಂದೂರಿಗೆ ನೂತನ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸಾಗರ – ಸಿಗಂದೂರು ಮತ್ತು ಸಾಗರ ನಗರ ಸಾರಿಗೆ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ತನಕ ಬಸ್ ಸೌಲಭ್ಯವನ್ನೇ ಕಾಣದ ಕುಗ್ರಾಮ … Read more

ಹೊಳಲೂರು ಬಳಿ ಅಪಘಾತ, ಒಂದೇ ಕುಟುಂಬದ ಮೂವರಿಗೆ ಗಂಭೀರ ಗಾಯ, ಆಗಿದ್ದೇನು?

ACCIDENT-NEWS-GENERAL-IMAGE.

ಶಿವಮೊಗ್ಗ: ಹೊಳಲೂರು ಗ್ರಾಮದ ಹರಮಘಟ್ಟ ಕ್ರಾಸ್ ಬಳಿ ಟ್ರಾಕ್ಟರ್ (Tractor) ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರಾಕ್ಟರ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರುದ್ರಪ್ಪ, ತಮ್ಮ ಹೆಂಡತಿ ರೇಣುಕಮ್ಮ ಮತ್ತು ಸೊಸೆ ಅಕ್ಷತಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊಳಲೂರು ಕಡೆಯಿಂದ ಬರುತ್ತಿದ್ದರು. ಈ ವೇಳೆ ಹರಮಘಟ್ಟ ಕ್ರಾಸ್ ಬಳಿ ಎದುರಿನಿಂದ ಬಂದ ಟ್ರಾಕ್ಟರ್ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ … Read more

ಕೋಣಂದೂರು ಸಮೀಪ ಇಬ್ಬರು ಮಹಿಳೆಯರಿಗೆ ಕೆಎಫ್‌ಡಿ ಪಾಸಿಟಿವ್‌, ಆಸ್ಪತ್ರೆಗೆ ದಾಖಲು

KONANDUR-THIRTHAHALLI-NEWS

ಕೋಣಂದೂರು: ಸಮೀಪದ ಅಕ್ಲಾಪುರ ಗ್ರಾಮದ ಇಬ್ಬರು ಮಹಿಳೆಯರಲ್ಲಿ (women) ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕು ಪತ್ತೆಯಾಗಿದೆ. ಅಕ್ಲಾಪುರದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಚನ್ನಗಿರಿ ಮೂಲದ 50 ವರ್ಷ ವಯಸ್ಸಿನ ಒಬ್ಬ ಮಹಿಳೆ ಹಾಗೂ 40 ವರ್ಷ ವಯಸ್ಸಿನ ಸ್ಥಳೀಯ ಮಹಿಳೆಯೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. ಇಬ್ಬರಿಗೂ ಜ್ವರ ಕಾಣಿಸಿಕೊಂಡ ಕಾರಣ ರಕ್ತ ಪರೀಕ್ಷೆ ಮಾಡಲಾಗಿತ್ತು. ಆಗ ಕೆಎಫ್‌ಡಿ ತಗುಲಿರುವುದು ದೃಢಪಟ್ಟಿದೆ. ಇಬ್ಬರೂ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ – ಸಕ್ರೆಬೈಲು ಬಳಿ ಬಸ್ಸು ಕಾರು ಮುಖಾಮುಖಿ … Read more

ಕ್ಯಾಂಟರ್‌, ಕಾರು ಮುಖಾಮುಖಿ ಡಿಕ್ಕಿ, ಸಹೋದ್ಯೋಗಿಗಳು ಸ್ಥಳದಲ್ಲೇ ಸಾವು

Car-and-cantar-collision-at-sagara.

ಆನಂದಪುರಂ: ಸಮೀಪದ ಉಳ್ಳೂರಿನ ಮುಂಡಿಗೆಮಟ್ಟಿ ಕ್ರಾಸ್ ಬಳಿ ಸೋಮವಾರ ಕ್ಯಾಂಟ‌ರ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ (collision) ಕಾರಿನಲ್ಲಿದ್ದ ಸಾಗರದ ಸಹಕಾರ ಸಂಘದ ಇಬ್ಬರು ಸಹೋದ್ಯೋಗಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಗರ ತಾಲೂಕು ತಡಗಳ ಗ್ರಾಮದ ವೀರೇಶ ಗೌಡ (25) ಮತ್ತು ಸೊರಬ ತಾಲೂಕು ಮಳಲಗದ್ದೆ ಗ್ರಾಮದ ಪವಿತ್ರ (25) ಮೃತಪಟ್ಟವರು. ಆನಂದಪುರಂ ಕಡೆಯಿಂದ ಸಾಗರಕ್ಕೆ ಹೋಗುತ್ತಿದ್ದ ಕಾರು ಮತ್ತು ಸಾಗರ ಕಡೆಯಿಂದ ಆನಂದಪುರಂ ಕಡೆ ಬರುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ತೀರ್ಥಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್‌ನ ಮತ್ತೊಂದು ಶಾಖೆ ರೆಡಿ, ಇನ್ನೂ ಎಲ್ಲೆಲ್ಲಿ ಆರಂಭವಾಗಲಿವೆ ಬ್ರಾಂಚ್‌?

DCC-Bank-new-branch-at-Thirthahalli.

ತೀರ್ಥಹಳ್ಳಿ: ಸ್ವಂತ ಬಂಡವಾಳದ ಮೂಲಕ ಡಿಸಿಸಿ ಬ್ಯಾಂಕ್ (bank new branch) ಸದೃಢವಾದ ಆರ್ಥಿಕ ವಹಿವಾಟು ನಡೆಸುತ್ತಿದೆ. ಜಿಲ್ಲೆ ವ್ಯಾಪ್ತಿಯ ಸುಮಾರು ಒಂದೂವರೆ ಲಕ್ಷ ರೈತರಿಗೆ ಸಾಲ ವಿತರಣೆ ಮಾಡುತ್ತಿದ್ದು, ಲಾಭವನ್ನು ಹೆಚ್ಚಿಸಿಕೊಂಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆ‌ರ್.ಎಂ. ಮಂಜುನಾಥಗೌಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಎಂಪಿಎಂಸಿ ಆವರಣದಲ್ಲಿ ಫೆ.5ರಂದು ಡಿಸಿಸಿ ಬ್ಯಾಂಕ್ ಹೊಸ ಶಾಖೆ ಆರಂಭವಾಗಲಿದೆ. ಬ್ಯಾಂಕ್‌ಗೆ 75 ವರ್ಷ ತುಂಬುತ್ತಿರುವ ಹೊತ್ತಲ್ಲಿ 50 ಶಾಖೆ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ. ಮೇಗರವಳ್ಳಿ, … Read more