ಸಿಗಂದೂರು ಲಾಂಚ್‌ನತ್ತ ಜನರೆ ಬರುತ್ತಿಲ್ಲ, 56 ವರ್ಷದ ಸೇವೆ ನಿಂತೇ ಹೋಗುತ್ತಾ? ಇಲ್ಲಿದೆ ಲಾಂಚ್‌ ಇತಿಹಾಸ

170725 sigandur launch old and new photo

ಸಾಗರ: ಸಿಗಂದೂರ ಸೇತುವೆ (Sigandur Bridge) ಲೋಕಾರ್ಪಣೆ ಆಗುತ್ತಿದ್ದಂತೆ ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಲಾಂಚ್‌ ಸೇವೆ ಸ್ಥಗಿತಗೊಂಡಿದೆ. ಪ್ರವಾಸಿಗರು, ಸಿಗಂದೂರು ದೇವಸ್ಥಾನಕ್ಕೆ ಅಗಮಿಸುವ ಭಕ್ತರು, ಸ್ಥಳೀಯರು ಈಗ ಸೇತುವೆ ಮೇಲೆ ಸಂಚಾರ ಆರಂಭಿಸಿದ್ದಾರೆ. ಈ ಭಾಗದ ಪ್ರಮುಖ ಆಕರ್ಷಣೆಯಾಗಿದ್ದ ಲಾಂಚ್‌ಗಳು (Sigandur Launch) ಮೂಲೆಗುಂಪಾಗಿದ್ದು, ನೂತನ ಸೇತುವೆ ಆ ಜಾಗ ಆಕ್ರಮಿಸಿಕೊಂಡಿದೆ. ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಶರಾವತಿ ನದಿ ದಾಟಲು ಮೂರು ಲಾಂಚ್‌ಗಳಿವೆ. ಸೇತುವೆ ಮೇಲೆ ವಾಹನ ಸಂಚಾರ ಆರಂಭವಾಗುತ್ತಿದ್ದಂತೆ ಲಾಂಚ್‌ಗಳಿಗೆ ಜನ ಬರುವುದೇ … Read more

ಸಿಗಂದೂರು ಸೇತುವೆ, ಹಗಲು, ರಾತ್ರಿ ಕೆಲಸ ಮಾಡಿದ ಕಾರ್ಮಿಕರಿಗೆ ಸನ್ಮಾನ

felicitation-for-sigandur-bridge-workers.

ಸಾಗರ: ಸಿಗಂದೂರು ಸೇತುವೆ (Sigandur Bridge) ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಸಂಘಟನೆ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಕಳೆದ ಐದು ವರ್ಷದಿಂದ ಕಾರ್ಮಿಕರು ಹಗಲು, ರಾತ್ರಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ದೇಶದ ಎರಡನೆ ಅತಿ ಉದ್ದನೆಯ ಕೇಬಲ್‌ ಆಧಾರಿತ ಸೇತುವೆಯನ್ನು ಈ ಕಾರ್ಮಿಕರು ನಿರ್ಮಿಸಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಇದನ್ನೂ ಓದಿ » ಶಿವಮೊಗ್ಗದಲ್ಲಿ ‘ಭುಗಿಲುʼ ಬಿಡುಗಡೆ, ಬಿ.ಎಲ್.ಸಂತೋಷ್‌ ಭಾಗಿ, ಏನೆಲ್ಲ ಮಾತನಾಡಿದರು? ಇಲ್ಲಿದೆ … Read more

ಹೊಸನಗರ, ಸಾಗರ ತಹಶೀಲ್ದಾರ್‌ಗಳ ವರ್ಗಾವಣೆ

SAGARA-NEWS-UPDATE

ಹೊಸನಗರ/ಸಾಗರ: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್‌ಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲೂಕುಗಳ ತಹಶೀಲ್ದಾರ್‌ಗಳನ್ನು (Tahsildars) ವರ್ಗಾಯಿಸಲಾಗಿದೆ. ಹೊಸನಗರ ತಹಶೀಲ್ದಾರ್‌ ಆಗಿದ್ದ ರಶ್ಮಿ.ಹೆಚ್.ಜೆ ಅವರನ್ನು ಸಾಗರ ತಹಶೀಲ್ದಾರ್‌ ಆಗಿ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ » ಜೇನು ಸಾಕಾಣೆ, ಸಹಾಯಧನಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಸಾಗರ ತಾಲೂಕು ತಹಶೀಲ್ದಾರ್‌ ಆಗಿದ್ದ ಚಂದ್ರಶೇಖರ್‌ ನಾಯ್ಕ ಅವರನ್ನು ವರ್ಗಾಯಿಸಲಾಗಿದೆ. ಆದರೆ ಅವರಿಗೆ ಸ್ಥಳ ತೋರಿಸಿಲ್ಲ. ಇನ್ನೊಂದೆಡೆ ಹೊಸನಗರಕ್ಕೆ ತಹಶೀಲ್ದಾರ್‌ ಅವರನ್ನು … Read more

ತೀವ್ರ ಅನಾರೋಗ್ಯ, ಆನಂದಪುರ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

ill-health-sslc-student-breathed-last.

ತ್ಯಾಗರ್ತಿ: ಆನಂದಪುರದ ಕೆಪಿಎಸ್ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ (Student) ಐಶ್ವರ್ಯ (15) ಅನಾರೋಗ್ಯದ ಕಾರಣ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ » ಅಡಿಕೆ ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ವ್ಯಕ್ತಿ ಸಾವು ಕಳೆದ 20 ದಿನಗಳಿಂದ ಐಶ್ವರ್ಯ ಅನಾರೋಗ್ಯದಿಂದ ಬಳಲತ್ತಿದ್ದಳು. ಎರಡು ದಿನದ ಹಿಂದೆ ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೊನೆಯುಸಿರೆಳೆದಿದ್ದಾಳೆ. ಐಶ್ವರ್ಯ ಮಲಂದೂರು ಗ್ರಾಮದ ಬಡ ಕುಟುಂಬದ ಹಿನ್ನೆಲೆಯ ಹುಡುಗಿ. ಬಾಲಕಿ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾಳೆ.

ಗ್ರಾಮ ಪಂಚಾಯಿತಿ ಪಿಡಿಒ ವರ್ಗಾವಣೆಗೆ ಒತ್ತಾಯ, ಸಾಗರ ತಾಲೂಕು ಪಂಚಾಯಿತಿಗೆ ಮನವಿ

Memorandum-to-taluk-panchayat-EO-to-transfer-PDO

ಸಾಗರ: ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು (PDO) ವರ್ಗಾಸುವಂತೆ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ ಅವರಿಗೆ ಮನವಿ (Memorandum) ಸಲ್ಲಿಸಿದೆ. ಇದನ್ನೂ ಓದಿ » ಸಿಗಂದೂರು ಲಾಂಚ್‌ಗಳು ಇನ್ಮುಂದೆ ತೇಲುವ ಹೊಟೇಲ್, ಯೋಜನೆ ಮಾಹಿತಿ ನೀಡಿದ ಎಂಎಲ್‌ಎ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛಗೊಳಿಸಿಲ್ಲ. ಇದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕಸ ವಿಲೇವಾರಿ ವಾಹನ ಇದ್ದರು ನಿರ್ವಹಣೆ ಮಾಡುತ್ತಿಲ್ಲ. ಆಸ್ಪತ್ರೆ ರಸ್ತೆ ಗುಂಡಿಮಯವಾಗಿದೆ. … Read more

ಖಾಸಗಿ ಬಸ್‌, ಕಾರು ಮುಖಾಮುಖಿ ಡಿಕ್ಕಿ, ಕಾರಿನ ಮುಂಭಾಗ ನಜ್ಜುಗುಜ್ಜು

Prakash-Bus-and-Car-mishap-at-anandapura

ಸಾಗರ: ಖಾಸಗಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು (Mishap) ಇಬ್ಬರು ಗಾಯಗೊಂಡಿದ್ದಾರೆ. ಆನಂದಪುರ ಸಮೀಪದ ಮುಂಬಾಳುವಿನಲ್ಲಿ ಇಂದು ಸಂಜೆ ಘಟನೆ ಸಂಭವಿಸಿದೆ. ಇದನ್ನೂ ಓದಿ » ಮೂರು ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಹೋರಾಟ, ಸರ್ಕಾರಕ್ಕೆ ಒಕ್ಕೂಟದ ಎಚ್ಚರಿಕೆ ಕೆರೆ ಏರಿ ಮೇಲೆ ಅಪಘಾತ ಸಂಭವಿಸಿದ್ದು ಕಾರಿನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶರತ್‌ ಮತ್ತು ಭರತ್‌ ಎಂಬುವವರಿಗೆ ಗಾಯವಾಗಿದೆ. ಬಸ್ಸಿನ ಮುಂಭಾಗಕ್ಕು ಹಾನಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಕೆರೆಯ ತಡೆಗೋಡೆ ಮೇಲೆ ನಿಂತಿದೆ. ಬಸ್ಸು ರಸ್ತೆಯ ಬದಿಗೆ ಸರಿದಿದೆ. … Read more

ಹೆಗ್ಗೋಡಿನ ನೀನಾಸಂನಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ, ವಿಶೇಷ ಉಪನ್ಯಾಸ, ನಾಟಕ

Ninasam-general-image

ಸಾಗರ: ಹೆಗ್ಗೋಡಿನ ನೀನಾಸಂ (NINASAM)ಸಂಸ್ಥೆ ವತಿಯಿಂದ ನೀನಾಸಂ ಸಭಾಂಗಣದಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜುಲೈ 16ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ. ಮಹೇಶ ಅಡಕೋಳಿ ಅವರು ಕಾಳಿದಾಸನ ಶೃಂಗಾರ ದರ್ಶನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 7 ಗಂಟೆಗೆ ನೀನಾಸಂ ತಂಡದ ಮಂಜು ಕೊಡಗು ನಿರ್ದೇಶನದ ನಾಟಕ ಮೀಡಿಯಾ ಪ್ರದರ್ಶನಗೊಳ್ಳಲಿದೆ ಎಂದು ಕೆ.ವಿ.ಅಕ್ಷರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಒಂದೇ ಸೆಕೆಂಡ್‌ಗೆ NETFLIXನ ಎಲ್ಲ ವಿಡಿಯೋ … Read more

ಸಿಗಂದೂರು ಸೇತುವೆ, ರಾಜ್ಯದ ಸಚಿವರು, ಶಾಸಕರು ಕಾರ್ಯಕ್ರಮದಿಂದ ದೂರ, ಲೆಟರ್‌ ವಾರ್‌ ಆರಂಭ

Congress-Leaders-did-not-attend-sigandur-bridge-inauguration

ಸಾಗರ: ಸಿಗಂದೂರು ಸೇತುವೆ (Sigandur Bridge) ಉದ್ಘಾಟನೆಗೆ ಆಹ್ವಾನ ನೀಡಿಲ್ಲ ಎಂಬ ಆರೋಪದ ಹಿನ್ನೆಲೆ ಸ್ಥಳೀಯ ಶಾಸಕ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಕಾರ್ಯಕ್ರಮ ಬಹಿಷ್ಕರಿಸಿದರು. ಸಾಗರಕ್ಕೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅಲ್ಲಿಂದ ಹಿಂತಿರುಗಿದ್ದಾರೆ. ಸಿಗಂದೂರು ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಇಂದಿನ ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಕಾಂಗ್ರೆಸ್‌ ಮುಖಂಡರು ಬಹಿಷ್ಕರಿಸಿದರು.   ಸಿಎಂ ಪತ್ರ ಬಹಿರಂಗ, ಜಟಾಪಟಿ … Read more

ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ, ಕೇಬಲ್‌ ಬ್ರಿಡ್ಜ್‌ ವೈಭವಕ್ಕೆ ಮನಸೋತ ಕೇಂದ್ರ ಸಚಿವ

Sigandur-Bridge-Inaugurated

ಸಾಗರ: ಐತಿಹಾಸಿಕ ಸಿಗಂದೂರು ಸೇತುವೆಯನ್ನು (Sigandur Bridge) ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಲೋಕಾರ್ಪಣೆ ಮಾಡಿದರು. ಶರಾವತಿ ನದಿಗೆ ಬಾಗಿನ ಅರ್ಪಿಸಿ, ಸೇತುವೆ ಉದ್ಘಾಟಿಸಿದರು. ಇದನ್ನೂ ಓದಿ » ಮಡಬೂರು ರಾಜೇಂದ್ರ ಶಿವಮೊಗ್ಗದಲ್ಲಿ ನಿಧನ, ಮಾಜಿ ಪ್ರಧಾನಿ, ಕೇಂದ್ರ ಸಚಿವರಿಂದ ಸಂತಾಪ ಸಿಗಂದೂರು ಸೇತುವೆ ಲೋಕಾರ್ಪಣೆ ಹಿನ್ನೆಲೆ ಗಣಪತಿ ಹೋಮ ನಡೆಯಿತು. ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಪ್ರಹ್ಲಾದ್‌ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ವೈ.ವಿಜಯೇಂದ್ರ, … Read more

ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಒಂದು ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?

-Linganamakki-Dam-General-Image

ಸಾಗರ: ಲಿಂಗನಮಕ್ಕಿ ಜಲಾಶಯಕ್ಕೆ (Dam Level) ಇವತ್ತು 34,680 ಕ್ಯೂಸೆಕ್‌ ಒಳ ಹರಿವು ಇದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಒಳ ಹರಿವು ಹೆಚ್ಚಳವಾಗುವ ಸಾದ್ಯತೆ ಇದೆ. ಜಲಾಶಯದ ನೀರಿನ ಮಟ್ಟ 1795.90 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ ಒಂದು ಅಡಿ ಏರಿಕೆಯಾಗಿದೆ. ಸದ್ಯ ಜಲಾಶಯ ಶೇ.56.77ರಷ್ಟು ಭರ್ತಿಯಾಗಿದೆ. ಇದನ್ನೂ ಓದಿ » ಹೊಸನಗರದಲ್ಲಿ ಮುಂದುವರೆದ ಮಳೆ, ಇವತ್ತು ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಡ್ಯಾಂಗಳಿಗೆ ಎಷ್ಟಿದೆ ಒಳ ಹರಿವು?