ಅಡಿಕೆ ಬೆಳೆಗಾರರ ಸಂಘದಿಂದ ಉಪ ವಿಭಾಗಾಧಿಕಾರಿ ಭೇಟಿ, ಚರ್ಚೆ, ಏನೆಲ್ಲ ಮನವಿ ಸಲ್ಲಿಸಲಾಯ್ತು?

areca-growers-meet-Sagara-

ಸಾಗರ: ಅಡಿಕೆ (Adike) ಬೆಳೆಗಾರರ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಸಾಗರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್‌ ಅವರ ನೇತೃತ್ವದ ನಿಯೋಗ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಇದೇ ವೇಳೆ ಮನಲ್ಲಿ ಸಲ್ಲಿಸಲಾಯಿತು. ಇದನ್ನೂ ಓದಿ » ಮರದ ದಿಮ್ಮಿ ಉರುಳಿ ಕಾರ್ಮಿಕನ ತಲೆಗೆ ಗಂಭೀರ ಗಾಯ, ಸಾವು ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ರಂಗನಾಥ ಪಡವಗೋಡು, ಗೌತಮ್‌, ಪ್ರವೀಣ್‌, … Read more

ಸಿಗಂದೂರು ಸೇತುವೆ, ಸಾಗರದಿಂದ ಉಡುಪಿ, ಮಂಗಳೂರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ

Sigandur-Bridge-work-photo

ಸಾಗರ: ಸಿಗಂದೂರು ಸೇತುವೆ ಉದ್ಘಾಟನೆ ಬಳಿಕ ಸಾಗರದಿಂದ ಆವಿನಹಳ್ಳಿ ಮಾರ್ಗವಾಗಿ ಉಡುಪಿ, ಮಂಗಳೂರಿಗೆ ಸಾರಿಗೆ ಬಸ್‌ (Bus) ವ್ಯವಸ್ಥೆ ಮಾಡಬೇಕು ಎಂದು ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್‌.ಕೆ.ಅಣ್ಣಪ್ಪ ಒತ್ತಾಯಿಸಿದ್ದಾರೆ. ಜುಲೈ 14ರಂದು ಸಿಗಂದೂರು ಸೇತುವೆ ಉದ್ಘಾಟನೆ ಆಗಲಿದೆ. ವಾಹನಗಳ ಸಂಚಾರ ಸರಾಗವಾಗಲಿದೆ. ಹಾಗಾಗಿ ಆವಿನಹಳ್ಳಿ ಮೂಲಕ ಸಾಗರದಿಂದ ಉಡುಪಿಗೆ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಆವಿನಹಳ್ಳಿ, ಹೊಳೆಬಾಗಿಲು, ಸಿಗಂದೂರು, ತುಮರಿ, ಕೊಲ್ಲೂರು, ಕುಂದಾಪುರ, ಉಡುಪಿ ಮೂಲಕ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಿದರೆ … Read more

ಸಿಗಂದೂರು ಸೇತುವೆ, ‘ನಮ್ಮ ಭೇಟಿಯ ಬಳಿಕವೇ ಉದ್ಘಾಟನೆ ದಿನಾಂಕ ನಿಗದಿʼ

Beluru-Gopalakrishna-in-a-press-meet

ಸಾಗರ: ಬಹುನಿರೀಕ್ಷಿತ ಅಂಬಾರಗೋಡ್ಲು-ಕಳಸವಳ್ಳಿಯ ಸಿಗಂದೂರು ಸೇತುವೆಯನ್ನು (Bridge) ಜುಲೈ 14 ರಂದು ಉದ್ಘಾಟಿಸಲು ದಿನಾಂಕ ನಿಗದಿಪಡಿಸಿರುವುದಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ಐದು ದಶಕಗಳ ಕಾಲದ ಶರಾವತಿ ಹಿನ್ನೀರು ಸಂತ್ರಸ್ತರ ಕನಸಿಗೆ ನಿಜವಾದ ಸಮಯ. ಸೇತುವೆ ನಿರ್ಮಾಣಕ್ಕಾಗಿ ನಡೆದ ದೀರ್ಘಕಾಲದ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಸೇತುವೆ ಕಾಮಗಾರಿ ವೀಕ್ಷಿಸಲು ಸ್ಥಳಕ್ಕೆ ಆಗಮಿಸಿದ್ದ ಸಂಸದ ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೇತುವೆ ಉದ್ಘಾಟನೆ ಸದ್ಯಕ್ಕಿಲ್ಲ ಎಂದು ಹೇಳಿಕೆ … Read more

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1.30 ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?

-Linganamakki-Dam-General-Image

ಸಾಗರ: ಲಿಂಗನಮಕ್ಕಿ ಜಲಾಶಯದ (Dam Level) ಒಳ ಹರಿವು ಕಡಿಮೆಯಾಗಿದೆ. ಇವತ್ತು ಡ್ಯಾಮ್‌ಗೆ 37,631 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. 5,559 ಕ್ಯೂಸೆಕ್‌ ಹೊರ ಹರಿವು ಇದೆ. ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1.30 ಅಡಿಯಷ್ಟು ಹೆಚ್ಚಳವಾಗಿದೆ. ಇವತ್ತು ನೀರಿನ ಮಟ್ಟ 1792.50 ಅಡಿಗೆ ತಲುಪಿದೆ. ಸದ್ಯ ಜಲಾಶಯ ಶೇ.51.78ರಷ್ಟು ಭರ್ತಿಯಾಗಿದೆ. ಒಟ್ಟು 78.52 ಟಿಎಂಸಿ ನೀರು ಇದೆ. ಇದನ್ನೂ ಓದಿ » ಭದ್ರಾ ಡ್ಯಾಮ್‌ನ ಒಳ ಹರಿವು ಕುಸಿತ, ಇವತ್ತು ಎಷ್ಟಿದೆ? ಇದನ್ನೂ … Read more

ಕಟ್ಟಿಕನಾರು ಬಳಿ ಕಾಡು ಹಂದಿಗಳ ಹಾವಳಿ, ಅಡಿಕೆ ಸಸಿಗಳು ನಾಶ

Kattinakaru-wild-pig-menace

ಸಾಗರ: ಕಾಡು ಹಂದಿಗಳ ಹಾವಳಿಗೆ ಅಡಿಕೆ ಸಸಿ, ಬಾಳೆ ಗಿಡಗಳು ನಾಶವಾಗಿವೆ. ಕಟ್ಟಿನಕಾರು ಗ್ರಾಮದ ಹೆಮ್ಮಡೆ ಬೀರನಾಯ್ಕ ಎಂಬುವವರ ಅಡಿಕೆ ತೋಟಕ್ಕೆ ನುಗಿದ ಕಾಡು ಹಂದಿಗಳು (Pig) ಅಡಿಕೆ ಸಸಿಗಳಿಗೆ ಹಾನಿ ಮಾಡಿವೆ. ಫಸಲು ನೀಡಬೇಕಿದ್ದ ಸಸಿಗಳು ಹಾಳಾಗಿದ್ದು ರೈತರಿಗೆ ಸಮಸ್ಯೆಯಾಗಿದೆ. ಸಾಗರ ತಾಲೂಕಿನ ಚನ್ನಗೊಂಡ ಗ್ರಾಮದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ಕಳೆದೆರಡು ವಾರದಲ್ಲಿ ಕಾಡು ಹಂದಿಗಳಿಂದ ಗ್ರಾಮದಲ್ಲಿ 80ಕ್ಕೂ ಹೆಚ್ಚು ಅಡಿಕೆ ಸಸಿಗಳು ನಾಶವಾಗಿವೆ. ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾಗುತ್ತಿರುವ ಕುರಿತು ಅರಣ್ಯ ಇಲಾಖೆ … Read more

ಸಿಗಂದೂರು ಸೇತುವೆ, ಮೊದಲ ಲೋಡ್‌ ಟೆಸ್ಟ್‌ ಪಾಸ್‌, ಏನಿದು ಪರೀಕ್ಷೆ? ಹೇಗೆ ನಡೆಯುತ್ತೆ?

Load-Test-of-Sigandur-Bridge-at-Sagara.

ಸಾಗರ: ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಸಿಗಂದೂರು ಸೇತುವೆ (Bridge) ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದ ಲೋಡ್‌ ಟೆಸ್ಟಿಂಗ್‌ನಲ್ಲಿ ಸೇತುವೆ ಪಾಸ್‌ ಆಗಿದೆ. ಈ ಪರೀಕ್ಷೆಯ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಳೆದ ಭಾನುವಾರದಿಂದ ಬುಧವಾರದವರೆಗೆ ಮೊದಲ ಹಂತದ ಲೋಡ್‌ ಟೆಸ್ಟಿಂಗ್‌ ನಡೆಸಲಾಯಿತು. ಲಾರಿಗಳಲ್ಲಿ ನೂರು ಟನ್‌ ಲೋಡ್‌ ತುಂಬಿ ಸೇತುವೆ ಮೇಲೆ ನಿಲ್ಲಿಸಿ ಪರೀಕ್ಷೆ ನಡೆಲಾಗಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ಸಿಗಂದೂರು ಸೇತುವೆ ಪಾಸ್‌ ಆಗಿದೆ. ಏನಿದು ಲೋಡ್‌ ಟೆಸ್ಟ್‌? ಹೇಗೆ ನಡೆಯಲಿದೆ? ಹೊಳೆಬಾಗಿಲು … Read more

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 3.30 ಅಡಿ ಏರಿಕೆ, ಇವತ್ತು ಎಷ್ಟಿದೆ ಒಳ ಹರಿವು?

-Linganamakki-Dam-General-Image

ಸಾಗರ: ಲಿಂಗನಮಕ್ಕಿ ಜಲಾಶಯದ (Dam Level) ಒಳ ಹರಿವು ಮತ್ತಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಜಲಾಶಯದ ನೀರಿನ ಮಟ್ಟ 3.30 ಅಡಿಯಷ್ಟು ಹೆಚ್ಚಳವಾಗಿದೆ. ಜಲಾಶಯದ ಒಳ ಹರಿವು 50,576 ಕ್ಯೂಸೆಕ್‌ ಇದೆ. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು ಒಳ ಹರಿವು ಪ್ರಮಾಣ ಮತ್ತಷ್ಟು ಹೆಚ್ಚಳದ ನಿರೀಕ್ಷೆ ಇದೆ. ಸದ್ಯ ನೀರಿನ ಮಟ್ಟ 1769.70 ಅಡಿಗೆ ತಲುಪಿದೆ. 2550.76 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಇದನ್ನೂ ಓದಿ » ದಾಸರಕಲ್ಲಹಳ್ಳಿಯಲ್ಲಿ ಬೆಳಗ್ಗೆಯಿಂದ ಬಡಿಗೆ ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು, ಮಕ್ಕಳು, … Read more

ಮೈದುಂಬಿದ ಜೋಗ ಜಲಪಾತ, ವೈಭವ ಕಣ್ತುಂಬಿಕೊಳ್ಳಲು ವಾರದ ದಿನವು ಪ್ರವಾಸಿಗರ ದಂಡು

tourists-visit-jog-falls.

ಸಾಗರ: ಮಲೆನಾಡು ಭಾಗದಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಜೋಗ ಜಲಪಾತ (Jog Falls) ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಎರಡು ದಿನ ರಜೆ ಇದ್ದಿದ್ದರಿಂದ ದೊಡ್ಡ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಆಗಮಿಸಿದ್ದರು. ಸೋಮವಾರವು ಟೂರಿಸ್ಟ್‌ಗಳ ಜಲಪಾತದ ವೈಭವ ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ. ಮಳೆ ಶುರುವಾಗುತ್ತಿದ್ದಂತೆ ಜೋಗ ಜಲಪಾತಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯದ ಪ್ರವಾಸಿಗರು ಜಲಪಾತ ವೀಕ್ಷಿಸಲು ಬರುತ್ತಿದ್ದಾರೆ. ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳು ಮೈದುಂಬಿಕೊಂಡಿವೆ. … Read more

ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ, 24 ಗಂಟೆಯಲ್ಲಿ ನೀರಿನ ಮಟ್ಟ 2.65 ಅಡಿಯಷ್ಟು ಏರಿಕೆ

-Linganamakki-Dam-General-Image

ಸಾಗರ: ಜಲನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ (Dam) ಒಳ ಹರಿವು ಗಣನೀಯವಾಗಿ ಏರಿಕೆಯಾಗಿದೆ. ಇವತ್ತು 39,961 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 2.65 ಅಡಿಯಷ್ಟು ಏರಿಕೆಯಾಗಿತ್ತು. ಪ್ರಸ್ತುತ 1766.40 ಅಡಿಯಷ್ಟು ನೀರಿನ ಸಂಗ್ರಹವಿದೆ. ಇನ್ನು, ಜಲಾಶಯದ ಹೊರ ಹರಿವು 3012 ಕ್ಯೂಸೆಕ್‌ ಇದೆ. ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 151.64 ಟಿಎಂಸಿ. ಸದ್ಯ 35.01 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ. ಶೇ.23ರಷ್ಟು … Read more

ಹೊಸನಗರ, ಸಾಗರದಲ್ಲಿ ಭಾರಿ ಮಳೆ, ಆಗುಂಬೆ ಭಾಗದಲ್ಲಿ ಬಿಡುವು ಕೊಡದ ವರ್ಷಧಾರೆ, ಎಲ್ಲೆಲ್ಲಿ ಜೋರು ಮಳೆಯಾಗ್ತಿದೆ?

agumbe-ghat-road-during-rainy-season

ಮಳೆ ವರದಿ: ಜಿಲ್ಲೆಯಲ್ಲಿ ಮೂರು ತಾಲೂಕುಗಳಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ (Heavy Rainfall). ಹೊಸನಗರ, ಸಾಗರ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ತೀರ್ಥಹಳ್ಳಿಯಲ್ಲಿ ಜೋರು ಮಳೆಯಾಗುತ್ತಿದೆ. ಸಾಗರ ತಾಲೂಕಿನ ಕಾಂಡಿಕೆ, ಕಲ್ಮನೆ, ಕೋಳೂರು, ಭೀಮನಕೋಣೆ, ಭೀಮನೇರಿ, ಮಾಲ್ವೆ, ಕೆಳದಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದೆ. ಇತ್ತ ಹೊಸನಗರ ತಾಲೂಕಿನ ಮಾರುತಿಪುರ, ಕೋಡೂರು, ಮುಂಬಾರು, ಮೇಲಿನಬೆಸಿಗೆ, ಹೊಸೂರು ಸಂಪೆಕಟ್ಟೆ ಭಾಗದಲ್ಲಿಯು ಭಾರಿ ಸುರಿಯುತ್ತಿದೆ. ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ, ಆರಗ, ನೆರಟೂರು, ಹೊಸಹಳ್ಳಿ, ಅರೆಹಳ್ಳಿ, ಹೊನ್ನೇತಾಳು, ಬಿದರಗೋಡು, ಆಗುಂಬೆ ಭಾಗದಲ್ಲಿ ಜೋರು … Read more