ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಅರ್ಧ ಮಾಂಗಲ್ಯ ಸರ ಅಪಹರಣ, ಘಟನೆ ಸಂಭವಿಸಿದ್ದು ಹೇಗೆ?

Sagara Police Station Building

SHIVAMOGGA LIVE NEWS | 18 APRIL 2024 SAGARA : ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬರ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರು ವಿಳಾಸ ಕೇಳುವಂತೆ ನಟಿಸಿ ಮಾಂಗಲ್ಯ ಸರ ಅಪಹರಿಸಿದ್ದಾರೆ. ಸಾಗರದ ಅಣಲೆಕೊಪ್ಪ ಬಡಾವಣೆಯ ರಾಬಿಯಾ ಮಸೀದಿ ಬಳಿ ಘಟನೆ ನಡೆದಿದೆ. ಅಪರಿಚಿತರು ಶಿರವಾಳ ಗ್ರಾಮದ ಕಡೆಯಿಂದ ಬೈಕ್‌ನಲ್ಲಿ ಬಂದಿದ್ದರು. ವಿಳಾಸ ಕೇಳುವ ನೆಪದಲ್ಲಿ ಶಾಂತಮ್ಮ ಎಂಬುವರ ಮಾಂಗಲ್ಯ ಸರ ಕೀಳಲು ಮುಂದಾಗಿದ್ದಾರೆ. ಶಾಂತಮ್ಮ ಪ್ರತಿರೋಧ ವ್ಯಕ್ತಪಡಿಸಿದಾಗ 40 ಗ್ರಾಂ ತೂಕದ ಮಾಂಗಲ್ಯ ಸರದ ಪೈಕಿ 23 ಗ್ರಾಂ … Read more

ಸಾಗರದಲ್ಲಿ ಆಟವಾಡುತ್ತ ಆಯಾತಪ್ಪಿ ಬಾವಿಗೆ ಬಿದ್ದ ಮಗು, ಸಾವು

Crime-News-General-Image

SHIVAMOGGA LIVE NEWS | 18 APRIL 2024 SAGARA : ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಹೆಣ್ಣು ಮಗು ಮೃತಪಟ್ಟಿದೆ. ಸಾಗರದ ಎಸ್.ಎನ್. ನಗರ ಬಡಾವಣೆಯ ಗ್ಯಾಸ್ ಗೋಡೌನ್ ಸಮೀಪ ಘಟನೆ ನಡೆದಿದೆ. ಮನೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದ ಮನ್ನತ್‌ ಎಂಬ ಹೆಣ್ಣು ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಕೂಡಲೆ ತಾಯಿ ಕೂಗಿಕೊಂಡು ಅಕ್ಕಪಕ್ಕದವರನ್ನು ಕರೆದಿದ್ದಾರೆ. ಸ್ಥಳೀಯರು ಮಗುವನ್ನು ಮೇಲಕ್ಕೆ ಎತ್ತಿದರೂ ಹಣೆ ಹಾಗೂ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮನ್ನತ್ ಮೃತಪಟ್ಟಿದ್ದಾಳೆ. ಇದನ್ನೂ ಓದಿ … Read more

ರಾಘವೇ‍ಶ್ವರ ಶ್ರೀ ಪುರ ಪ್ರವೇಶ | ಹೊಸಗುಂದಕ್ಕೆ ಶೃಂಗೇರಿ ಶ್ರೀ | ಮಲ್ಲಾಪುರದಲ್ಲಿ ದೊಡ್ಡ ರಥೋತ್ಸವ

Ramachandrapura-mutt-swamiji-pura-pravesha-hosagunda-temple

SHIVAMOGGA LIVE NEWS | 16 APRIL 2024 ಪುರ ಪ್ರವೇಶಿಸಿದ ರಾಘವೇಶ್ವರ ಶ್ರೀ HOSANAGARA : ರಾಮಚಂದ್ರಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಪುರ ಪ್ರವೇಶ ಮಾಡಿದರು. ಹೊಸನಗರದ ಹೊರವಲಯದ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನ ಬಳಿ ಸ್ವಾಮೀಜಿಯ‌ನ್ನು ಭಕ್ತರು ಸ್ವಾಗತಿಸಿದರು. ತೆರೆದ ರಥದಲ್ಲಿ ಮೆರವಣಿಗೆ ನಡೆಯಿತು. ನಂತರ ರಾಮಚಂದ್ರಪುರ ಮಠಕ್ಕೆ ತೆರಳಿದರು. ಬಸವೇಶ್ವರ ದೇವರ ದೊಡ್ಡ ರಥೋತ್ಸವ ANAVATTI : ಸೊರಬ ತಾಲೂಕು ಆನವಟ್ಟಿ ಸಮೀಪದ ಮಲ್ಲಾಪುರ ಗ್ರಾಮದ ಬಸವೇಶ್ವರ ದೇವರ … Read more

ಸಾಗರದಲ್ಲಿ ಊಟ ಹಂಚಿಕೆ, ರಾಷ್ಟ್ರಭಕ್ತರ ಬಳಗದ ಆಯೋಜಕನ ವಿರುದ್ಧ ಕೇಸ್‌

Sagara Police Station Building

SHIVAMOGGA LIVE NEWS | 15 APRIL 2024 SAGARA : ರಾಷ್ಟ್ರಭಕ್ತರ ಬಳಗದ ಸಂಯೋಜನೆಯೊಂದಿಗೆ ಸಾಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಚುನಾವಣ ಅಧಿಕಾರಿಗಳ ಅನುಮತಿ ಪಡೆಯದೆ ಊಟ ಹಂಚಿದ್ದಕ್ಕೆ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ. ಏ.6ರಂದು ದೇಗುಲದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಆಯೋಜಕ ಪ್ರಕಾಶ್‌ ಎಂಬುವವರ ವಿರುದ್ಧ ‍ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ … Read more

‘ನಮ್ಮಪ್ಪ ಸೈಕಲ್‌ ಕೊಟ್ಟಿದ್ದಾರೆ ಎಂದೇ ಮೊದಲ ಚುನಾವಣೆಯ ಪ್ರಚಾರ ಮಾಡಿದ್ದರುʼ, ಬಿಜೆಪಿಗೆ ಬೇಳೂರು ತಿರುಗೇಟು

Sagara-Beluru-Gopalakrishna-press-meet

SHIVAMOGGA LIVE NEWS | 15 APRIL 2024 SAGARA : ಮೊದಲ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಬಿ.ವೈ.ರಾಘವೇಂದ್ರಗು ಸ್ವಸಾಮರ್ಥ್ಯ ಇರಲಿಲ್ಲ. ನಮ್ಮಪ್ಪ ಸೈಕಲ್‌ ಕೊಟ್ಟಿದ್ದಾರೆ ಎಂದುಕೊಂಡೇ ಪ್ರಚಾರ ನಡೆಸಿದ್ದರು ಎಂದು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದರು. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರ ಕುರಿತು ಬಿಜೆಪಿ ನಾಯಕ ಟೀಕೆಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಸಮರ್ಥರಿದ್ದಾರೆ. … Read more

ತ್ಯಾಗರ್ತಿ ಸಮೀಪ ಬೆಳಗೆದ್ದು ಜಮೀನಿಗೆ ತೆರಳಿದ್ದ ರೈತನಿಗೆ ಕಾದಿತ್ತು ಆಘಾತ

tyagarthi sagara graphics

SHIVAMOGGA LIVE NEWS | 15 APRIL 2024 SAGARA : ಜಮೀನಿನಲ್ಲಿ ಇಟ್ಟಿದ್ದ ಸುಮಾರು 20 ಕ್ವಿಂಟಾಲ್‌ ಬೀಜದ ಶುಂಠಿ ಕಳ್ಳತನವಾಗಿದೆ. ಸಾಗರ ತಾಲೂಕು ತ್ಯಾಗರ್ತಿ ಸಮೀಪದ ಮತ್ತಿಕೆರೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸತ್ಯನಾರಾಯಣ ಎಂಬುವವರು ತಮ್ಮ ಜಮೀನಲ್ಲಿ ಸುಮಾರು 20 ಕ್ವಿಂಟಾಲ್‌ ಬೀಜದ ಶುಂಠಿ ಇಟ್ಟಿದ್ದರು. ಏ.13ರಂದು ಬೆಳಗ್ಗೆ ಜಮೀನಿಗೆ ತೆರಳಿದ್ದಾಗ ಶುಂಠಿ ಕಳ್ಳತನವಾಗಿತ್ತು. ಘಟನೆ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಡಿಲಿಗೆ ಎರಡು ದನಗಳು ಸಾವು

ಮಳೆ ಬಳಿಕ ಶಿವಮೊಗ್ಗದಲ್ಲಿ ಸ್ಕಿಡ್‌ ಆದ ಬೈಕ್‌ಗಳು, ಆನಂದಪುರ ಸುತ್ತಮುತ್ತ ಮರ, ಕಂಬಗಳ ಬುಡಮೇಲು

vehicles-skid-at-kuvempu-road-in-Shimoga

SHIVAMOGGA LIVE NEWS | 12 APRIL 2024 SHIMOGA : ನಗರದ ವಿವಿಧೆಡೆ ಗುರುವಾರ ಮಳೆಯಾಗಿದೆ. ಮಳೆ ನಂತರ ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಸಮೀಪ, ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗಿ ಬಿದ್ದವು. ಸುಮಾರು 15 ವಾಹನಗಳು ಸ್ಕಿಡ್‌ ಆಗಿ ಬಿದ್ದು, ಸವಾರರಿಗೆ ಸಣ್ಣಪುಟ್ಟ ಗಾಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಬ್ಯಾರಿಕೇಡ್‌ ಹಾಕಿ ದ್ವಿಚಕ್ರ ವಾಹನ ಸವಾರರಿಗೆ ನಿಧಾನವಾಗಿ … Read more

ಜಿಂಕೆ ಬೇಟೆಯಾಡಿದ್ದ ಮೂವರು ಬಂದೂಕು ಸಹಿತ ಅರೆಸ್ಟ್‌, ಸಿಕ್ಕಿಬಿದ್ದಿದ್ದು ಹೇಗೆ?

hunters-arrest-by-forest-officials.

SHIVAMOGGA LIVE NEWS | 5 APRIL 2024 SAGARA : ಶರಾವತಿ ಸಿಂಘಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆಯಾಡಿದ ಆರೋಪದ ಮೇಲೆ ಮೂವರನ್ನು ಕಾರ್ಗಲ್‌ ವನ್ಯಜೀವಿ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬಾಳೆಕೊಪ್ಪದ ಸತೀಶ್‌ (39), ಯಡೆಹಳ್ಳಿ ಟಿ.ನಾಗರಾಜ (23) ಮತ್ತು ಪ್ರಜ್ವಲ್‌ (23) ಬಂಧಿತರು. ಅಂಬಾರಗೋಡ್ಲು ಗ್ರಾಮದ ಶರಾವತಿ ಹಿನ್ನೀರಿನ ಅಂಚಿನಲ್ಲಿ ನಾಡ ಬಂದೂಕಿನಿಂದ ಜಿಂಕೆ ಬೇಟೆಯಾಡಿ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಜಿಂಕೆ ಚರ್ಮ, ತಲೆ, ಬಂದೂಕು ವಶಕ್ಕೆ … Read more

ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಒಂದೂವರೆ ಮರ್ಷದ ಮಗು ಸಾವು

sagara graphics

SHIVAMOGGA LIVE NEWS | 1 APRIL 2024 SAGARA : ಮನೆಯಲ್ಲಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಸಾಗರ ಪಟ್ಟಣದ ಜೋಸೆಫ್ ನಗರ ಬಡಾವಣೆಯಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಮೆಕ್ಯಾನಿಕ್ ಆಸಿಫ್ ಅವರ ಪುತ್ರಿ ಆನಮ್ ಫಾತಿಮಾ ಮೃತ ಮಗು. ಮಧ್ಯಾಹ್ನದ ವೇಳೆ ಮನೆಯವರು ನಿದ್ರಿಸುತ್ತಿದ್ದ ವೇಳೆ ಆಟವಾಡುತ್ತಿದ್ದ ಮಗು ಆಯ ತಪ್ಪಿ ನೀರು ತುಂಬಿದ್ದ ಬಕೆಟ್‌ನೊಳಗೆ ಬಿದ್ದು ಉಸಿರುಗಟ್ಟಿ ಸಾವು ಸಂಭವಿಸಿದೆ ಎನ್ನಲಾಗಿದೆ. ಅಸ್ವಸ್ಥಗೊಂಡಿದ್ದ ಮಗುವನ್ನು ಕೂಡಲೇ ಚಿಕಿತ್ಸೆಗಾಗಿ … Read more

ಜಾತ್ರೆಯಲ್ಲಿ ಪೊಲೀಸ್‌ ಸಿಬ್ಬಂದಿ ಕೊರಳ ಪಟ್ಟಿ ಹಿಡಿದು, ಕಪಾಳಕ್ಕೆ ಹೊಡೆದ ಯುವಕರು

youths-attack-police-at-gauthampura-in-sagara.

SHIVAMOGGA LIVE NEWS | 31 MARCH 2024 SAGARA : ಮಾರಿಕಾಂಬಾ ಜಾತ್ರೆ ವೇಳೆ ಪೊಲೀಸ್‌ ಸಿಬ್ಬಂದಿಯೊಬ್ಬರ ಕೊರಳು ಪಟ್ಟಿ ಹಿಡಿದು, ಕಪಾಳಮೋಕ್ಷ ಮಾಡಲಾಗಿದೆ. ಘಟನೆ ಸಂಬಂಧ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಗೌತಮಪುರದಲ್ಲಿ ನಡೆದ ಜಾತ್ರೆ ವೇಳೆ ಗಲಾಟೆಯಾಗುತ್ತಿದ್ದು ಬಿಡಿಸಲು ಹೋದ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆ ಸಂಬಂಧ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಪೊಲೀಸ್‌ ಸಿಬ್ಬಂದಿಯ ಯುನಿಫಾರಂನ ಕೊರಳು ಪಟ್ಟಿ ಹಿಡಿದು, ಕಪಾಳಮೋಕ್ಷ ಮಾಡುವ ವಿಡಿಯೋ ಚಿತ್ರೀಕರಿಸಲಾಗಿದೆ. ಆನಂದಪುರ … Read more