ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿ ಅಪಮಾನ, ಭಕ್ತರ ಆಕ್ರೋಶ, ಏನಿದು ಪ್ರಕರಣ?

-Protest-against-disrespect-to-utsava-murthy-in-nanjanagud

SHIVAMOGGA LIVE NEWS | 3 JANUARY 2023 SAGARA : ಮೈಸೂರಿನ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ‘ಡಿ.26ರಂದು ಮಾರ್ಗಶಿರ ಹುಣ್ಣಿಮೆಯಂದು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಅಂಧಕಾಸುರನ ಸಂಹಾರ ಧಾರ್ಮಿಕ ಕಾರ್ಯಕ್ರಮ ನೆರೆವೇರಿಸಲಾಗುತ್ತಿತ್ತು. ಈ ಸಂದರ್ಭ ಕೆಲವು ದುಷ್ಕರ್ಮಿಗಳು ಉತ್ಸವ … Read more

ಕಾನೂನು ಇದ್ದರೂ ವ್ಯಾಪಾರಿಗಳು ಪಾಲಿಸುತ್ತಿಲ್ಲ, ಅಧಿಕಾರಿಗಳು ಪ್ರಶ್ನಿಸುತ್ತಿಲ್ಲ, ಸಾಗರದಲ್ಲಿ ಆಕ್ರೋಶ

Karnataka-Rakshana-Vedike-Protest-in-Sagara

SHIVAMOGGA LIVE NEWS | 3 JANUARY 2023 SAGARA : ಅನ್ಯಭಾಷೆ ನಾಮಫಲಕ ತೆರವು ಮಾಡುವಂತೆ ಹೋರಾಟ ನಡೆಸಿದ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಮತ್ತು ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನಾರ್ಹ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಕರವೇ ತಾಲೂಕು ಘಟಕದ ಅಧ್ಯಕ್ಷ ಮನೋಜ್‌ ಕುಗ್ವೆ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು. ನಾಡು, ನುಡಿ ಉಳಿವಿನ ಕುರಿತು ಯೋಚಿಸಬೇಕಿದ್ದವರು … Read more

ಜ.4ರಂದು ಕರಾಳ ದಿನ ಆಚರಣೆ, ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ

Dinesh-Shiravala-Press-meet-in-Sagara.

SHIVAMOGGA LIVE NEWS | 2 JANUARY 2023 SAGARA : ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಬೇಸತ್ತು ರೈತ ಸಂಘದ ಸಂಸ್ಥಾಪನಾ ದಿನದಂದು ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 4ರಂದು ರೈತರು ಕಪ್ಪು ಪಟ್ಟಿ ಧರಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್‌ ಶಿರವಾಳ ತಿಳಿಸಿದರು. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌ ಶಿರವಾಳ, ರೈತರು ಮತ್ತು ರೈತ ಸಂಘವನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಯಾವುದೆ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸರ್ಕಾರ, ಜನಪ್ರತಿನಿಧಿಗಳು ಮತ್ತು … Read more

ರಾತ್ರಿ ಪೊಲೀಸರಿಗೆ ಬಂತು ಫೋನ್‌, ರಸ್ತೆಗಿಳಿಯಿತು ಹೈವೇ ಪ್ಯಾಟ್ರೋಲ್‌, ವಾಹನ ತಪಾಸಣೆ ವೇಳೆ ಒಬ್ಬ ಎಸ್ಕೇಪ್‌, ನಾಲ್ವರು ವಶಕ್ಕೆ

200123 Police Jeep With Light jpg

SHIVAMOGGA LIVE NEWS | 27 DECEMBER 2023 SAGARA : ಪರವಾನಗಿ ಇಲ್ಲದೆ ಜಾನುವಾರುಗಳನ್ನು ಗೂಡ್ಸ್‌ ವಾಹನವೊಂದರಲ್ಲಿ ಸಾಗಿಸುತ್ತಿದ್ದ ಆರೋಪದ ಹಿನ್ನೆಲೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಗೂಡ್ಸ್‌ ವಾಹನ, ಅದರ ಬೆಂಗಾವಲಾಗಿ ತೆರಳುತ್ತಿದ್ದ ಕಾರು ಮತ್ತು ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಅನಾಮಧೇಯ ಫೋನ್‌ ನೀಡಿದ ಸುಳಿವು ಸಾಗರ ಗ್ರಾಮಾಂತರ ರಾತ್ರಿ ಕರೆ ಮಾಡಿದ ವ್ಯಕ್ತಿಯೊಬ್ಬ ಗೂಡ್ಸ್‌ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ. ಬೆಂಗಾವಲಿನಲ್ಲಿ ಒಂದು ಕಾರು ಚಲಿಸುತ್ತಿದೆ ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆ … Read more

ಶಿವಮೊಗ್ಗ – ಸಾಗರ ಹೆದ್ದಾರಿಯಲ್ಲಿ ಗುಂಡಿಗಳಿಂದ ಕಾದಿದೆ ಗಂಡಾಂತರ, ರಸ್ತೆ ಬಿರುಕಿನಿಂದ ಅಪಾಯ ನಿಶ್ಚಿತ

Pot-holes-in-Shimoga-Sagara-road.

SHIVAMOGGA LIVE NEWS | 25 DECEMBER 2023 SAGARA : ಶಿವಮೊಗ್ಗ – ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಗುಂಡಿಗಳು ಬಾಯ್ತೆರೆದಿವೆ. ಸ್ವಲ್ಪ ಯಾಮಾರಿದರು ವಾಹನ ಸವಾರರಿಗೆ ಪ್ರಾಣಾಪಾಯ ತಪ್ಪಿದ್ದಲ್ಲ. ಎಲ್ಲೆಲ್ಲಿ ಗುಂಡಿಗಳಿವೆ? ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುವವರಿಗೆ ಐಗಿನಬೈಲು ಸಮೀಪ ಸೇತುವೆ ಮೇಲೆ ಬೃಹತ್‌ ಗುಂಡಿ ಕಾಣಸಿಗುತ್ತದೆ. ಡಾಂಬರ್‌ ಕಿತ್ತು ಹೋಗಿದ್ದು ಸೇತುವೆಗೆ ಅಳವಡಿಸಿರುವ ಕಂಬಿಗಳು ಗೋಚರಿಸುತ್ತಿವೆ. ಇನ್ನು, ಆನಂದಪುರದಲ್ಲಿಯು ಹೆದ್ದಾರಿ ಮೇಲೆ ಗುಂಡಿಗಳಿವೆ. ಆಚಾಪುರ, ಗಿಳಾಲಗುಂಡಿ, ಕೋಣೆ ಹೊಸೂರು, ಸನ್ನಿವಾಸದ ಬಳಿ ಹೆದ್ದಾರಿಯಲ್ಲಿ … Read more

ಲಾರಿ ಅಡಿ ಸಿಲುಕಿ ಬೈಕ್‌ನ ಮುಂಭಾಗ ಪೀಸ್‌ ಪೀಸ್‌, ಹೇಗಾಯ್ತು ಅಪಘಾತ?

Bike-Mishap-near-Anandapura-in-sagara

SHIVAMOGGA LIVE NEWS | 25 DECEMBER 2023 ANANDAPURA : ರಿವರ್ಸ್‌ ಬರುತ್ತಿದ್ದ ಲಾರಿಗೆ ಸಿಲುಕಿ ಬೈಕ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾಗರ ತಾಲೂಕು ಆನಂದಪುರ ಸಮೀಪದ ಮಲ್ಲಂದೂರಿನಲ್ಲಿ ಘಟನೆ ಸಂಭವಿಸಿದೆ. ಶಿಕಾರಿಪುರ ಕಡೆಯಿಂದ ಬರುತ್ತಿದ್ದ ಬೈಕ್‌ ರಿವರ್ಸ್‌ ತೆಗೆಯುತ್ತಿದ್ದ ಲಾರಿಯನ್ನು ದಾಟಿ ಹೋಗಲು ಯತ್ನಿಸಿದೆ. ಈ ಹೊತ್ತಿಗೆ ಎದುರಿನಿಂದ ಮತ್ತೊಂದು ವಾಹನ ಬಂದಿದೆ. ಅದಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಸವಾರ ಬೈಕಿನಿಂದ ಕೆಳಗೆ ಹಾರಿದ್ದಾನೆ. ಆದರೆ ಬೈಕ್‌ ಮುಂದಿದ್ದ ಲಾರಿಗೆ ಡಿಕ್ಕಿ ಹೊಡೆದು … Read more

ಮುರುಘ ಮಠ ಸರ್ಕಲ್‌ನಲ್ಲಿ ರಸ್ತೆ ಬದಿ ನಿಂತಿದ್ದ ಆಟೋಗೆ KSRTC ಬಸ್‌ ಡಿಕ್ಕಿ

bus-hits-auto-near-murugha-mutt-circle-in-anandapura.

SHIVAMOGGA LIVE NEWS | 20 DECEMBER 2023 ANANDAPURA : ರಸ್ತೆ ಬದಿ ನಿಂತಿದ್ದ ಗೂಡ್ಸ್‌ ಆಟೋಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಆನಂದಪುರ ಮುರುಘ ಮಠ ಸರ್ಕಲ್‌ ಬಳಿ ಘಟನೆ ಸಂಭವಿಸಿದೆ. ಮಂಗಳವಾರ ರಾತ್ರಿ ಶಿವಮೊಗ್ಗ – ಸಾಗರ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋದ ಹಿಂಬದಿ ಜಖಂ ಆಗಿದೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಅಪಘಾತದ ಹಿನ್ನೆಲೆ ಜನ ಹೆಚ್ಚಿನ ಸಂಖ್ಯೆಯಲ್ಲಿ … Read more

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

FATAFAT-NAMMURA-NEWS.webp

SHIVAMOGGA LIVE NEWS | 19 DECEMBER 2023 SHIMOGA : ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸಾಗರ ತಾಲೂಕಿನ ಸೈದೂರು ಮತ್ತು ಚನ್ನಗೊಂಡ ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ತಹಶೀಲ್ದಾರ್ ಸಾಗರ ತಾಲೂಕು ಕಚೇರಿ ಅಥವಾ ಉಪ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಬೇಕು. 2024ರ ಜನವರಿ 12ರವರ ಒಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ … Read more

ವಾಹನ ಸವಾರರೆ ಗಮನಿಸಿ, ರೈಲ್ವೆ ಗೇಟ್‌ ತಾಂತ್ರಿಕ ಪರಿಶೀಲನೆ, ಡಿ.25ರಂದು ವಾಹನಗಳಿಗೆ ಪರ್ಯಾಯ ಮಾರ್ಗ

railway-track-general-image.webp

SHIVAMOGGA LIVE NEWS | 19 DECEMBER 2023 SHIMOGA : ಕುಂಸಿ – ಆನಂದಪುರ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಡಿ.25 ರಿಂದ 26 ರವರೆಗೆ ರೈಲ್ವೆ ಗೇಟ್ ಮುಚ್ಚಲಾಗುತ್ತೆ. ಹಾಗಾಗಿ ವಾಹನಗಳಿಗೆ ಪಯಾರ್ಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಆದೇಶಿಸಿದ್ದಾರೆ. ಯಾವ್ಯಾವ ಮಾರ್ಗದಲ್ಲಿ ವಾಹನ ಸಂಚಾರ? ರಿಪ್ಪನ್‍ಪೇಟೆಯಿಂದ ಆಯನೂರು ಮತ್ತು ಆಯನೂರಿನಿಂದ ರಿಪ್ಪನ್‍ಪೇಟೆಗೆ ಸಂಚರಿಸುವ ಲಘು ವಾಹನಗಳು ರೈಲ್ವೆ ಲೆವೆಲ್ ಕ್ರಾಸ್ … Read more

ಸಹಕಾರಿ ಬ್ಯಾಂಕ್‌ ಬೀಗ ಒಡೆದು 1.70 ಲಕ್ಷ ರೂ. ಕಳ್ಳತನ, ದಾಖಲೆಗಳು ಚೆಲ್ಲಾಪಿಲ್ಲಿ

BYKODOU-Co-Operative-bank-theft

SHIVAMOGGA LIVE NEWS | 18 DECEMBER 2023 BYKODU : ಸಹಕಾರಿ ಬ್ಯಾಂಕ್‌ನ ಬೀಗ ಒಡೆದು 1.70 ಲಕ್ಷ ರೂ. ನಗದು ಕಳ್ಳತನ ಮಾಡಲಾಗಿದೆ. ಬ್ಯಾಕೋಡು ಸಮೀಪದ ಸಸಿಗೊಳ್ಳಿಯ ನಾರಾಯಣ ಗುರು ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಭಾನುವಾರ ರಾತ್ರಿ ಘಟನೆ ಸಂಭವಿಸಿರುವ ಶಂಕೆ ಇದೆ. ಕಳ್ಳರು ಬ್ಯಾಂಕಿನಲ್ಲಿದ್ದ ದಾಖಲಾತಿ ಚಲ್ಲಾಪಿಲ್ಲಿ ಮಾಡಿದ್ದಾರೆ. ಸೋಮವಾರ ಸಿಬ್ಬಂದಿ ಆಗಮಿಸಿದಾಗ ಬ್ಯಾಂಕ್‌ನಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಾರ್ಗಲ್ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಪರಿಶೀಲಿಸಿದರು. ಬ್ಯಾಕೋಡು ಭಾಗದಲ್ಲಿ ಕಳ್ಳತನ ಪ್ರಕರಣಗಳು … Read more