ಸಾಗರ ತಾಲೂಕಿಗೆ ಮತ್ತೆರಡು ಪೊಲೀಸ್‌ ಠಾಣೆ ಬೇಕು, ಗೃಹ ಸಚಿವರಿಗೆ ಎಂಎಲ್‌ಎ ಮನವಿ

MLA-Beluru-Gopalakrishna-Meets-Home-Minister-G-Parameshwara - Requests for police station

ಸಾಗರ: ಪಟ್ಟಣಕ್ಕೆ ನೂತನ ಟ್ರಾಫಿಕ್‌ ಪೊಲೀಸ್‌ ಠಾಣೆ (Police Station) ಮತ್ತು ತುಮರಿ – ಬ್ಯಾಕೋಡು ಭಾಗಕ್ಕೆ ನೂತನ ಪೊಲೀಸ್‌ ಠಾಣೆ ಮಂಜೂರು ಮಾಡುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಾಗರ ಪಟ್ಟಣ ಬೆಳೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನು, ಅನೇಕ ಪ್ರವಾಸಿ ತಾಣಗಳಿದ್ದು ಪ್ರವಾಸಿ ವಾಹನಗಳ ದಟ್ಟಣೆಯು ಹೆಚ್ಚಿರುತ್ತದೆ. ಸಿಗಂದೂರಿಗೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣ ಮತ್ತು … Read more

ಆನಂದಪುರದಲ್ಲಿ ಕಸ ವಿಲೇವಾರಿ ಘಟಕಕ್ಕೆ ಬೆಂಕಿ, ಧಗಧಗ ಹೊತ್ತಿ ಉರಿದ ಲಕ್ಷಾಂತರ ಮೌಲ್ಯದ ವಸ್ತುಗಳು

161025-anandapura-waste-management-unit.webp

ಆನಂದಪುರ: ಗ್ರಾಮ ಪಂಚಾಯಿತಿಯಿಂದ ಮಲಂದೂರು ಗ್ರಾಮದಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ (Waste Management) ಘಟಕಕ್ಕೆ ಬೆಂಕಿ ತಗುಲಿ ಧಗ ಧಗಿಸಿ ಉರಿದಿದೆ. ಕಳೆದ ಒಂದೂವರೆ ವರ್ಷದಲ್ಲಿ ಮೂರನೇ ಬಾರಿ ಬೆಂಕಿಗೆ ಆಹುತಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು ಒಂದೂವರೆ ಲಕ ರುಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸಾಗರದಿಂದ ಅಗ್ನಿಶಾಮಕ ದಳವನ್ನು ಕರೆಸಿ ಬೆಂಕಿ ನಂದಿಸಲಾಯಿತು. ಪ್ಲಾಸ್ಟಿಕ್ ಮತ್ತು ರಬ್ಬರ್ ಕಸಕ್ಕೆ ಬೆಂಕಿ ತಗುಲಿದ ಕಾರಣ ಬಹುದೂರದವರೆಗೆ ಹೊಗೆ ವ್ಯಾಪಿಸಿತ್ತು. ಘಟಕದ ಸುತ್ತಮುತ್ತ ವಾಸಿಸುವ ಜನರು ಹೊಗೆಯ … Read more

ಸಾಲ ಬಾಧೆ, ಸಾಗರದಲ್ಲಿ ವಿಷ ಸೇವಿಸಿದ್ದ ರೈತ, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕೊನೆಯುಸಿರು

111025-Gamappa-channasheetikoppa.webp

ಸಾಗರ: ತಾಲೂಕಿನ ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಗ್ರಾಮದ ರೈತರೊಬ್ಬರು (Farmer) ಸಾಲದ ಸಂಕಷ್ಟದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಮಪ್ಪ (56) ಎಂದು ಗುರುತಿಸಲಾಗಿದೆ. ಗಾಮಪ್ಪ, ಅಕ್ಟೋಬರ್ 9 ರಂದು ಸಂಜೆ ವಿಷ ಸೇವಿಸಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರೈತ ಗಾಮಪ್ಪ ಅವರು ಬ್ಯಾಂಕ್‌ಗಳು ಮತ್ತು ಖಾಸಗಿಯಾಗಿ ಕೈ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಆನಂದಪುರ ಪೊಲೀಸ್ … Read more

ಸಾಗರದ ಇಬ್ಬರು ಯುವಕರಿಗೆ ಮೂರು ವರ್ಷ ಜೈಲು ಶಿಕ್ಷೆ, ₹25,000 ದಂಡ, ಯಾಕೆ?

crime name image

ಶಿವಮೊಗ್ಗ: ಗಾಂಜಾ ಸಹಿತ ಪೊಲೀಸರಿಗೆ ಸಿಕ್ಕಿಬಿದಿದ್ದವರಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ನಾಯಕ ಮೂರು ವರ್ಷ ಕಠಿಣ ಕಾರಾವಾಸ ಶಿಕ್ಷೆ (Jail) ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಾಗರ ನಿವಾಸಿಗಳಾದ ಇಮ್ರಾನ್ ಖಾನ್ (25), ಇಮ್ಮಿಯಾಜ್ (28) ಎಂಬುವವರಿಗೆ ತಲಾ ಮೂರು ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸಾಗರದ ಬಿ.ಹೆಚ್‌.ರಸ್ತೆಯ ಸದ್ಗುರು ಲೇಔಟ್ ಸಮೀಪ ಗಾಂಜಾ … Read more

ಕಾರ್ಗಲ್‌ ಪವರ್‌ ಚಾನಲ್‌ ಬಳಿ ನಾಪತ್ತೆಯಾಗಿದ್ದ ವ್ಯಕ್ತಿ, ತಳಕಳಲೆ ಡ್ಯಾಂ ಹಿನ್ನೀರಿನಲ್ಲಿ ಶವವಾಗಿ ಪತ್ತೆ

111025-Kargal-Power-Channel-Linganamakki-dam.webp

ಕಾರ್ಗಲ್: ಇಲ್ಲಿಗೆ ಸಮೀಪದ ಕಣೇಕಾರು ಮಜಿರೆ ಗ್ರಾಮದ ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಮೃತದೇಹ ಪತ್ತೆಯಾಗಿದೆ (Succumbed). ಎ.ಚಂದ್ರಶೇಖರ (28) ಮೃತರು. ಚಾಲಕ ವೃತ್ತಿ ಮಾಡುತ್ತಿದ್ದ ಇವರು, ಮೂರು ದಿನಗಳ ಹಿಂದೆ ಕಾರ್ಗಲ್ ಕೆಪಿಸಿ ಪವರ್ ಚಾನಲ್ ಬಳಿ ಬೈಕ್ ಬಿಟ್ಟು ಕಾಣೆಯಾಗಿದ್ದರು. ತಳಕಳಲೆ ಜಲಾಶಯದ ಹಿನ್ನೀರಿನಲ್ಲಿ ಶವ ಪತ್ತೆಯಾಗಿದೆ. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ನಾಗರಾಜ್, ಸಿಬ್ಬಂದಿ ಅಣ್ಣಪ್ಪ, ಜಯೇಂದ್ರ, ಪುರುಷೋತ್ತಮ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. … Read more

ಸಾಗರ, ಆನಂದಪುರ ಸುತ್ತಮುತ್ತ ಇವತ್ತು ಕರೆಂಟ್‌ ಇರಲ್ಲ, ಎಲ್ಲೆಲಿ? ಇಲ್ಲಿದೆ ಡಿಟೇಲ್ಸ್‌

Sagara-News-Update.

ಸಾಗರ: ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಅ.11ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸಾಗರ ಪಟ್ಟಣ, ಅವಿನಹಳ್ಳಿ, ಹೆಗ್ಗೋಡು, ಭೀಮನಕೋಣೆ, ಯಡಜಿಗಳಮನೆ, ಕಲ್ಮನೆ, ಮಾಲ್ವೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ (Power cut) ವ್ಯತ್ಯಯವಾಗಲಿದೆ. ಆನಂದಪುರದಲ್ಲು ವಿದ್ಯುತ್‌ ವ್ಯತ್ಯಯ ಆನಂದಪುರಂ: ಇಲ್ಲಿನ ಮೆಸ್ಕಾಂ ವಿಭಾಗ ವ್ಯಾಪ್ತಿಯ 11 ಕೆವಿ ಮಾರ್ಗ ಮುಕ್ತತೆ ಪಡೆಯಲು ವಿವಿಧ ಗ್ರಾಮಗಳಲ್ಲಿ ಅ.11ರಂದು ಬೆಳಗ್ಗೆ 10ರಿಂದ ಸಂಜೆ … Read more

ಸಾಗರದಲ್ಲಿ ಅಖಾಡ ರೆಡಿ, ಇಂದಿನಿಂದ ಪಟ್ಟು ಹಾಕಲಿದ್ದಾರೆ ರಾಷ್ಟ್ರಮಟ್ಟದ ಪೈಲ್ವಾನರು

National-Level-Kusti-in-sagara.

ಸಾಗರ: ಸಾಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಅ.1 ಮತ್ತು 2ರಂದು ರಾಷ್ಟ್ರ ಮಟ್ಟದ ದಸರಾ ಕುಸ್ತಿ (Kushti) ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಗಾಂಧಿನಗರ ಯುವಜನ ಸಂಘದ ಅಧ್ಯಕ್ಷ ಸಂತೋಷ್ ಹೇಳಿದರು. ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಬಂಗಾರದ ಬೆಡಗು ಶೀರ್ಷಿಕೆಯಡಿ ಎರಡು ದಿನಗಳ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಕಳೆದ 49 ವರ್ಷಗಳಿಂದ ಗಾಂಧಿನಗರ ಯುವಜನ ಸಂಘ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಂಘವು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಂಡಿದೆ … Read more

ಸಿಗಂದೂರು ರಸ್ತೆಯಲ್ಲಿ ಟಿಟಿ ಪಲ್ಟಿ, ಬೆಂಗಳೂರಿನ ಮಹಿಳೆಯರಿಗೆ ಗಾಯ, ಆಸ್ಪತ್ರೆಗೆ MLA ದೌಡು

280925-Tempo-Traveller-Incident-at-Sigandur-road-near-Kuranakoppa.webp

ಸಾಗರ: ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಟ್ರಾವಲರ್‌ ವಾಹನ ಪಲ್ಟಿಯಾಗಿ ಸಿಗಂದೂರು (Sigandur) ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕೂರನಕೊಪ್ಪ ಸಮೀಪ ಇಂದು ಬೆಳಗ್ಗೆ ಅಪಘಾತವಾಗಿದೆ. ಬೆಂಗಳೂರಿನಿಂದ ಆಗಮಿಸಿದ್ದ 12 ಮಹಿಳೆಯರು ಟಿಟಿ ವಾಹನದಲ್ಲಿ ಸಿಗಂದೂರು ದೇವಿ ದರ್ಶನಕ್ಕೆ ತೆರಳುತ್ತಿದ್ದರು. ಕೂರನಕೊಪ್ಪ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ರಸ್ತೆ ಬದಿಗೆ ಪಲ್ಟಿಯಾಗಿದೆ. ಗಾಯಾಳುಗಳನ್ನು ಕೂಡಲೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇನ್ನು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಮೂವರು ಮಹಿಳೆಯರನ್ನು ಶಿವಮೊಗ್ಗದ … Read more

ಸಾಗರದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪಿಕಪ್‌ ವಾಹನ, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಸಾಗರ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬೊಲೇರೋ ಪಿಕಪ್‌ ವಾಹನ ಡಿಕ್ಕಿ (Collision) ಹೊಡೆದು ಪಲ್ಟಿಯಾಗಿದೆ. ಸಾಗರ ತಾಲೂಕು ಯಳವರಸೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯವಾಗಿಲ್ಲ. ಬರೂರಿನ ವೀರಭದ್ರಪ್ಪ ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಕಾರಿನಲ್ಲಿ ಕುಗ್ವೆ ಗ್ರಾಮಕ್ಕೆ ತೆರಳುತ್ತಿದ್ದರು. ಯಳವರಸೆ ಬಳಿ ಎದುರಿನಿಂದ ಬಂದ ಬೊಲೇರೋ ಪಿಕಪ್‌ ವಾಹನ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಹಿಂದೆ ಬರುತ್ತಿದ್ದ … Read more

ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಆರಂಭ, ಏನೆಲ್ಲ ಕಾರ್ಯಕ್ರಮ ಇರಲಿದೆ?

Siganduru-Temple-Sagara

ಸಾಗರ: ಸಿಗಂದೂರು ಚೌಡೇಶ್ವರಿ (sigandur temple) ದೇವಸ್ಥಾನದಲ್ಲಿ ಸೆ.22ರಿಂದ ಅ.2ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಏನೆಲ್ಲ ಕಾರ್ಯಕ್ರಮ ಇರಲಿದೆ? ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿ ದಿನ ದೇವಿಗೆ ಪ್ರಾತಃಕಾಲದಲ್ಲಿ ಪೂಜೆ, ತೈಲಾಭಿಷೇಕ, ಶೈಲಪುತ್ರಿ ಆರಾಧನೆ, ಶುದ್ದಿ ಪುಣ್ಯಾಹ, ಗಣಹೋಮ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅಲಂಕಾರ ಪೂಜೆ ನೆಡೆಯಲಿದೆ. ನವರಾತ್ರಿ ಪ್ರಯುಕ್ತ ದೇವಿಗೆ ನಿತ್ಯ ದುರ್ಗಾಹವನ, ಚಂಡಿಕಾ ಹೋಮ, ನವಚಂಡಿಕಾ ಹೋಮ, ಗುರುಗಳ ಆರಾಧನೆ ನೆಡೆಯಲಿದೆ. ಮಧ್ಯಾಹ್ನ 12.30ಕ್ಕೆ ನೈವೇದ್ಯ, … Read more