ಕಣದಲ್ಲಿ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆ ರಾತ್ರೋರಾತ್ರಿ ನಾಪತ್ತೆ

Areca-Nuts-General-Image

SHIVAMOGGA LIVE NEWS | 1 ಮಾರ್ಚ್ 2022 ಮನೆಯ ಕಣದಲ್ಲಿ ಒಣಗಿಸಲು ಹಾಕಿದ್ದ ಅಡಕೆ ರಾತ್ರೋರಾತ್ರಿ ನಾಪತ್ತೆ ಆಗಿದೆ. 1.50 ಲಕ್ಷ ಮೌಲ್ಯದ ಅಡಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಯಲಗಳಲೆ ಗ್ರಾಮದ ನಾಗರಾಜ ಎಂಬುವವರಿಗೆ ಸೇರಿದ ಅಡಕೆ ಕಳ್ಳತನವಾಗಿದೆ. ತಮ್ಮ ತೋಟದಲ್ಲಿ ಬೆಳೆದ ಸಿಪ್ಪೆಗೋಟು ಅಡಕೆಯನ್ನು ಅವರು ಮನೆ ಹಿಂಭಾಗದ ಕಣದಲ್ಲಿ ಒಣಗಿಸಿದ್ದರು. ಕಳೆದ ಶುಕ್ರವಾರ ಸಂಜೆ ಒಣಗಿಸಿದ್ದ ಅಡಕೆಯನ್ನ ನಾಗರಾಜ ಅವರು ನೋಡಿಕೊಂಡು ಬಂದಿದ್ದರು. ಅದನ್ನು ಸರಿ ಮಾಡಿಟ್ಟು ಬಂದಿದ್ದರು. … Read more

ಆನಂದಪುರ ಸಮೀಪ ಅರಣ್ಯ ಸಂಚಾರಿ ದಳ ದಾಳಿ, ಎರಡು ಚೀಲ ಹಿಡಿದಿದ್ದವನು ಅರೆಸ್ಟ್

Forest-Mobile-Police-Raid-Near-Anandapuram

SHIVAMOGGA LIVE NEWS | 28 ಫೆಬ್ರವರಿ 2022 ಕೃಷ್ಣ ಮೃಗದ ಚರ್ಮಗಳನ್ನು ಮಾರಾಟ ಮಾಡಲು ಬಂದಿದ್ದವರ ಮೇಲೆ ಅರಣ್ಯ ಸಂಚಾರಿ ದಳ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ಕೃಷ್ಣ ಮೃಗಗಳ ಎರಡು ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ. ಶಿಕಾರಿಪುರ ತಾಲೂಕು ಚಿಕ್ಕಮರಡಿ ತಾಂಡಾದ ಡಿಕ್ಯಾನಾಯ್ಕ (35) ಬಂಧಿತ. ಆನಂದಪುರ ಸಮೀಪದ ದಾಸಕೊಪ್ಪ ಬಸ್ ನಿಲ್ದಾಣದ ಬಳಿ ದಾಳಿ ನಡೆಸಲಾಗಿದೆ. ಹೇಗಾಯ್ತು ಘಟನೆ? ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಾಳ ಪೊಲೀಸರು ದಾಸಕೊಪ್ಪ ಬಸ್ … Read more

ತಾಳಗುಪ್ಪ – ಬೆಂಗಳೂರು ರೈಲು ಕೆಲ ದಿನ ಅರಸೀಕೆರೆ ವರೆಗೆ ಮಾತ್ರ ಸಂಚಾರ

Train engine and boggies

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ತಾಳಗುಪ್ಪ – ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಅರಸೀಕೆರೆವರೆಗೆ ಸೀಮಿತಗೊಳಿಸಿ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಫೆ.16 ರಿಂದ ಫೆ.25ರವರೆಗೆ ತಾಳಗುಪ್ಪದಿಂದ ಹೊರಡುವ ರೈಲು ಅರಸೀಕೆರೆವರೆಗೆ ಮಾತ್ರ ಸಂಚಾರ ಮಾಡಲಿದೆ. ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 5.15ಕ್ಕೆ ಹೊರಡಲಿದೆ. ರೈಲು ಸಾಗರಕ್ಕೆ ರೈಲ್ವೆ ನಿಲ್ದಾಣಕ್ಕೆ 5.30ಕ್ಕೆ ತಲುಪುತ್ತದೆ. ಬೆಳಗ್ಗೆ 7 ಗಂಟೆಗೆ ಶಿವಮೊಗ್ಗಕ್ಕೆ ಬರಲಿದೆ. ಭದ್ರಾವತಿಗೆ 7.25ಕ್ಕೆ ತಲುಪುತ್ತದೆ. ಬೆಳಗ್ಗೆ 8.55ಕ್ಕೆ ಅರಸೀಕೆರೆ … Read more

ಗೋವಾ ಪ್ರವಾಸ ಕ್ಯಾನ್ಸಲ್, ಧರ್ಮಸ್ಥಳದತ್ತ ಬೇಳೂರು, ವಿಡಿಯೋ ಬಿಡುಗಡೆ

Beluru-Gopalakrishna-General-Image

ಶಿವಮೊಗ್ಗದ ಲೈವ್.ಕಾಂ | SAGARA NEWS | 11 ಫೆಬ್ರವರಿ 2022 ಗೋವಾದಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗುವ ಬದಲು ಫೆಬ್ರವರಿ 12ರಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ತೆರಳುವುದಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಪ್ರಕಟಣೆ ಬಿಡುಗಡೆ ಮಾಡಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಫೆ.12ರಂದು ಮಧ್ಯಾಹ್ನ 12 ಗಂಟೆಗೆ ಧರ್ಮಸ್ಥಳಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಗೋವಾ ಪ್ರವಾಸ ರದ್ದು ಮರಳು ದಂಧೆ ಮಾಡುವವರಿಂದ ಶಾಸಕ ಹರತಾಳು ಹಾಲಪ್ಪ ಅವರು … Read more

ಪ್ರತಿಭಟನೆ ವೇಳೆ ದಿಢೀರ್ ವಿಷ ಕುಡಿದ ಮಹಿಳೆ

woman taken to sagara hospital

ಶಿವಮೊಗ್ಗದ ಲೈವ್.ಕಾಂ | SAGARA NEWS | 11 ಫೆಬ್ರವರಿ 2022 ಪ್ರತಿಭಟನೆ ವೇಳೆ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಕುಂತಲಾ ಎಂಬುವವರು ಪ್ರತಿಭಟನೆ ವೇಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಕ್ಕಪಕ್ಕದಲ್ಲಿದ್ದವರು ಕೂಡಲೆ ಅವರನ್ನು ತಡದಿದ್ದಾರೆ. ಆದರೂ ಸ್ವಲ್ಪ ಪ್ರಮಾಣದ ಕ್ರಿಮಿನಾಶಕ ಸೇವಿಸಿದ್ದು, ಆಸ್ವಸ್ಥರಾಗಿದ್ದಾರೆ. ಶಕುಂತಲಾ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ … Read more

‘ಸಿಗಂದೂರು 108’ ಮತ್ತೆ ನಾಪತ್ತೆ, ನಿರ್ಲಕ್ಷ್ಯಕ್ಕೆ ಮಗು ಬಲಿ, ಇನ್ನೆಷ್ಟು ಜನರ ಸಾವಿಗೆ ಕಾಯುತ್ತಿದೆ ಆಡಳಿತ?

Tumari Ambulance in Near Sigandur

ಶಿವಮೊಗ್ಗದ ಲೈವ್.ಕಾಂ | SAGARA NEWS | 10 ಫೆಬ್ರವರಿ 2022 108 ಆಂಬುಲೆನ್ಸ್ ಇಲ್ಲದೆ ತುಮರಿ ಭಾಗದಲ್ಲಿ ಮತ್ತೊಂದು ಹಸುಗೂಸು ಸಾವನ್ನಪ್ಪಿದೆ. ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಅನ್ನದಿರುವುದಕ್ಕೆ ಜನರು ಆಕ್ರೋಶಗೊಂಡಿದ್ದಾರೆ. ಸಾಗರ ತಾಲೂಕು ಶರಾವತಿ ಕಣಿವೆಯ ಸಸಿಗೊಳ್ಳಿ ಎಲ್ದಮಕ್ಕಿ ಗ್ರಾಮದ ಉಮೇಶ್ ಮತ್ತು ಗೀತಾ ದಂಪತಿಯ ಮಗು ಸಾವನ್ನಪ್ಪಿದೆ. 45 ದಿನದ ಶಿಶುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಸಿಗದೆ ಮಗು ಮೃತಪಟ್ಟಿದೆ. ಎರಡು … Read more

ಸಾಗರದಲ್ಲಿ ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲು ನಿಲುಗಡೆ ಸಮಯ ಹೆಚ್ಚಳ

Sagara Train General Image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 9 ಫೆಬ್ರವರಿ 2022 ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಮೈಸೂರು – ತಾಳಗುಪ್ಪ ರೈಲು ನಿಲುಗಡೆ ಸಮಯವನ್ನು ಹೆಚ್ಚಳ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆರು ತಿಂಗಳ ಅವಧಿಗೆ ಪ್ರಯೋಗಿಕವಾಗಿ ನಿಲುಗಡೆ ಸಮಯವನ್ನು ಐದು ನಿಮಿಷಕ್ಕೆ ಹೆಚ್ಚಳ ಮಾಡಲಾಗಿದೆ. ಫೆಬ್ರವರಿ 10ರಿಂದ ರಿಂದ ಆಗಸ್ಟ್ 9ರವರೆಗೆ ಆರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ನಿಲುಗಡೆ ಸಮಯ ಹೆಚ್ಚಳ ಮಾಡಲಾಗಿದೆ. ಪಾರ್ಸಲ್ ಲೋಡಿಂಗ್ ಅನ್ನು ಹೆಚ್ಚಿಸಲು … Read more

ಸಾಗರ ಶಾಸಕರ ಎದುರಲ್ಲೇ ಯುವಕನಿಗೆ ಹಿಗ್ಗಾಮುಗ್ಗ ಥಳಿತ, ವಿಡಿಯೋ ವೈರಲ್

Youth-Assaulted-in-front-of-Sagara-MLA

ಶಿವಮೊಗ್ಗದ ಲೈವ್.ಕಾಂ | SHIMOGA NEWS | 8 ಫೆಬ್ರವರಿ 2022 ಹಿಜಾಬ್, ಕೇಸರಿ ಶಾಲು ಸಂಘರ್ಷ ಸಾಗರದಲ್ಲೂ ತಾರಕಕ್ಕೇರಿದೆ. ಶಾಸಕ ಹರತಾಳು ಹಾಲಪ್ಪ ಅವರ ಎದುರಲ್ಲೇ ವಿದ್ಯಾರ್ಥಿಗಳು ಯುವಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಘಟನೆ ಸಂಭವಿಸಿದೆ. ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ, ವಿದ್ಯಾರ್ಥಿಗಳು ಉಪ ವಿಭಾಗಾಧಿಕಾರಿ ಕಚೇರಿ ಬಳಿಗೆ ಬಂದಿದ್ದರು. ಈ ಸಂದರ್ಭ ಯುವಕರ ಗುಂಪು, ಓರ್ವ ಯುವಕನಿಗೆ ಥಳಿಸಿದ್ದಾರೆ. ಈ ವೇಳೆ … Read more

ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಹಾರಿ ಬಿದ್ದ ವಿದ್ಯಾರ್ಥಿ, ವಿಡಿಯೋ ವೈರಲ್

Kargal-Student-Falls-From-Bus-CCTV-Footage

ಶಿವಮೊಗ್ಗದ ಲೈವ್.ಕಾಂ | KARGAL NEWS | 4 ಫೆಬ್ರವರಿ 2022 ಚಲಿಸುತ್ತಿದ್ದ ಬಸ್ ಹತ್ತುವ ಪ್ರಯತ್ನದಲ್ಲಿ ವಿದ್ಯಾರ್ಥಿಯೊಬ್ಬ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ. ಕಾರ್ಗಲ್ ಮುಖ್ಯ ಪೇಟೆಯಲ್ಲಿ ಘಟನೆ ಸಂಭವಿಸಿದೆ. ಕಾರ್ಗಲ್ ಪ್ರೌಢಶಾಲೆಯ ವಿದ್ಯಾರ್ಥಿ ವೈಭವ್ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದಾತ. ಈ ದಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೇಗಾಯ್ತು ಘಟನೆ? ವೈಭವ್ ಸಮೀಪದ ಇಡುವಾಣಿಯ ಚಿಪ್ಪಲಮಕ್ಕಿಗೆ ಖಾಸಗಿ ಬಸ್ಸಿನಲ್ಲಿ ಓಡಾಡುತ್ತಾನೆ. ಸೋಮವಾರ ತರಗತಿ ಮುಗಿಸಿಕೊಂಡು ಬಸ್ ಹತ್ತಲು … Read more

ಧರ್ಮಸ್ಥಳದಲ್ಲಿ ಆಣೆ ಮಾಡಲು ದಿನಾಂಕ ನಿಗದಿಪಡಿಸಿದ ಶಾಸಕ ಹಾಲಪ್ಪ

MLA-Haratalu-Halappa

ಶಿವಮೊಗ್ಗದ ಲೈವ್.ಕಾಂ | SAGARA NEWS | 3 ಫೆಬ್ರವರಿ 2022 ಸಾಗರ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ರಾಜಕೀಯ ಜಿದ್ದಾಜಿದ್ದಿ ಈಗ ಆಣೆ ಪ್ರಮಾಣ ಹಂತಕ್ಕೆ ತಲುಪಿದೆ. ಇದಕ್ಕೆ ದಿನಾಂಕವೂ ನಿಗದಿಯಾಗಿದೆ. ಏನಿದು ಆಣೆ ಪ್ರಮಾಣ? ಮರಳು ಸಾಗಣೆ ವಿಚಾರವಾಗಿ ಮುಂಚಿನಿಂದಲೂ ಹಾಲಿ ಮತ್ತು ಮಾಜಿ ಶಾಸಕರು, ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯುತ್ತಿದೆ. ಈಗ ಇದು ಆಣೆ ಪ್ರಮಾಣದವರೆಗೆ ಬಂದು ನಿಂತಿದೆ. ಮರಳು ಸಾಗಣೆದಾರರಿಂದ ಶಾಸಕ ಹರತಾಳು ಹಾಲಪ್ಪ … Read more