ಲಾರಿ, ಮಿನಿ ವಾಹನ ಡಿಕ್ಕಿ, ಚಾಲಕನ ಪಕ್ಕ ಕುಳಿತಿದ್ದವನು ಸಾವು

291221 Kannur Lorry Mini Accident in Sagara

ಶಿವಮೊಗ್ಗದ ಲೈವ್.ಕಾಂ | SAGARA NEWS |  29 ಡಿಸೆಂಬರ್ 2021 ಲಾರಿ ಮತ್ತು ಅಶೋಕ ಲೇಲ್ಯಾಂಡ್ ಮಿನಿ ವಾಹನದ ಮದ್ಯೆ ಭೀಕರ ಅಪಘಾತ ಸಂಭವಿಸಿದೆ. ಮಿನಿ ವಾಹನದಲ್ಲಿ ಚಾಲಕನ  ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಸಾಗರ ತಾಲೂಕು ಆನಂದಪುರದ ಕಣ್ಣೂರು ಗ್ರಾಮದ ಬಳಿ ಘಟನೆ ಸಂಭವಿಸಿದೆ. ಲಾರಿ, ಮಿನಿ ವಾಹನದ ಮಧ್ಯೆ ರಾತ್ರಿ ಡಿಕ್ಕಿಯಾಗಿದೆ. ಓರ್ವ ಸಾವನ್ನಪ್ಪಿದ್ದು, ಚಾಲಕನಿಗೆ ಗಂಭೀರ ಗಾಯವಾಗಿದೆ. ಮೃತನು ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದವನು ಎಂದು ತಿಳಿದು ಬಂದಿದೆ. ಲಾರಿ ಹೊಸನಗರದಿಂದ ಶಿಕಾರಿಪುರಕ್ಕೆ … Read more

ಪೊಲೀಸ್, ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ, ಒಬ್ಬ ಅರೆಸ್ಟ್, ಪರವಾನಗಿ ಇಲ್ಲದ ಬಂದೂಕು ವಶಕ್ಕೆ

291221 Forest Department arrest sandal smuggler

ಶಿವಮೊಗ್ಗದ ಲೈವ್.ಕಾಂ | SAGARA NEWS |  29 ಡಿಸೆಂಬರ್ 2021 ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶ್ರೀಗಂಧ, ಬೀಟೆ ತುಂಡುಗಳು ಮತ್ತು ಪರವಾನಗಿ ಇಲ್ಲದ ಒಂದು ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ತಾಲೂಕಿನ ಚಿಪ್ಳಿ-ಲಿಂಗದಹಳ್ಳಿ ವ್ಯಾಪ್ತಿಯ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪುರುಷೋತ್ತಮ್ ಎಂಬುವನನ್ನು ಬಂಧಿಸಿ ಬೀಟೆ ಮತ್ತು ಶ್ರೀಗಂಧದ ತುಂಡುಗಳು ಹಾಗೂ ಪರವಾನಗಿ ಇಲ್ಲದ ಬಂದೂಕು ವಶಕ್ಕೆ … Read more

ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ, ಡಿ.27ರಂದು ಕೆಲವು ಶಾಲೆ, ಕಾಲೇಜುಗಳಿಗೆ ರಜೆ

DC Office 1

ಶಿವಮೊಗ್ಗದ ಲೈವ್.ಕಾಂ |  SHIMOGA NEWS |  23 ಡಿಸೆಂಬರ್ 2021 ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಮತದಾನ ಕೇಂದ್ರ ಇರಲಿದೆ. ಮತಗಟ್ಟೆಗಳು ಇರುವ ಶಾಲೆ, ಕಾಲೇಜುಗಳಿಗೆ ಆ ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವಧಿ ಮುಗಿದ ಗ್ರಾಮ ಪಂಚಾಯಿತಿಗಳು ಮತ್ತು ವಿವಿಧ ಕಾರಣಕ್ಕೆ ತೆರವಾಗಿರುವ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಡಿ.27ರಂದು ಉಪ ಚುನಾವಣೆ ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಮತಗಟ್ಟೆ … Read more

ತರಗತಿ ಬಹಿಷ್ಕರಿಸಿ ಸಾಗರ ಇಂದಿರಾ ಗಾಂಧಿ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

221221 Indira Gandhi College Students Protest at Sagara

ಶಿವಮೊಗ್ಗದ ಲೈವ್.ಕಾಂ | SAGARA NEWS |  22 ಡಿಸೆಂಬರ್ 2021 ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸಾಗರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಪದವಿ ಕಾಲೇಜುಗಳಲ್ಲಿ ಪೂರ್ಣಕಾಲಿಕ ಉಪನ್ಯಾಸಕರ ಕೊರತೆ ಇದೆ. ಅತಿಥಿ ಉಪನ್ಯಾಸಕರಿಂದಲೇ ಬಹುತೇಕ ಕಾಲೇಜುಗಳು ನಡೆಯುತ್ತಿದೆ. ಆದರೆ ಡಿಸೆಂಬರ್ 10ರಿಂದ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿದ್ದಾರೆ. ಇದರಿಂದ … Read more

‘ಸಿಗಂದೂರು 108 ಆಂಬುಲೆನ್ಸ್’ ಕಣ್ಮರೆ, ಹೊರಜಗತ್ತಿಗೆ ಗೊತ್ತಾಗಬೇಕಿರುವ ಐದು ಸಂಗತಿ ಇಲ್ಲಿದೆ

Tumari Ambulance in Near Sigandur

ಶಿವಮೊಗ್ಗ ಲೈವ್.ಕಾಂ | SAGARA NEWS | 17 ಡಿಸೆಂಬರ್ 2021 ಶರಾವತಿ ಹಿನ್ನೀರು ಭಾಗದ ದ್ವೀಪದ ಜನರ ಆರೋಗ್ಯದ ವಿಚಾರದಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಅದರ ಪರಿಣಾಮ ಕಳೆದ 24 ಗಂಟೆಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಆಂಬುಲೆನ್ಸ್ ಸೇವೆ ಇಲ್ಲದಿರುವುದಕ್ಕೆ ಇಬ್ಬರು ಬಲಿಯಾಗಿದ್ದಾರೆ. ಸಿಗಂದೂರು ಸಮೀಪದ ತುಮರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಸರ್ಕಾರ ಇದಕ್ಕೆ 108 ಆಂಬುಲೆನ್ಸ್ ಒದಗಿಸಿತ್ತು. ಅದನ್ನು ‘ಸಿಗಂದೂರು 108 ಆಂಬುಲೆನ್ಸ್’ ಎಂದೇ ಆರೋಗ್ಯ ಇಲಾಖೆ ಸಿಬ್ಬಂದಿ ಬಣ್ಣಿಸುತ್ತಿದ್ದರು. ಆದರೆ, ಜನರ … Read more

‘ಸಿಗಂದೂರು 108’ ಆಂಬುಲೆನ್ಸ್ ಸಿಗದೆ ಮತ್ತೊಂದು ಸಾವು, 24 ಗಂಟೆಯಲ್ಲಿ ಹಾರಿ ಹೋಯ್ತು ಇಬ್ಬರ ಪ್ರಾಣ ಪಕ್ಷಿ

161221 Sigandur Launch Baby girl death

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಡಿಸೆಂಬರ್ 2021 ತುರ್ತು ಸಂದರ್ಭ ಆಂಬುಲೆನ್ಸ್ ಸಿಗದೆ ಮತ್ತೊಬ್ಬರು ಕೊನೆಯುಸಿರೆಳೆದಿದ್ದಾರೆ. ತುಮರಿ ಭಾಗದಲ್ಲಿ ಆಂಬುಲೆನ್ಸ್ ಇಲ್ಲದಿರುವುದರಿಂದ ಕಳೆದ 24 ಗಂಟೆ ಅವಧಿಯಲ್ಲಿ ಇಬ್ಬರು ಜೀವ ಕಳೆದುಕೊಂಡಂತಾಗಿದೆ. ಬೈಕ್ ಅಪಘಾತಕ್ಕೀಡಾಗಿ ತಲೆಗೆ ತೀವ್ರ ಪೆಟ್ಟಾಗಿದ್ದ ನಾರಾಯಣ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಚಿಕಿತ್ಸೆ ಫಲಿಸದೆ ನಾರಾಯಣ ಅವರು ಸಂಜೆ ಮೃತಪಟ್ಟಿದ್ದಾರೆ. ಆಂಬುಲೆನ್ಸ್ ಸಿಗದೆ ನರಳಾಡಿದ್ದರು ನಾರಾಯಣ ಅವರು ಬುಧವಾರ  ರಾತ್ರಿ ಬೈಕ್’ನಲ್ಲಿ ತುಮರಿಯಿಂದ ಕಳಸವಳ್ಳಿಯಲ್ಲಿರುವ ಮನೆಗೆ ತೆರಳುತ್ತಿದ್ದರು. ಈ … Read more

ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ

161221 Sigandur Launch Baby girl death

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021 ಘಟನೆ 1 : ಹೆರಿಗೆ ನೋವಿನಿಂದ ಬಳಲಿಕೆ ಸಂಜೆ 6 ಗಂಟೆಗೆ ಚದರವಳ್ಳಿ ಗ್ರಾಮದ ಚೈತ್ರಾ ಅವರಿಗೆ ಹೆರಿಗೆ ನೋವು ಶುರುವಾಯ್ತು. ಕುಟುಂಬದವರು 108 ಆಂಬುಲೆನ್ಸ್’ಗೆ ಕರೆ ಮಾಡಿದರು. ರಾತ್ರಿಯಾದರೂ ಆಂಬುಲೆನ್ಸ್ ಸುಳಿವಿಲ್ಲ. ಹೆರಿಗೆ ನೋವಿನಿಂದ ನರಳುತ್ತಿದ್ದ ಚೈತ್ರಾ ಅವರನ್ನು ಕಾರೊಂದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ರಾತ್ರಿ ಹೆರಿಗೆಯಾಯ್ತು. ಹೆಚ್ಚಿನ ಚಿಕಿತ್ಸೆಗೆ ನಡುರಾತ್ರಿ ಹೊತ್ತಿಗೆ ಸಾಗರದ ಆಸ್ಪತ್ರೆಗೆ ಕಳುಹಿಸಲಾಯಿತು. ಬೆಳಗಾಗುವುದರಲ್ಲಿ ಮಗು ಸಾವನ್ನಪ್ಪಿದೆ. … Read more

ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ, ಬೆದರಿಕೆ, ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ, ಎಷ್ಟು ವರ್ಷ ಜೈಲು? ದಂಡವೆಷ್ಟು?

Sagara-Court-General-Image.jpg

ಶಿವಮೊಗ್ಗ ಲೈವ್.ಕಾಂ | SAGARA NEWS | 9 ಡಿಸೆಂಬರ್ 2021 ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. 2017ರಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ಸಾಗರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಅನಿಲ್ ಅಲಿಯಾಸ್ ಅನಿಲ್ ಡಿಸೋಜಾ ವಿರುದ್ಧ ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆ, ಇವತ್ತು ಶಿಕ್ಷೆ ಅವಧಿಯನ್ನು ಪ್ರಕಟಿಸಲಾಯಿತು. ಏನಿದು ಪ್ರಕರಣ? 2017ರ ಏಪ್ರಿಲ್ 17ರಂದು ಸಾಗರ ರಾಮನಗರದ ಅನಿಲ್ ಅಲಿಯಾಸ್ ಅನಿಲ್ ಡಿಸೋಜಾ … Read more

ಸಾಗರದಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆಗೆ ಎಎಪಿ ಪ್ಲಾನ್, ಸಭೆಯಲ್ಲಿ ಮೂರು ಪ್ರಮಖ ನಿರ್ಧಾರ

081221 Aam Admi Party Meeting at Sagara

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಡಿಸೆಂಬರ್ 2021 ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಾಗರ ತಾಲೂಕಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಮ್ ಆದ್ಮಿ ಪಾರ್ಟಿ (ಎಎಪಿ) ನಿರ್ಧರಿಸಿದೆ. ಎಲ್ಲಾ ಕ್ಷೇತ್ರದಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಅಮೃತ್ ರಾಸ್ ತಿಳಿಸಿದ್ದಾರೆ. ಸಾಗರದ ಹೊಟೇಲ್ ಒಂದರಲ್ಲಿ ಪಕ್ಷದ ಪದಾಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸಿದ ತಾಲೂಕು ಅಧ್ಯಕ್ಷ ಅಮೃತ್ ರಾಸ್, ನಂತರ ನಿರ್ಧಾರ ಪ್ರಟಿಸಿದರು. ಏನೆಲ್ಲ ಸಮಾಲೋಚನೆ ಮಾಡಲಾಯ್ತು? ನಿರ್ಧಾರ 1 … Read more

ಆನಂದಪುರ ಬಳಿ ಬಸ್ ಹತ್ತುವಾಗ ಕೆಳಗೆ ಬಿದ್ದು ವಿದ್ಯಾರ್ಥಿನಿಗೆ ಗಾಯ, ಸಾಗರದಲ್ಲಿ ಬಸ್ ತಡೆದು ಆಕ್ರೋಶ

071221 Students Protest Against Bus driver at sagara

ಶಿವಮೊಗ್ಗ ಲೈವ್.ಕಾಂ | SAGARA NEWS | 7 ಡಿಸೆಂಬರ್ 2021 ವಿದ್ಯಾರ್ಥಿಗಳು ಹತ್ತುವಾಗ ಚಾಲಕ ಏಕಾಏಕಿ ಬಸನ್ನು ಮುಂದಕ್ಕೆ ಚಲಾಯಿಸಿದ್ದರಿಂದ ವಿದ್ಯಾರ್ಥಿನಿಯೊಬ್ಬಳು ಬಿದ್ದು ಗಾಯಗೊಂಡಿದ್ದಾಳೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ಹೇಗಾಯ್ತು ಘಟನೆ? ಶಿವಮೊಗ್ಗ – ಸಾಗರ ಕೆಎಸ್ಆರ್ ಟಿಸಿ ಬಸ್ ಹತ್ತುವಾಗ ಸ್ವಾತಿ ಎಂಬ ವಿದ್ಯಾರ್ಥಿನಿ ಕೆಳಗೆ ಬಿದ್ದು ಗಾಯಗೊಂಡಿದ್ದಾಳೆ. ಆನಂದಪುರ ಸಮೀಪ ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳು ಬಸ್ ಹತ್ತುವಾಗ ಚಾಲಕ ಬಸ್ ಮುಂದಕ್ಕೆ ಚಲಾಯಿಸಿದ್ದಾನೆ. ಆಯಾತಪ್ಪಿ ವಿದ್ಯಾರ್ಥಿನಿಯಬ್ಬಳು ಕೆಳಗೆ … Read more