ಸರ್ಕಾರಿ ಶಾಲೆ ಆವರಣದಲ್ಲಿ ಹೆಜ್ಜೇನು ದಾಳಿ, ವಿದ್ಯಾರ್ಥಿಗಳಿಗೆ ಗಾಯ

Baganakatte-students-at-government-hospital

ಶಿಕಾರಿಪುರ: ತಾಲೂಕಿನ ಬಗನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು (Bee) ದಾಳಿ ನಡೆಸಿವೆ. ಘಟನೆಯಲ್ಲಿ ಒಟ್ಟು 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ‌ ಇಂದು ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಸಮೀಪದ ಮರದಲ್ಲಿ ಗೂಡು ಕಟ್ಟಿರುವ ಹೆಜ್ಜೇನುಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ. ವಿದ್ಯಾರ್ಥಿಗಳು ಮತ್ತು ಓರ್ವ ಮಹಿಳಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೂಡಲೆ ಗ್ರಾಮಸ್ಥರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ತೀವ್ರ ಗಾಯಗೊಂಡಿರುವ 6 ವಿದ್ಯಾರ್ಥಿಗಳನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ » ಖಾಸಗಿ … Read more

ಶಿಕಾರಿಪುರ ಟೋಲ್‌ ಗೇಟ್‌ ಬಳಿ ಬಂದೋಬಸ್ತ್‌, ಜನ ಗುಂಪು ಸೇರುವುದು ನಿಷೇಧ

091025-Bandobast-near-kutralli-toll-gate.webp

ಶಿಕಾರಿಪುರ: ಟೋಲ್‌ ಗೇಟ್‌ ವಿರೋಧಿಸಿ ಶಿಕಾರಿಪುರ ಬಂದ್‌ ಬೆನ್ನಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಕುಟ್ರಳ್ಳಿ ಟೋಲ್‌ ಗೇಟ್‌ (toll gate) ಬಳಿ  ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಶಿಕಾರಿಪುರ ಬಂದ್‌ಗೆ ಕರೆ ನೀಡಿದೆ. ಇದರ ಬೆನ್ನಿಗೆ ಶಿಕಾರಿಪುರ – ಶಿರಾಳಕೊಪ್ಪ ನಡುವಿನ ರಾಜ್ಯ ಹೆದ್ದಾರಿಯ ಕುಟ್ರಳ್ಳಿ ಟೋಲ್‌ಗೆ ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಟೋಲ್‌ ಗೇಟ್‌ನಿಂದ ಎರಡು ಬದಿಯಲ್ಲಿ ನೂರು ಮೀಟರ್‌ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ … Read more

ಶಿಕಾರಿಪುರ ಬಂದ್‌, ಪಟ್ಟಣದಲ್ಲಿ ತಮಟೆ ಮೂಲಕ ಜಾಗೃತಿ, ಬೆಳಗ್ಗೆಯಿಂದ ಹೇಗಿದೆ ಪರಿಸ್ಥಿತಿ?

091025-Shikaripura-Bandh-9-am-update.webp

ಶಿಕಾರಿಪುರ: ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಶಿಕಾರಿಪುರ ಬಂದ್‌ (Bandh) ಕಾವು ಪಡೆಯುತ್ತಿದೆ. ಪಟ್ಟಣದಲ್ಲಿ ತಮಟೆ ಬಾರಿಸಿ ಬಂದ್‌ ಕುರಿತು ಮಾಹಿತಿ ನೀಡಲಾಗುತ್ತಿದೆ. ಕುಟ್ರಳ್ಳಿ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಇಂದು ಶಿಕಾರಿಪುರ ಬಂದ್‌ ಘೋಷಿಸಿದೆ. ವಿವಿಧ ಸಂಘಟನೆಗಳು ಬಂದ್‌ ಬೆಂಬಲಿಸಿವೆ. ಹಾಗಾಗಿ ಇಂದು ಬೆಳಗ್ಗೆಯಿಂದಲೆ ಶಿಕಾರಿಪುರ ಪಟ್ಟಣದಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗುತ್ತಿದೆ. ಇತ್ತ ಬೆಳಗ್ಗೆಯಿಂದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ. ವಿದ್ಯಾರ್ಥಿಗಳು, ಕಚೇರಿ ಸೇರಿದಂತೆ ವಿವಿಧ ಕೆಲಸಕ್ಕೆ ತೆರಳುವವರು … Read more

ನಾಳೆ ಶಿಕಾರಿಪುರ ಬಂದ್‌, ಯಾಕಾಗಿ ಬಂದ್‌? ಹೇಗಿರಲಿದೆ ಹೋರಾಟ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

081025-Shikaripura-Bandh-against-kutralli-toll-plaza.webp

ಶಿಕಾರಿಪುರ: ಕುಟ್ರಳ್ಳಿ ಟೋಲ್‌ (Toll Gate) ವಿರೋಧಿಸಿ ಅ.9ರಂದು ಶಿಕಾರಿಪುರ ಬಂದ್‌ಗೆ ಕರೆ ನೀಡಲಾಗಿದೆ. ಈಗಾಗಲೇ ವರ್ತಕರು, ರೈತರು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ. ಶಿಕಾರಿಪುರ – ಶಿರಾಳಕೊಪ್ಪ ನಡುವೆ ಕುಟ್ರಳ್ಳಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಟೋಲ್‌ ನಿರ್ಮಿಸಲಾಗಿದೆ. ಇದರಿಂದ ರೈತರು, ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ ಎಂದು ಆರೋಪಿಸಿ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ. ಆದರು ಸರ್ಕಾರ ಟೋಲ್‌ ಗೇಟ್‌ ತೆರವು ಮಾಡದ್ದಕ್ಕೆ ಶಿಕಾರಿಪುರ … Read more

ಅ.9ರ ಶಿಕಾರಿಪುರ ಬಂದ್‌ಗೆ ಶಿರಾಳಕೊಪ್ಪದಲ್ಲು ಬೆಂಬಲ

SHIRALAKOPPA-SHIKARIPURA-NEWS

ಶಿರಾಳಕೊಪ್ಪ: ಟೋಲ್ ವಿರುದ್ಧ ಕಳೆದ ವರ್ಷದಿಂದ ಸತತ ಹೋರಾಟ ಮುಂದುವರಿಸಿದ್ದರೂ ಸಮಸ್ಯೆಗೆ ಪರಿಹಾರ ದೊರಕದ ಹಿನ್ನೆಲೆ ಅ.9ರಂದು ಕರೆ ನೀಡಿರುವ ಶಿಕಾರಿಪುರ ಬಂದ್‌ಗೆ (Bandh) ಶಿರಾಳಕೊಪ್ಪದಲ್ಲೂ ಬೆಂಬಲ ವ್ಯಕ್ತವಾಗಿದೆ ಎಂದು ಸಮಿತಿ ಅಧ್ಯಕ್ಷ ಶಿವರಾಜ್‌ ಪಾಟೀಲ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂದ್ ಸಂಪೂರ್ಣ ಸ್ವಯಂ ಪ್ರೇರಿತವಾಗಿದ್ದು, ಯಾವುದೇ ರಾಜಕೀಯ ಪ್ರೇರಣೆ ಇಲ್ಲ. ಶಿರಾಳಕೊಪ್ಪ ಪಟ್ಟಣದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಈ ಹೋರಾಟಕ್ಕೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಲು ನಿರ್ಧಾರ ಮಾಡಿದಾರೆ ಎಂದರು. ಈ ಹೋರಾಟವು ಸಂಪೂರ್ಣ ಪಕ್ಷಾತೀತ. … Read more

ಗಣಪತಿ ಮೆರವಣಿಗೆ ವೇಳೆ ಡಿವೈಎಸ್‌ಪಿ ಜೀಪಿನ ಗಾಜು ಪೀಸ್‌ ಪೀಸ್‌, ಆಗಿದ್ದೇನು?

Shikaripura-Town-Police-Station

ಶಿಕಾರಿಪುರ: ಗಣಪತಿ ಮೆರವಣಿಗೆ ವೇಳೆ ಪಟಾಕಿ ಸಿಡಿದು ಡಿವೈಎಸ್‌ಪಿ ಜೀಪಿನ (Jeep) ಗಾಜು ಒಡೆದಿದೆ. ಈ ಸಂಬಂಧ ಆಯೋಜಕರ ವಿರುದ್ಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕಾರಿಪುರದ ಮಾಸೂರು ಸರ್ಕಲ್‌ ಬಳಿ ಗಣಪತಿ ಮೆರವಣಿಗೆ ವೇಳೆ ಘಟನೆಯಾಗಿದೆ. ಡಿವೈಎಸ್‌ಪಿ ಅವರು ಇಲ್ಲಿನ ಮಸೀದಿ ಬಳಿ ಬಂದೋಬಸ್ತ್‌ಗೆ ತೆರಳಿದ್ದರು. ಜೀಪ್‌ ಚಾಲಕ ಹರೀಶ್‌, ಮಾಸೂರು ಸರ್ಕಲ್‌ನಲ್ಲಿ ಜೀಪ್‌ ನಿಲ್ಲಿಸಿದ್ದರು. ಗಣಪತಿ ಮೆರವಣಿಗೆ ವೇಳೆ ಯುವಕರ ಗುಂಪು ರಸ್ತೆ ಮಧ್ಯೆ ಅಂಟಿಸಿದ ಪಟಾಕಿ ಸಿಡಿದು ಜೀಪಿನ ಗ್ಲಾಸ್‌ಗೆ ತಗುಲಿ ಒಡೆದಿದೆ … Read more

ಹಸೆಮಣೆ ಏರಬೇಕಿದ್ದ ಜೋಡಿ ಅಪಘಾತದಲ್ಲಿ ಸಾವು, ಹೇಗಾಯ್ತು ಘಟನೆ?

couple-succumbed-in-a-mishap-at-Shikaripura

ಶಿಕಾರಿಪುರ: ಬೈಕ್‌ ಮತ್ತು ಕಾರು ಡಿಕ್ಕಿಯಾಗಿ ಹಸೆಮಣೆ ಏರಬೇಕಿದ್ದ ಜೋಡಿ (Couple) ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ತಾಲೂಕಿನ ಮಟ್ಟಿಕೋಟೆಯ ರೇಖಾ (20), ತೊಗರ್ಸಿ ಸಮೀಪದ ಗಂಗೊಳ್ಳಿಯ ಬಸವನಗೌಡ ದ್ಯಾಮನಗೌಡ್ರ (25) ಎಂದು ಗುರುತಿಸಲಾಗಿದೆ. ಪಟ್ಟಣದಲ್ಲಿರುವ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳುವವರನ್ನು ಕರೆ ತರುತ್ತಿದ್ದ ಕಾರು ಡಿಕ್ಕಿ ಹೊಡೆದಾಗ ಬೈಕ್ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ.  ಕಳೆದ ತಿಂಗಳು ರೇಖಾ, ಬಸವನಗೌಡ ನಿಶ್ಚಿತಾರ್ಥ ನಡೆದಿತ್ತು. ಮಳೆಯ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿದ್ದು, ಡಿಸೆಂಬರ್‌ನಲ್ಲಿ ಮದುವೆಗೆ … Read more

ನಡು ರಸ್ತೆಯಲ್ಲಿ ಹೆಣ ಸುಡುವ ಚಿತೆ ನಿರ್ಮಿಸಿ ಗ್ರಾಮಸ್ಥರ ಆಕ್ರೋಶ, ಕಾರಣವೇನು?

villager-potest-for-grave-at-huliginatte-in-shikaripura.

ಶಿಕಾರಿಪುರ: ಸ್ಮಶಾನ (grave) ಜಾಗದಲ್ಲಿ ಶವಸಂಸ್ಕಾರಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ಜಾಗದ ವಿವಾದ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿದ ಶಿಕಾರಿಪುರ ತಾಲೂಕಿನ ಹುಲುಗಿನಕಟ್ಟೆ ಗ್ರಾಮಸ್ಥರು ರಸ್ತೆಯಲ್ಲೇ ಚಿತೆ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯಿಂದ ಅಡ್ಡಿ ಹುಲುಗಿನಕಟ್ಟೆ ಗ್ರಾಮದ ಗಂಗೀಬಾಯಿ ಮೃತಪಟ್ಟಿದ್ದು, ಸ್ಮಶಾನ ಎಂದು ಗುರುತಿಸಿದ ಜಾಗದಲ್ಲಿ ಶವ ಸುಡುವುದಕ್ಕೆ ಗ್ರಾಮಸ್ಥರು ಹೋಗಿದ್ದರು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿ ಶವಸಂಸ್ಕಾರಕ್ಕೆ ಅವಕಾಶ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗೆ ಶವ, … Read more

ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಸ್‌ ಡಿಕ್ಕಿ, ಸಾವು, ಹೇಗಾಯ್ತು ಘಟನೆ?

SHIKARIPURA-NEWS-UPDATE.

ಶಿಕಾರಿಪುರ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿ (Bus) ಹೊಡೆದು ಮೃತಪಟ್ಟಿದ್ದಾರೆ. ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯ ಚಾನಲ್ ಸಮೀಪ ಘಟನೆ ಸಂಭವಿಸಿದೆ. ವಿನಾಯಕ ನಗರದ ಕಟ್ಟಡ ಕಾರ್ಮಿಕ ಶಿವಾಜಿರಾವ್ (49) ಮೃತರು. ಕೆಲಸ ಮುಗಿಸಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಾಜಿರಾವ್‌ ಅವರನ್ನು ವಿದ್ಯಾರ್ಥಿಗಳಾದ ನವೀನ್‌ ಮತು ಕೌಶಿಕ್‌ ತಮ್ಮ ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟೊತ್ತಿಗಾಗಲೇ ಶಿವಾಜಿರಾವ್‌ ಕೊನೆಯುಸಿರೆಳೆದಿದ್ದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು, ಅಪಘಾತ ಸಂಬಂಧ … Read more

ಅಂಬಾರಗೊಪ್ಪ ಬಳಿ ಗೂಡ್ಸ್‌ ವಾಹನ ಡಿಕ್ಕಿ, ಸೈಕಲ್‌ ಸವಾರ ಸಾವು, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಶಿಕಾರಿಪುರ: ಸೈಕಲ್‌ನಲ್ಲಿ (cycle) ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಗೂಡ್ಸ್‌ ವಾಹನ ಡಿಕ್ಕಿಯಾಗಿ ಆತ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ – ಶಿರಾಳಕೊಪ್ಪ ಮುಖ್ಯರಸ್ತೆಯ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಅಂಬಾರಗೊಪ್ಪದ ರುದ್ರ ನಾಯ್ಕ್‌ (66) ಮೃತರು. ಸೈಕಲ್‌ನಲ್ಲಿ ರುದ್ರ ನಾಯ್ಕ್‌ ಅವರು ರಸ್ತೆ ದಾಟುತ್ತಿದ್ದರು. ಆಗ ಶಿಕಾರಿಪುರ ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತ್ತಿದ್ದ ಗೂಡ್ಸ್‌ ವಾಹನ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡಿದ್ದ ರುದ್ರ ನಾಯ್ಕ್‌ ಸಾವನ್ನಪ್ಪಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು … Read more