ಚೋರಡಿ ಬಳಿ ಬೈಕ್‌ಗೆ ಓಮ್ನಿ ಡಿ*ಕ್ಕಿ | ಉಂಬ್ಳೆಬೈಲಿನಲ್ಲಿ ಬೈಕುಗಳು ಮುಖಾಮುಖಿ ಡಿ*ಕ್ಕಿ – 3 ಫಟಾಫಟ್‌ ಸುದ್ದಿ

Crime-News-General-Image

SHIMOGA FATAFAT NEWS, 3 OCTOBER 2024 [su_note note_color=”#EBEDEF” text_color=”#000000″] ಉಂಬ್ಳೆಬೈಲಿನಲ್ಲಿ ಬೈಕ್‌ಗಳು ಡಿಕ್ಕಿ, ದಂಪತಿಗೆ ಗಾಯ ಶಿವಮೊಗ್ಗ NEWS : ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗೆ ಎದುರಿನಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ದಂಪತಿಗೆ ಗಾಯಗೊಂಡಿದ್ದು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮದ ಫಾರೆಸ್ಟ್‌ ಚೆಕ್‌ ಪೋಸ್ಟ್‌ ಸಮೀಪ ಘಟನೆ ಸಂಭವಿಸಿದೆ. ಉಮೇಶ್‌ ಮತ್ತು ಅವರ ಪತ್ನಿ ಶ್ರೀಮತಿ ಗಾಯಗೊಂಡಿದ್ದಾರೆ. ದಂಪತಿ ತಮ್ಮ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. … Read more

ಸಕ್ರೆಬೈಲಿನಲ್ಲಿ ಆನೆಗಳಿಗೆ ತಾಲೀಮು ಶುರು, ಹೇಗಿರುತ್ತೆ ಟ್ರೈನಿಂಗ್?

Sakrebyle-Elephant-camp-DFO-Prasanna-Patagar.

SHIMOGA NEWS, 2 OCTOBER 2024 : ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳಿಗೆ ತಾಲೀಮು (Training) ಆರಂಭವಾಗಿದೆ. ಸಕ್ರೆಬೈಲು ಬಿಡಾರದಲ್ಲಿಯೇ ಸಾಗರ, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ತಾಲೀಮಿನಲ್ಲಿ ತೊಡಗಿಸಿಕೊಂಡಿದ್ದಾವೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಸಿಎಫ್‌ ಪ್ರಸನ್ನ ಪಟಗಾರ್‌, ಕಳೆದ 15 ದಿನದಿಂದ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆಯವರು ಆನೆಗಳನ್ನು ಶಿವಮೊಗ್ಗಕ್ಕೆ ಕೊಂಡೊಯ್ದ ಬಳಿಕ ನಗರದಲ್ಲಿ ತಾಲೀಮು ನಡೆಸಲಾಗುತ್ತದೆ. ಅ.3 ಅಥವಾ 4ರಂದು ಆನೆಗಳು ಶಿವಮೊಗ್ಗಕ್ಕೆ ತೆರಳುವ ಸಾಧ್ಯತೆ … Read more

ಅಂಬಾರಿ ಹೊರಲು ಶಿವಮೊಗ್ಗಕ್ಕೆ ಮೂರು ಗಂಡಾನೆ, ಯಾವಾಗ ಬರ್ತವೆ?

Dasara-Elephant-invitation-at-sakrebyle-MLA-channabasappa

SHIMOGA NEWS, 2 OCTOBER 2024 : ದಸರಾ ಮಹೋತ್ಸವದಲ್ಲಿ ಈ ಬಾರಿ ಅಂಬಾರಿ ಮೆರವಣಿಗೆಗೆ ಮೂರು ಆನೆಗಳು (Elephants) ಭಾಗವಹಿಸುತ್ತಿವೆ. ಸಾಗರನ ಜೊತೆ ಕುಮ್ಕಿ ಆನೆಗಳಾಗಿ ಎರಡು ಗಂಡಾನೆಗಳು ಭಾಗವಹಿಸುತ್ತಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ಅಂಬಾರಿ ಮೆರವಣಿಗೆ ಅತ್ಯಂತ ಆಕರ್ಷಣೀಯ. ಕಳೆದ ಬಾರಿ ದಸರಾ ಸಂದರ್ಭದಲ್ಲೇ ಆನೆ ಮರಿ ಹಾಕಿತ್ತು. ಹಾಗಾಗಿ ಈ ಬಾರಿ ಮೂರು ಗಂಡಾನೆಗಳೇ ಭಾಗವಹಿಸುತ್ತಿವೆ. ಮುಂದಿನ ವರ್ಷ ಹೆಣ್ಣಾನೆಗಳು ಭಾಗವಹಿಸಲಿವೆ ಎಂದರು. ಸಾಗರ ಆನೆ ಅಂಬಾರಿ ಹೊರಲಿದೆ. ಅದರ ಜೊತೆಗೆ … Read more

ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಾಡಾನೆಗಳು

wild-Elephant-attack-on-farm-at-sirigere-in-Shimoga

SHIMOGA NEWS, 21 SEPTEMBER 2024 : ಕಾಡಾನೆ (Wild Elephant) ದಾಳಿಗೆ ಸಿರಿಗೆರೆ ಭಾಗದಲ್ಲಿ ಬೆಳೆ ನಷ್ಟ ಉಂಟಾಗಿದೆ. ಕಳೆದ ರಾತ್ರಿ ಈ ಭಾಗದಲ್ಲಿ ತೋಟ, ಹೊಲಕ್ಕೆ ನುಗ್ಗಿರುವ ಕಾಡಾನೆಗಳು ಬೆಳೆ ಹಾನಿ ಮಾಡಿದೆ. ಶಿವಮೊಗ್ಗ ತಾಲೂಕು ಸಿರಿಗೆರೆಯ ಆಂಧ್ರ ಕ್ಯಾಂಪ್‌ ಭಾಗದಲ್ಲಿ ಕಳೆದ ರಾತ್ರಿ ಹಲವರ ಜಮೀನಿಗೆ ಕಾಡಾನೆಗಳು ದಾಳಿ ನಡೆಸಿವೆ. ಜೋಳ, ಬಾಳೆ, ಅಡಿಕೆ, ತೆಂಗು ಬೆಳೆಗೆ ಹಾನಿಯಾಗಿದೆ. ಆನೆಗಳ ಉಪಟಳ ತಡೆಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿಗೆ ಮಾಡಿದ್ದಾರೆ. ಈ ಸಂಬಂಧ … Read more

ತಿರುಪತಿ ಲಡ್ಡು ವಿವಾದ, ಶಿವಮೊಗ್ಗದಲ್ಲಿ ಸ್ವಾಮೀಜಿಯ ಮೌನವ್ರತ ಆರಂಭ

abhinava-shankara-bharathi-swamiji-kudli-mutt.

SHIMOGA NEWS, 23 SEPTEMBER 2024 : ತಿರುಪತಿ ಲಡ್ಡು (Laddu) ಪ್ರಸಾದದ ವಿಚಾರದಲ್ಲಿ ಅಪಪ್ರಚಾರವಾಗಿದೆ. ಇದರ ಪ್ರಾಯಶ್ಚಿತ್ತ, ದುಷ್ಟದಮನ ಮತ್ತು ಆಧ್ಯಾತ್ಮಿಕ ಶಕ್ತಿವರ್ಧನೆಗಾಗಿ ಶಿವಮೊಗ್ಗದ ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ ಅವರು ಉಪವಾಸ ಮತ್ತು ಮೌನವ್ರತ ಕೈಗೊಂಡಿದ್ದಾರೆ. ಕೂಡಲಿ ಮಠದಲ್ಲಿ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ ಅವರು ಇಂದಿನಿಂದ ಮೂರು ದಿನ ಉಪವಾಸ ಮತ್ತು ಮೌನವ್ರತ ಆರಂಭಿಸಿದ್ದಾರೆ. ಈ ಸಂಬಂಧ ಮಠದ ವತಿಯಿಂದ ಪ್ರಕಟಣೆ ಹೊರಡಿಸಲಾಗಿದೆ. ಪ್ರಕಟಣೆಯಲ್ಲಿ ಏನಿದೆ? … Read more

ಶಿವಮೊಗ್ಗ ತಾಲೂಕು, ಹಲವು ಗ್ರಾಮಗಳಲ್ಲಿ ನಾಳೆ ಇಡೀ ದಿನ ಕರೆಂಟ್‌ ಇರಲ್ಲ

power cut mescom ELECTRICITY

SHIMOGA NEWS, 23 SEPTEMBER 2024 : ಎಂ.ಆರ್.ಎಸ್‌ನಲ್ಲಿ ತ್ರೈಮಾಸಿಕ  ನಿರ್ವಹಣಾ ಕಾಮಗಾರಿ ಇರಲಿದೆ. ಆದ್ದರಿಂದ ಸೆ.24 ರಂದು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಶಿವಮೊಗ್ಗ ತಾಲೂಕಿನ ಹಲವು ಕಡೆ ವಿದ್ಯುತ್‌ (POWER CUT) ವ್ಯತ್ಯಯವಾಗಲಿದೆ. ಎಲ್ಲೆಲ್ಲೆ ಕರೆಂಟ್‌ ಇರಲ್ಲ? ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ. ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, … Read more

ಪುರದಾಳುವಿನಲ್ಲಿ ತೋಟ, ಹೊಲಕ್ಕೆ ನುಗ್ಗಿದ ಕಾಡಾನೆಗಳು

wild-elephants-enter-purdal-village

SHIMOGA NEWS, 23 SEPTEMBER 2024 : ಕಾಡಾನೆ (Elephant) ದಾಳಿಗೆ ತೋಟ, ಹೊಲದಲ್ಲಿ ಬೆಳೆ ನಷ್ಟವಾಗಿದೆ. ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ರಾಜೇಶ್‌ ಮತ್ತು ಬೀರಪ್ಪ ಎಂಬುವವರ ತೋಟ, ಹೊಲಕ್ಕೆ ಎರಡು ಕಾಡಾನೆಗಳು ನುಗ್ಗಿ ಹಾನಿ ಮಾಡಿವೆ. ಅಡಿಕೆ, ತೆಂಗಿನ ಮರಗಳು ಬುಡಮೇಲಾಗಿವೆ. ಜೋಳ, ಕಬ್ಬಿನ ಬೆಳೆ ಕೂಡ ಹಾನಿಯಾಗಿವೆ. ಕಾಡಾನೆಗಳಿಂದ ರೈತರಿಗೆ ನಷ್ಟವಾಗಿದೆ. ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.   ಇದನ್ನೂ ಓದಿ » ನಡು … Read more

ರಸ್ತೆ ದಾಟುತ್ತಿದ್ದ ಹೆಬ್ಬಾವಿನ ತಲೆ ಮೇಲೆ ಹರಿದ ವಾಹನ, ವಿಲವಿಲ ಒದ್ದಾಡುತ್ತಿದ್ದ ಹಾವು ರಕ್ಷಣೆ, ಚಿಕಿತ್ಸೆ

Python-saved-by-ayanuru-youths

SHIMOGA NEWS, 19 SEPTEMBER 2024 : ರಸ್ತೆ ದಾಟುತ್ತಿದ್ದ ಹೆಬ್ಬಾವಿನ (Python) ಮೇಲೆ ವಾಹನ ಹರಿದು ಗಂಭೀರ ಗಾಯಗೊಂಡಿದೆ. ಗ್ರಾಮಸ್ಥರು ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಒಪ್ಪಿಸಿದ್ದಾರೆ. ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಹೆಬ್ಬಾವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಣಗೆರೆ ರಸ್ತೆಯ ಖಾಸಗಿ ಶಾಲೆ ಬಳಿ ವಾಹನ ಹರಿದು ಹೆಬ್ಬಾವು ಗಾಯಗೊಂಡಿತ್ತು. ರಸ್ತೆ ದಾಟುವಾಗ ವಾಹನವೊಂದು ತಲೆ ಮೇಲೆ ಹರಿದು ಹಾವು ಗಾಯಗೊಂಡಿತ್ತು. ರಸ್ತೆ ಪಕ್ಕದ ಗಿಡಗಂಟಿ ಮಧ್ಯೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಆಯನೂರಿನ ಅರ್ಜುನ್, … Read more

ಶಿವಮೊಗ್ಗ ಜೈಲು, ಬೀಡಿಗಾಗಿ ಕಲ್ಲು ತೂರಾಟ, ಸ್ಥಳದಲ್ಲೆ ಡಿಐಜಿ ಮೊಕ್ಕಾಂ, ಅಧೀಕಕ್ಷರು ಬದಲಾವಣೆ

Shimoga-Central-Jail-Building

SHIMOGA NEWS, 17 SEPTEMBER 2024 : ಕೇಂದ್ರ ಕಾರಾಗೃಹದಲ್ಲಿ (JAIL) ಬೀಡಿಗಾಗಿ ಕೈದಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಂಧಿಖಾನೆ ಸಿಬ್ಬಂದಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಪರಿ‍ಸ್ಥಿತಿ ವಿಕೋಪಕ್ಕೆ ಹೋಗಿರುವ ಹಿನ್ನೆಲೆ ಬಂಧಿಖಾನೆ ಡಿಐಜಿ ಸ್ಥಳಕ್ಕೆ ಭೇಟಿ ನೀಡಿದ್ದು, ಎರಡು ದಿನದಿಂದ ಮೊಕ್ಕಾಂ ಹೂಡಿದ್ದಾರೆ. ಇನ್ನೊಂದೆಡೆ ಕೇಂದ್ರ ಕಾರಾಗೃಹದ ಅಧೀಕ್ಷಕರ ಬದಲಾವಣೆ ಮಾಡಲಾಗಿದೆ.   ಸೆಂಟ್ರಲ್‌ ಜೈಲಿನಲ್ಲಿ ಆಗಿದ್ದೇನು? ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾಥಿತ್ಯ ಪ್ರಕರಣದ ಬೆನ್ನಿಗೆ ಶಿವಮೊಗ್ಗ ಜೈಲಿನಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. … Read more

ಜಗಮಗ ಕಂಗೊಳಿಸಿದ ಗಾಜನೂರಿನ ತುಂಗಾ ಜಲಾಶಯ

Tunga-Dam-Lighting-during-Gauri-Festival

SHIMOGA, 6 SEPTEMBER 2024 : ಗೌರಿ – ಗಣೇಶ ಚತುರ್ಥಿ ಅಂಗವಾಗಿ (Lighting) ತುಂಗಾ ಜಲಾಶಯದಲ್ಲಿ ವಿದ್ಯುತ್‌ ದೀಪಗಳಿಂದ ಕಂಗೊಳಿಸಿತು. ಜಲಾಶಯದ ಮೇಲ್ಭಾಗದಲ್ಲಿರುವ ಎಲ್ಲ ಲೈಟುಗಳನ್ನು ಕೆಲವು ಹೊತ್ತು ಬೆಳಗಿಸಲಾಯಿತು. ಕಳೆದ 8 ದಿನದಿಂದ ತುಂಗಾ ಜಲಾಶಯದ ಮೇಲ್ಭಾಗದಲ್ಲಿ ಎಲ್ಲ ಡೂಮ್‌ಗಳ ರಿಪೇರಿ ಮಾಡಲಾಯಿತು. ಇವತ್ತು ಗೌರಿ ಹಬ್ಬದ ಅಂಗವಾಗಿ ಎಲ್ಲ ಲೈಟ್‌ ಆನ್‌ ಮಾಡಲಾಗಿದೆ. ಇದರಿಂದ ತುಂಗಾ ಜಲಾಶಯ ಜಗಮಗ ಕಂಗೊಳಿಸುತ್ತಿತ್ತು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಭಕ್ತಿಯಿಂದ ಗೌರಿ ಪೂಜೆ, ಸೈನ್ಸ್‌ ಮೈದಾನದಲ್ಲಿ ಗಣಪತಿ … Read more