ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ನಾಳೆ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

SHIVAMOGGA LIVE NEWS | 24 FEBRUARY 2024 SHIMOGA : ಎಂಆರ್‍ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಫೆ.25ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30ರವರೆಗೆ ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಮಾಚೇನಹಳ್ಳಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು … Read more

ಇನ್ಮುಂದೆ ಶಿವಮೊಗ್ಗದ ಜನರಿಗು ತಟ್ಟಲಿದೆ ಟೋಲ್‌ ಬಿಸಿ, 2 ಕಡೆ ಟೋಲ್‌ ಪ್ಲಾಜಾ ರೆಡಿ, ಎಲ್ಲೆಲ್ಲಿದೆ? ಪರಿಣಾಮಗಳೇನು?

Toll-Gate-in-Shimoga-Savalaga-road

SHIVAMOGGA LIVE NEWS | 24 FEBRUARY 2024 SHIMOGA : ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡು ಟೋಲ್‌ ಗೇಟ್‌ ಸ್ಥಾಪಿಸಲಾಗಿದೆ. ಇನ್ಮುಂದೆ ಟೋಲ್‌ ಪಾವತಿಸಿ ಜನರು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಈ ಮೊದಲಿನಿಂದಲು ಇದ್ದ ರಸ್ತೆಯಲ್ಲೇ ರಾಜ್ಯ ಸರ್ಕಾರ ಟೋಲ್‌ ಸ್ಥಾಪಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗ – ಸವಳಂಗ ನಡುವೆ ಒಂದು ಟೋಲ್‌ ಗೇಟ್‌ ಸ್ಥಾಪಿಸಲಾಗಿದೆ. ಶಿಕಾರಿಪುರ – ಶಿರಾಳಕೊಪ್ಪ ನಡುವೆ ಇನ್ನೊಂದು ಟೋಲ್‌ ನಿರ್ಮಿಸಲಾಗಿದೆ. ಹೇಗಿವೆ ಜಿಲ್ಲೆಯ ಮೊದಲ ಟೋಲ್‌ಗಳು? ಶಿವಮೊಗ್ಗ – … Read more

ಕುಂಸಿ ಭಾಗದಲ್ಲಿ ಗುಂಡಿ ಅಗೆಯುವವರೆ ಹುಷಾರ್‌, ಮೆಸ್ಕಾಂನಿಂದ ಎಚ್ಚರಿಕೆ ಸಂದೇಶ, ಏನದು?

Mescom-office-in-Shimoga

SHIVAMOGGA LIVE NEWS | 23 FEBRUARY 2024 SHIMOGA : ಕೈಗಾರಿಕಾ ವಸಾಹತುವಿಗೆ 2500 ಕೆವಿ ವಿದ್ಯುತ್‌ ಪೂರೈಕೆ ಜೋಡಿ ಮಾರ್ಗಗಳನ್ನು ಅಳವಡಿಸಲಾಗಿದೆ. ಫೆ.23ರ ನಂತರ ಯಾವುದೆ ಸಂದರ್ಭ ಈ ಮಾರ್ಗವನ್ನು ಚಾಲನೆಗೊಳಿಸಲಾಗುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಗುಂಡಿ ಅಗೆಯುವುದು, ಕಂಬ ಹತ್ತುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ ಅವಘಡಗಳು ಸಂಭವಿಸಿದರೆ ಮೆಸ್ಕಾಂ ಹೊಣೆಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಿದ್ಲಿಪುರದಲ್ಲಿ ಕೆಎಸ್‍ಎಸ್‍ಐಡಿಸಿಯ ಕೈಗಾರಿಕೆ ವಸಾಹತು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಕುಂಸಿ ವಿದ್ಯುತ್‌ ವಿತರಣಾ ಕೇಂದ್ರದಿಂದ 8 ಕಿ.ಮೀ ಭೂಗತ … Read more

ಶಿವಮೊಗ್ಗದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆಗೆ ಯತ್ನ

200123 Police Jeep With Light jpg

SHIVAMOGGA LIVE NEWS | 21 FEBRUARY 2024 SHIMOGA : ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬರ ಹತ್ಯೆಗೆ ಯತ್ನಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಕೋಟೆ ಗಂಗೂರಿನ ಹಸಿರುಗಿಡಿದ ಮಾರಿಯಮ್ಮ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ಗಣೇಶಪ್ಪ (65) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾಚ್‌ ಮನ್‌ ಕೆಲಸ ಮಾಡುತ್ತಿದ್ದ ಗಣೇಶಪ್ಪ ಅವರು ಭಾನುವಾರ ಸಂಜೆ ಮನೆಯಿಂದ ಹೊರಗೆ ಹೋಗಿದ್ದರು. ಮರುದಿನ ಬೆಳಗಿನ … Read more

ಮತ್ತೊಂದು ಅಗ್ನಿ ಅವಘಡ, ಧಗಧಗ ಹೊತ್ತಿ ಉರಿದ ಕಾರು, ಗೋಡೋನ್‌ನಲ್ಲಿದ್ದ ವಸ್ತುಗಳು

Shivamogga-Mattur-Village-villagers-and-go-down

SHIVAMOGGA LIVE NEWS | 20 FEBRUARY 2024 SHIMOGA : ಗೋಡೋನ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಕಾರು, ಅಡಿಕೆ ಚೀಲಗಳು, ತೆಂಗಿನ ಕಾಯಿಗಳು ಸುಟ್ಟು ಹೋಗಿವೆ. ಶಿವಮೊಗ್ಗ ತಾಲೂಕು ಮತ್ತೂರು ಗ್ರಾಮದ ಬಾಬಯ್ಯ ಎಂಬುವವರಿಗೆ ಸೇರಿದ ಗೋಡೋನ್‌ನಲ್ಲಿ ಘಟನೆ ಸಂಭವಿಸಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿರುವ ಶಂಕೆ ಇದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲಗೆಗೆ ಗೋಡನ್‌ನಲ್ಲಿದ್ದ ವಸ್ತುಗಳು ಆಹುತಿಯಾದವು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಲಕ್ಷಾಂತರ ರೂ. … Read more

ಬೆಳಗ್ಗೆ ಕಪ್ಪು ಪಟ್ಟಿ, ರಾತ್ರಿ ಪೂರ್ತಿ ಧರಣಿ, ಒಂದು ವಾರ ಕಳೆದರು ಶಿಕ್ಷಕರಿಗೆ ಸ್ಪಂದಿಸದ ಸರ್ಕಾರ

Minority-department-Teachers-protest-at-Holehanasavadi

SHIVAMOGGA LIVE NEWS | 19 FEBRUARY 2024 SHIMOGA : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಶಿಕ್ಷಕರ ಸಂಘದ ವತಿಯಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಳೆದ ಒಂದು ವಾರದಿಂದ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ತಮ್ಮ ಮನವಿ ಆಲಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ಕಪ್ಪು ಪಟ್ಟಿ, ನಂತರ ಧರಣಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯದ 105 ವಸತಿ ಶಾಲೆಗಳಲ್ಲಿ 750 ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಕ್ಕಳ ತರಗತಿಗೆ ತೊಂದರೆ ಆಗದಂತೆ ಶಿಕ್ಷಕರು … Read more

ಮಳೆ ಮಾಪನ ಕೇಂದ್ರದ ಮೇಲೆ ಕಿಡಿಗೇಡಿಗಳ ದಾಳಿ, ಗೇಟ್‌, ಕಂಬಗಳು ಕಳವು

200123 Police Jeep With Light jpg

SHIVAMOGGA LIVE NEWS | 17 FEBRUARY 2024 SHIMOGA : ಮಳೆ ಮಾಪನ ಕೇಂದ್ರದ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಗೇಟ್‌, ಕಂಬಗಳನ್ನು ಕದ್ದೊಯ್ದಿದ್ದಾರೆ. ಉಪಕರಣಗಳನ್ನು ಹಾನಿಗೊಳಿಸಿದ್ದಾರೆ. ಹೊಳಲೂರು ಗ್ರಾಮದ ಸಾಮಾನ್ಯ ಮಳೆ ಮಾಪನ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಮಾಪನ ಕೇಂದ್ರದ 25 ಕಂಬಗಳು, ನಾಮಫಲಕ, ತಂತಿ ಬೇಲಿ, ಗೇಟ್‌ ಕಳವು ಮಾಡಲಾಗಿದೆ. ಮಾಪನ ಕೇಂದ್ರವನ್ನು ಹಾಳುಗೆಡವಲಾಗಿದೆ. ಈ ಸಂಬಂಧ ಜಲಮಾಪನ ಉಪ ವಿಭಾಗದ ಎಇಇ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಚಲಿಸುತ್ತಿದ್ದ ಬೈಕ್‌ ಮೇಲೆ ಬಿತ್ತು ಮರ, ಲಾರಿ ಚಾಲಕನ ಸಮಯಪ್ರಜ್ಞೆಗೆ ತಪ್ಪಿತು ಅನಾಹುತ, CCTVಯಲ್ಲಿ ಸೆರೆಯಾಯ್ತು ದೃಶ್ಯ

Tree-fall-on-road-at-gondhichatnalli

SHIVAMOGGA LIVE NEWS | 14 FEBRUARY 2024 SHIMOGA : ಮರ ಬಿದ್ದು ಬೈಕ್‌ನಲ್ಲಿ ತೆರಳಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್‌ ಮೂವರ ಪ್ರಾಣ ಉಳಿದಿದೆ. ಶಿವಮೊಗ್ಗ ತಾಲೂಕು ಗೋಂದಿ ಚಟ್ನಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸನ್ಯಾಸಿಕೋಡುಮಗ್ಗಿಯ ಶಫಿ, ಪ್ಯಾರೀಬಿ, ಗೌಸಿಯಾ ಎಂಬುವವರು ಗೋಂದಿ ಚಟ್ನಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದರು. ಈ ವೇಳೆ ಮರ ಬೈಕ್‌ ಮೇಲೆ ಬಿದ್ದಿದೆ. ಮರ ಬೀಳುತ್ತಿದ್ದಂತೆ ಬೈಕ್‌ ಸವಾರರು ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ. ಹಿಂಬದಿಯಲ್ಲಿ ಬರುತ್ತಿದ್ದ … Read more

ಜಿಂಕೆ ಮಾಂಸ ಬೇಯಿಸುವ ಹೊತ್ತಿಗೆ ದಾಳಿ, ಪಾತ್ರೆ ಸಹಿತ ಆರೋಪಿಗಳು ಅರೆಸ್ಟ್‌

Three-Hunters-Arrested-by-forest-officials-in-Umblebyle-Range

SHIVAMOGGA LIVE NEWS | 13 FEBRUARY 2024 SHIMOGA : ಜಿಂಕೆ ಮಾಂಸ ಬೇಯಿಸುವ ಹೊತ್ತಿಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗೇಟ್‌ ಸಮೀಪ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಹನುಮಂತ, ಆಂಜನಪ್ಪ, ರಾಮಣ್ಣ ಬಂಧಿತರು. ಜಿಂಕೆ ಮಾಂಸ, ಅಡುಗೆಗೆ ಬಳಸಿದ್ದ ಪಾತ್ರೆಗಳು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಶಿವರಾತ್ರಪ್ಪ, ಡಿಆರ್‌ಎಫ್‌ಒಗಳಾದ ಪವನ್‌ ಮಹೇಂದ್ರಕರ್‌, ಗುರುಸ್ವಾಮಿ, ಅಬ್ದುಲ್‌ … Read more

ಹಣಗೆರೆ ರಸ್ತೆಯಲ್ಲಿ ಚಿರತೆ ಮೃತದೇಹ ಪತ್ತೆ, ಅಪಘಾತಕ್ಕೆ ಬಲಿ ಶಂಕೆ

leopard-found-near-ayanuru-in-hanagere-road-in-Shimoga

SHIVAMOGGA LIVE NEWS | 7 FEBRUARY 2024 SHIMOGA : ಹಣಗೆರೆ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಎರಡು ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಹಣಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಕಲ್ಲುಕುರ್ಚಿ ಗ್ರಾಮದ ಬಳಿ ಮಂಗಳವಾರ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ರಕ್ತದ ಕಲೆಗಳು ಹಾಗೂ ಪಕ್ಕದಲ್ಲಿ ಬಿದ್ದ ಚಿರತೆಯನ್ನು ಕಂಡು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ವನ್ಯಜೀವಿ ವಿಭಾಗದ ಡಿಸಿಎಫ್‌ ಪ್ರಸನ್ನ ಪಟೆಗಾರ್ … Read more