ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಅಪಘಾತ, ತಪ್ಪಿತು ದೊಡ್ಡ ಅನಾಹುತ, ಕಾರಿನ ಮುಂಭಾಗ ಜಖಂ

Car-Mishap-at-Pillanagere-in-Shimoga-taluk-Holehonnuru-road.

SHIVAMOGGA LIVE NEWS | 1 DECEMBER 2023 SHIMOGA : ಚಾಲಕನ ನಿಯಂತ್ರಣ ತಪ್ಪಿದ ಕಾರು ಗಣಪತಿ ದೇವಸ್ಥಾನದ ಕಟ್ಟೆಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರಿಗೆ ಗಾಯವಾಗಿದೆ. ಅದೃಷ್ಟವಾಶತ್‌ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದಲ್ಲಿ ಹೆದ್ದಾರಿ ಪಕ್ಕದಲ್ಲಿರುವ ಗಣಪತಿ ದೇವಸ್ಥಾನದ ಕಟ್ಟೆಗೆ ಕಾರು ಡಿಕ್ಕಿ ಹೊಡೆದಿದೆ. ಶಿವಮೊಗ್ಗ ಕಡೆಯಿಂದ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದಾರೆ. ಕಾರಿನಲ್ಲಿ ಇಬ್ಬರು ಮಹಿಳೆ ಸೇರಿ ಮೂವರಿದ್ದರು. ಗಾಯಾಳುಗಳನ್ನು ಸ್ಥಳೀಯರೆ ಸಮೀಪದ … Read more

ಆಯನೂರು TO ಪಂಜಾಬ್‌ ಹೊರಟಿದ್ದ ಶುಂಠಿ ಲಾರಿ ನಾಪತ್ತೆ, ವಾಟ್ಸಪ್‌ ಮೆಸೇಜ್‌ ಕಂಡು ವರ್ತಕನಿಗೆ ಬಿಗ್‌ ಶಾಕ್

Crime-News-General-Image

SHIVAMOGGA LIVE NEWS | 23 NOVEMBER 2023 AYANUR : ಪಂಜಾಬ್‌ಗೆ 180 ಕ್ವಿಂಟಾಲ್‌ ಶುಂಠಿ ತುಂಬಿಕೊಂಡು ಹೊರಟ ಲಾರಿ ನಿಗದಿತ ಸ್ಥಳ ತಲುಪದೆ ನಾಪತ್ತೆಯಾಗಿದೆ. ಲಾರಿ ಚಾಲಕ ಮೊಬೈಲ್ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ಆಯನೂರಿನ ಶುಂಟಿ ವ್ಯಾಪಾರಿಗೆ ನಷ್ಟವಾಗಿದ್ದು ಕುಂಸಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಯನೂರು TO ಪಂಜಾಬ್‌ಗೆ ಲಾರಿ ಸಯ್ಯದ್‌ ಸಾದಿಕ್‌ ಎಂಬುವವರು ಕಳೆದ 8 ವರ್ಷದಿಂದ ಸುತ್ತಮುತ್ತಲ ರೈತರಿಂದ ಶುಂಠಿ ಖರೀದಿಸಿ ವ್ಯಾಪಾರ ಮಾಡುತ್ತಿದ್ದಾರೆ. ನ.18ರಂದು ಆಯನೂರಿನಿಂದ 180 ಕ್ವಿಂಟಾಲ್‌ ಶುಂಠಿಯನ್ನು … Read more

ನಡುರಸ್ತೆಯಲ್ಲೇ ಅರಣ್ಯಾಧಿಕಾರಿಗಳನ್ನು ತಡೆದು ಗ್ರಾಮಸ್ಥರ ಆಕ್ರೋಶ, ಕಾರಣವೇನು?

Sarigere-Villagers-Protest-against-forest-officials.

SHIVAMOGGA LIVE NEWS | 22 NOVEMBER 2023 SHIMOGA : ಕಾಡಾನೆಗಳಿಂದ ಬೆಳೆ ಹಾನಿ ಉಂಟಾಗುತ್ತಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರಿಗೆರೆಯಲ್ಲಿ ಘಟನೆ ಸಂಭವಿಸಿದೆ. ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವೇನು? ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ತೋಟ, ಗದ್ದೆಗೆ ನುಗ್ಗುತ್ತಿರುವ ಕಾಡಾನೆಗಳು ಬೆಳೆ ನಷ್ಟ ಉಂಟು ಮಾಡುತ್ತಿವೆ. ಸಾಲ ಮಾಡಿ ಬೆಳೆ ಬೆಳೆದ ರೈತ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ … Read more

ತಮ್ಮಡಿಹಳ್ಳಿ ಸಮೀಪ ವಿಷ ಸೇವಿಸಿ ಯುವಕ ಸಾವು

crime name image

SHIVAMOGGA LIVE NEWS | 22 NOVEMBER 2023 KUMSI : ವಿಷ ಸೇವಿಸಿದ್ದ ಯುವಕನೋರ್ವ ಮೃತಪಟ್ಟಿದ್ದಾನೆ. ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಕೊಟ್ಟಿಗೆ ಗ್ರಾಮದ ವಿನೋದ್‌ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೋಮವಾರ ಸಂಜೆ ಮನೆಯಲ್ಲಿ ವಿಷ ಸೇವಿಸಿ ತೀವ್ರ ಅಸ್ವಸ್ಥನಾಗಿದ್ದ. ವಿನೋದ್‌ನನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಒಂದೇ … Read more

ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ನ.22ರಂದು ಅರ್ಧ ದಿನ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 21 NOVEMBER 2023 SHIMOGA : ಎಂ.ಆರ್.ಎಸ್. ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನ. 22 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30 ರವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆ ಚೀಲೂರು, ಹಾರೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, … Read more

ಆಯನೂರು, ಕುಂಸಿ ಸೇರಿ ಹಲವು ಗ್ರಾಮಗಳಲ್ಲಿ ಎರಡು ದಿನ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 7 NOVEMBER 2023 SHIMOGA : ಕುಂಸಿ ಉಪ ವಿಭಾಗದ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ಕೆಳಕಂಡ ಗ್ರಾಮಗಳಲ್ಲಿ ನವೆಂಬರ್‌ 8, 9ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕುಂಸಿ, ಚೋರಡಿ, ಸನ್ನಿವಾಸ, ತುಪ್ಪೂರು, ಬಾಳೆಕೊಪ್ಪ, ಶೆಟ್ಟಿಕೆರೆ, ಕೋಣೆಹೊಸೂರು, ಡೊಟ್ಟಿಮಟ್ಟಿ, ಕೊರಗಿ, ಹುಬ್ಬನಹಳ್ಳಿ, ಹಾರ್ನಳ್ಳಿ, ರಾಮನಗರ, ಕೆಸವಿನಕಟ್ಟೆ, ವಿಠಗೊಂಡನಕೊಪ್ಪ, ವೀರಣ್ಣನಬೆನವಳ್ಳಿ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಮಲ್ಲಾಪುರ, ಆಯನೂರು, ಮಂಡಘಟ್ಟ, … Read more

ಅಬ್ಬಲಗೆರೆ ಸಮೀಪ ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು

ACCIDENT-NEWS-GENERAL-IMAGE.

SHIVAMOGGA LIVE NEWS | 4 NOVEMBER 2023 SHIMOGA : ಚಲಿಸುತ್ತಿದ್ದ ಬೈಕ್‌ಗೆ (BIKE) ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು ಓರ್ವ ಸವಾರನಿಗೆ ಗಾಯವಾಗಿದೆ. ಚಿಕಿತ್ಸೆ ವೆಚ್ಚ ಭರಿಸುವ ಭರವಸೆ ನೀಡಿದ್ದ ಕಾರು ಚಾಲಕ ಕೊನೆಗೆ ಮಾತು ತಪ್ಪಿದ್ದಾನೆ ಎಂದು ಆರೋಪಿಸಿ ಗಾಯಾಳು ದೂರು ನೀಡಿದ್ದಾರೆ. ಅಬ್ಬಲಗೆರೆ ಸಮೀಪದ ಕೆರೆ ಬಳಿ ಘಟನೆ ಸಂಭವಿಸಿದೆ. ಆಶ್ರಯ ಬಡಾವಣೆಯ ಮಂಜಪ್ಪ ಎಂಬುವವರು ಬೀರನಕೆರೆಯಿಂದ ಶಿವಮೊಗ್ಗ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದು ಬೈಕ್‌ ಡಿಕ್ಕಿ … Read more

ಉಂಬ್ಳೆಬೈಲು, ಕಾಚಿನಕಟ್ಟೆ ಸೇರಿ ವಿವಿಧ ಗ್ರಾಮಗಳಲ್ಲಿ ಇವತ್ತು ಮಧ್ಯಾಹ್ನದಿಂದ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 27 OCTOBER 2023 SHIMOGA : ಸಂತೆಕಡೂರು ಗ್ರಾಮದಲ್ಲಿ ವಿದ್ಯುತ್‌ ವಿತರಣ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಅ.27ರಂದು ಮಧ್ಯಾಹ್ನ 12.30 ರಿಂದ ಸಂಜೆ 4 ಗಂಟೆವೆರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ (POWER CUT) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ? ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, … Read more

ಶಿವಮೊಗ್ಗದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷನ ಮೇಲೆ ಮಚ್ಚಿನಿಂದ ದಾಳಿ

Crime-News-General-Image

SHIVAMOGGA LIVE NEWS | 27 OCTOBER 2023 SHIMOGA : ಕಸ ತೆರವು ಮಾಡದ ವಿಚಾರವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರ ಮೇಲೆ ಮಚ್ಚು, ದೊಣ್ಣೆಯಿಂದ ಹಲ್ಲೆ (Attack) ನಡೆಸಲಾಗಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್‌ ಎಂಬುವವರ ಮೇಲೆ ಹಲ್ಲೆಯಾಗಿದೆ. ‌ ಸ್ವಚ್ಛತೆ ಬಳಿಕ ರಸ್ತೆ ಬದಿ ಕಸ ಹೊಳೆಬೆನವಳ್ಳಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು. ದಸರಾ ಹಬ್ಬದ ಹಿನ್ನೆಲೆ ಟ್ರಾಕ್ಟರ್‌ ಸಿಗದೆ ಕಸ ವಿಲೇವಾರಿ ವಿಳಂಬವಾಗಿತ್ತು. ಹಾಗಾಗಿ ರಸ್ತೆ … Read more

ಹುಲಿ, ಸಿಂಹಧಾಮದ ಪ್ರವಾಸಿಗರಿಗೆ ಗುಡ್‌ ನ್ಯೂಸ್‌

Lion-Tiger-Safari-Tyavrekoppa-in-Shimoga.

SHIVAMOGGA LIVE NEWS | 21 OCTOBER 2023 SHIMOGA : ಪ್ರವಾಸಿಗರ ಅನುಕೂಲಕ್ಕೆ ಅ.24ರಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ (SAFARI) ತೆರೆದಿರುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಹುಲಿ-ಸಿಂಹಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮಂಗಳವಾರವು ತೆರೆದಿರುತ್ತದೆ. ಪ್ರವಾಸಿಗರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ದಸರಾ, ನಗರದಲ್ಲಿ ಆನೆಗಳ ತಾಲೀಮು ಆರಂಭ