ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಲಾರಿ ಪಲ್ಟಿ

truck-upside-down-near-skarebyle-in-Shimoga-Thirthahalli-Road.

SHIVAMOGGA LIVE NEWS | 19 MARCH 2023 SHIMOGA : ಭತ್ತ ಸಾಗಿಸುತ್ತಿದ್ದ ಲಾರಿಯೊಂದು (truck) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಶಿವಮೊಗ್ಗ ತಾಲೂಕು ಸಕ್ರೆಬೈಲು ಗ್ರಾಮದ ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಲಾರಿ (truck) ಪಲ್ಟಿಯಾಗಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದವರಿಗೆ ಯಾವುದೆ ತೊಂದರೆ ಆಗಿಲ್ಲ. ಕೂಡಲೆ ಸ್ಥಳೀಯರು ಮತ್ತು ದಾರಿಯಲ್ಲಿ ಹೋಗುತ್ತಿದ್ದ ಇತರೆ ವಾಹನದವರು ಲಾರಿಯಲ್ಲಿದ್ದವರಿಗೆ ನೆರವಾಗಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಸಿಲಿಂಡರ್ ಲಾರಿ … Read more

ಸವಳಂಗ ಸಮೀಪ ಕತ್ತು ಸೀಳಿರುವ ಸ್ಥಿತಿಯಲ್ಲಿ ವೃದ್ಧೆಯ ಮೃತದೇಹ ಪತ್ತೆ

Crime-News-General-Image

SHIVAMOGGA LIVE NEWS | 17 MARCH 2023 SHIMOGA : ಆಡು ಮೇಯಿಸಿಕೊಂಡು ಜೀವನ ನಡೆಸುತ್ತಿದ್ದ ವೃದ್ಧೆಯೊಬ್ಬರ (old lady) ಕತ್ತು ಸೀಳಿ ಹತ್ಯೆ ಮಾಡಿರುವ ಶಂಕೆಯಿದೆ. ಸವಳಂಗ ಸಮೀಪ ಶಿವಮೊಗ್ಗ ತಾಲೂಕು ಸುತ್ತುಕೋಟೆ ಗ್ರಾಮದ ರತ್ನಾಬಾಯಿ (65) ಮೃತ ಮಹಿಳೆ. ಸುತ್ತುಕೋಟೆಯ ಶಾಲೆ ಸಮೀಪದಲ್ಲಿ ರತ್ನಾಬಾಯಿ ಮನೆಯಲ್ಲಿ ಮಲಗಿದ್ದರು. ಬೆಳಗ್ಗೆ ಕುತ್ತು ಸೀಳಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಕುಂಸಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. … Read more

ಶಿವಮೊಗ್ಗ ನಗರದ ವಿವಿಧೆಡೆ, ತಾಲೂಕಿನ ಕೆಲವು ಗ್ರಾಮಗಳಲ್ಲಿ ನಾಳೆ ಕರೆಂಟ್ ಇರಲ್ಲ

power cut mescom ELECTRICITY

SHIVAMOGGA LIVE NEWS | 8 MARCH 2023 SHIMOGA : ತುರ್ತು ಕಾಮಗಾರಿಗಳ ಹಿನ್ನೆಲೆ ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧೆಡೆ ಮಾರ್ಚ್ 9ರಂದು ವಿದ್ಯುತ್ (Power Cut) ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಗ್ರಾಮಗಳಲ್ಲಿ ಕರೆಂಟ್ ಇರಲ್ಲ ಮೆಸ್ಕಾಂ ಮಾಚೇನಹಳ್ಳಿ ವಿವಿ ಕೇಂದ್ರದ ಎಫ್-3 ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದೆ. ಈ ವ್ಯಾಪ್ತಿಯಲ್ಲಿ ಮಾರ್ಚ್ 9 ರಂದು  ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯತ್ ವ್ಯತ್ಯಯವಾಗಲಿದೆ. ಬಿದರೆ, ನಿದಿಗೆ, ಓತಿಘಟ್ಟ, … Read more

ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು

CRIME-NEWS-SHIVAMOGGA-LIVE-NEWS

SHIVAMOGGA LIVE NEWS | 8 MARCH 2023 SHIMOGA : ಮೊಪೆಡ್ ಗೆ KSRTC ಬಸ್ ಡಿಕ್ಕಿಯಾಗಿ (accident) ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕರಿಬಸಪ್ಪ (67) ಎಂಬುವವರು ಮೃತಪಟ್ಟಿದ್ದು, ಬಸವರಾಜು (37) ಎಂಬುವವರಿಗೆ ಗಾಯವಾಗಿದೆ. ಶಿವಮೊಗ್ಗ ತಾಲೂಕು ಬುಳ್ಳಾಪುರ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಟಿವಿಎಸ್ ಮೊಪೆಡ್ ವಾಹನದಲ್ಲಿದ್ದವರು ಬುಳ್ಳಾಪುರ ಗ್ರಾಮದಲ್ಲಿನ ಮನೆಗೆ ತೆರಳುತ್ತಿದ್ದರು. ಈ ವೇಳೆ ಹೊನ್ನಾಳಿ ಕಡೆಯಿಂದ ಬಂದ … Read more

ಕೆಲಸ ಹುಡುಕುತ್ತಿರುವವರೆ ಹುಷಾರ್, ಕೆಲಸ ಕೊಡುವುದಾಗಿ ಶಿವಮೊಗ್ಗದ ಯುವಕನಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು?

Online-Fraud-Case-image

SHIVAMOGGA LIVE NEWS | 7 MARCH 2023 SHIMOGA : ಉದ್ಯೋಗ (job scam) ಕೊಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷ ಲಕ್ಷ ರುಪಾಯಿ ವಂಚನೆ ಮಾಡಿರುವ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರ ವ್ಯಕ್ತಿಗೆ ವಂಚನೆಗೆ ಒಳಗಾಗಿದ್ದಾನೆ. ಮೊಬೈಲಿಗೆ ಬಂತು ಉದ್ಯೋಗದ ಮೆಸೇಜ್ ಮಾ.3ರಂದು ಯುವಕನ ಟೆಲಿಗ್ರಾಂ ಆ್ಯಪ್ ಗೆ ‘ಕೆಲಸ (job scam) ಕೊಡಲಾಗುತ್ತದೆ. ಅದಕ್ಕೂ ಮೊದಲು ಟಾಸ್ಕ್ ಪೂರೈಸಿ ಹೆಚ್ಚಿನ ಗಳಿಕೆ ಮಾಡಿ’ ಎಂದು ಮೆಸೇಜ್ … Read more

ಸವಳಂಗ ರಸ್ತೆಯಲ್ಲಿ ಬೈಕುಗಳು ಮುಖಾಮುಖಿ ಡಿಕ್ಕಿ, ಗಂಭೀರ ಗಾಯ, ಎಸ್ಕಾರ್ಟ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ

280223 Bike Accident at Shimoga Abbalagere

SHIVAMOGGA LIVE NEWS | 28 FEBRUARY 2023 SHIMOGA : ಅಬ್ಬಲಗೆರೆ ಸಮೀಪ ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಎಸ್ಕಾರ್ಟ್ ವಾಹನದ (Police Escort) ಪೊಲೀಸ್ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯಿಂದಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಗದೀಶ್ ನಾಯ್ಕ್ ಮತ್ತು ಮಂಜುನಾಥ್ ಗಾಯಾಳುಗಳು. ಸವಳಂಗ ರಸ್ತೆಯಲ್ಲಿ ಅಬ್ಬಲಗೆರೆ ಸಮೀಪ ಬೈಕುಗಳು ಡಿಕ್ಕಿಯಾಗಿ ಇಬ್ಬರು ಗಾಯಗೊಂಡು, ರಸ್ತೆ ಮೇಲೆ ಬಿದ್ದಿದ್ದರು. ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜಗದೀಶ್ … Read more

ಪ್ರಧಾನಿ ಕಾರ್ಯಕ್ರಮದ ವೇದಿಕೆ ಮುಂದೆ ಬಾಯಿ ಬಡಿದುಕೊಂಡು ಗಮನ ಸೆಳೆಯಲು ಯತ್ನಿಸಿದ ಕಾರ್ಮಿಕರು

VISL-Workers-Protest-in-Airport-Inauguration-Programme

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣದ ಉದ್ಘಾಟನೆ ಸಮಾರಂಭದ ಕಾರ್ಯಕ್ರಮದ ವೇದಿಕೆ ಮುಂಭಾಗ ವಿಐಎಸ್ಎಲ್ ಕಾರ್ಮಿಕರು ಬಾಯಿ ಬಡಿದುಕೊಂಡು, ಘೋಷಣೆ (Slogans) ಕೂಗಿದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಪ್ರಯತ್ನಿಸಿದರು. ಸೋಗಾನೆಯಲ್ಲಿ ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಹಿನ್ನೆಲೆ ಪ್ರಧಾನಿ ಗಮನ ಸೆಳೆಯಲು ವಿಐಎಸ್ಎಲ್ ಕಾರ್ಮಿಕರು ಘೋಷಣೆ ಮೊಳಗಿಸಿದರು. … Read more

ಶಿವಮೊಗ್ಗ ವಿಮಾನ ನಿಲ್ದಾಣ ಹೆಸರಿನ ವಿಚಾರ, ಕುತೂಹಲ ಉಳಿಸಿ ಹೋದ ಪ್ರಧಾನಿ ಮೋದಿ

Prime-Minister-Narendra-Modi-in-Shivamogga-Airport

SHIVAMOGGA LIVE NEWS | 27 FEBRURARY 2023 SHIMOGA : ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದ ಹೆಸರು (Airport Name) ಘೋಷಣೆ ಮಾಡದಿರುವುದು ಕುತೂಹಲ ಮೂಡಿಸಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು (Airport Name) ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದ್ದರು. ಅದರಂತೆ ರಾಜ್ಯ ಸಚಿವ ಸಂಪುಟವು ಕುವೆಂಪು ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಘೋಷಣೆ ಮಾಡದ ಪ್ರಧಾನಿ ಪ್ರಧಾನಿ … Read more

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಧಾನಿ, ಫೋಟೊಗಳ ಮೂಲಕ ಮೋದಿ ಭೇಟಿಯ ಕಂಪ್ಲೀಟ್ ನ್ಯೂಸ್

PM-Narendra-Modi-In-Shimoga-Airport-Terminal-building

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ವೇಳೆ ಟರ್ಮಿನಲ್ ವೀಕ್ಷಣೆ, ಅಧಿಕಾರಿಗಳ ಜೊತೆ ವಿಮಾನ ನಿಲ್ದಾಣದ (Airport Inauguration) ಕುರಿತು ಮಾಹಿತಿ ಪಡೆದರು. ವೇದಿಕೆ ಕಾರ್ಯಕ್ರಮದಲ್ಲಿಯು ಪಾಲ್ಗೊಂಡಿದ್ದರು. ಇದರ ಫೋಟೊ ನ್ಯೂಸ್ ಇಲ್ಲಿದೆ. ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport Inauguration) ಬಂದಿಳಿದ ಪ್ರಧಾನಿ ನರೇಂದ್ರ ಮೋದಿ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ … Read more

ಶಿವಮೊಗ್ಗದಲ್ಲಿ ಮೋದಿ, ಕನ್ನಡದಲ್ಲೇ ಭಾಷಣ ಆರಂಭ, ರಾಷ್ಟ್ರಕವಿಯ ಸ್ಮರಣೆ

Felicitation-For-PM-Narendra-Modi-in-Shivamogga-Airport

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಭಾಷಣ (Speech) ಆರಂಭಿಸಿದರು. ಅಲ್ಲದೆ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿಕೊಂಡು, ನಾಡ ಗೀತೆಯ ಮೊದಲು ಸಾಲುಗಳನ್ನು ಉಚ್ಚರಿಸಿದರು. ಸೋಗಾನೆಯಲ್ಲಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಈ ವೇಳೆ ಕನ್ನಡದಲ್ಲಿಯೇ ಪ್ರಧಾನಿ ಮೋದಿ ಭಾಷಣ (Speech) ಆರಂಭಿಸಿದ್ದರು, ನೆರೆದಿದ್ದವರ ಮೆಚ್ಚುಗೆ ಗಳಿಸಿತು. ಕನ್ನಡ … Read more