ಹೊಸ ಟ್ರಾಕ್ಟರ್ ಟ್ರಯಲ್ ನೋಡುವಾಗ ಪಲ್ಟಿ, ಯುವಕ ಸಾವು

091221 Tractor Accident at Hosakoppa

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಡಿಸೆಂಬರ್ 2021 ಹೊಸ ಟ್ರಾಕ್ಟರ್ ಇಂಜಿನ್ ಟ್ರಯಲ್ ನೋಡುವಾಗ ಪಲ್ಟಿಯಾಗಿ ಯುವಕನೊಬ್ಬ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಹೊಸಕೊಪ್ಪ ತಾಂಡಾದ ಚಾನೆಲ್ ಬಳಿ ಘಟನೆ ಸಂಭವಿಸಿದೆ. ಹೊಸಕೊಪ್ಪ ತಾಂಡಾದ ಶಶಿನಾಯ್ಕ (30) ಮೃತ ಯುವಕ. ಹೊಸಾ ಟ್ರಾಕ್ಟರ್ ಖರೀದಿಸಿದ್ದು ಟ್ರಯಲ್ ನೋಡುವಾಗ ರಸ್ತೆಯಲ್ಲಿ ಎದುರಿಗೆ ಬಂದ ವಾಹನ ತಪ್ಪಿಸುವಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ. ಈ ವೇಳೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶಶಿನಾಯ್ಕ ಟ್ರಾಕ್ಟರ್ ಅಡಿ ಸಿಲುಕಿಕೊಂಡು ಮೃತಪಟ್ಟಿದ್ದಾನೆ. … Read more

ಅಡಕೆ ಬೇಯಿಸುವ ಹಂಡೆಗಳನ್ನು ಕದ್ದೊಯ್ದು ತೋಟದಲ್ಲಿ ಮುಚ್ಚಿಟ್ಟಿದ್ದ ಕಳ್ಳರು ಅರೆಸ್ಟ್

071221 Two Thieves arrest at holehonnur police station

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 7 ಡಿಸೆಂಬರ್ 2021 ಅಡಕೆ ಬೇಯಿಸುವ ತಾಮ್ರದ ಹಂಡೆಗಳನ್ನು ಕದ್ದಿದ್ದ ಕಳ್ಳರನ್ನು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೊಳೆಹೊನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಭದ್ರಾವತಿ ತಾಲೂಕಿನ ಅಶೋಕನಗರದ ಕುಮಾರ್ ಎಂಬುವವರ ಅಡಕೆ ಮನೆಯಲ್ಲಿದ್ದ ಎರಡು ಅಡಕೆ ಬೇಯಿಸುವ ಹಂಡೆಗಳು ಕಳವಾಗಿದ್ದವು. ಈ ಬಗ್ಗೆ ಕುಮಾರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಂಡೆಗಳನ್ನು ಅಶೋಕನಗರದ ಉಮೇಶ್ ಮತ್ತು ಬುಡೇನ್ ಸಾಬ್ … Read more

ಇವತ್ತು ಕಾಶಿಪುರ, ಡಿ.9ರಂದು ಕುಂಸಿ ರೈಲ್ವೆ ಕ್ರಾಸಿಂಗ್ ಬಂದ್, ವಾಹನಗಳಿಗೆ ಪರ್ಯಾಯ ಮಾರ್ಗ

mysore talaguppa train engine with boggies

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಡಿಸೆಂಬರ್ 2021 ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 49, 50 ಮತ್ತು 79ರ ಲೆವೆಲ್ ಕ್ರಾಸಿಂಗ್‌ನಲ್ಲಿ ತಾಂತ್ರಿಕ ಪರಿಶೀಲನೆ ಮಾಡುವುದಕ್ಕಾಗಿ ಗೇಟ್‌ಗಳನ್ನು ನಿಗದಿತ ದಿನಗಳಂದು ಮುಚ್ಚಲಾಗುತ್ತಿದ್ದು, ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಆದೇಶಿಸಿದ್ದಾರೆ. ಎಲ್‌ಸಿ ನಂ 50ರಲ್ಲಿ (ಕಾಶೀಪುರ) ಡಿ.6ರ ರಾತ್ರಿ 10.30ರಿಂದ ಡಿ.7ರ ರಾತ್ರಿ 7 ಗಂಟೆವರೆಗೆ ಮಾರ್ಗವನ್ನು ಬಂದ್ ಮಾಡಲಾಗುವುದು. ಈ ಭಾಗದಲ್ಲಿ ಸಂಚರಿಸುವ ವಾಹನಗಳು ಸವಳಂಗ … Read more

ನಾಲ್ಕು ಹಸುಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ರೈತ, ಕಂಪ್ಲೇಂಟ್’ನಲ್ಲಿ ಏನಿದೆ?

holehonnur name graphics

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 4 ಡಿಸೆಂಬರ್ 2021 ವ್ಯಕ್ತಿಯೊಬ್ಬ ತಾನು ಸಾಕಿರುವ ನಾಲ್ಕು ಹಸುಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಹಸುಗಳು ಹಾಲು ಕೊಡುತ್ತಿಲ್ಲ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಕಂಪ್ಲೇಂಟ್ ಕಾಪಿ ಸ್ವೀಕರಿಸಿದ ಪೊಲೀಸರು, ಆತನಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ. ಹೊಳೆಹೊನ್ನೂರು ಸಮೀಪದ ಗ್ರಾಮವೊಂದರ ರೈತ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವಿಚಿತ್ರ ದೂರು ದಾಖಲಿಸಿದ್ದಾರೆ. ತಮ್ಮ ಮನೆಯ ಕೊಟ್ಟಿಗೆಯಲ್ಲಿರುವ ನಾಲ್ಕು ಹಸುಗಳ  ವಿರುದ್ಧವೇ ಪ್ರಕರಣ ದಾಖಲಿಸಲು ಮುಂದಾಗಿದ್ದಾನೆ. ಹಸುಗಳ ವಿರುದ್ಧ ಪ್ರಕರಣವೇಕೆ? ಹೊಳೆಹೊನ್ನೂರು … Read more

ಕೂಡಲಿಯಲ್ಲಿ ಮತ್ತೆ ಆತಂಕ, ಸ್ನಾನಘಟ್ಟದ ಬಳಿಗೆ ಬಂದು ಕುಳಿತ ಮೊಸಳೆ

031221 Crocodile in Kudli Village in Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021 ತುಂಗಾ, ಭದ್ರಾ ಸಂಗಮ ಸ್ಥಳ ಕೂಡಲಿಯಲ್ಲಿ ಮತ್ತೆ ಮೊಸಳೆ ಭೀತಿ ಎದುರಾಗಿದೆ. ಇವತ್ತು ಬೆಳಗ್ಗೆಯಿಂದ ಮೊಸಳೆಯು ಸ್ನಾನ ಘಟದ ಬಳಿಗೆ ಬಂದು ಕುಳಿತಿದೆ. ಕಳೆದ ವಾರ ಸ್ನಾನ ಘಟ್ಟದ ಎದುರು ಭಾಗದಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇವತ್ತು ಸ್ನಾನ ಘಟ್ಟದ ಬಳಿಗೆ ಬಂದು ಕುಳಿತಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ. ದಡದಲ್ಲೇ ನಿಂತ ಭಕ್ತರು ಸ್ನಾನ ಘಟ್ಟದ ಬಳಿಗೆ ಮೊಸಳೆ ಬಂದಿರುವುದು ಬೆಳಗ್ಗೆ … Read more

ತುಂಗಾ ನಗರ ಠಾಣೆ ಪೊಲೀಸರ ದಾಳಿ, ಬಳ್ಳಾರಿಯ ಇಬ್ಬರು, ಟಿಪ್ಪುನಗರದ ಇಬ್ಬರು ಅರೆಸ್ಟ್

Arrest News Graphics

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 2 ಡಿಸೆಂಬರ್ 2021 ಗಾಂಜಾ ದಂಧೆಕೋರರ ವಿರುದ್ಧ ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎನ್.ಆರ್.ಪುರ ರಸ್ತೆಯಲ್ಲಿ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ್ದಾರೆ. ಮಾರಾಟಕ್ಕೆ ತಂದಿದ್ದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಎನ್.ಆರ್.ಪುರ ರಸ್ತೆಯ ಪುಟ್ಟಪ್ಪ ಕ್ಯಾಂಪ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಲೇಔಟ್’ನಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ನಾಲ್ವರು ಯುವಕರು … Read more

ವಿದ್ಯುತ್ ಕಂಬಕ್ಕೆ ಹಾಲಿನ ವಾಹನ ಡಿಕ್ಕಿ, ಅದೃಷ್ಟವಶಾತ್ ತಪ್ಪಿತು ಭಾರಿ ಅನಾಹುತ

281121 Milk Van Accident at Rechikoppa near Kumsi

ಶಿವಮೊಗ್ಗ ಲೈವ್.ಕಾಂ | KUMSI NEWS | 28 ನವೆಂಬರ್ 2021 ಚಾಲಕನ ನಿಯಂತ್ರಣ ತಪ್ಪಿದ ವಾಹನವೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಕುಂಸಿ ಸಮೀಪದ ರೇಚಿಕೊಪ್ಪ ಗ್ರಾಮದಲ್ಲಿ ಬೆಳಗ್ಗೆ ಘಟನೆ ಸಂಭವಿಸಿದೆ. ಹಾಲು ತುಂಬಿಸಿಕೊಂಡು ಹೋಗಲು ಬಂದಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಶೆಟ್ಟಿಕೆರೆಯಿಂದ ರೇಚಿಕೊಪ್ಪ ಗ್ರಾಮಕ್ಕೆ ವಾಹನ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಫೋಟೊ, ಮಾಹಿತಿ : ಈಶ್ವರ್ ರೇಚಿಕೊಪ್ಪ

ಕೂಡಲಿಯ ತುಂಗಭದ್ರಾ ಸಂಗಮ ಸ್ಥಳದಲ್ಲಿ ಮೊಸಳೆ ಪ್ರತ್ಯಕ್ಷ, ಫೋಟೊ ವೈರಲ್

281121 Crocodile found at Kudli TungaBhadra River

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 28 ನವೆಂಬರ್ 2021 ಪುಣ್ಯ ಸ್ನಾನಕ್ಕೆ ಹೆಸರಾದ ಕೂಡಲಿಯಲ್ಲಿ ಮೊಸಳೆ ಆತಂಕ ಶುರುವಾಗಿದೆ. ತುಂಗಾ, ಭದ್ರಾ ನದಿಗಳ ಸಂಗಮ ಸ್ಥಳದಲ್ಲಿ ಮೊಳಸೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹೊಳೆ ದಂಡೆ ಮೇಲೆ ಮೊಸಳೆಯೊಂದು ಬಹುಹೊತ್ತು ಕುಳಿತಿತ್ತು. ಸ್ಥಳೀಯರು ಇದರ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೊ ವೈರಲ್ ಆಗಿದೆ. ಮಳೆ ಮತ್ತು ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಮೊಸಳೆಗಳು ನೀರಿನ ಜೊತೆಗೆ ತೇಲಿ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೂಡಲಿ … Read more

ಜಾವಳ್ಳಿ ಶಾಲೆ ಬಳಿ ಬೈಕಿಗೆ ಲಾರಿ ಡಿಕ್ಕಿ, ಖಾಸಗಿ ಫೈನಾನ್ಸ್ ಕಂಪನಿ ಕೆಲಸಗಾರ ಸಾವು

holehonnur name graphics

ಶಿವಮೊಗ್ಗ ಲೈವ್.ಕಾಂ | HOLEHONNURU NEWS | 26 ನವೆಂಬರ್ 2021 ಬೈಕ್’ಗೆ ಲಾರಿ ಡಿಕ್ಕಿಯಾಗಿ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅರಹತೊಳಲು ವಡ್ಡರಹಟ್ಟಿಯ ರಂಗಸ್ವಾಮಿ (18) ಮೃತ ದುರ್ದೈವಿ. ಜಾವಳ್ಳಿಯ ಜ್ಞಾನದೀಪ ಶಾಲೆ ಬಳಿ ಘಟನೆ ಸಂಭವಿಸಿದೆ. ರಂಗಸ್ವಾಮಿ ತೆರಳುತ್ತಿದ್ದ ಬೈಕಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಂಗಸ್ವಾಮಿ ಕೊನೆಯುಸಿರೆಳೆದಿದ್ದಾನೆ. ಗುಂಡಿಗಳೇ ಕಾರಣ ಹೊಳೆಹೊನ್ನೂರು ರಸ್ತೆಯಲ್ಲಿ ಡಾಂಬಾರಿಗಿಂತಲೂ ಹೆಚ್ಚು ಗುಂಡಿಗಳೇ ಕಾಣಿಸುತ್ತವೆ. ಗುಂಡಿಗಳನ್ನು ತಪ್ಪಿಸಲು ವಾಹನ … Read more

ಹೈವೇ ರಸ್ತೆ ಮೇಲೆ ಬಾಲಕನ ಮೃತದೇಹ ಇರಿಸಿ ಕುಂಸಿ ಗ್ರಾಮಸ್ಥರ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ

251121 villagers protest at kumsi over student death in accident

ಶಿವಮೊಗ್ಗ ಲೈವ್.ಕಾಂ | AYANUR NEWS | 26 ನವೆಂಬರ್ 2021 ಅಪಘಾತದಲ್ಲಿ ಮೃತಪಟ್ಟ ಬಾಲಕನ ಮೃತದೇಹವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಿಸಿ ಕುಂಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾರು ಡಿಕ್ಕಿಯಾಗಿ ಬಾಲಕ ಸಾವು ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ವೇಣುಗೋಪಾಲ (9) ಮೃತ ಬಾಲಕ. ಸಾಗರ ಕಡೆಯಿಂದ ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವೇಣುಗೋಪಾಲ್’ಗೆ ಡಿಕ್ಕಿ ಹೊಡೆದಿದೆ. … Read more