ಕೋಟೆಗಂಗೂರು ದೇಗುಲದಲ್ಲಿ ಹುಂಡಿ ಒಡೆದು ಟವೆಲ್‌ನಲ್ಲಿ ಕಾಣಿಕೆ ಹಣ ಸುತ್ತಿಕೊಂಡು ಹೋದ ಖದೀಮರು

Hundi-Theft-at-temple.webp

ಶಿವಮೊಗ್ಗ: ದೇವಸ್ಥಾನದ (Temple) ಬಾಗಿಲಿನ ಬೀಗ ಮುರಿದು ಹುಂಡಿ ಒಡೆದು ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ಹುಂಡಿ ಒಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗ ತಾಲೂಕು ಕೋಟೆಗಂಗೂರಿನ ಅಜ್ಜಪ್ಪಸ್ವಾಮಿ ದೇವಸ್ಥಾನದಲ್ಲಿ ಜುಲೈ 12ರ ರಾತ್ರಿ ಕಳ್ಳತನವಾಗಿದೆ. ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ಹುಂಡಿ ಒಡೆದು ಸುಮಾರು ₹60,000 ಕಾಣಿಕೆ ಹಣ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನಲ್ಲಿ ಏನಿದೆ? ಜು.12ರ ರಾತ್ರಿ 7 ಗಂಟೆಗೆ ಅರ್ಚಕ ಬಸವರಾಜಪ್ಪ ಪೂಜೆ ಮುಗಿಸಿ ದೇವಸ್ಥಾನದ ಬೀಗ ಹಾಕಿಕೊಂಡು ಹೋಗಿದ್ದರು. ಜು.13ರಂದು … Read more

ಶಿವಮೊಗ್ಗದಲ್ಲಿ ಧಗಧಗ ಹೊತ್ತಿ ಉರಿದ ಕಾರು

Car-Incident-at-Sagara-road-near-lion-safari.

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕಾರಿನ ಮುಂಭಾಗ ಸುಟ್ಟು ಹೋಗಿದೆ. ಶಿವಮೊಗ್ಗ ತಾಲೂಕು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಮೀಪ ರಾತ್ರಿ ಘಟನೆ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿರುವ ಶಂಕೆ ಇದೆ. ಇದನ್ನೂ ಓದಿ » ಸೋಮಿನಕೊಪ್ಪ ಸಮೀಪ ಕೆಲಸ ಮುಗಿಸಿ ಮನೆಗೆ ಬಂದ ದಂಪತಿಗೆ ಕಾದಿತ್ತು ಶಾಕ್ Car Incident Near Lion and Tiger Safari

ತುಂಗಾ ನಾಲೆಗಳಲ್ಲಿ ನೀರು ಹರಿಸುವ ದಿನಾಂಕ ಪ್ರಕಟ, ಯಾವ ನಾಲೆಯಲ್ಲಿ ಯಾವಾಗ ನೀರು ಹರಿಸಲಾಗುತ್ತೆ?

tunga-dam-river.

ಶಿವಮೊಗ್ಗ: ಮುಂಗಾರು ಬೆಳೆಗೆ ತುಂಗಾ ಎಡ ಮತ್ತು ಬಲ ದಂಡೆ ನಾಲೆಗಳಿಗೆ (Canal) ನೀರು ಹರಿಸಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಡದಂಡೆ ನಾಲೆಯಲ್ಲಿ ಜುಲೈ 12ರಿಂದ ಮತ್ತು ಬಲದಂಡೆ ನಾಲೆಯಲ್ಲಿ ಜುಲೈ 15ರಿಂದ ನೀರು ಹರಿಸಲಾಗುತ್ತದೆ. ಅಚ್ಚುಕಟ್ಟು ರೈತರು ಹಾಗೂ ಸಾರ್ವಜನಿಕರು, ಜನ, ಜಾನುವಾರುಗಳೊಂದಿಗೆ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆ ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇದನ್ನೂ ಓದಿ » ‘ಮಸೀದಿಗಳಲ್ಲಿ … Read more

ಆಯನೂರಿನಲ್ಲಿ ಇಂದು ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಜನಸ್ಪಂದನಾ ಕಾರ್ಯಕ್ರಮ

Ayanur Graphics

ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರದ ಶಾಸಕಿ (MLA) ಶಾರದಾ ಪೂರ್ಯಾನಾಯ್ಕ ಅವರು ತಾಲ್ಲೂಕಿನ ಕುಂಸಿ, ಆಯನೂರು ಮತ್ತು ಹಾರನಹಳ್ಳಿ ಹೋಬಳಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಜುಲೈ 7ರಂದು ಆಯನೂರಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ಜನಸ್ಪಂದನ ಸಭೆ ನಡೆಸಲಿದ್ದಾರೆ. ಈ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಶೀಲ್ದಾರ್ ವಿ.ಎಸ್.ರಾಜೀವ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಭದ್ರಾ ಜಲಾಶಯದ ಒಳ ಹರಿವು ತುಸು ಏರಿಕೆ, ಇವತ್ತು ನೀರಿನ ಮಟ್ಟ ಎಷ್ಟಿದೆ?

ಸಿಗಂದೂರಿಗೆ ತೆರಳುತ್ತಿದ್ದ ಟಿಟಿ ಅಪಘಾತ, ಮುಂಭಾಗ ನಜ್ಜುಗುಜ್ಜು, ಹೇಗಾಯ್ತು ಘಟನೆ?

Bangalore-Based-tempo-traveller-mishap-at-kumsi

ಶಿವಮೊಗ್ಗ: ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟೆಂಪೊ ಟ್ರಾವಲರ್‌ (Tempo Traveller) ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕುಂಸಿ – ಚಿಕ್ಕದಾನವಂದಿ ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಬೆಂಗಳೂರಿನ ದೇವನಹಳ್ಳಿ ನಿವಾಸಿಗಳು ಸಿಗಂದೂರು ದೇವಸ್ಥಾನಕ್ಕೆ ತೆರಳುವಾಗ ಅಪಘಾತವಾಗಿದೆ. ಬೆಳಗ್ಗೆ 5.30ರ ಹೊತ್ತಿಗೆ ಟೆಂಪೊ ಟ್ರಾವಲರ್‌ ವಾಹನ ಹೆದ್ದಾರಿಯಲ್ಲಿ ತೆರಳುವಾಗ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ ಎಂದು ಆರೋಪಿಸಲಾಗಿದೆ. ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ … Read more

ತುಂಗಾ ಜಲಾಶಯದ ಹೊರ ಹರಿವು ಏರಿಕೆ, ಇವತ್ತು ಎಷ್ಟಿದೆ?

Heavy-outflow-from-tunga-dam.

ಶಿವಮೊಗ್ಗ: ತೀರ್ಥಹಳ್ಳಿ ಸೇರಿದಂತೆ ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ತುಂಗಾ ಜಲಾಶಯದ (Tunga Dam) ಒಳ ಹರಿವು ಏರಿಕೆಯಾಗಿದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಯಿತು. ತುಂಗಾ ಜಲಾಶಯಕ್ಕೆ ಇವತ್ತು 56,926 ಕ್ಯೂಸೆಕ್‌ ಒಳ ಹರಿವು ಇದೆ. ಒಟ್ಟು 67,990 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದರಿಂದಾಗಿ ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಇದನ್ನೂ ಓದಿ » ಭದ್ರಾ ಜಲಾಶಯದ ಒಳ ಹರಿವು ಏರಿಕೆ, ಇವತ್ತು ಎಷ್ಟಿದೆ? ಇದನ್ನೂ ಓದಿ … Read more

ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಕುಸಿತ, ಹೊರ ಹರಿವು ಎಷ್ಟಿದೆ?

Tunga-Dam-Gajanuru.

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಹಾಗಾಗಿ ಹೊರ ಹರಿವು ಪ್ರಮಾಣವು ತಗ್ಗಿದೆ. (Dam Level) ತುಂಗಾ ಜಲಾಶಯಕ್ಕೆ ಇವತ್ತು 27,860 ಕ್ಯೂಸೆಕ್‌ ಒಳ ಹರಿವು ಇದೆ. 27,663 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ತುಂಗಾ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ಇತ್ತು. ಇದನ್ನೂ ಓದಿ » ಶಿವಮೊಗ್ಗದ ಹವಾಮಾನ ವರದಿ | 19 ಜೂನ್‌ 2025 | ಬೆಳಗ್ಗೆಯಿಂದ ಮೋಡ, ಮಳೆ, ತಾಪಮಾನ … Read more

ತುಂಗಾ ಡ್ಯಾಮ್‌ನಿಂದ ಮತ್ತಷ್ಟು ನೀರು ಹೊರಕ್ಕೆ, ಇವತ್ತು ಎಷ್ಟಿದೆ ಒಳ, ಹೊರ ಹರಿವು?

Heavy-outflow-from-tunga-dam.

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ತುಂಗಾ ಜಲಾಶಯದ (Dam Level) ಒಳ ಹರಿವು ಹೆಚ್ಚಳವಾಗಿದೆ. ಹಾಗಾಗಿ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇವತ್ತು ತುಂಗಾ ಜಲಾಶಯದಕ್ಕೆ 41,202 ಕ್ಯೂಸೆಕ್‌ ಒಳ ಹರಿವು ಇದೆ. 42,764 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆ, ಮಳೆ ಕಡಿಮೆಯಾದರೂ ನಿಲ್ಲದ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಸುದ್ದಿ

ತುಂಗಾ ಡ್ಯಾಮ್‌ ಎಲ್ಲ ಗೇಟ್‌ ಓಪನ್‌, ಮಂಟಪ ಮುಕ್ಕಾಲು ಭಾಗ ಮುಳುಗಡೆ, ನದಿಯಲ್ಲಿ ಎಷ್ಟು ನೀರು ಹರಿಯುತ್ತಿದೆ?

tunga-dam-water-release-and-mantapa-in-shimoga

ಶಿವಮೊಗ್ಗ: ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು (Outflow) ಹೆಚ್ಚಳವಾಗಿದೆ. ಇದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಶಿವಮೊಗ್ಗ ನಗರದ ಕೋರ್ಪಲಯ್ಯ ಛತ್ರ ಮಂಟಪ ಮುಕ್ಕಾಲು ಭಾಗ ಮುಳುಗಿದೆ. ಎಲ್ಲ ಗೇಟ್‌ ಓಪನ್ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದರಿಂದ ಜಲಾಶಯಕ್ಕೆ 31 ಸಾವಿರ ಕ್ಯೂಸೆಕ್‌ ಒಳ ಹರಿವು ಇದೆ. 27 ಸಾವಿರ ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ತುಂಗಾ ಜಲಾಶಯದ ಎಲ್ಲ ಗೇಟುಗಳನ್ನು ತೆರೆಯಲಾಗಿದೆ. ಮಂಟಪ ಮುಕ್ಕಾಲು ಮುಳುಗಡೆ ಇನ್ನು, … Read more

ಆಯನೂರು ಸಮೀಪ ಮನೆ ಗೋಡೆ ಕುಸಿದು ವೃದ್ಧೆ ಸಾವು, ಮಹಿಳೆಗೆ ಗಂಭೀರ ಗಾಯ

House-wall-collapse-at-mandagatta

ಶಿವಮೊಗ್ಗ: ಭಾರಿ ಮಳೆಗೆ ಮನೆ ಗೋಡೆ ಕುಸಿದು (collapse) ವೃದ್ಧೆ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಶಿವಮೊಗ್ಗ ತಾಲೂಕು ಆಯನೂರು ಸಮೀಪದ ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗಡಿ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಮನೆಯ ಗೋಡೆ ಕುಸಿದು ವೃದ್ಧೆ ಸಿದ್ದಮ್ಮ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಹೇಮಾವತಿ ಎಂಬುವವರಿಗೆ ಗಂಭೀರ ಗಾಯವಾಗಿದೆ. ಪರಶುರಾಮ, ಪಲ್ಲವಿ, ಚೇತನ್‌ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು … Read more