‘ನಾನು ಪ್ರತಿದಿನ ಕಣ್ಣೀರು ಹಾಕುತ್ತೇನೆ, ಆದರೆ ಸುಮ್ ಸುಮ್ನೆ ಕಣ್ಣೀರು ಹಾಕೋದಿಲ್ಲ’

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ನಾನು ಭಾವುಕ ಜೀವಿ. ಪ್ರತಿದಿನ ಕಣ್ಣೀರು ಹಾಕುತ್ತೇನೆ. ಆದರೆ ಸುಮ್ ಸುಮ್ನೆ ಕಣ್ಣೀರು ಹಾಕುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಅಂತಾ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾವು ಕಣ್ಣೀರು ಹಾಕಲು ಕಾರಣವೇನು ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಅವರ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತದೆ … Read more

ಸಚಿವ ರೇವಣ್ಣ ಅವರ ಹಣ ನಿಮ್ಮಲ್ಲಿದೆ, ಮನೆ ಮೇಲೆ ರೇಡ್ ಮಾಡ್ತೀವಿ ಅಂತಾ ಅಧಿಕಾರಿಗೆ ಬೆದರಿಕೆ, ಸೊರಬದಲ್ಲಿ ಕೇಸ್

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019 ಎಸಿಬಿ ಡಿವೈಎಸ್ಪಿ ಎಂದು ಹೇಳಿ ಸೊರಬ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗೆ ಬ್ಲ್ಯಾಕ್’ಮೇಲ್ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ. ಮಂಜುನಾಥ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿ ವಿರುದ್ಧ ಕೆ.ಸಿ.ದೇವರಾಜೇಗೌಡ, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರಾದ ನಿಮ್ಮಲ್ಲಿ ಅವರ ಹಣ ಇಡಲಾಗಿದೆ. ಈ ಕುರಿತು ಚರ್ಚಿಸಬೇಕಿದೆ. ಕೂಡಲೇ ವೈಯಕ್ತಿಕವಾಗಿ ನನಗೆ ಭೇಟಿ ನೀಡಿ. ಇಲ್ಲವಾದರೆ, ಹಾಸನದಲ್ಲಿರುವ ನಿಮ್ಮ ಮನೆಯ ಮೇಲೆ … Read more

‘ಎಲೆಕ್ಷನ್ ಮುಗಿಸಿ ಪ್ಯಾಕೇಜ್ ಟೂರ್ ಹೋದರು, ಅಭ್ಯರ್ಥಿಯಾದ್ರೂ ಪ್ಯಾಕೇಜ್ ಬರುವವರೆಗೆ ನನ್ನ ತಮ್ಮ ಕ್ಷೇತ್ರಕ್ಕೇ ಬಂದಿರಲಿಲ್ಲ’

Kumar Bangarappa Photo 1

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019 ಕರೆಕ್ಟಾದ ಪ್ಯಾಕೇಜ್ ಬಾರದೆ ಇದ್ದಿದ್ದರಿಂದಲೇ, ಮುಖ್ಯಮಂತ್ರಿ ಶಿವಮೊಗ್ಗ ಭೇಟಿ ವೇಳೆ ನನ್ನ ತಮ್ಮ ಕಾಣಿಸಲಿಲ್ಲ. ಪ್ಯಾಕೇಜ್ ಕುರಿತು ಸ್ಪಷ್ಟತೆ ಸಿಗುವವರೆಗೂ ಅಭ್ಯರ್ಥಿಯಾಗಿ ಅವರು ಕ್ಷೇತ್ರಕ್ಕೆ ಬರಲಿಲ್ಲ. ಹೀಗಂತ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಸೊರಬ ತಾಲೂಕು ಕೋಟಿಪುರ ಗ್ರಾಮದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ವಿಧಾನಸಭೆ ಚುನಾವಣೆ ಬಳಿಕ ಪ್ಯಾಕೇಜ್ ಟೂರ್ ಹೋದವರು, ಮಧ್ಯರಾತ್ರಿ ಮೂರು … Read more

ನ್ಯೂಸ್ ಚಾನೆಲ್ ಕಾರ್ಯಕ್ರಮದ ವೇಳೆ ಸೊರಬದಲ್ಲಿ ಕೈ ಕೈ ಮಿಲಾಯಿಸಿದ ರಾಜಕೀಯ ಪಕ್ಷಗಳ ಕಾರ್ಯಕರ್ತರು

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | 22 ಮಾರ್ಚ್ 2019 ಲೋಕಸಭೆ ಚುನಾವಣೆ ಸಂಬಂಧ ನ್ಯೂಸ್ ಚಾನೆಲ್ ಒಂದರ ಕಾರ್ಯಕ್ರಮದ ಚಿತ್ರೀಕರಣದ ವೇಳೆ, ಕಾಂಗ್ರೆಸ್ – ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಸಿದ್ದಾರೆ. ಈ ಸಂಬಂಧ ಸೊರಬ ಠಾಣೆಲ್ಲಿ ದೂರು, ಪ್ರತಿದೂರು ಸಲ್ಲಿಸಲಾಗಿದೆ. ಚಿತ್ರೀಕರಣದ ಸಂದರ್ಭ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ಅಣ್ಣಪ್ಪ ಎಂಬುವವರು ದೂರು ನೀಡಿದ್ದಾರೆ. ರಾಜಕೀಯ ದ್ವೇಷದಿಂದ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿದ್ದಾರೆ. ಮತ್ತೊಂದೆಡೆ ಪ್ರಭಾಕರ್ ಎಂಬುವವರು ಪ್ರತಿದೂರು … Read more

‘ಸೋಲಿಗೆ ಹೆದರೋದಿಲ್ಲ, ಚುನಾವಣೆ ಬಳಿಕ ರಾಘವೇಂದ್ರ ಅವರೇ ಶಿವಮೊಗ್ಗದಿಂದ ಎಕ್ಸ್’ಪೋರ್ಟ್ ಆಗ್ತಾರೆ’

ಶಿವಮೊಗ್ಗ ಲೈವ್.ಕಾಂ | 19 ಮಾರ್ಚ್ 2019 ನಾನು ಸೋಲಿಗೆ ಹೆದರೋದಿಲ್ಲ. ಈ ಬಾರಿ ರಾಘವೇಂದ್ರ ಅವರು ಶಿವಮೊಗ್ಗದಿಂದ ಎಕ್ಸ್’ಪೋರ್ಟ್ ಆಗಲಿದ್ದಾರೆ ಅಂತಾ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೊರಬದ ಕುಬಟೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮಧು ಬಂಗಾರಪ್ಪ, ಚುನಾವಣೆಯಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ ನಂಬರ್ | 9964634494 ಈ ಮೇಲ್ | shivamoggalive@gmail.com

ಮಧು ಬಂಗಾರಪ್ಪ ಹುಟ್ಟುಹಬ್ಬ ಹಿನ್ನೆಲೆ, ಯೋಧರ ಕಲ್ಯಾಣಕ್ಕೆ ಹಣ ಕಳುಹಿಸಿದ ಅಭಿಮಾನಿಗಳು

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ಮಾಜಿ ಶಾಸಕ ಮಧು ಬಂಗಾರಪ್ಪ ಹುಟ್ಟುಹಬ್ಬದ ಹಿನ್ನೆಲೆ, ಅಭಿಮಾನಿ ಬಳಗದಿಂದ ಸೈನಿಕರ ಕಲ್ಯಾಣಕ್ಕೆ 25 ಸಾವಿರ ರೂ. ಕಳುಹಿಸಲಾಗಿದೆ. ಅಭಿಮಾನಿಗಳು ಹಣ ಸಂಗ್ರಹಿಸಿ, ಸೈನಿಕರ ಕಲ್ಯಾಣಕ್ಕೆ ಕಳುಹಿಸಿದ್ದಾರೆ. ಇನ್ನು, ಸೊರಬದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸಮಾಧಿಗೆ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಜೆಡಿಎಸ್ ಬ್ಲಾಕ್ ಅಧ್ಯಕ್ಷ ಹೆಚ್.ಗಣಪತಿ, ವಕ್ತಾರ ಎಂ.ಡಿ.ಶೇಖರ್, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಸದಸ್ಯ ಪ್ರಕಾಶ್ ಹಳೇ ಸೊರಬ, ನಾಗರಾಜ್ ಚಂದ್ರಗುತ್ತಿ, … Read more

ಕಳ್ಳಬಟ್ಟಿ ಸಂಗ್ರಹಿಸಿ ಮಾರಲು ಮುಂದಾಗಿದ್ದವನಿಗೆ ಜೈಲು

prison hand cuff image

ಶಿವಮೊಗ್ಗ ಲೈವ್.ಕಾಂ | 5 ಜನವರಿ 2019    ಕಳ್ಳಬಟ್ಟಿ ಸಂಗ್ರಹಿಸಿ ಮಾರಲು ಮುಂದಾಗಿದ್ದ ವ್ಯಕ್ತಿಗೆ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ,  10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸೊರಬ ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಇಲ್ಲಿನ ರಾಮಗೊಂಡನಕೊಪ್ಪದ ಗೋವಿಂದಪ್ಪ ಶಿಕ್ಷೆಗೊಳಗಾದ ವ್ಯಕ್ತಿ. ಆರೋಪ ಸಾಬೀತಾಗಿರುವ ಹಿನ್ನೆಲೆ, ಗೋವಿಂದಪ್ಪಗೆ ನ್ಯಾ.ಶರತನ್ ಶಿಕ್ಷೆ ಪ್ರಕಟಿಸಿದ್ದಾರೆ. ಒಂದು ವೇಳೆ ದಂಡದ ಮೊತ್ತ ಪಾವತಿಸದಿದ್ದರೆ, ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶಿಸಿದ್ದಾರೆ. ಸರ್ಕಾರದ ಪರ … Read more

ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಅವಘಡ, ಒಂದು ಸಾವು, 17 ಜನರಿಗೆ ಗಾಯ

ಶಿವಮೊಗ್ಗ ಲೈವ್.ಕಾಂ | 18 ಡಿಸೆಂಬರ್ 2018 ಹೋರಿ ಬೆದರಿಸುವ ಸ್ಪರ್ಧೆ ನೋಡಲು ಜನ ನಿಂತಿದ್ದ ನಿರ್ಮಾಣ ಹಂತದ ಮನೆಯ ಸಜ್ಜ ಕುಸಿದು ಓರ್ವ ಸಾವನ್ನಪ್ಪಿದ್ದು, 17ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು, ಹೋರಿ ಇರಿದು ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಜ್ಜ ಕುಸಿದಿದ್ದು ಏಕೆ? ಸೊರಬ ತಾಲೂಕು ಕುಪ್ಪಗಡ್ಡೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ನಿರ್ಮಾಣ ಹಂತದ ಕಟ್ಟಡದ ಮೇಲೆ ನಿಂತು ಜನರ ಸ್ಪರ್ಧೆ ವೀಕ್ಷಿಸುತ್ತಿದ್ದರು. ಅದರ ಸಜ್ಜೆಯ ಮೇಲೂ … Read more

ಚಂದ್ರಗುತ್ತಿಯಲ್ಲಿ ಮುಜರಾಯಿ ಇಲಾಖೆ ಆಡಳಿತ ಕಟ್ಟಡ ಉದ್ಘಾಟನೆ, ಸುಸಜ್ಜಿತ ಪ್ರವಾಸಿ ತಾಣವಾಗಿ ರೂಪಿಸಲು ಪ್ಲಾನ್

ಶಿವಮೊಗ್ಗ ಲೈವ್.ಕಾಂ | 15 ಡಿಸೆಂಬರ್ 2018 ಚಂದ್ರಗುತ್ತಿಯಲ್ಲಿನಿರ್ಮಿಸಿರುವ ಮುಜರಾಯಿ ಇಲಾಖೆಯ ಆಡಳಿತ ಕಟ್ಟಡವನ್ನು ಶಾಸಕ ಕುಮಾರ್ ಬಂಗಾರಪ್ಪ ಇವತ್ತು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಚಂದ್ರಗುತ್ತಿಗೆ ಸೌಕರ್ಯ ಒದಗಿಸುವ ಮೂಲಕ ಸುಸಜ್ಜಿತ ಪ್ರವಾಸಿ ತಾಣವಾಗಿ ರೂಪಿಸುವುದಾಗಿಭರವಸೆ ನೀಡಿದರು.  ಹಬ್ಬ ಮತ್ತು ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಅವರಿಗೆಮೂಲ ಸೌಕರ್ಯದ ಅಗತ್ಯವಿದೆ. ಮೊದಲ ಹಂತದಲ್ಲಿ ಮುಜರಾಯಿತ ಇಲಾಖೆ ಯಾತ್ರಿ ನಿವಾಸ, ಆಡಳಿತ ಕಚೇರಿ, ಕಲ್ಯಾಣಮಂಟಪ, ಮಳಿಗೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ ಎಂದರು. ಶಿವಮೊಗ್ಗ … Read more

ನೂರು ಕ್ವಿಂಟಾಲ್ ಜೋಳ ಧಗಧಗ, ಶಾರ್ಟ್ ಸರ್ಕಿಟ್’ಗೆ ಎರಡೂವರೆ ಎಕರೆ ಕಬ್ಬು ಭಸ್ಮ

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ಪ್ರತ್ಯೇಕ ಪ್ರಕರಣದಲ್ಲಿ ಕಬ್ಬು ಮತ್ತು ನೂರು ಕ್ವಿಂಟಾಲ್ ಜೋಳ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತರಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ನೂರು ಕ್ವಿಂಟಾಲ್ ಜೋಳಕ್ಕೆ ಬೆಂಕಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ನೂರು ಕ್ವಿಂಟಾಲ್’ನಷ್ಟು, ಕಟಾವು ಮಾಡಿದ್ದ ಮೆಕ್ಕೆ ಜೋಳ ಸುಟ್ಟು ಹೋಗಿದೆ. ತಾಲೂಕಿನ ಹೆಗ್ಗೋಡು ಗ್ರಾಮದ ಮಲ್ಲಿಕಾರ್ಜುನಗೌಡ ಎಂಬುವವರಿಗೆ ಸೇರಿದ ಮೆಕ್ಕೆ ಜೋಳಕ್ಕೆ ಬೆಂಕಿ ತುಗಿಲಿದೆ. ನಾಲ್ಕು ಎಕರೆಯಲ್ಲಿ ಬೆಳೆದ ಮೆಕ್ಕೆ ಜೋಳವನ್ನು ಕಟಾವು ಮಾಡಿ, ರಾಶಿ … Read more