ಪುರಲೆ ಬಳಿ ಬೈಕ್’ಗಳು ಡಿಕ್ಕಿ, ಹೊಸಮನೆಯ ಯುವಕ ಸಾವು

SHIVAMOGGA-CITY-TALUK-NEWS-

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಸೆಪ್ಟೆಂಬರ್ 2021 ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಪುರಲೆ ಕೆರೆ ಏರಿ ಮೇಲೆ ಘಟನೆ ಸಂಭವಿಸಿದೆ. ಹೊಸಮನೆ ಬಡಾವಣೆಯ ಅಭಿಷೇಕ್ (23) ಮೃತ ಯುವಕ. ಪುರಲೆ ಕಡೆಯಿಂದ ಅಭಿಷೇಕ್ ರಾತ್ರಿ ಹೊಸಮನೆ ಬಡಾವಣೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಎದುರಿನಿಂದ ಬಂದ ದ್ವಿಚಕ್ರ ವಾಹನವು ಅಭಿಷೇಕ್ ತೆರಳುತ್ತಿದ್ದ ಬೈಕ್’ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಅಭಿಷೇಕ್ ತಲೆಗೆ ತೀವ್ರ … Read more

JOBS | ಶಿವಮೊಗ್ಗದ ಮಹಿಳಾ ಸಲೂನ್’ನಲ್ಲಿ ಉದ್ಯೋಗವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಲೈವ್.ಕಾಂ | SHIMOGA JOBS NEWS | 23 ಸೆಪ್ಟೆಂಬರ್ 2021 ಶಿವಮೊಗ್ಗದಲ್ಲಿ ಮಹಿಳೆಯರ ಸೂಲನ್ ಒಂದರಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಈ ಕೆಳಗಿನ ಫೋಟೊದಲ್ಲಿರುವ ಅರ್ಹತೆ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಫೋಟೊದಲ್ಲಿರುವ ನಂಬರ್’ಗೆ ಕರೆ ಮಾಡಬಹುದಾಗಿದೆ.

ವಿದ್ಯಾರ್ಥಿನಿ ಮೊಬೈಲ್’ಗೆ ಬಂದ ಒಂದು ಮೆಸೇಜು 65 ಸಾವಿರ ರೂ. ಕಳೆದುಕೊಳ್ಳುವಂತೆ ಮಾಡಿತು

Cyber-Crime-in-Shivamogga

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಸೆಪ್ಟೆಂಬರ್ 2021 ಆನ್’ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಷೇರು ಸೇರಿದಂತೆ ವಿವಿಧೆಡೆ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂದು ಆಸೆ ಹುಟ್ಟಿಸಲಾಗುತ್ತಿದೆ. ಬಳಿಕ ಅಸಲು ಹಣವನ್ನೂ ಹಿಂತಿರುಗಿಸದೆ ಜನರನ್ನು ವಂಚಿಸುವ ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ. ಶಿವಮೊಗ್ಗದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಮಾಡಿ, ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ವಂಚಕರ ಪತ್ತೆಗೆ ಪೊಲೀಸರು … Read more

ಗಮನ ಬೇರೆಡೆ ಸೆಳೆದು ಚಿನ್ನದ ಸರ ಕಳವು, ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ ವೈರಲ್

200921 GopalaGowda Layout Chain Theft CCTV Visuals

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಸೆಪ್ಟೆಂಬರ್ 2021 ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ವ್ಯಕ್ತಿಯೊಬ್ಬರ ಕೊರಳಲ್ಲಿದ್ದ ಸರವನ್ನು ಕಳ್ಳರು ಕಿತ್ತೊಯ್ದಿದ್ದಾರೆ. ಕಟ್ಟಡವೊಂದರ ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಇದು ಬಡಾವಣೆಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ನಿವೃತ್ತ ನೌಕರ ಕೃಷ್ಣಮೂರ್ತಿ ಅವರು ಸೈಕಲ್’ನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಬೈಕ್’ನಲ್ಲಿ ಬಂದ ಇಬ್ಬರು ಯುವಕರು, ಕೃಷ್ಣಮೂರ್ತಿ ಅವರನ್ನು ನಿಲ್ಲಿಸಿ ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆ … Read more

ಗ್ರಾಮ ಪಂಚಾಯಿತಿ ಕಚೇರಿ, ಸದಸ್ಯನ ಮನೆ ಮುಂದೆ ವಾಮಾಚಾರ, ಸಿಸಿಟಿವಿ ಪರಿಶೀಲಿಸಿದಾಗ ಬಯಲಾಯ್ತು ಅಚ್ಚರಿಯ ವಿಚಾರ

130921 CCTV of Vamachara in Choradi

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ಗ್ರಾಮ ಪಂಚಾಯಿತಿ ಕಚೇರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮನೆ ಮುಂದೆ ವಾಮಾಚಾರ ಮಾಡಲಾಗಿದೆ. ಸಿಸಿಟಿವಿಯನ್ನು ಪರಿಶೀಲಿಸಿದಾಗ ಅಚ್ಚರಿಯ ವಿಚಾರ ಬಯಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಚೋರಡಿ ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ ಗೌಡ ಅವರ ಮನೆ ಮುಂದೆ ವಾಮಾಚಾರ ಮಾಡಲಾಗಿದೆ. ಅದೆ ರಾತ್ರಿ ಚೋರಡಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೂ ವಾಮಾಚಾರ ಮಾಡಲಾಗಿತ್ತು. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. … Read more

ಶಿವಮೊಗ್ಗ ಸಿಟಿಯ ನಡು ರಸ್ತೆಯಲ್ಲಿ ಒಲೆ ಹಚ್ಚಿ ಅಡುಗೆ, ಪ್ರಧಾನಿ ಮೋದಿ ಫೋಟೊಗೆ ಬೆಂಕಿ

040921 Youth Congress Protest Against Gas Price hike

ಶಿವಮೊಗ್ಗ ಲೈವ್.ಕಾಂ |SHIMOGA NEWS | 4 ಸೆಪ್ಟೆಂಬರ್ 2021 ಅಡುಗೆ ಅನಿಲ ಸಿಲಿಂಡರ್ ಬಲೆ, ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳ ವಿರೋಧಿಸಿ ಶಿವಮೊಗ್ಗದಲ್ಲಿ ನಡುರಸ್ತೆಯಲ್ಲೇ ಒಲೆ ಹಚ್ಚಿ, ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದ ಮಹಾವೀರ ಸರ್ಕಲ್’ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು. ಒಲೆ ಹಚ್ಚಿ ಅಡುಗೆ ಸರ್ಕಲ್ ಮಧ್ಯದಲ್ಲೇ ಸೌದೆ ಒಲೆ ನಿರ್ಮಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅಡುಗೆ ಮಾಡುವಂತೆ ಅಣಕು ಪ್ರದರ್ಶನ ಮಾಡಿದರು. ಇದೇ ವೇಳೆ ಕೇಂದ್ರ ಸರ್ಕಾರ … Read more