ಶಿವಮೊಗ್ಗ ಲೈವ್.ಕಾಂ | SHIMOGA | 17 ಫೆಬ್ರವರಿ 2020

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಶಿವಮೊಗ್ಗದಲ್ಲಿ ಅಭಿಮಾನಿಗಳು ವಿಭಿನ್ನವಾಗಿ ಆಚರಿಸಿದ್ದಾರೆ. ಅಭಿಮಾನಿಗಳ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಡಿ ಕಂಪನಿ, ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಜಿಲ್ಲಾ ಸಮಿತಿ, ಅಖಿಲ ಕರ್ನಾಟಕ ಚಾಲೆಂಜೆಂಗ್ ಸ್ಟಾರ್ ದರ್ಶನ್ ಸೇನಾ ಸಮಿತಿ ವತಿಯಿಂದ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
ವಿಕಲಚೇತನ ವ್ಯಕ್ತಿಗೆ ವೀಲ್ ಚೇರ್
ವಿಕಲಚೇತನ ವ್ಯಕ್ತಿಯೊಬ್ಬರಿಗೆ ದರ್ಶನ್ ಅಭಿಮಾನಿಗಳು ವೀಲ್ ಚೇರ್ ವಿತರಿಸಿದರು. ಶಿವಮೊಗ್ಗದ ಫುಡ್ ಕೋರ್ಟ್ ಮುಂಭಾಗ ಭಿಕ್ಷೆ ಬೇಡುತ್ತಿದ್ದ, ವಿಕಲಚೇತನ ವ್ಯಕ್ತಿಗೆ ವೀಲ್ ಚೇರ್ ನೀಡಲಾಯಿತು.

ವೃದ್ದಾಶ್ರಮದಲ್ಲಿ ಸಿಹಿ ಊಟ
ದರ್ಶನ್ ಅವರ ಹುಟ್ಟುಹಬ್ಬದ ಹಿನ್ನೆಲೆ ನಗರದ ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ವೃದ್ದರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಕೇಂದ್ರದಲ್ಲಿರುವವರಿಗೆ ಸಿಹಿವಿತರಿಸಲಾಯಿತು. ಇನ್ನು, ಆಲ್ಕೊಳ ಬಳಿ ಇರುವ ತಾಯಿ ಮನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಮಕ್ಕಳ ಬಳಕೆಗೆ ಕಿಟ್ ವಿತರಣೆ
ಶಿವಮೊಗ್ಗ ಬಸವೇಶ್ವರ ನಗರದ ತರಂಗ ಶಾಲೆಯ ಹಾಸ್ಟೆಲ್ ಮಕ್ಕಳಿಕೆಗೆ ಕಿಟ್ ವಿತರಿಸಲಾಯಿತು. ದಿನ ಬಳಕೆಗೆ ಅಗತ್ಯವಿರುವ ಬ್ರಷ್, ಪೇಸ್ಟ್, ಬೆಡ್ ಶೀಟ್ ಸೇರಿದಂತೆ ಹಲವು ವಸ್ತುಗಳಿಗೆ ಕಿಟ್ ನೀಡಲಾಯಿತು.
ಮತ್ತೊಂದೆಡೆ ಅಶೋಕ್ ನಗರದಲ್ಲಿ ದರ್ಶನ್ ಅಭಿಮಾನಿಗಳು ಕೇಕ್ ಕತ್ತರಿಸಿ, ಸಂಭ್ರಮಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]