SHIVAMOGGA LIVE NEWS | 20 NOVEMBER 2023
SHIKARIPURA : ತಾಲೂಕಿನ ತರಲಘಟ್ಟ ಗ್ರಾಮ ಪಂಚಾಯಿತಿ ಕಾಂಗ್ರೆಸ್ (Congress) ತೆಕ್ಕೆಗೆ ಜಾರಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಂಜಮ್ಮ ಜ್ಞಾನೇಶ್ ಅಧ್ಯಕ್ಷರಾಗಿ, ಕುಮಾರ್ ನಾಯಕ್ ತಿಮ್ಲಾಪುರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಂಚಾಯಿತಿ ಸದಸ್ಯರು, ತಾಲೂಕಿನ ಕಾಂಗ್ರೆಸ್ ಮುಖಂಡರು ಅಭಿನಂದಿಸಿದ್ದಾರೆ.
ಸಮಬಲವಿದ್ದ ಬಿಜೆಪಿ, ಕಾಂಗ್ರೆಸ್
ತರಲಘಟ್ಟ ಗ್ರಾಮ ಪಂಚಾಯಿತಿ 16 ಸದಸ್ಯರನ್ನು ಒಳಗೊಂಡಿದೆ. ಈ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ (Congress) ಬೆಂಬಲಿತ ತಲಾ 8 ಸದಸ್ಯರಿದ್ದಾರೆ. ಶನಿವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಒಟ್ಟು 14 ಮತಗಳು ಚಲಾವಣೆಯಾಗಿವೆ. ಚುನಾವಣಾ ಅಧಿಕಾರಿಯಾಗಿ ಶಿಕ್ಷಣಾಧಿಕಾರಿ ಶಶಿಧರ್ ಅವರನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ- ಮೆಗ್ಗಾನ್ ಆಸ್ಪತ್ರೆ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ, ಬಾಂಬೆ ಬ್ಲಡ್ಗಾಗಿ 6 ಗಂಟೆ ಪರಿಶ್ರಮ, ಏನಿದು ಆಪರೇಷನ್?
30 ವರ್ಷದಲ್ಲಿ ಇದೇ ಮೊದಲು
ಕಳೆದ 30 ವರ್ಷದಲ್ಲಿ ಇದೆ ಮೊದಲ ಬಾರಿ ತರಲಘಟ್ಟ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಕೈವಶವಾಗಿದೆ.
ಪ್ರಮುಖರಾದ ಮಾರವಳ್ಳಿ ಉಮೇಶ್, ರಾಘವೇಂದ್ರ ನಾಯಕ್, ಶಿವು ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
