SHIMOGA NEWS, 9 NOVEMBER 2024 : ಮುಂಬೈ ಸೈಬರ್ (Cyber) ಪೊಲೀಸ್ ಎಂದು ಕರೆ ಮಾಡಿ, 23 ವರ್ಷದ ಯುವತಿಯ ಬ್ಯಾಂಕ್ ಖಾತೆಯಿಂದ 4 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಯುವತಿಯ ಹೆಸರಿನಲ್ಲಿ ಇರಾನ್‌ಗೆ ಪಾರ್ಸಲ್ ಹೋಗುತ್ತಿದೆ. ಅದರಲ್ಲಿ ಡ್ರಗ್ಸ್ ಇದ್ದು, ವಿಚಾರಣೆ ನೆಪದಲ್ಲಿ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಾರ್ಸಲ್‌ನಲ್ಲಿ ಡ್ರಗ್ಸ್ ಇದೆ
ಶಿವಮೊಗ್ಗದ ಯುವತಿಗೆ ಪ್ರತಿಷ್ಠಿತ ಕೊರಿಯರ್ ಸಂಸ್ಥೆಯ ಉದ್ಯೋಗಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ‘ಮುಂಬೈನಿಂದ ಇರಾನ್‌ಗೆ ತಮ್ಮ ಹೆಸರಿನಲ್ಲಿ ಪಾರ್ಸಲ್ ಹೋಗುತ್ತಿದೆ. ಆ ಬಗ್ಗೆ ಮುಂಬೈ ಸೈಬರ್ ಕ್ರೈಮ್ ಪೊಲೀಸರು ಮಾತನಾಡುತ್ತಾರೆ’ ಎಂದು ಕರೆ ಕನೆಕ್ಟ್ ಮಾಡಿದ್ದ. ಪೊಲೀಸರಂತೆ ಮಾತನಾಡಿದ ಮತ್ತೊಬ್ಬ ವ್ಯಕ್ತಿ, ‘ಪಾರ್ಸಲ್‌ನಲ್ಲಿ ಒಂದು ಲ್ಯಾಪ್‌ಟಾಪ್, 5 ಕ್ರೆಡಿಟ್ ಕಾರ್ಡ್, 420 ಗ್ರಾಂ ಡ್ರಗ್ಸ್ ಇದೆ. ಈ ಬಗ್ಗೆ ವಿಚಾರಣೆ ಮಾಡಬೇಕು’ ಎಂದು ಬೆದರಿಕೆ ಒಡ್ಡಿದ್ದ.
![]() |
ತಕ್ಷಣ ಲೋನ್ ಪಡೆದು ವರ್ಗಾಯಿಸಿಕೊಂಡ
ಪೊಲೀಸ್ ವಿಚಾರಣೆ ನೆಪದಲ್ಲಿ ಯುವತಿಯ ಬ್ಯಾಂಕ್ ಖಾತೆಯಿಂದ ತಕ್ಷಣ ಸಾಲಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದ. ಯುವತಿಯ ಬ್ಯಾಂಕ್ ಖಾತೆಗೆ 3.80 ಲಕ್ಷ ರೂ. ಸಾಲ ದೊರೆತಿತ್ತು. ಪೊಲೀಸ್ ಸೋಗಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಎರಡು ಬ್ಯಾಂಕ್ ಖಾತೆಯ ವಿವರ ನೀಡಿ ಅವುಗಳಿಗೆ ತಲಾ ಎರಡು ಲಕ್ಷ ರೂ. ವರ್ಗಾಯಿಸುವಂತೆ ಸೂಚಿಸಿದ್ದ. ಅಂತೆಯೇ ಯುವತಿ ಹಣ ವರ್ಗಾಯಸಿದ್ದಳು ಎಂದು ಆರೋಪಿಸಲಾಗಿದೆ.
ವಂಚನೆಗೊಳಗಾದದ್ದು ಅರಿವಾಗುತ್ತಿದ್ದಂತೆ ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡದ್ದಾಳೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ಭದ್ರಾವತಿಯಲ್ಲಿ ಕರಡಿ ದಾಳಿ, ವ್ಯಕ್ತಿಗೆ ಗಂಭೀರ ಗಾಯ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200