ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019
ಆಶ್ರಯ ಮನೆ ಕೊಡಿಸಲು ಐದು ಲಕ್ಷ ರೂಪಾಯಿ ಲಂಚದ ಹಣಕ್ಕೆ ಡಿಮಾಂಡ್ ಮಾಡಿದ್ದ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬ, ಹತ್ತು ಸಾವಿರ ರೂ. ಹಣ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಸುನಿಲ್, ಎಸಿಬಿ ಬಲೆಗೆ ಬದ್ದಿರುವ ಅಧಿಕಾರಿ. ಮಹಾನಗರ ಪಾಲಿಕೆಯ ಆಶ್ರಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಸುನಿಲ್ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪವಿತ್ತು.
ಹೇಗಾಯ್ತು ಕಾರ್ಯಾಚರಣೆ?
ಬೊಮ್ಮನಕಟ್ಟೆಯಲ್ಲಿ ಆಶ್ರಯ ಮನೆ ಕೊಡಿಸಲು ಹರಿಗೆ ನಿವಾಸಿಯೊಬ್ಬರಿಗೆ ಸುನಿಲ್ ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಹರಿಗೆ ನಿವಾಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಬೇಡಿಕೆ ಹಣದ ಭಾಗವಾಗಿ ಹತ್ತು ಸಾವಿರ ರೂಪಾಯಿಯನ್ನು, ಗೋಪಾಳದಲ್ಲಿರುವ ತಮ್ಮ ಮನೆಯಲ್ಲೇ ಸುನಿಲ್ ಸ್ವೀಕರಿಸುತ್ತಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ ಡಿವೈಎಸ್’ಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ಸ್’ಪೆಕ್ಟರ್ ಜೆ.ಎಸ್.ತಿಪ್ಪೇಸ್ವಾಮಿ, ಎನ್.ವೀರೇಂದ್ರ, ಸಿಬ್ಬಂದಿಗಳಾದ ವಸಂತ, ನಾಗರಾಜ, ರಘುನಾಯ್ಕ, ಸುರೇಂದ್ರ, ಯೋಗೇಶಪ್ಪ, ಹರೀಶ್, ಶ್ರೀನಿವಾಸ್ ಕಾರ್ಯಾಚರಣೆಯಲ್ಲಿದ್ದು. ಸದ್ಯ ಸುನಿಲ್ ಬಂಧನವಾಗಿದ್ದು, ಹಣವನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422