SHIVAMOGGA LIVE NEWS | ACCIDENT | 30 ಮೇ 2022
ವಿಮಾನ ನಿಲ್ದಾಣ ಕಾಮಗಾರಿ ವೇಳೆ ರೋಲರ್ ಚಾಲಕನ ನಿರ್ಲಕ್ಷ್ಯದಿಂದ ಕಾರ್ಮಿಕನೊಬ್ಬ ಮೃತಪಟ್ಟದ್ದಾನೆ. ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಲ್ಲಿಕಾರ್ಜುನ ಹರಿಜನ (20) ಮೃತ ದುರ್ದೈವಿ. ಕಾಮಗಾರಿ ಸಂದರ್ಭ ರೋಲರ್ ಹರಿದು ಮಲ್ಲಿಕಾರ್ಜು ಮೃತಪಟ್ಟಿದ್ದಾನೆ. ಮಣ್ಣು ಸಮತಟ್ಟು ಮಾಡುವ ಕಂಪ್ರೆಸರ್ ಯಂತ್ರವು ಮಲ್ಲಿಕಾರ್ಜುನನ ಮೇಲೆ ಹರಿದಿದೆ. ಚಾಲಕನ ನಿರ್ಲಕ್ಷ್ಯವೆ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದಿಂದ 11 ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಮನವಿ, ಪಟ್ಟಿಯಲ್ಲಿ ಯಾವೆಲ್ಲ ಮಾರ್ಗಗಳಿವೆ?
ಗದಗ ಜಿಲ್ಲೆಯ ಗೋಜನೂರಿನ ಮಲ್ಲಿಕಾರ್ಜುನ ತನ್ನ ತಂದೆಯೊಂದಿಗೆ ವಿಮಾನ ನಿಲ್ದಾಣ ಕಾಮಗಾರಿ ಕೆಲಸಕ್ಕೆ ಬಂದಿದ್ದ. ಇತ್ತೀಚೆಗಷ್ಟೆ ಈತ ಇಲ್ಲಿಗೆ ಆಗಮಿಸಿದ್ದ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.