ಭದ್ರಾವತಿ : ಮೊಬೈಲ್ (Mobile) ವಿಚಾರವಾಗಿ ಇಬ್ಬರು ಯುವಕರು ಕೈ ಕೈ ಮಿಲಾಯಿಸಿದ್ದಾರೆ. ಭದ್ರಾವತಿಯ ನ್ಯೂ ಕಾಲೋನಿಯಲ್ಲಿ ಘಟನೆ ಸಂಭವಿಸಿದ್ದು, ದೂರು, ಪ್ರತಿದೂರು ದಾಖಲಾಗಿದೆ. ಚೇತನ್ ಮತ್ತು ರೋಷನ್ ಎಂಬುವವರು ಹೊಡೆದಾಡಿಕೊಂಡಿದ್ದಾರೆ.
ಅಷ್ಟಕ್ಕು ಆಗಿದ್ದೇನು?
ರೋಷನ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪರಿಚಿತರೊಬ್ಬರಿಗೆ ಕರೆ ಮಾಡಬೇಕಿದ್ದರಿಂದ ಅಲ್ಲಿಯೇ ಇದ್ದ ಚೇತನ್ ಮೊಬೈಲ್ ಕೇಳಿದ್ದಾರೆ. ಆಗ ಇಬ್ಬರ ಮಧ್ಯೆ ಗಲಾಟೆಯಾಗಿದೆ.
ದೂರು, ಪ್ರತಿದೂರು ದಾಖಲು
ಮೊಬೈಲ್ ಸ್ವಿಚ್ ಆಫ್ ಆಗಿದ್ದು ಕರೆ ಮಾಡಿ ಕೊಡುತ್ತೇನೆ ಎಂದು ಚೇತನ್‌ಗೆ ಕೇಳಿದಾಗ ಆತ ನಿಂದಿಸಿದ್ದಾನೆ, ಬಿಕಾರಿಗಳಿಗೆ ಫೋನ್ ಕುಡುವುದಿಲ್ಲ ಎಂದು ಟೀಕಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಲಾಗಿದೆ ಎಂದು ರೋಷನ್ ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ » ಹಣಗೆರೆಕಟ್ಟೆ ಸಮೀಪ ರಸ್ತೆಗೆ ಬಿದ್ದ ಮರ, ವಿದ್ಯುತ್ ಕಂಬಗಳು, ಟ್ರಾಫಿಕ್ ಜಾಮ್
ಇತ್ತ, ಚೇತನ್ ನೀಡಿರುವ ದೂರಿನಲ್ಲಿ, ರೋಷನ್ ತನ್ನನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ ಫೋನ್ ಕೊಡುವಂತೆ ಆಗ್ರಹಿಸಿದ್ದ. ಅಲ್ಲದೆ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200