ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 22 ಅಕ್ಟೋಬರ್ 2021
ಮನೆಯವರೆಲ್ಲ ಮಲಗಿದ್ದಾಗ ಸೂಟ್ ಕೇಸ್ ತುಂಬಾ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡು, ಪರಾರಿಯಾದ ಮನೆಗೆಲಸದಾಕೆ ವಿರುದ್ಧ, ಮತ್ತೊಂದು ಪ್ರಕರಣ ದಾಖಲಾಗಿದೆ. ಒಂದೇ ತಿಂಗಳಲ್ಲಿ ಆಕೆ ವಿರುದ್ಧ ಇದು ಎರಡನೇ ಪ್ರಕರಣವಾಗಿದೆ.
ಯಾರದು ಮನೆ ಕೆಲಸದಾಕೆ?
ಚನ್ನಗಿರಿಯ ಉಮಾ ಎಂಬಾಕೆ ವಿರುದ್ಧ ಈ ತಿಂಗಳಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈಕೆ ಮನೆ ಕೆಲಸಕ್ಕೆ ಬಂದಾಗಲೆಲ್ಲ ತನ್ನನ್ನು ಚನ್ನಗಿರಿಯ ಉಮಾ ಅಲಿಯಾಸ್ ಉಮಾದೇವಿ ಎಂದು ಪರಿಚಯಿಸಿಕೊಂಡಿದ್ದಾಳೆ. ಕೆಲಸ ಮಾಡುವ ಸ್ಥಳದಲ್ಲಿ ಚಿನ್ನಾಭರಣ, ನಗದು ಕಳವು ಮಾಡಿದ ಆರೋಪ ಎದುರಿಸುತ್ತಿದ್ದಾಳೆ. ಆಕೆ ವಿರುದ್ಧ ಮೊದಲಿಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ವಿನೋಬನಗರ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.
ಇದನ್ನು ಓದಿ | ಮನೆಯವರೆಲ್ಲ ಮಲಗಿದ್ದಾಗ ಮನೆ ಬಿಟ್ಟಳು ಕೆಲಸದಾಕೆ, ಸೂಟ್ ಕೇಸ್’ನಲ್ಲಿ ಹೊತ್ತೊಯ್ದದ್ದು ಬಟ್ಟೆ ಅಲ್ಲ
ಕಳ್ಳತನ 1 : ಗಾಂಧಿ ನಗರದ ಮನೆಯಲ್ಲಿ ಕಳ್ಳತನ
ಗಾಂಧಿನಗರದ ನಾಗರತ್ನ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ನಾಗರತ್ನ ಅವರ ಪತಿ ಅನಾರೋಗ್ಯಕ್ಕೀಡಾಗಿದ್ದಾರೆ. ಅವರ ಅರೈಕೆ ಮತ್ತು ಮನೆ ಕೆಲಸಕ್ಕಾಗಿ ಚನ್ನಗಿರಿ ಮೂಲದ ಉಮಾ ಎಂಬಾಕೆಯನ್ನು ನೇಮಿಸಿಕೊಳ್ಳಲಾಗಿತ್ತು. 10 ದಿನ ಮನೆಯಲ್ಲಿ ಕೆಲಸ ಮಾಡಿದ ಉಮಾ, ಮನೆಯಿಂದ ಏಕಾಏಕಿ ನಾಮಪತ್ತೆಯಾಗಿದ್ದಳು. ಮನೆಯವರೆಲ್ಲ ಮಲಗಿದ್ದಾಗ ಸೂಟ್ ಕೇಸ್’ನಲ್ಲಿ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡು ಪರಾರಿಯಾಗಿದ್ದಳು. 86 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು ಕಳುವಾಗಿರುವ ಬಗ್ಗೆ ನಾಗರತ್ನ ಅವರು ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಕಳ್ಳತನ 2 : ವೃದ್ಧೆಯ ಚಿನ್ನಾಭರಣ ಮಿಸ್ಸಿಂಗ್
ಗಾಂಧಿನಗರದ ನಾಗರತ್ನ ಅವರ ಮನೆಯಲ್ಲಿ ಘಟನೆ ಸಂಬಂಧ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ 83 ವರ್ಷದ ಲಲಿತಮ್ಮ ಎಂಬುವವರು ವಿನೋಬನಗರ ಠಾಣೆಗೆ ಬಂದು ದೂರು ನೀಡಿದ್ದಾರೆ. ಚನ್ನಗಿರಿ ಉಮಾ ಅಲಿಯಾಸ್ ಉಮಾದೇವಿಯು ತಮ್ಮ ಚಿನ್ನಾಭರಣ ಕದ್ದೊಯ್ದಿರುವ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪತಿ ಮೃತರಾಗಿದ್ದು, ಪಾರ್ಶ್ವವಾಯುಗೆ ತುತ್ತಾಗಿರುವ ಲಲಿತಮ್ಮ ಅವರು ವೃದ್ಧಾಶ್ರಮದಲ್ಲಿ ಇದ್ದಾರೆ. ತಮ್ಮ ಆರೈಕೆಗಾಗಿ ಕೆಲಸದವರೊಬ್ಬರನ್ನು ನಿಯೋಜಿಸಿಕೊಂಡಿದ್ದರು. ಆಗ ಪರಿಚಯದವರೊಬ್ಬರು ಚನ್ನಗಿರಿ ಉಮಾದೇವಿ ಎಂಬಾಕೆ ಕೆಲಸಕ್ಕೆ ಕರೆತಂದು ಸೇರಸಿದ್ದರು. ಮೂರು ತಿಂಗಳು ಲಲಿತಮ್ಮ ಅವರ ಆರೈಕೆ ಮಾಡಿದ ಉಮಾದೇವಿ, ಬಳಿಕ ತನಗೆ ಬೇರೊಂದು ಕಡೆ ಕೆಲಸ ಸಿಕ್ಕಿರುವುದಾಗಿ ಹೇಳಿ ಹೋಗಿದ್ದಳು. ಪತ್ರಿಕೆಯಲ್ಲಿ ಉಮಾದೇವಿ ಕಳ್ಳತನ ಮಾಡಿರುವ ವಿಚಾರ ಓದಿದ ಬಳಿಕ ಲಲಿತಮ್ಮ ಅವರು ತಮ್ಮ ಕೊಠಡಿಯಲ್ಲಿದ್ದ ಚಿನ್ನಾಭರಣವನ್ನು ಪರಿಶೀಲಿಸಿದ್ದಾರೆ.
ಲಲಿತಮ್ಮ ಅವರಿಗೆ ಸೇರಿದ ಚಿನ್ನದ ಉಂಗುರ, ಮೂಗುತಿ, ಚಿನ್ನದ ಸರ ಮತ್ತು ಎರಡು ಸಾವಿರ ರೂ. ನಗದು ನಾಪತ್ತೆಯಾಗಿವೆ. ತಮ್ಮ ಆರೈಕೆಗೆ ನಿಯೋಜನೆಗೊಂಡಿದ್ದ ಚನ್ನಗಿರಿಯ ಉಮಾ ತಮ್ಮ ಚಿನ್ನಾಭರಣ ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ. ವಿನೋಬನಗರ ಠಾಣೆಯಲ್ಲಿ ಲಲಿತಮ್ಮ ಅವರು ದೂರು ನೀಡಿದ್ದಾರೆ.
ಉಮಾದೇವಿ ಅಲಿಯಾಸ್ ಚನ್ನಗಿರಿಯ ಉಮಾಳಿಗಾಗಿ ಜಯನಗರ ಮತ್ತು ವಿನೋಬನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422