ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 FEBRUARY 2024
SHIMOGA : ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಪೊಲೀಸರು ವಿಶೇಷ ಗಸ್ತು ಮತ್ತು ಏರಿಯಾ ಡಾಮಿನೇಷನ್ ನಡೆಸಿ 33 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.
ಎಲ್ಲೆಲ್ಲಿ ನಡೆಯಿತು ವಿಶೇಷ ಗಸ್ತು?
ಶಿವಮೊಗ್ಗದ ಎಂಕೆಕೆ ರಸ್ತೆ, ಕೆ ಆರ್ ಪುರಂ, ಸಂಗೊಳ್ಳಿ ರಾಯಣ್ಣ ವೃತ್ತ, ಲಷ್ಕರ್ ಮೊಹಲ್ಲಾ, ಜಟ್ ಪಟ್ ನಗರ, ಬೆಂಕಿ ನಗರ, ರಾಗಿಗುಡ್ಡ, ಭದ್ರಾವತಿಯ ಜನ್ನಾಪುರ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿ ವೃತ್ತ, ಕೋಡಿಹಳ್ಳಿ, ಶಿಕಾರಿಪುರದ ತೇರು ಬೀದಿ, ಅಂಬೇಡ್ಕರ್ ಸರ್ಕಲ್, ಹಳಿಯೂರ್ ಸರ್ಕಲ್, ಆನವಟ್ಟಿಯ ಆಜಾದ್ ನಗರ, ಶಾದಿಮಹಲ್, ಸೊರಬದ ಕೋರ್ಟ್ ವೃತ್ತ, ಸೊರಬ ಬಸ್ ನಿಲ್ದಾಣ, ಸಾಗರದ ವಿನೋಬನಗರ, ಆನಂದಪುರ ಬಸ್ ನಿಲ್ದಾಣ, ಕಾರ್ಗಲ್ ಬಜಾರ್ ಮತ್ತು ತೀರ್ಥಹಳ್ಳಿಯ ಬಾಳೆ ಬೈಲು, ಬಟ್ಟೆ ಮಲ್ಲಪ್ಪ, ನಗರದ ಕೋಟೆ ರಸ್ತೆ, ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಲಾಯಿತು.
ಕಾಲ್ನಡಿಗೆ ವಿಶೇಷ ಗಸ್ತು
ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಕಾಲ್ನಡಿಗೆ ವಿಶೇಷ ಗಸ್ತು, ಏರಿಯಾ ಡಾಮಿನೇಷನ್ ಗಸ್ತು ನಡೆಸಿದರು. ಸಾರ್ವಜನಿಕ ಸ್ಥಳದಲ್ಲಿ ಉಪಟಳ ಉಂಟು ಮಾಡುವ, ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ 33 ಪ್ರಕರಣಗಳು ದಾಖಲು ಮಾಡಲಾಗಿದೆ.
ವಾಹನಗಳ ತಪಾಸಣೆ
ಇನ್ನು, ವೀಕೆಂಡ್ ಹಿನ್ನೆಲೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಯಿತು. ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತ್ತಿದ್ದ 19 ಪ್ರಕರಣ ದಾಖಲಿಸಿದ್ದು, ದಂಡ ವಿಧಿಸಲಾಗಿದೆ. ಶಿವಮೊಗ್ಗದಲ್ಲಿ 10, ಭದ್ರಾವತಿಯಲ್ಲಿ 7, ಶಿಕಾರಿಪುರ 2 ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – 25 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422