ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಸೆಪ್ಟೆಂಬರ್ 2021
ಮದುವೆ ಮನೆಯಲ್ಲಿ ಫೋಟೊ ತೆಗೆಯುತ್ತಿದ್ದ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿ, ಕ್ಯಾಮರಾವನ್ನು ಪುಡಿ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮುದಾಯ ಭಾವನದಲ್ಲಿ ಘಟನೆ ಸಂಭವಿಸಿದೆ. ಸೋಮಿನಕೊಪ್ಪದ ಗಣೇಶ್ ಅವರು ಇಲ್ಲಿ ನಡೆಯುತ್ತಿದ್ದ ಮದುವೆಯೊಂದರ ಫೋಟೊ ಕ್ಲಿಕ್ಕಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿ ಅವರ ಮೇಲೆ ಹಲ್ಲೆ ಮಾಡಿ, ಕ್ಯಾಮರಾವನ್ನು ಪುಡಿಗಟ್ಟಲಾಗಿದೆ.
ಹಲ್ಲೆಗೆ ಕಾರಣವಾಯ್ತು ಬೈಕ್ ಕಳ್ಳತನ ಯತ್ನ
ಸಮುದಾಯ ಭವನದ ಮುಂದೆ ನಿಲ್ಲಿಸಿದ್ದ ಗಣೇಶ್ ಅವರ ಬೈಕನನ್ನು ಅಪರಿಚಿತನೊಬ್ಬ ಕೊಂಡೊಯ್ಯುತ್ತಿದ್ದ. ಇದನ್ನು ಗಮನಿಸಿ ಬೇರೊಂದು ಬೈಕ್’ನಲ್ಲಿ ಬೆನ್ನಟ್ಟಿ ಆತನನ್ನು ಹಿಡಿದ ಗಣೇಶ್, ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು.
ಈ ವೇಳೆ ಬಂದ ಇನ್ನಿಬ್ಬರು, ಬೇರೊಂದು ಬೈಕ್ ಬದಲು ನಿಮ್ಮ ಬೈಕ್ ತಂದಿದ್ದಾನೆ ಎಂದು ಸಮಾಧಾನಪಡಿಸಿ ಕಳುಹಿಸಿದ್ದರು. ಸಮುದಾಯ ಭವಕ್ಕೆ ಹಿಂತಿರುಗಿದ ಗಣೇಶ್ ಫೋಟೊ ತೆಗೆಯುತ್ತಿದ್ದಾಗ ಬಂದ ಆ ಗುಂಪು ಗಣೇಶ್ ಮೇಲೆ ಹಲ್ಲೆ ನಡೆಸಿ, ಕ್ಯಾಮರಾ ಪುಡಿಗಟ್ಟಿದೆ.
ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422