ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ನವೆಂಬರ್ 2021
ಮಾಮೂಲಿ ಕೊಡಬೇಕು ಎಂದು ವ್ಯಾಪಾರಿಗೆ ಬೆದರಿಸಿ ಚಾಕುವಿನಿಂದ ಗಾಯಗೊಳಿಸಿದ ಮತ್ತೊಂದು ಪ್ರಕರಣ ವರದಿಯಾಗಿದೆ. ಪ್ರತಿ ತಿಂಗಳು ಮಾಮೂಲಿ ಕೊಡಬೇಕು ಎಂದು ಬೆದರಿಸಿ, ದುಷ್ಕರ್ಮಿಗಳು ವ್ಯಾಪಾರಿಯೊಬ್ಬರಿಗೆ ಬೆದರಿಸಿದ್ದಾರೆ. ಅವರ ಕೆನ್ನೆಗೆ ಚಾಕು ಇರಿದು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ | ‘ಪ್ರತಿ ದಿನ ಮಾಮೂಲಿ ಕೊಡದಿದ್ದರೆ ನಿನ್ನ ಹೆಂಡತಿ ಮಕ್ಕಳ ಸಹಿತ ಅಂಗಡಿಗೆ ಬೆಂಕಿ ಹಚ್ಚುತ್ತೇವೆ’
ಶಿವಮೊಗ್ಗ ನಗರದ ಬುದ್ಧಾ ನಗರದ ಗ್ಯಾಸ್ ಸ್ಟೌ ರಿಪೇರಿ ಮಳಿಗೆ ಇಟ್ಟುಕೊಂಡಿರುವ ಅಯೂಬ್ ಖಾನ್ ಅವರ ಮೇಲೆ ದಾಳಿ ಮಾಡಲಾಗಿದೆ. ರಾತ್ರಿ ಅಯೂಬ್ ಖಾನ್ ಅವರ ಅಂಗಡಿ ಬಳಿ ಬಂದ ಜಕ್ರು ಎಂಬಾತ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ನಿಮ್ಮ ಮಗ ಮಾಮೂಲಿ ಕೊಡಬೇಕು
ಅಂಗಡಿ ಬಳಿಗೆ ಬಂದ ಜಕ್ರು, ಅಯೂಬ್ ಖಾನ್ ಅವರ ಮಗನ ಎಲ್ಲಿದ್ದಾನೆ ಎಂದು ವಿಚಾರಿಸಿದ್ದಾನೆ. ಯಾಕೆ ಎಂದು ಅಯೂಬ್ ಖಾನ್ ಕೇಳಿದಾಗ ನಿಮ್ಮ ಮಗ ಪ್ರತಿ ತಿಂಗಳು 10 ಸಾವಿರ ರೂ. ಮಾಮೂಲಿ ಕೊಡಬೇಕು ಎಂದು ಜಕ್ರು ತಿಳಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಾಮೂಲಿ ಕೊಡುವುದಿಲ್ಲ ಅಂದಿದ್ದಕ್ಕೆ ಅಯೂಬ್ ಖಾನ್ ಅವರಿಗೆ ಬೆದರಿಕೆ ಒಡ್ಡಲಾಗಿದೆ. ಈ ವೇಳೆ ಅಯೂಬ್ ಖಾನ್ ಅವರು ತಮ್ಮ ಮಗನಿಗೆ ಕರೆ ಮಾಡಲು ಫೋನ್ ಕೈಗೆತ್ತಿಕೊಂಡಿದ್ದಾರೆ. ಆಗ ಜಕ್ರು ತನ್ನ ಬಳಿ ಇದ್ದ ಚಾಕುವಿನಿಂದ ಅಯೂಬ್ ಖಾನ್ ಅವರ ಕೆನ್ನೆಗೆ ಇರಿದು, ಮೊಬೈಲ್ ಕಸಿದುಕೊಂಡು ಬೈಕ್’ನಲ್ಲಿ ಪರಾರಿಯಾಗಿದ್ದಾನೆ.
ಈ ಹಿನ್ನೆಲೆ ಜಕ್ರು ಮತ್ತು ಬೈಕ್’ನಲ್ಲಿ ಬಂದಾತನ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದೇ ಒಂದು ಫೋನ್ ಕರೆ ಮಾಡಿದರೆ ನುರಿತ ತಜ್ಞರಿಂದ ನಡೆಯುತ್ತೆ ತಪಾಸಣೆ. ಈಗಲೆ ಕರೆ ಮಾಡಿ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200