ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 14 DECEMBER 2024
ಶಿವಮೊಗ್ಗ : ನಗರದ ಎಟಿಎಂ ಒಂದರಲ್ಲಿ ಹಣ ಬಿಡಿಸಿಕೊಂಡ ಮರುದಿನ ಮೊಬೈಲ್ ಪರಿಶೀಲಿಸುವಾಗ ಮೆಸೇಜ್ ಗಮನಿಸಿದ ಮಹಿಳೆ ಕಕ್ಕಾಬಿಕ್ಕಿಯಾಗಿದ್ದಾರೆ. ಎಟಿಎಂ ಕಾರ್ಡ್ (ATM Card) ಪರಿಶೀಲಿಸಿದಾಗ ಆಘಾತಗೊಂಡಿದ್ದಾರೆ.
ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಮತ್ತೊಮ್ಮೆ ಮಹಿಳೆಯೊಬ್ಬರನ್ನು ವಂಚಿಸಲಾಗಿದೆ.
ಅಷ್ಟಕ್ಕು ಆಗಿದ್ದೇನು?
ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ವಿತ್ ಡ್ರಾ ಮಾಡಲು ರೆಹಾನಾ ಬೇಗಂ (68) ಎಂಬುವವರು ಎಟಿಎಂಗೆ ತೆರಳಿದ್ದರು. ಎಟಿಎಂ ಬಳಿ ಇದ್ದ ವ್ಯಕ್ತಿಯೊಬ್ಬ ಹಣ ಬಿಡಿಸಿಕೊಡಬೇಕ? ಎಂದು ವಿಚಾರಿಸಿ ನೆರವಿಗೆ ಧಾವಿಸಿದ್ದ. ರೆಹಾನಾ ಬೇಗಂ ಅವರ ಎದುರಲ್ಲೇ ಎಟಿಎಂಗೆ ಕಾರ್ಡ್ ಹಾಕಿ, ಪಾಸ್ ವರ್ಡ್ ಟೈಪ್ ಮಾಡುವಂತೆ ತಿಳಿಸಿದ್ದ. ರೆಹಾನಾ ಬೇಗಂ ತಮ್ಮ ಖಾತೆಯಿಂದ 500 ರೂ. ಹಣ ವಿತ್ ಡ್ರಾ ಮಾಡಿಕೊಂಡಿದ್ದು, ನೆರವಿಗೆ ಧಾವಿಸಿದಾತ ಅವರ ಕೈಗೆ ಎಟಿಎಂ ಕಾರ್ಡ್ ಹಿಂತಿರುಗಿಸಿದ್ದ.
ಮರುದಿನ ಮೆಸೇಜ್ ನೋಡಿದಾಗ ಶಾಕ್
ಮಾರುಕಟ್ಟೆಯಿಂದ ಮನೆಗೆ ಮರಳಿದ ರೆಹಾನಾ ಬೇಗಂ ಮೊಬೈಲ್ ಗಮನಿಸಿರಲಿಲ್ಲ. ಮೆಸೇಜುಗಳನ್ನು ಮರುದಿನ ಗಮನಿಸಿದಾಗ ಎಟಿಎಂನಿಂದ 1.28 ಲಕ್ಷ ರೂ. ವಿತ್ ಡ್ರಾ ಆಗಿರುವ ಮೆಸೇಜ್ ಗಮನಿಸಿ ಆತಂಕಕ್ಕೀಡಾಗಿ ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಎಟಿಎಂ ಕಾರ್ಡ್ ಪರಿಶೀಲಿಸಿದಾಗ ಅದು ಅವರದ್ದಾಗಿರಲಿಲ್ಲ ಎಂದು ಆರೋಪಿಸಲಾಗಿದೆ.
ಎಟಿಎಂ ಕಾರ್ಡ್ ಬದಲಿಸಿದ್ದ ವಂಚಕ
ರೆಹಾನಾ ಬೇಗಂ ಅವರಿಗೆ ಹಣ ಬಿಡಿಸಿಕೊಡುವ ನೆಪದಲ್ಲಿ ಅವರ ಪಾಸ್ ವರ್ಡ್ ತಿಳಿದುಕೊಂಡು, ಎಟಿಎಂ ಕಾರ್ಡ್ ಬದಲಿಸಿ ಬೇರೊಂದು ಕಾರ್ಡ್ ನೀಡಲಾಗಿದೆ. ಬಳಿಕ ಎರಡು ಹಂತದಲ್ಲಿ 1.28 ಲಕ್ಷ ರೂ. ಹಣ ವಿತ್ ಡ್ರಾ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ – ಮೈಸೂರು ಹೊಸ ರೈಲಿಗೆ ಬೇಡಿಕೆ ಇಟ್ಟ ಸಂಸದ
ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ನೆರವು ನೀಡುವ ನೆಪದಲ್ಲಿ ಎಟಿಎಂ ಕಾರ್ಡ್ ಅದಲು ಬದಲು ಮಾಡಿ, ಹಣ ವಿತ್ ಡ್ರಾ ಮಾಡಿಕೊಂಡಿರುವ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ದಾಖಲಾದ ಪ್ರಕರಣದ ವಿವರ ಇಲ್ಲಿ ಕೆಳಗಿದೆ. ಅದನ್ನೂ ಓದಬಹುದು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422