ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 3 JULY 2023
SHIMOGA : ನಗರದ ಹಸರೀಕರಣದ ಕುರಿತು ಶಿವಮೊಗ್ಗ ಶಾಸಕರ ಕಚೇರಿಯಲ್ಲಿ (MLA Office) ಕರೆದಿದ್ದ ಸಭೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಸಭೆಗೆ ಬಂದಿದ್ದ ಮತ್ತೊಬ್ಬ ವ್ಯಕ್ತಿ ಹಲ್ಲೆ ನಡೆಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ದಾಳಿ ಮಾಡಲಾಗಿದೆ ಎಂದ ಆರೋಪಿಸಿ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರ ಕಚೇರಿಯಲ್ಲೇ ಹಲ್ಲೆ
ಶಿವಮೊಗ್ಗ ನಗರದ ಹಸರೀಕರಣದ ಕುರಿತು ಜೂ.21ರಂದು ಶಿವಮೊಗ್ಗ ಶಾಸಕರ ಕಚೇರಿಯಲ್ಲಿ (MLA Office) ಸಭೆ ಕರೆಯಲಾಗಿತ್ತು. ವೆಂಕಟೇಶ್ ಎಂಬುವವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಬಹುತೇಕ ಮುಕ್ತಾಯ ಹಂತದಲ್ಲಿದ್ದಾಗ ವ್ಯಕ್ತಿಯೊಬ್ಬರು ಹಾಜರಾಗಿದ್ದರು. ಹಸರೀಕರಣದ ಕುರಿತು ಚರ್ಚೆ ವೇಳೆ ಆ ವ್ಯಕ್ತಿ ಏಕಾಏಕಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವೆಂಕಟೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹಳೆ ದ್ವೇಷದಿಂದ ದಾಳಿ
ವೆಂಕಟೇಶ್ ಅವರಿಗೆ ಆ ವ್ಯಕ್ತಿ ಹಣ ಕೊಡುವುದು ಬಾಕಿ ಇತ್ತು. ಇದೆ ದ್ವೇಷದ ಹಿನ್ನೆಲೆ, ಸಭೆಯಲ್ಲಿ ಅವಾಚ್ಯವಾಗಿ ಬೈದು, ಎಳೆದಾಡಿ ತಲೆಗೆ ಹೊಡೆದಿದ್ದಾರೆ. ಈ ಹಿಂದೆ ಅಪಘಾತವಾಗಿ ತಲೆಗೆ ಗಂಭೀರ ಗಾಯವಾಗಿತ್ತು. ಇದು ಆ ವ್ಯಕ್ತಿಗೆ ಗೊತ್ತಿತ್ತು. ಹಾಗಾಗಿ ತಲೆಗೆ ಹೊಡೆದಿದ್ದಾರೆ ಎಂದು ವೆಂಕಟೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಪಾನಿಪೂರಿ ಸ್ಟಾಲ್‌ಗೆ ಸಿನಿಮಾ ನಟ | ಭದ್ರಾವತಿಯಲ್ಲಿ ಶಾಸಕಿಯ ಕಚೇರಿ | ಮತ್ತಷ್ಟು ಸುದ್ದಿಗಳು
ಈ ಸಂಬಂಧ ಶಿವಮೊಗ್ಗದ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಈಗ ನ್ಯಾಯಾಲಯದ ಸೂಚನೆ ಮೇರೆಗೆ ಬಾಲಕೃಷ್ಣ ಎಂಬುವವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನ ಹಾರಾಟ, ಟೈಮಿಂಗ್ ಏನು? ಏರೋ ಶೋಗೆ ಸಂಸದರು ಮನವಿ ಮಾಡಿದ್ದೇಕೆ?