ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 13 JULY 2024
SHIMOGA : ಟಿ.ಟಿ. ವಾಹನ ಬಾಡಿಗೆಗೆ ಪಡೆದು ಸ್ವಲ್ಪ ದೂರ ಹೋದ ಬಳಿಕ ಚಾಲಕನ (Driver) ಮೇಲೆ ಹಲ್ಲೆ ಮಾಡಲಾಗಿದೆ. ವಾಹನದ ಒಳಗಿದ್ದ ಟಿವಿ, ಸ್ಪೀಕರ್‌ಗಳ, ಲೈಟ್ ಒಡೆದು ಹಾಕಲಾಗಿದೆ.
ಗಾಯಗೊಂಡಿದ್ದ ಚಾಲಕ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಟಿ.ಟಿ.ವಾಹನದ ಮಾಲೀಕರ ಮಗ ಸೂಚಿಸಿದಂತೆ ಚಾಲಕ ದರ್ಶನ್ ಟಿ.ಟಿ.ವಾಹನವನ್ನು ಬೊಮ್ಮನಕಟ್ಟೆ ಬಳಿ ಕೊಂಡೊಯ್ದಿದ್ದ. ಅಲ್ಲಿ ಇಬ್ಬರು ವಾಹನ ಹತ್ತಿದ್ದರು. ಬಸವನಗಂಗೂರು ಕಡೆಗೆ ವಾಹನ ಚಲಾಯಿಸುವಂತೆ ಸೂಚಿಸಿದ್ದು, ಸ್ವಲ್ಪ ದೂರದಲ್ಲಿ 10 ರಿಂದ 12 ಮಂದಿ ಟಿ.ಟಿ.ವಾಹನ ಹತ್ತಿದ್ದರು. ಏಕಾಏಕಿ ಚಾಲಕ ದರ್ಶನ್ ಮೇಲೆ ಹಲ್ಲೆ ನಡೆಸಿ, ನಿಮ್ಮ ಮಾಲೀಕನನ್ನು ಕರೆಯಿಸು ಎಂದು ಸೂಚಿಸಿದ್ದರು. ಬಳಿಕ ಕುಂಸಿ ಬಳಿ ವಾಹನ ಕೊಂಡೊಯ್ಯುವಂತೆ ಬೆದರಿಸಿದ್ದರು.

ಕುಂಸಿ ಸಮೀಪ ಬಾರ್ ಒಂದರ ಮುಂದೆ ಟಿ.ಟಿ.ವಾಹನ ನಿಲ್ಲಿಸುವಂತೆ ಸೂಚಿಸಿದರು. ಚಾಲಕ ದರ್ಶನ್ ಮೇಲೆ ಪುನಃ ಹಲ್ಲೆ ನಡೆಸಿದ್ದಾರೆ. ಅಲ್ಲದೆ ವಾಹನದ ಒಳಗಿದ್ದ ಸ್ಪೀಕರ್, ಟಿವಿ, ಲೈಟ್, ಡಿ.ಜೆ.ಲೈಟ್ ಹಾನಿ ಮಾಡಿ ಕೆಳಗಿಳಿದಿದ್ದಾರೆ ಎಂದು ಆರೋಪಿಸಲಾಗಿದೆ. ಆತಂಕದಲ್ಲೇ ಚಾಲಕ ದರ್ಶನ್ ಟಿ.ಟಿ ವಾಹನ ಚಲಾಯಿಸಿಕೊಂಡು ಶಿವಮೊಗ್ಗಕ್ಕೆ ಮರಳಿದ್ದಾರೆ. ಮಾಲೀಕರಿಗೆ ಮಾಹಿತಿ ನೀಡಿ, ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಸಿಟಿ ಸೆಂಟರ್ ಬಳಿ ಬೈಕ್‌ನಲ್ಲಿ ಬಂದು ಸಿಕ್ಕಿಬಿದ್ದ ಯುವಕ, ಭಾರಿ ದಂಡ ಕಟ್ಟಬೇಕಾಯ್ತು ಮಾಲೀಕ
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















