ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 4 ಜನವರಿ 2022
ವ್ಯಾಪಾರ ಮಾಡಲು ಸಾಲ ನೀಡಿದ್ದ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸಿ ಟೆಕ್ನಿಷಿಯನ್ ಮೊಹಮ್ಮದ್ ಆಸೀಫ್ (23) ಗಾಯಗೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಹೇಗಾಯ್ತು ಘಟನೆ?
ಮೊಹಮ್ಮದ್ ಆಸೀಫ್ ಅವರು ಆರ್.ಎಂ.ಎಲ್ ನಗರದ ಅಂಜುಂ ಎಂಬುವವರಿಗೆ ವ್ಯಾಪಾರದ ಉದ್ದೇಶದಿಂದ 4.57 ಲಕ್ಷ ರೂ. ಸಾಲ ನೀಡಿದ್ದರು. ಸಾಲದ ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಂಡು ಡಿ.31ರ ರಾತ್ರಿ ಅಂಜುಂನ ಮನೆಗೆ ಹೋಗಿದ್ದಾಗ ಹಲ್ಲೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಸೀಫ್ ಅವರು ಅಂಜುಂ ಮನೆ ಬಳಿ ಹೋದಾಗ ಅವರ ಕುಟುಂಬದವರು ಮಾತುಕತೆಗೆ ಒಪ್ಪಲಿಲ್ಲ. ಹಾಗಾಗಿ ಮೊಹಮ್ಮದ್ ಆಸೀಫ್ ಹಿಂತಿರುಗುತ್ತಿದ್ದಾಗ KSRTC ಬಸ್ ನಿಲ್ದಾಣದ ಬಳಿ ಅಂಜುಂ ಮತ್ತು ತನ್ವೀರ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಆಸೀಫ್ ತಪ್ಪಿಸಿಕೊಂಡಿದ್ದಾರೆ. ಆಗ ತಲೆ, ಹೊಟ್ಟೆ, ಕಾಲಿಗೆ ಒದ್ದಿದ್ದು ಮೊಹಮ್ಮದ್ ಆಸೀಫ್ ಗಾಯಗೊಂಡಿದ್ದಾರೆ. ಈ ಸಂದರ್ಭ ಆಸೀಫ್ ವಿರುದ್ಧ ಕೊಲೆ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422