ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನೋ ಪಾರ್ಕಿಂಗ್ ಜಾಗದಲ್ಲಿ ಆಟೋ ನಿಲ್ಲಿಸದಂತೆ ಸೂಚಿಸಿದ ಹೋಂ ಗಾರ್ಡ್ (Home Guard) ಮೇಲೆ ಚಾಲಕನೊಬ್ಬ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಪಕ್ಕದ ಬಸ್ ಸ್ಟಾಪ್ ಬಳಿ ಘಟನೆ ಸಂಭವಿಸಿದೆ.
ಪಶ್ಚಿಮ ಸಂಚಾರ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹೋಂ ಗಾರ್ಡ್ ನಾಗರಾಜ ನಾಯ್ಕ್ ಮೇಲೆ ಹಲ್ಲೆಯಾಗಿದೆ. ಪ್ರಕರಣ ಸಂಬಂಧ ಆಟೋ ಚಾಲಕ ಮನೋಜ್ ಎಂಬಾತನನ್ನು ಬಂಧಿಸಲಾಗಿದೆ.
ನೋ ಪಾರ್ಕಿಂಗ್‌ನಲ್ಲಿ ಆಟೋ
ಸಿಟಿ ಸೆಂಟರ್ ಪಕ್ಕದಲ್ಲಿ ಶಾಸಕರ ಕಚೇರಿ ಗೇಟ್ ಬಳಿ ಆಟೋ ನಿಲ್ಲಿಸದಂತೆ ಹೋಮ್ ಗಾರ್ಡ್ (Home Guard) ನಾಗರಾಜ ನಾಯ್ಕ್ ಸೂಚಿಸಿದ್ದರು. ಆಗ ಚಾಲಕ ಆಟೋವನ್ನು ಹೋಮ್ ಗಾರ್ಡ್ ಮೇಲೆ ಹತ್ತಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೆ ಹೋಮ್ ಗಾರ್ಡ್ ನಾಗರಾಜ ನಾಯ್ಕ್ ತಮ್ಮ ಮೊಬೈಲ್‌ನಲ್ಲಿ ಆಟೋದ ಫೋಟೊ ಕ್ಲಿಕ್ಕಿಸಲು ಯತ್ನಿಸಿದ್ದಾರೆ. ಆಟೋದಿಂದ ಕೆಳಗಿಳಿದ ಚಾಲಕ ಹೋಮ್ ಗಾರ್ಡ್ ನಾಗರಾಜ್ ನಾಯ್ಕ್‌ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಟೋ ಚಾಲಕ ಅರೆಸ್ಟ್
ಘಟನೆ ಬೆನ್ನಿಗೆ ಹೋಮ್ ಗಾರ್ಡ್ ನಾಗರಾಜ ನಾಯ್ಕ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಟೋ ಚಾಲಕ ಮನೋಜ್ ಎಂಬಾತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ » ಆಯನೂರಿನಲ್ಲಿ ಪತ್ರಿಕೆ ಹಂಚುವ ಹುಡುಗನ ಸಮಯ ಪ್ರಜ್ಞೆಗೆ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

LATEST NEWS
- ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

- ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

- ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

- ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಚಿನ್ ಅಂತ್ಯಕ್ರಿಯೆ

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

About The Editor
ನಿತಿನ್ ಆರ್.ಕೈದೊಟ್ಲು














