ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 7 JANUARY 2025
ಹೊಸನಗರ : ತಾಲೂಕಿನ ಹುಲಿಕಲ್ ಘಾಟ್ (Hulikal Ghat) ರಸ್ತೆ ತಿರುವಿನಲ್ಲಿ ಸಂಚರಿಸುತ್ತಿದ್ದ ಬಸ್ ಬ್ರೇಕ್ ವಿಫಲವಾಗಿ 60 ಅಡಿ ಆಳದ ಪ್ರಪಾತಕ್ಕೆ ಉರುಳಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದಾವಣಗೆರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ದುರ್ಗಾಂಬಾ ಬಸ್ ಭಾನುವಾರ ತಡರಾತ್ರಿ 1.45ಕ್ಕೆ ಘಾಟಿ ರಸ್ತೆಯ ಶಿವಮೊಗ್ಗ ಜಿಲ್ಲೆ ಗಡಿ ಭಾಗದ ತಿರುವಿನಲ್ಲಿ ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ. ಬಸ್ಸಿನಲ್ಲಿ 45 ಪ್ರಯಾಣಿಕರಿದ್ದರು. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲ. ಪಟ್ಟಿ ತರದ ಪ್ಲೇಟ್ ಅಳವಡಿಸಲಾಗಿದ್ದು, ಇದ್ದೂ ಇಲ್ಲದಂತಾಗಿದೆ. ಇದರಿಂದ ಹೆಚ್ಚಿನ ಅಪಘಾತ ಸಂಭವಿಸುತ್ತಿವೆ. ಉತ್ತಮ ತಡೆಗೋಡೆ ಇದ್ದಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನು ಓದಿ » ಕನಸಿನಕಟ್ಟೆಯಲ್ಲಿ ವಿದ್ಯುತ್ ಶಾಕ್‌ಗೆ ಯುವಕ ಸಾವು, ಹೇಗಾಯ್ತು ಘಟನೆ?