ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 DECEMBER 2023
SHIMOGA : ಖಾಸಗಿ ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪ್ರಾಂಶುಪಾಲ (Principal), ಉಪನ್ಯಾಸಕರು ಮತ್ತು ಹಾಸ್ಟೆಲ್ ವಾರ್ಡನ್ ಸೇರಿ 8 ಮಂದಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಾಲೇಜು ಹೆಸರು ಹಾಳಾಗುತ್ತದೆʼ
ಮೃತ ವಿದ್ಯಾರ್ಥಿನಿ ಮೇಘಶ್ರೀ ಅವರ ತಂದೆ ಓಂಕಾರಯ್ಯ ದೂರು ನೀಡಿದ್ದಾರೆ. ಮೇಘಶ್ರೀ ಇತ್ತೀಚೆಗೆ ಕರೆ ಮಾಡಿದಾಗಲೆಲ್ಲ ‘ಓದಿನ ವಿಚಾರದಲ್ಲಿ ಉಪನ್ಯಾಸಕರು ಮತ್ತು ವಾರ್ಡನ್‌ಗಳು ಒತ್ತಡ ಹೇರುತ್ತಿದ್ದಾರೆ. ಉತ್ತಮ ಅಂಕ ಗಳಿಸದೆ ಇದ್ದರೆ ಕಾಲೇಜಿನ ಹೆಸರು ಹಾಳಾಗಲಿದೆ ಎಂದು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಳು. ಹಾಗಾಗಿ ತಾವು ‘ಏನು ಆಗುವುದಿಲ್ಲ ಕೈಲಾದಷ್ಟು ಓದುವಂತೆ’ ಮೇಘಶ್ರೀ ತಿಳಿಸುತ್ತಿದ್ದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು, ಹೇಗಾಯ್ತು ಘಟನೆ? ಮುಂದೇನಾಯ್ತು?
ಎರಡನೇ ಮಹಿಡಿಯಿಂದ ಬಿದ್ದಿದ್ದಾಳೆ ಅಂದರು
ಡಿ.5ರಂದು ತಾವು ತಮ್ಮ ಜಮೀನಿಲ್ಲಿದ್ದಾಗ ಕಾಲೇಜಿನಿಂದ ಕರೆ ಮಾಡಿ ತಮ್ಮ ಮಗಳ ಮೇಘಶ್ರೀ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾಳೆ. ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು. ಮೆಗ್ಗಾನ್ ಆಸ್ಪತ್ರೆಗೆ ಧಾವಿಸಿದಾಗ ಮೇಘಶ್ರೀ ಮೃತಪಟ್ಟಿದ್ದಳು. ಆ ಬಳಿಕ ಕಾಲೇಜಿಗೆ ತೆರಳಿದಾಗ ಆಕೆ ಐದನೇ ಮಹಡಿಯಿಂದ ಬಿದ್ದಿದ್ದು ಗೊತ್ತಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಪುತ್ರಿ ಮೇಲೆ ಒತ್ತಡ ಹೇರಿದ್ದ ಪ್ರಾಂಶುಪಾಲ(Principal), ಉಪನ್ಯಾಸಕರು ಮತ್ತು ವಾರ್ಡನ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422