ಶಿವಮೊಗ್ಗ ಲೈವ್.ಕಾಂ |SHIMOGA NEWS | 30 ಜುಲೈ 2021
ಅಪ್ರಾಪ್ತೆಯನ್ನು ವಿವಾಹವಾಗಿ, ಆಕೆಯೊಂದಿಗೆ ಸುಮಾರು ಎರಡು ತಿಂಗಳು ಸಂಸಾರ ಮಾಡಿದ ಶಿವಮೊಗ್ಗದ ಹಣ್ಣು ವ್ಯಾಪಾರಿಗೆ ಈಗ ಸಂಕಷ್ಟ ಎದುರಾಗಿದೆ. ಆತನ ವಿರುದ್ಧ ಪೋಕ್ಸೊ ಕಾಯ್ದೆ, ಅತ್ಯಾಚಾರ ಪ್ರಕರಣ, ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಏನಿದು ಕೇಸ್?
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಅಪ್ರಾಪ್ತೆಗೆ ರಕ್ಷಣೆ ನೀಡುವ ನೆಪದಲ್ಲಿ, ಹಣ್ಣು ವ್ಯಾಪಾರಿಯೊಬ್ಬ ವಿವಾಹವಾಗಿದ್ದ. ಆಕೆಯೊಂದಿಗೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ.
ಅಪ್ರಾಪ್ತೆಯನ್ನು ವಿವಾಹವಾದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಹಿತಿ ಲಭ್ಯವಾಗಿತ್ತು. ಪೊಲೀಸರೊಂದಿಗೆ ಹಣ್ಣು ವ್ಯಾಪಾರಿಯ ಮನೆ ಮೇಲೆ ದಾಳಿ ಮಾಡಿ, ಅಪ್ರಾಪ್ತೆಯ ರಕ್ಷಣೆ ಮಾಡಿದ್ದಾರೆ.
ಪರಿಚಯದಿಂದ ಮದುವೆ ತನಕ
ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯ ಆರೈಕೆಗಾಗಿ ನ್ಯಾಮತಿ ತಾಲೂಕಿನ ಅಪ್ರಾಪ್ತೆಯು ಶಿವಮೊಗ್ಗಕ್ಕೆ ಬಂದಿದ್ದಳು. ಈ ವೇಳೆ ಹಣ್ಣು ವ್ಯಾಪಾರಿಯೊಬ್ಬನ ಪರಿಚಯವಾಗಿತ್ತು. ತನ್ನನ್ನು ಪ್ರೀತಿಸುವಂತೆ ಆತ ಮನವಿ ಮಾಡಿದ್ದ. ಇದನ್ನು ಅಪ್ರಾಪ್ತೆಯು ನಿರಾಕರಿಸಿದ್ದಳು. ತಾಯಿ ಗುಣವಾದ ಬಳಿಕ ಅಪ್ರಾಪ್ತೆ ಊರಿಗೆ ಮರಳಿದಳು. ಆದರೆ ಸ್ವಲ್ಪ ದಿನದಲ್ಲಿ ತಾಯಿ ಕೊನೆಯುಸಿರೆಳೆದರು.
ಈ ವೇಳೆ ಆಕೆಯ ಸಂಬಂಧಿಗಳು ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರಿಂದ ಆತಂಕಗೊಂಡ ಅಪ್ರಾಪ್ತೆ ಶಿವಮೊಗ್ಗದ ಹಣ್ಣು ವ್ಯಾಪಾರಿ ಬಳಿ ಅಳಲು ತೋಡಿಕೊಂಡಿದ್ದಾಳೆ. ರಕ್ಷಣೆಗೆ ಮನವಿ ಮಾಡಿದ್ದಾಳೆ. ಆತ ನೀಡಿದ ಸಲಹೆಯಂತೆ ಶಿವಮೊಗ್ಗಕ್ಕೆ ಬಂದ ಅಪ್ರಾಪ್ತೆಯನ್ನು ಹಣ್ಣು ವ್ಯಾಪಾರಿ ಶರಾವತಿನಗರದಲ್ಲಿರುವ ತನ್ನ ಮನೆಗೆ ಕರೆದೊಯ್ದು, ಮದುವೆಯಾಗಿದ್ದಾನೆ. ಅಲ್ಲದೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ.
ಅಪ್ರಾಪ್ತೆಯನ್ನು ವಿವಾಹವಾಗಿರುವ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಬಾಲಕಿಯನ್ನು ರಕ್ಷಣೆ ಮಾಡಿರುವ ಅಧಿಕಾರಿಗಳು, ಹಣ್ಣು ವ್ಯಾಪಾರಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು.
ಜಿಲ್ಲಾ ರಕ್ಷಣಾಧಿಕಾರಿ ಸೂಚನೆ ಮೇರೆಗೆ ಹಣ್ಣು ವ್ಯಾಪಾರಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200