ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 DECEMBER 2022
ತೀರ್ಥಹಳ್ಳಿ : ಗಡಿಪಾರು ಆದೇಶಕ್ಕೆ ಹೆದರಿ ವಿಷ ಸೇವಿಸಿದ್ದ ರೌಡಿ ಶೀಟರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ರೌಡಿ ಸುಹೇಲ್ ಕೋಬ್ರಾ (cobra dies) ಕೊನೆಯುಸಿರೆಳೆದಿದ್ದಾನೆ.
ತೀರ್ಥಹಳ್ಳಿಯ ಸುಹೇಲ್ ಕೋಬ್ರಾ ನ.28ರಂದು ವಿಷ ಸೇವಿಸಿದ್ದ. ಇಲ್ಲಿನ ಜೆ.ಸಿ.ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸುಹೇಲ್ ಕೋಬ್ರಾ (cobra dies) ಕೊನೆಯುಸಿರೆಳೆದಿದ್ದಾನೆ.
ALSO READ – ಶಿವಮೊಗ್ಗ ವಿಮಾನ ನಿಲ್ದಾಣ, ಒಳಗೆ ಏನೇನಿದೆ? ಹೇಗಿದೆ? ಯಾವೆಲ್ಲ ಕಟ್ಟಡ ನಿರ್ಮಿಸಲಾಗಿದೆ?
ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಹೇಲ್ ಕೋಬ್ರಾ ವಿರುದ್ಧ ಪ್ರಕರಣಗಳಿದ್ದವು. ಇದೆ ಕಾರಣಕ್ಕೆ ಆತನನ್ನು 2 ವರ್ಷ ಗಡಿಪಾರು ಮಾಡಲು ನಿರ್ಧರಿಸಲಾಗಿತ್ತು. ಈ ನೊಟೀಸ್ ಸುಹೇಲ್ ಮನೆಗೆ ತಲುಪಿದ ಬಳಿಕ ಆತ ವಿಷ ಸೇವಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ALSO READ – ರಾತ್ರಿ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಪ್ಲಾನ್, ಶಿವಮೊಗ್ಗ ಪೊಲೀಸರ ಬಲೆಗೆ ಬಿತ್ತು ತೊಟ್ಟಿ ಸೀನನ ಗ್ಯಾಂಗ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422