ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ದಫನ್ ಮಾಡಿರುವುದಾಗಿ ತಿಳಿಸಿದ್ದ ಮಾಸ್ಕ್ ಮ್ಯಾನ್ (Mask Man) ಚಿನ್ನಯ್ಯ ಅಲಿಯಾಸ್ ಭೀಮನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ತಡರಾತ್ರಿ ದಕ್ಷಿಣ ಕನ್ನಡದ ಪೊಲೀಸರು ಚಿನ್ನಯ್ಯನನ್ನ ಜೈಲಿಗೆ ಕರೆ ತಂದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ನಡುರಾತ್ರಿ ಜೈಲಿಗೆ ಶಿಫ್ಟ್
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವ್ಯಾನ್‌ನಲ್ಲಿ ಚಿನ್ನಯ್ಯನನ್ನು ವಾಹನದಲ್ಲಿ ಕರೆತಂದರು. ರಾತ್ರಿ 1.30ರ ಹೊತ್ತಿಗೆ ಚಿನ್ನಯ್ಯನನ್ನು ಜೈಲಿನೊಳಗೆ ಕರೆದೊಯ್ಯಲಾಯಿತು. ಕೋರ್ಟ್ ಆದೇಶವನ್ನು ಪರಿಶೀಲಿಸಿದ ಜೈಲು ಅಧಿಕಾರಿಗಳು ಚಿನ್ನಯ್ಯನ ತಪಾಸಣೆ ಮಾಡಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಿದ್ದಾರೆ.
ಶಿವಮೊಗ್ಗ ಜೈಲಿಗೇಕೆ ಶಿಫ್ಟ್?
ಕಳೆದ 16 ದಿನದಿಂದ ಎಸ್‌ಐಟಿ ವಶದಲ್ಲಿದ್ದ ಚಿನ್ನಯ್ಯನಿಗೆ ಬೆಳ್ತಂಗಡಿ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭದ್ರತೆ ದೃಷ್ಟಿಯಿಂದ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಸಂಜೆ ದಕ್ಷಿಣ ಕನ್ನಡದಿಂದ ಚಿನ್ನಯ್ಯನನ್ನು ಕರೆದುಕೊಂಡು ಬಂದಿದ್ದ ದಕ್ಷಿಣ ಕನ್ನಡದ ಪೊಲೀಸರು ನಡುರಾತ್ರಿ ಜೈಲಿಗೆ ರವಾನಿಸಿದ್ದಾರೆ.

ಚಿನ್ನಯ್ಯನಿಗೆ ಜಾಮೀನು ನೀಡುವಂತೆ ಕಾನೂನು ಸೇವಾ ಪ್ರಾಧಿಕಾರದ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸೆ.9ರಂದು ವಿಚಾರಣೆ ಮುಂದೂಡಲಾಗಿದೆ.
ಇದನ್ನೂ ಓದಿ » ಕೋಟೆ ರಸ್ತೆಯಲ್ಲಿ ಹೇಗಿತ್ತು ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ಮಾಹಿತಿ
Dharmasthala mask man shifted to shimoga jail
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





