ಶಿವಮೊಗ್ಗ ಲೈವ್.ಕಾಂ | SHIMOGA NEWS | 5 JUNE 2021
ಶಿವಮೊಗ್ಗದ ವ್ಯಕ್ತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು, ಪ್ರತ್ಯೇಕ ವಾಟ್ಸಪ್ ಮೂಲಕ ಸ್ನೇಹಿತರು, ಸಂಬಂಧಿಗಳಿಗೆ ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವ್ಯಕ್ತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ಕ್ರಿಯೇಟ್ ಮಾಡಲಾಗಿದೆ. ಸ್ನೇಹಿತರು, ಸಂಬಂಧಿಗಳಿಗೆ ರಿಕ್ವೆಸ್ಟ್ ಕಳುಹಿಸಲಾಗಿದೆ. ಅದೆ ವ್ಯಕ್ತಿಗೆ ಸಂಬಂಧಿಸಿದ್ದು ಎಂಬಂತೆ ಮೊಬೈಲ್ ನಂಬರ್ ಒಂದರಿಂದ ಸ್ನೇಹಿತರು, ಸಂಬಂಧಿಗಳಿಗೆ ವಾಟ್ಸಪ್ನಲ್ಲಿ ಮೆಸೇಜ್ ಮಾಡಲಾಗಿದೆ.
ವ್ಯಕ್ತಿ ತಮ್ಮ ಪತ್ನಿಯೊಂದಿಗೆ ಇರುವ ಫೋಟೊಗಳನ್ನು ಕಳುಹಿಸಿ, ಸ್ನೇಹಿತರು, ಸಂಬಂಧಿಗಳಲ್ಲಿ ಸುಳ್ಳು ವದಂತಿ ಹಬ್ಬಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಕಲಿ ಫೇಸ್ ಬುಕ್ ಖಾತೆ ತೆಗೆದವರು ಮತ್ತು ವಾಟ್ಸಪ್ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ನಕಲಿ ಫೇಸ್ಬುಕ್ ಖಾತೆಗಳನ್ನು ಸೃಷ್ಟಿಸಿ ಹಣ ಪೀಕುತ್ತಿದ್ದ ಗ್ಯಾಂಗ್ನ ನಡುವೆ, ಈಗ ವ್ಯಕ್ತಿಯೊಬ್ಬರ ಪರವಾಗಿ ವದಂತಿಗಳನ್ನು ಹಬ್ಬಿಸುವ ಗ್ಯಾಂಗ್ ಹುಟ್ಟಿಕೊಂಡಿದೆ. ಇಂತಹ ಕಿಡಿಗೇಡಿಗಳ ಕುರಿತು ಜನರು ಜಾಗೃತರಾಗಬೇಕಿದೆ.
ಇನ್ಮುಂದೆ ಕರೋನ ಪರೀಕ್ಷೆಗೆ ಆಸ್ಪತ್ರೆಗೆ ಹೋಗೋದೆ ಬೇಡ. ನಿಮ್ಮ ಮನೆಗೆ ಬಂದು ಸ್ವ್ಯಾಬ್ ಪಡೆಯಲಾಗುತ್ತದೆ. ಇಲ್ಲಿರುವ ನಂಬರ್ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]